• Home
  • »
  • News
  • »
  • entertainment
  • »
  • Puneetha Parva: ಪುನೀತ ಪರ್ವ ಪೂಜೆ ವೇಳೆ ಗಣೇಶನ ಬಲಭಾಗದಿಂದ ಬಿತ್ತು ಹೂ

Puneetha Parva: ಪುನೀತ ಪರ್ವ ಪೂಜೆ ವೇಳೆ ಗಣೇಶನ ಬಲಭಾಗದಿಂದ ಬಿತ್ತು ಹೂ

ಪುನೀತ್ ರಾಜ್​ಕುಮಾರ್

ಪುನೀತ್ ರಾಜ್​ಕುಮಾರ್

Puneetha Parva: ಬೆಂಗಳೂರಿನಲ್ಲಿ ಪುನೀತ ಪರ್ವ ಕಾರ್ಯಕ್ರಮ ನಡೆಯುತ್ತಿದ್ದ ಗಣೇಶ ಪೂಜೆಯ ವೇಳೆ ವಿಗ್ರಹದ ಬಲಭಾಗದಿಂದ ಹೂಬಿದ್ದಿದ್ದು ಎಲ್ಲರಲ್ಲೂ ಅಚ್ಚರಿ ಜೊತೆ ಸಂಭ್ರಮ ಮೂಡಿಸಿದೆ.

  • News18 Kannada
  • Last Updated :
  • Bangalore, India
  • Share this:

ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಪುನೀತ ಪರ್ವ (Puneetha parva) ಕಾರ್ಯಕ್ರಮ ನಡೆಯಲಿದ್ದು ಪುನೀತ್ (Puneeth Rajkumar) ಮನೆ‌ ಮುಂದೆ ಇರುವ ಗಣಪತಿಗೆ ಪ್ರತಿ‌ ದಿನ ಪೂಜೆ ಮಾಡಲಾಗುತ್ತದೆ. ಪುನೀತ ಪರ್ವ ಕಾರ್ಯಕ್ರಮ ಕ್ಕೆ ಗಣೇಶನ ಆಶೀರ್ವಾದ ಸಿಕ್ಕಿದ್ದು ಯಾವುದೇ ವಿಘ್ನ ಆಗದಂತೆ ಪುನೀತ್ ಮನೆ ಬಳಿ ಇರುವ ಗಣೇಶನ (Ganesha) ಬಲಭಾಗದಿಂದ ಹೂವಿನ ಪ್ರಸಾದ ಬಿದ್ದಿರುವುದು ಅವರ ಅಭಿಮಾನಿಗಳಿಗೆ ಖುಷಿ ತಂದಿದೆ. ಶುಕ್ರವಾರ ಬೆಳಗ್ಗೆ ಬಂದು ಪುರೋಹಿತರು ಪೂಜೆ  (Pooja) ಮಾಡಿಕೊಂಡು ಹೋಗಿದ್ದರು. ಗಣಪತಿಗೆ ಪೂಜೆ ಹೂವಿನ ಹಾರ ಹಾಕಿದ್ದು ಬಲಗಡೆಯಿಂದ ಹೂ ಕೆಳಗೆ ಬಿದ್ದಿದ್ದು ದೇವರ ಆಶಿರ್ವಾದ ಎಂದೇ ಅಭಿಮಾನಿಗಳು ಸಂಭ್ರಮಿಸಿದ್ದಾರೆ.


ಡಾ. ರಾಜ್ ಅವರ ದಿನಚರಿ ಇದು


ಕಾರ್ಯಕ್ರಮಕ್ಕೆ ಯಾವುದೇ ವಿಘ್ನ ಇರದಂತೆ ನಡೆಯಲು ವಿಘ್ನ ವಿನಾಯಕನ ಆಶೀರ್ವಾದ ‌ಸಿಕ್ಕಿದೆ ಎಂದು ಅಪ್ಪು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಡಾ. ರಾಜ್​​ಕುಮಾರ್ ಅವರು ಪ್ರತಿ ದಿನ ಈ ಗಣಪತಿಗೆ ನಮಿಸಿಯೇ ಅವರ ದಿನಚರಿಯನ್ನು ಶುರು ಮಾಡುತ್ತಿದ್ದರು. ಅಪ್ಪು ಕೂಡ ಅದನ್ನ ಮುಂದುವರೆಸಿದ್ದರು. ಇಂದಿಗೂ ಅವರ ಫ್ಯಾಮಿಲಿ ಅದನ್ನೇ ಮುಂದುವರೆಸಿದ್ದಾರೆ.


ಅಪ್ಪು ಮನೆ ಮುಂದೆ ಅಭಿಮಾನಿಗಳ ದಂಡು


ಪುನೀತ್ ಪರ್ವ ಹಿನ್ನಲೆ ಸದಾಶಿವನಗರ ಅಪ್ಪು ಮನೆಯತ್ತ ಅಭಿಮಾನಿಗಳು ಬರುತ್ತಿದ್ದಾರೆ. ಅಪ್ಪು ಮನೆಯ ಗೇಟ್ ಗೆ ನಮಸ್ಕಾರ ಮಾಡಿಕೊಳ್ತಿರೋ ಅಭಿಮಾನಿಗಳು ಪುನೀತ ಪರ್ವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶಿವಮೊಗ್ಗ , ದಾವಣಗೆರೆ ಯಿಂದ ಬೆಳಗ್ಗೇನೆ ಬಂದಿರುವ ಅಭಿಮಾನಿಗಳು ನಾವು ದೇವರ ಮನೆಗೆ ಬಂದಿದ್ದೀವಿ ಎನ್ನುತ್ತಿದ್ದಾರೆ.




ಅಪ್ಪು ಇದ್ದಾಗ ಅವರನ್ನು ನೋಡಲು ಬರುತ್ತಿದ್ದೆವು. ಈಗ ಅವರಿಲ್ಲ. ಅವರ ಮನೆಯನ್ನಾದರೂ ನೋಡೋ ಎಂದು ಬಂದೆವು ಎಂದಿದ್ದಾರೆ ಅಭಿಮಾನಿಗಳು.


ಇದನ್ನೂ ಓದಿ: Special Song for Appu: ಗಂಧದ ಗುಡಿಯ ಅಪ್ಪುಗೆ All Okay ಅಲೋಕ್ ವಿಶೇಷ ಗಾನ ನಮನ


ಅದ್ಧೂರಿ ಕಾರ್ಯಕ್ರಮಕ್ಕೆ ತಾರೆಗಳ ದಂಡು


ಈ ಕಾರ್ಯಕ್ರಮದಲ್ಲಿ ನಂದಮೂರಿ ಬಾಲಕೃಷ್ಣ, ಕಮಲ್ ಹಾಸನ್, ಪ್ರಭುದೇವ, ನಟ ಯಶ್ ಸೇರಿದಂತೆ ಟಾಪ್ , ನಟ ನಟಿಯರು ಭಾಗವಹಿಸಲಿದ್ದಾರೆ. ಪ್ರಭುದೇವ, ಶಿವರಾಜ್ ಕುಮಾರ್, ರಮ್ಯಾ ಅವರಿಂದ ಡ್ಯಾನ್ಸ್ ಪರ್ಫಾಮೆನ್ಸ್ ಕೂಡಾ ನಡೆಯಲಿದೆ.


ಈಗಾಗಲೇ ಕಾರ್ಯಕ್ರಮದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು ದೊಡ್ಡ ಮಟ್ಟದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಗಣ್ಯರು ಭಾಗವಹಿಸಲಿದ್ದಾರೆ. ಸಿಬ್ಬಂದಿಗಾಗಿ ಈ ಕಾರ್ಯಕ್ರಮದಲ್ಲಿ ಉಪಹಾರ, ಭೋಜನ ವ್ಯವಸ್ಥೆಗಳನ್ನೂ ಮಾಡಲಾಗಿದೆ.

Published by:Divya D
First published: