• Home
  • »
  • News
  • »
  • entertainment
  • »
  • Puneetha Parva: ನೀನೇ ರಾಜಕುಮಾರ ಎಂದು ಹಾಡಿದ ರಾಜ್​ ಫ್ಯಾಮಿಲಿ; ವೇದಿಕೆ ಮೇಲೆ ಅಶ್ವಿನಿ ಕಣ್ಣೀರು

Puneetha Parva: ನೀನೇ ರಾಜಕುಮಾರ ಎಂದು ಹಾಡಿದ ರಾಜ್​ ಫ್ಯಾಮಿಲಿ; ವೇದಿಕೆ ಮೇಲೆ ಅಶ್ವಿನಿ ಕಣ್ಣೀರು

ರಾಜ್​ ಫ್ಯಾಮಿಲಿ

ರಾಜ್​ ಫ್ಯಾಮಿಲಿ

ರಾಜ್​ ಫ್ಯಾಮಿಲಿಯ ಅನೇಕ ಸದಸ್ಯರು ವೇದಿಕೆ ಮೇಲೆ ಬಂದು ನೀನೇ ರಾಜಕುಮಾರ ಎಂದು ಹಾಡಿದ್ದಾರೆ. ಈ ಮೂಲಕ ಮನೆ ಮಂದಿಯೆಲ್ಲಾ ಅಪ್ಪುವಿಗೆ ವಿಶೇಷವಾಗಿ ನಮನ ಸಲ್ಲಿಸಿದ್ದಾರೆ. 

  • News18 Kannada
  • Last Updated :
  • Karnataka, India
  • Share this:

ಬೆಂಗಳೂರಿನ ಅರಮನೆ ಮೈದಾನದಲ್ಲಿ ಪುನೀತ​ ಪರ್ವ ಕಾರ್ಯಕ್ರಮ ಶುರುವಾಗಿದೆ. ಕಾರ್ಯಕ್ರಮದಲ್ಲಿ ತಾರೆಯರ ಸಮಾಗಮ ಆಗಿದೆ. ಪುನೀತ ಪರ್ವ (Puneetha Parva) ಕಾರ್ಯಕ್ರಮಕ್ಕಾಗಿ ಎಲ್ಲ ಭಾಷೆಯ ಚಿತ್ರರಂಗದ  ಗಣ್ಯರು ಆಗಮಿಸಿದ್ದಾರೆ. ಬೃಹತ್​ ವೇದಿಕೆಯಲ್ಲಿ ಮನರಂಜನಾ ಕಾರ್ಯಕ್ರಮಗಳ ಜೊತೆಗೆ ‘ಗಂಧದ ಗುಡಿ’ ಪ್ರೀ-ರಿಲೀಸ್​ ಇವೆಂಟ್​ (Gandhada Gudi pre-release event) ನಡೆಯುತ್ತಿದೆ. ಈ ರಾಜಕುಮಾರ ಚಿತ್ರದ ಹಾಡನ್ನು ಗಾಯಕ ವಿಜಯ್​ ಪ್ರಕಾಶ್​ ವೇದಿಕೆ ಮೇಲೆ ಹಾಡಿದ್ರು. ಈ ವೇಳೆ ರಾಜ್ಯ ಫ್ಯಾಮಿಲಿ ಸದಸ್ಯರೂ ನೀನೇ ರಾಜಕುಮಾರ ಹಾಡಿಗೆ ಧ್ವನಿಯಾಗಿದ್ದಾರೆ. ಮನೆ ಮಂದಿಯ ಹಾಡು ಕೇಳಿ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್​ (Ashwini Puneethraj Kumar) ತುಂಬಾ ಭಾವುಕರಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. 


puneetha parva gandhada gudi pre release event Rajkumar Family song pvn


ಅಶ್ವಿನಿ ಪುನೀತ್ ರಾಜ್​ ಕುಮಾರ್ ಕಣ್ಣೀರು


ಶಿವಕುಮಾರ್​, ರಾಘವೇಂದ್ರ ರಾಜ್​ ಕುಮಾರ್​, ಗೀತಾ ಶಿವಕುಮಾರ್​,  ಅಶ್ವಿನಿ ಪುನೀತ್ ರಾಜ್​ಕುಮಾರ್​, ವಿನಯ್ ರಾಜ್​ ಕುಮಾರ್ ಸೇರಿದಂತೆ ರಾಜ್​ ಫ್ಯಾಮಿಲಿಯ ಅನೇಕ ಸದಸ್ಯರು ವೇದಿಕೆ ಮೇಲೆ ಬಂದು ನೀನೇ ರಾಜಕುಮಾರ ಎಂದು ಹಾಡಿದ್ದಾರೆ. ಈ ಮೂಲಕ ಮನೆ ಮಂದಿಯೆಲ್ಲಾ ಅಪ್ಪುವಿಗೆ ವಿಶೇಷವಾಗಿ ನಮನ ಸಲ್ಲಿಸಿದ್ದಾರೆ.  ಮನೆ ಮಂದಿಯ ಹಾಡು ಕೇಳಿ ಅಪ್ಪು ನೆನೆದು ಪುನೀತ್ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಕಣ್ಣೀರು ಹಾಕಿದ್ದಾರೆ.


ನೀನೇ ರಾಜಕುಮಾರ


ಎಲ್ಲರೂ ಹಾಡು ಹೇಳಿವಾಗ ಕೈ ಮುಗಿದು ನಿಂತಿದ್ದ ಅಶ್ವಿನಿ ಪುನೀತ್ ರಾಜ್​ಕುಮಾರ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ವಿಜಯ್​ ಪ್ರಕಾಶ್ ವೇದಿಕೆ ಮೇಲೆ ನೀನೇ ರಾಜಕುಮಾರ ಎಂದು ಹಾಡು ಹೇಳಿದ್ರು. ಈ ವೇಳೆ ನೆರೆದಿದ್ದ ಗಣ್ಯರು ಹಾಗೂ ಅಭಿಮಾನಿಗಳು ಮೊಬೈಲ್ ಟಾರ್ಚ್​ ಆನ್​ ಮಾಡಿ ಗೌರವ ಸಲ್ಲಿಸಿದ್ರು.


ಇದನ್ನೂ ಓದಿ: Puneeth Rajkumar: ಪುನೀತ ಪರ್ವದಲ್ಲಿ ತಾರೆಯರ ಸಮಾಗಮ; ಮುಗಿಲು ಮುಟ್ಟಿದ ಅಪ್ಪು ಗುಣಗಾನ!


ರಾಜ್​ ಫ್ಯಾಮಿಲಿ


ಇದನ್ನೂ ಓದಿ: Puneeth Rajkumar: ಅಪ್ಪು ಅಭಿನಯದ ಗಂಧದಗುಡಿ ಚಿತ್ರಕ್ಕೆ ತೆರಿಗೆ ವಿನಾಯಿತಿ; ಸಿಎಂ ಬೊಮ್ಮಾಯಿ ಘೋಷಣೆ


ಪುನೀತ ಪರ್ವದಲ್ಲಿ ತಾರೆಯರ ಸಮಾಗಮ


ಪುನೀತ್​ ರಾಜ್​ಕುಮಾರ್​ ಅವರಿಗೆ ಎಲ್ಲರೂ ಸೇರಿ ವಿಶೇಷ ರೀತಿಯಲ್ಲಿ ನಮನ ಸಲ್ಲಿಸುತ್ತಿದ್ದಾರೆ. ಡಾ. ರಾಜ್​ಕುಮಾರ್​ ಕುಟುಂಬದವರು ತುಂಬ ಕಾಳಜಿ ವಹಿಸಿ ಈ ಕಾರ್ಯಕ್ರಮ ಮಾಡುತ್ತಿದ್ದಾರೆ.  ಅಶ್ವಿನಿ ಪುನೀತ್​ ರಾಜ್​ಕುಮಾರ್ (Ashwini Puneeth Rajkumar)​, ಶಿವರಾಜ್​ಕುಮಾರ್​, ರಾಘವೇಂದ್ರ ರಾಜ್​ ಕುಮಾರ್​ ಸೇರಿದಂತೆ ರಾಜ್​ ಕುಟುಂಬಸ್ಥರು ಭಾಗಿ ಆಗಿದ್ದಾರೆ.


ಸುಧಾಮೂರ್ತಿ ಬಾಯಲ್ಲಿ ಅಪ್ಪು ಗುಣಗಾನ


ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಇನ್ಫೋಸಿಸ್ ಸುಧಾ ಮೂರ್ತಿ ಅವರು ಪುನೀತ್​ ಬಗ್ಗೆ ಗುಣಗಾನ ಮಾಡಿದ್ದಾರೆ.  ಒಮ್ಮೆ ವಿಮಾನ ನಿಲ್ದಾಣದಲ್ಲಿ ಪುನೀತ್​ ಸಿಕ್ಕಾಗ ಅಲ್ಲೇ ಅವ್ರು ನನ್ನ ಆಶೀರ್ವಾದ ಪಡೆದ್ರು. ಈ ವೇಳೆ ನಾನು ಇಲ್ಲೆಲ್ಲಾ ಬೇಡ ಎಂದೆ. ಅದಕ್ಕೆ ಅವ್ರು ಎಲ್ಲಿದ್ರೂ ದೊಡ್ಡವರು ದೊಡ್ಡವರೇ ಎಂದ್ರು.  ಅವರ ಸರಳತೆಯನ್ನು ಮೆಚ್ಚಲೇಬೇಕು. ನಾನು ಅವ್ರನ್ನು ಲೋಹಿತ್ ಎಂದೇ ಕರೆಯುತ್ತಿದ್ದೆ. ಅವ್ರು ಲೋಹಿತ್​ ಎಂದೇ ನನಗೆ ಪರಿಚಯವಾಗಿದ್ದವರು ಎಂದು ಸುಧಾಮೂರ್ತಿ ಹೇಳಿದ್ರು.


ಗಾಯಕರಿಂದ ಅಪ್ಪು ಸ್ಮರಣೆ


ಖ್ಯಾತ ಗಾಯಕ ಕುನಾಲ್ ಗಾಂಜಾವಾಲ ಅಪ್ಪು ಹಾಡು ಹಾಡಿ ರಂಜಿಸಿದರು. ಬಳಿಕ ಮಾತನಾಡಿದ ಅವರು, ನನಗೆ ಅಪ್ಪು ಗೊತ್ತಿರಲಿಲ್ಲ, ರಾಜ್ ಕುಮಾರ್ ಗೊತ್ತಿತ್ತು. ರಾಜ್ ಕುಮಾರ್ ಮಗ ಎಂದಾಕ್ಷಣ ಗೊತ್ತಾಯಿತು. ಬಳಿಕ ಅಪ್ಪು ಹಾಡುಗಳಿನ್ನು ನಾನು ಹಾಡಿದೆ. ನೀನೆ ನೀನೆ....ಹಾಡು ಹಾಗೂ ಕಿವಿ ಮಾತೊಂದು ಹಾಡು ತುಂಬಾ ಇಷ್ಟ ಎಂದು ಹೇಳಿದರು. ಇವತ್ತು ಅಪ್ಪುಗಾಗಿ ಎಷ್ಟು ಬೇಕಾದರೂ ಹಾಡುತ್ತೇನೆ ಎಂದು ಹೇಳಿದರು.

Published by:ಪಾವನ ಎಚ್ ಎಸ್
First published: