• Home
  • »
  • News
  • »
  • entertainment
  • »
  • Puneetha Parva: ಅಪ್ಪು ಹೆಸರಲ್ಲಿ ಆ್ಯಂಬುಲೆನ್ಸ್ ನೀಡುವುದಾಗಿ ಯಶ್ ಘೋಷಣೆ, ಪುನೀತ ಪರ್ವದಲ್ಲಿ ಬಿಗ್‌ ಬಿ, ಕಮಲ್ ಹಾಸನ್ ಸಂದೇಶ

Puneetha Parva: ಅಪ್ಪು ಹೆಸರಲ್ಲಿ ಆ್ಯಂಬುಲೆನ್ಸ್ ನೀಡುವುದಾಗಿ ಯಶ್ ಘೋಷಣೆ, ಪುನೀತ ಪರ್ವದಲ್ಲಿ ಬಿಗ್‌ ಬಿ, ಕಮಲ್ ಹಾಸನ್ ಸಂದೇಶ

ಪುನೀತ ಪರ್ವ ಕಾರ್ಯಕ್ರಮಕ್ಕೆ ತಾರೆಯರ ಸಮಾಗಮ

ಪುನೀತ ಪರ್ವ ಕಾರ್ಯಕ್ರಮಕ್ಕೆ ತಾರೆಯರ ಸಮಾಗಮ

ಪುನೀತ್ ರಾಜ್‌ಕುಮಾರ್ ಹೆಸರಲ್ಲಿ ಆ್ಯಂಬುಲೆನ್ಸ್ ನೀಡುವುದಾಗಿ ರಾಕಿಂಗ್ ಸ್ಟಾರ್ ಯಶ್ ಅವರು ಘೋಷಿಸಿದ್ರು. ಇನ್ನು ವಿಡಿಯೋ ಸಂದೇಶ ಕಳಿಸಿದ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್, ಪುನೀತ್ ರಾಜ್‌ಕುಮಾರ್‌ ಅಕಾಲಿಕ ಮರಣಕ್ಕೆ ಸಂತಾಪ ಸೂಚಿಸಿದ್ರು. ಡಾ. ರಾಜ್‌ಕುಮಾರ್ ಅವರನ್ನು ಸ್ಮರಿಸಿಕೊಂಡ್ರು.

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು: ಅರಮನೆ ಮೈದಾನದಲ್ಲಿ (Palace Ground) ‘ಪುನೀತ ಪರ್ವ’ (Punitha Parva) ಕಾರ್ಯಕ್ರಮ ನಡೆಯಿತು. ಬಹು ನಿರೀಕ್ಷಿತಗಂಧದಗುಡಿ’ (Gandhada Gudi) ಚಿತ್ರದ ಪ್ರೀ ರಿಲೀಸ್ ಇವೆಂಟ್ (pre-release event) ಇದಾಗಿದ್ದು, ಅರಮನೆ ಮೈದಾನದಲ್ಲಿ ತಾರಾ ಲೋಕವೇ ಧರೆಗಿಳಿದಿತ್ತು.  ಕನ್ನಡ ಚಿತ್ರರಂಗ (Kannada Film Industry) ಅಷ್ಟೇ ಅಲ್ಲದೇ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗದ ನಟ, ನಟಿಯರು, ನಿರ್ದೇಶಕರು, ಗಾಯಕರು ಸಮಾರಂಭದಲ್ಲಿ ಹಾಜರಾಗಿದ್ದರು. ಈ ವೇಳೆ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್, ಪುನೀತ್ ರಾಜ್‌ಕುಮಾರ್ ಹೆಸರಲ್ಲಿ ಆ್ಯಂಬುಲೆನ್ಸ್ ನೀಡುವುದಾಗಿ ಘೋಷಿಸಿದ್ರು. ಇನ್ನು ವಿಡಿಯೋ ಸಂದೇಶ ಕಳಿಸಿದ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್, ಪುನೀತ್ ರಾಜ್‌ಕುಮಾರ್‌ ಅಕಾಲಿಕ ಮರಣಕ್ಕೆ ಸಂತಾಪ ಸೂಚಿಸಿದ್ರು. ಡಾ. ರಾಜ್‌ಕುಮಾರ್ ಅವರನ್ನು ಸ್ಮರಿಸಿಕೊಂಡ್ರು.


 ಅಪ್ಪು ಗುಣಗಾನ ಮಾಡಿದ್ದ ಪ್ರಕಾಶ್ ರಾಜ್


ಸಮಾರಂಭದಲ್ಲಿ ಮಾತನಾಡಿದ ಬಹುಭಾಷಾ ನಟ ಪ್ರಕಾಶ್ ರಾಜ್, ಪುನೀತ್ ರಾಜ್‌ಕುಮಾರ್ ಅವರ ಸಮಾಜ ಸೇವೆ ಬಗ್ಗೆ ಮಾತನಾಡಿದ್ರು. ನಾನು ಆಸ್ಪತ್ರೆಗೆ ಆ್ಯಂಬುಲೆನ್ಸ್ ಕೊಡೋದಕ್ಕೆ ಮುಂದಾಗಿದ್ದೆ. ಆದರೆ ಮೂರು ಆ್ಯಂಬುಲೆನ್ಸ್ ಕೋಡೋದಕ್ಕೆ ಸಾಧ್ಯವಾಯ್ತು. ಅದರಲ್ಲಿ ಒಂದು ಶಿವಣ್ಣನವರ ಪತ್ನಿ ಗೀತಾ ಕೊಟ್ಟಿದ್ದರು, ಇನ್ನೊಂದು ಚಿರಂಜೀವಿ ಅಂತ ಹೇಳಿದ್ರು.




 ಆ್ಯಂಬುಲೆನ್ಸ್ ನೀಡುವುದಾಗಿ ಘೋಷಿಸಿದ ಯಶ್


ಬಳಿಕ ವೇದಿಕೆ ಮೇಲೆ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್, ಉಳಿದ ಎಲ್ಲಾ ಜಿಲ್ಲೆಗಳಿಗೆ ತಾವೇ ಆ್ಯಂಬುಲೆನ್ಸ್ ಕೊಡುವುದಾಗಿ ಘೋಷಿಸಿದ್ದಾರೆ. ಉಳಿದ ಎಲ್ಲಾ ಜಿಲ್ಲೆಗಳಿಗೆ ತಮ್ಮದೇ ಯಶೋಮಾರ್ಗ ಫೌಂಡೇಶನ್‌ನಿಂದ ಆ್ಯಂಬುಲೆನ್ಸ್ ಕೊಡುವಾಗಿ ಯಶ್ ಘೋಷಿಸಿದ್ದಾರೆ. ಅದರಲ್ಲೂ ಎಲ್ಲಾ ಆ್ಯಂಬುಲೆನ್ಸ್‌ಗಳನ್ನು ಪುನೀತ್ ರಾಜ್‌ ಕುಮಾರ್ ಹೆಸರಲ್ಲೇ ನೀಡುವುದಾಗಿ ಯಶ್ ಘೋಷಿಸಿದ್ದಾರೆ.


ಇದನ್ನೂ ಓದಿ: Puneetha Parva: ಪವರ್ ಸ್ಟಾರ್‌ಗೆ ಸೌತ್ ಸ್ಟಾರ್‌ಗಳಿಂದ ನಮನ; ಸಿದ್ಧಾರ್ಥ್, ರಾಣಾ, ಅಖಿಲ್‌ ಅಕ್ಕಿನೇನಿಯಿಂದ ಅಪ್ಪು ಸ್ಮರಣೆ


ಗಂಧದ ಗುಡಿ ಕೆಜಿಎಫ್ ದಾಖಲೆಯನ್ನೂ ಮುರಿಯಲಿ


ವೇದಿಕೆ ಮೇಲೆ ಅಪ್ಪು ನೆನಪನ್ನು ಸ್ಮರಿಸಿಕೊಂಡ ರಾಕಿಂಗ್ ಸ್ಟಾರ್ ಯಶ್, ಗಂಧದಗುಡಿಗೆ ಶುಭ ಹಾರೈಸಿದರು. ಗಂಧದಗುಡಿಯು ಕೆಜಿಎಫ್ ದಾಖಲೆಗಳನ್ನು ಬ್ರೇಕ್ ಮಾಡಲಿ ಅಂತ ಶುಭ ಹಾರೈಸಿದರು.


ಬಿಗ್ ಬಿ ಅಮಿತಾಬ್ ಬಚ್ಚನ್ ಸಂದೇಶ


ಇನ್ನು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ವಿಡಿಯೋ ಸಂದೇಶ ಕಳಿಸಿದ್ದರು. ಪುನೀತ್ ರಾಜ್‌ ಕುಮಾರ್ ಅಕಾಲಿಕ ನಿಧನಕ್ಕೆ ಸಂತಾಸ ಸೂಚಿಸಿದ ಅವರು, ಅಪ್ಪು ತಮ್ಮ ಅಭಿನಯ ಹಾಗೂ ಸಮಾಜಸೇವೆಯಿಂದ ನೆನಪಿನಲ್ಲಿ ಉಳಿಯುತ್ತಾರೆ ಅಂತ ಹೇಳಿದ್ರು. ಇನ್ನು ಡಾ. ರಾಜ್‌ಕುಮಾರ್ ಅವರನ್ನು, ಹಿಂದೆ ಅವರನ್ನು ಭೇಟಿಯಾಗಿದ್ದ ಸಂದರ್ಭವನ್ನು ನೆನಪಿಸಿಕೊಂಡರು. ಇನ್ನು ಕಮಲ್ ಹಾಸನ್ ಕೂಡ ವಿಡಿಯೋ ಸಂದೇಶ ಕಳಿಸಿ, ಪುನೀತ್ ರಾಜ್‌ಕುಮಾರ್ ಅವರನ್ನು ಸ್ಮರಿಸಿಕೊಂಡರು.


ಧನಂಜಯ್, ರಕ್ಷಿತ್ಶೆಟ್ಟಿಯಿಂದ ಅಪ್ಪು ಸ್ಮರಣೆ


ಕನ್ನಡ ಚಿತ್ರರಂಗದ ಸ್ಟಾರ್ ನಟರಾದ ಡಾಲಿ ಧನಂಜಯ್, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಪುನೀತ ಪರ್ವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಡಾಲಿ ಧನಂಜಯ್, ನಮ್ಮ ಹೆಡ್‌ ಬುಷ್ ಸಿನಿಮಾ ರಿಲೀಸ್ ಆಗಿದೆ. ಇದರ ಮುಹೂರ್ತಕ್ಕೆ ಅಪ್ಪ ಬಂದು, ಹಾರೈಸಿದ್ದರು. ಇದೀಗ ಅವರ ಪುನೀತ ಪರ್ವ ಕಾರ್ಯಕ್ರಮದ ಹೊಸ್ತಿಲಲ್ಲೇ ಸಿನಿಮಾ ರಿಲೀಸ್ ಆಗಿದೆ ಅಂತ ಸಂತಸ ವ್ಯಕ್ತಪಡಿಸಿದರು. ಇದು ದುಃಖದ ದಿನವಲ್ಲ, ಅಪ್ಪು ಅವರನ್ನು ಸಂಭ್ರಮಿಸುವ ದಿನ ಎಂದರು.


ಇದನ್ನೂ ಓದಿ: Puneeth Rajkumar: ಅಪ್ಪು ಅಭಿನಯದ ಗಂಧದಗುಡಿ ಚಿತ್ರಕ್ಕೆ ತೆರಿಗೆ ವಿನಾಯಿತಿ; ಸಿಎಂ ಬೊಮ್ಮಾಯಿ ಘೋಷಣೆ


ತೆಲುಗು ನಟರಿಂದ ಅಪ್ಪು ಗುಣಗಾನ
ಇನ್ನು ತೆಲುಗು ಸ್ಟಾರ್‌ ಸಿದ್ಧಾರ್ಥ್‌ ಕನ್ನಡದಲ್ಲೇ ಮಾತು ಆರಂಭಿಸಿ, ಅಪ್ಪು ಗುಣಗಾನ ಮಾಡಿದರು. ಬಳಿಕ ರಾಣಾ ದಗ್ಗುಬಾಟಿ, ಅಖಿಲ್ ಅಕ್ಕಿನೇನಿ ಮುಂತಾದವರು ಮಾತನಾಡಿ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಒಡನಾಟ ನೆನಪಿಸಿ ಕೊಂಡರು.

Published by:Annappa Achari
First published: