• Home
  • »
  • News
  • »
  • entertainment
  • »
  • Puneeth Rajkumar: ಪುನೀತ ಪರ್ವದಲ್ಲಿ ತಾರೆಯರ ಸಮಾಗಮ; ಮುಗಿಲು ಮುಟ್ಟಿದ ಅಪ್ಪು ಗುಣಗಾನ!

Puneeth Rajkumar: ಪುನೀತ ಪರ್ವದಲ್ಲಿ ತಾರೆಯರ ಸಮಾಗಮ; ಮುಗಿಲು ಮುಟ್ಟಿದ ಅಪ್ಪು ಗುಣಗಾನ!

ಗಂಧದ ಗುಡಿ

ಗಂಧದ ಗುಡಿ

ಪುನೀತ್​ ರಾಜ್​ಕುಮಾರ್​ ಅವರಿಗೆ ಎಲ್ಲರೂ ಸೇರಿ ವಿಶೇಷ ರೀತಿಯಲ್ಲಿ ನಮನ ಸಲ್ಲಿಸುತ್ತಿದ್ದಾರೆ. ಡಾ. ರಾಜ್​ಕುಮಾರ್​ ಕುಟುಂಬದವರು ಈ ಕಾರ್ಯಕ್ರಮ ಆಯೋಜಿಸಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಬೆಂಗಳೂರಿನ ಅರಮನೆ ಮೈದಾನದಲ್ಲಿ ಪುನೀತ​ ಪರ್ವ ಕಾರ್ಯಕ್ರಮ ಶುರುವಾಗಿದೆ. ಕಾರ್ಯಕ್ರಮದಲ್ಲಿ ತಾರೆಯರ ಸಮಾಗಮ ಆಗಿದೆ. ಪುನೀತ ಪರ್ವ (Puneetha Parva) ಕಾರ್ಯಕ್ರಮಕ್ಕಾಗಿ ಎಲ್ಲ ಭಾಷೆಯ ಚಿತ್ರರಂಗದ  ಗಣ್ಯರು ಆಗಮಿಸಿದ್ದಾರೆ. ಬೃಹತ್​ ವೇದಿಕೆಯಲ್ಲಿ ಮನರಂಜನಾ ಕಾರ್ಯಕ್ರಮಗಳ ಜೊತೆಗೆ ‘ಗಂಧದ ಗುಡಿ’ ಪ್ರೀ-ರಿಲೀಸ್​ ಇವೆಂಟ್​ (Gandhada Gudi pre-release event) ನಡೆಯುತ್ತಿದೆ.


ಪುನೀತ್ ರಾಜ್​ ಕುಮಾರ್​ಗೆ ನಮನ


ಪುನೀತ್​ ರಾಜ್​ಕುಮಾರ್​ ಅವರಿಗೆ ಎಲ್ಲರೂ ಸೇರಿ ವಿಶೇಷ ರೀತಿಯಲ್ಲಿ ನಮನ ಸಲ್ಲಿಸುತ್ತಿದ್ದಾರೆ. ಡಾ. ರಾಜ್​ಕುಮಾರ್​ ಕುಟುಂಬದವರು ತುಂಬ ಕಾಳಜಿ ವಹಿಸಿ ಈ ಕಾರ್ಯಕ್ರಮ ಮಾಡುತ್ತಿದ್ದಾರೆ.  ಅಶ್ವಿನಿ ಪುನೀತ್​ ರಾಜ್​ಕುಮಾರ್ (Ashwini Puneeth Rajkumar)​, ಶಿವರಾಜ್​ಕುಮಾರ್​, ರಾಘವೇಂದ್ರ ರಾಜ್​ ಕುಮಾರ್​ ಸೇರಿದಂತೆ ರಾಜ್​ ಕುಟುಂಬಸ್ಥರು ಭಾಗಿ ಆಗಿದ್ದಾರೆ. 


ಇದನ್ನೂ ಓದಿ: Puneeth Rajkumar: ಶೀಘ್ರದಲ್ಲೇ ಬರ್ತಿದೆ ಗಂಧದ ಗುಡಿ.. ಹೇಗಿರಲಿದೆ ಗೊತ್ತಾ ಅಪ್ಪು ಕೊನೆಯ ದೃಶ್ಯಕಾವ್ಯ?


ಸುಧಾಮೂರ್ತಿ ಬಾಯಲ್ಲಿ ಅಪ್ಪು ಗುಣಗಾನ


ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಇನ್ಫೋಸಿಸ್ ಸುಧಾ ಮೂರ್ತಿ ಅವರು ಪುನೀತ್​ ಬಗ್ಗೆ ಗುಣಗಾನ ಮಾಡಿದ್ದಾರೆ.  ಒಮ್ಮೆ ವಿಮಾನ ನಿಲ್ದಾಣದಲ್ಲಿ ಪುನೀತ್​ ಸಿಕ್ಕಾಗ ಅಲ್ಲೇ ಅವ್ರು ನನ್ನ ಆಶೀರ್ವಾದ ಪಡೆದ್ರು. ಈ ವೇಳೆ ನಾನು ಇಲ್ಲೆಲ್ಲಾ ಬೇಡ ಎಂದೆ. ಅದಕ್ಕೆ ಅವ್ರು ಎಲ್ಲಿದ್ರೂ ದೊಡ್ಡವರು ದೊಡ್ಡವರೇ ಎಂದ್ರು.  ಅವರ ಸರಳತೆಯನ್ನು ಮೆಚ್ಚಲೇಬೇಕು. ನಾನು ಅವ್ರನ್ನು ಲೋಹಿತ್ ಎಂದೇ ಕರೆಯುತ್ತಿದ್ದೆ. ಅವ್ರು ಲೋಹಿತ್​ ಎಂದೇ ನನಗೆ ಪರಿಚಯವಾಗಿದ್ದವರು ಎಂದು ಸುಧಾಮೂರ್ತಿ ಹೇಳಿದ್ರು.


ನಮ್​ ಅಪ್ಪು ಸರ್ ತರ ಯಾರಿಲ್ಲ 


ಪುನೀತ್ ಬಗ್ಗೆ ಮಾತಾಡಿದ ಗಾಯಕ ವಿಜಯ್​ ಪ್ರಕಾಶ್​, ಅಪ್ಪು ಬಗ್ಗೆ ಕವನ ಹೇಳಿದ್ರು. ನಮ್ಮ ಅಪ್ಪು ಸರ್​ ತರ ಯಾರಿಲ್ಲ ಬಿಡಿ. ಅಭಿಮಾನಿಗಳ ಹೃದಯದಲ್ಲಿ ಅಭಿಮಾನಿಗಳು ಕಟ್ಟಿದ್ದಾರೆ ಗಂಧದಗುಡಿ ಎಂದು ವಿಜಯ್​ ಪ್ರಕಾಶ್​ ಹೇಳಿದ್ರು.


ಪುನೀತ ಪರ್ವದಲ್ಲಿ ತಾರೆಯರ ಸಮಾಗಮ


ಬಹುಭಾಷಾ ನಟ ಪ್ರಕಾಶ್ ರಾಜ್ ಆಗಮಿಸಿದ್ದು, ಪುನೀತ ಪರ್ವ ಕಾರ್ಯಕ್ರಮದಲ್ಲಿ ಭಾಗವಹಿಸೋದು ಬಹಳ ಸಂತಸ ತಂದಿದೆ ಎಂದ್ರು. ಇದೇ ವೇಳೆ ಮಾತಾಡಿದ ನಟ ಅವಿನಾಶ್, ಪುನೀತ್ ಹೋಗಿ ಒಂದು ವರ್ಷ ಆಯ್ತು. ಪುನೀತ್ ನಮ್ಮ ಮನಸ್ಸಿನಿಂದ ದೂರ ಹೋಗಿಲ್ಲ. ಅಪ್ಪು ಇಲ್ಲ ಎಂದು ನಮಗೆ ಅನಿಸುತ್ತಿಲ್ಲ.  ನನಗೆ ಅಪ್ಪು ತುಂಬಾ ಆತ್ಮೀಯರಾಗಿದ್ರು. ಮೊದಲ ಸಿನಿಮಾದಿಂದ ಕೊನೇ ಸಿನಿಮಾದವರೆಗೂ ಅವರೊಂದಿಗೆ ನಾನು ಕೆಲಸ ಮಾಡಿದ್ದೀನಿ. ಅಪ್ಪು ಇಲ್ಲ ಅಂದ್ರೆ ನೋವಾಗುತ್ತೆ ಅದಕ್ಕೆ ಅಪ್ಪು ನಮ್ಮೊಂದಿಗೆ ಇದ್ದಾರೆ ಅಂತನೇ ಬದುಕುತ್ತೇನೆ ಎಂದ್ರು.




ಪುನೀತ ಪರ್ವಕ್ಕೆ ಅಭಿಮಾನಿಗಳ ದಂಡು


ಪುನೀತ ಪರ್ವ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬಂದಿದ್ದಾರೆ. ಬಹುತೇಕ ಅಭಿಮಾನಿಗಳು ಬಿಳಿ ಬಣ್ಣದ ಬಟ್ಟೆ ಧರಿಸಿ ಆಗಮಿಸಿದ್ದಾರೆ. ಅಪ್ಪು ಫೋಟೋ ಹಿಡಿದು, ಕನ್ನಡ ಧ್ವಜದ ಶಾಲು ಹಾಕಿಕೊಂಡು  ಫ್ಯಾನ್ಸ್ ಆಗಮಿಸಿದ್ದಾರೆ. ಮಹಿಳೆಯರು, ಮಕ್ಕಳು ಸಹ ಪುನೀತ ಪರ್ವಕ್ಕೆ ಬಂದು ಅಪ್ಪುಗೆ ನಮನ ಸಲ್ಲಿಸಿದ್ದಾರೆ.


ಇದನ್ನೂ ಓದಿ: Gandhada Gudi Trailer: ಧುಮ್ಮಿಕ್ಕುವ ಜಲಪಾತ, ಆನೆಗಳ ಹಿಂಡು! ಗಂಧದ ಗುಡಿ ಟ್ರೈಲರ್​​ನಲ್ಲಿ ಪ್ರಕೃತಿಯ ದೃಶ್ಯ ವೈಭವ


ಗಂಧದಗುಡಿ ಚಿತ್ರಕ್ಕೆ ತೆರಿಗೆ ವಿನಾಯಿತಿಗೆ ಆಗ್ರಹ


ಗಂಧದಗುಡಿ ಚಿತ್ರಕ್ಕೆ ತೆರಿಗೆ ವಿನಾಯಿತಿಗೆ ಆಗ್ರಹಿಸಲಾಗಿದೆ. ತೆರಿಗೆ ವಿನಾಯಿತಿ ಪೋಸ್ಟರ್ ಹಿಡಿದು ಆಗಮಿಸಿದ ಅಪ್ಪು ಫ್ಯಾನ್ಸ್ ತೆರಿಗೆ ವಿನಾಯಿತಿಗೆ ಒತ್ತಾಯಿಸಿದ್ದಾರೆ. ಗಂಧದಗುಡಿ ಚಿತ್ರ ಒಂದು ಚಿತ್ರವಲ್ಲ, ಅದೊಂದು ನಾಡು-ನುಡಿ ಜಲ-ಕಾಡು ಪ್ರಾಣಿ-ಪಕ್ಷಿಗಳ ರಕ್ಷಣೆ ಕುರಿತ ಚಿತ್ರವಾಗಿದೆ. ನಮ್ಮ‌ರಾಜ್ಯದ ರತ್ನ ಗಂಧದಗುಡಿ ಸಿನಿಮಾ ಎಂದಿದ್ದಾರೆ. ಸರ್ಕಾರ ಈ ಚಿತ್ರಕ್ಕೆ ತೆರಿಗೆ ವಿನಾಯ್ತಿ ಕೊಡಬೇಕು. ಈ ಮೂಲಕ ಪುನೀತ್ ರಾಜ್‌ಕುಮರ್‌ಗೆ ಗೌರವ ಸಲ್ಲಿಸಬೇಕು ಎಂದು ಅಪ್ಪು ಅಭಿಮಾನಿ ಮಾರುತಿ ಹಾಗೂ ಸ್ನೇಹಿತರ ಆಗ್ರಹಿಸಿದ್ದಾರೆ.

Published by:ಪಾವನ ಎಚ್ ಎಸ್
First published: