• Home
  • »
  • News
  • »
  • entertainment
  • »
  • Puneeth Rajkumar: ಪುನೀತ ಪರ್ವದಲ್ಲಿ ಕಾಂತಾರ ಕಲರವ; ಅಪ್ಪು ಇದ್ದಿದ್ರೆ ಕಾಂತಾರದ ಬಗ್ಗೆ ಏನ್​ ಹೇಳ್ತಿದ್ರು?

Puneeth Rajkumar: ಪುನೀತ ಪರ್ವದಲ್ಲಿ ಕಾಂತಾರ ಕಲರವ; ಅಪ್ಪು ಇದ್ದಿದ್ರೆ ಕಾಂತಾರದ ಬಗ್ಗೆ ಏನ್​ ಹೇಳ್ತಿದ್ರು?

ನಟ ಪ್ರಕಾಶ್​ ರಾಜ್​

ನಟ ಪ್ರಕಾಶ್​ ರಾಜ್​

ಅಪ್ಪು ಅವರು ಕಣ್ತುಂಬಿಕೊಂಡ ಹಸಿರನ್ನು ನಮ್ಮ ಮುಂದೆ ತಂದಿದ್ದಾರೆ. ಗಂಧದಗುಡಿ ಕೇವಲ ಒಂದು ಚಿತ್ರವಲ್ಲ ಅದು ಅವರ ಕನಸು ಎಂದು ಪ್ರಕಾಶ್​ ರಾಜ್​ ಹೇಳಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಬೆಂಗಳೂರಿನ ಅರಮನೆ ಮೈದಾನದಲ್ಲಿ ಪುನೀತ​ ಪರ್ವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ತಾರೆಯರ ಸಮಾಗಮ ಆಗಿದೆ. ಪುನೀತ ಪರ್ವ (Puneetha Parva) ಕಾರ್ಯಕ್ರಮಕ್ಕಾಗಿ ಎಲ್ಲ ಭಾಷೆಯ ಚಿತ್ರರಂಗದ  ಗಣ್ಯರು ಆಗಮಿಸಿದ್ದರು. ಬೃಹತ್​ ವೇದಿಕೆಯಲ್ಲಿ ಮನರಂಜನಾ ಕಾರ್ಯಕ್ರಮಗಳ ಜೊತೆಗೆ ‘ಗಂಧದ ಗುಡಿ’ ಪ್ರೀ-ರಿಲೀಸ್​ ಇವೆಂಟ್​ (Gandhada Gudi pre-release event) ನಡೆದಿದೆ. ಕಾರ್ಯಕ್ರಮದಲ್ಲಿ ಅನೇಕ ಟಾಲಿವುಡ್​, ಕಾಲಿವುಡ್​  ನಟರು ಭಾಗಿಯಾಗಿದ್ರು. ಇದೇ ವೇಳೆ ಮಾತಾಡಿದ ಬಹುಭಾಷಾ ನಟ ಪ್ರಕಾಶ್​ ರಾಜ್ ಅವರು ಅಪ್ಪು ಬಗ್ಗೆ ಗುಣಗಾನ ಮಾಡಿದ್ದಾರೆ.


ಪುನೀತ ಪರ್ವದಲ್ಲಿ ಕಾಂತಾರ ಕಲರವ


ಗಂಧದಗುಡಿ ಪ್ರೀ ರಿಲೀಸ್​ ಇವೆಂಟ್​ ಕಾರ್ಯಕ್ರಮದಲ್ಲಿ ಪುನೀತ್​ ರಾಜ್​ ಕುಮಾರ್​ ಇದ್ದಿದ್ದರೆ ಮೊದಲು ಅವರು ಕಾಂತಾರ ಬಗ್ಗೆ ಮಾತಾಡ್ತಿದ್ರು. ಕನ್ನಡದಲ್ಲಿ ಉತ್ತಮ ಚಿತ್ರಗಳು ಬರಬೇಕು ಅನ್ನೋದು ಅವರ ಆಸೆಯಾಗಿತ್ತು. ಉತ್ತಮ ಚಿತ್ರಗಳ ಬಗ್ಗೆ ಅವ್ರೇ ಮೊದಲು ಮಾತಾಡ್ತಿದ್ರು ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ.


puneetha-parva-gandhada-gudi-pre-release-event-
ನಟ ಪ್ರಕಾಶ್​ ರಾಜ್​


ಗಂಧದಗುಡಿ ಅಪ್ಪುವಿನ ಕನಸು 


ಅಪ್ಪು ಅವರು ಕಣ್ತುಂಬಿಕೊಂಡ ಹಸಿರನ್ನು ನಮ್ಮ ಮುಂದೆ ತಂದಿದ್ದಾರೆ. ಗಂಧದಗುಡಿ ಕೇವಲ ಒಂದು ಚಿತ್ರವಲ್ಲ ಅದು ಅವರ ಕನಸು ಎಂದು ಪ್ರಕಾಶ್​ ರಾಜ್​ ಹೇಳಿದ್ದಾರೆ. ನಮ್ಮ ಅಪ್ಪುವಿನ ಕನಸನ್ನು ನಾವೆಲ್ಲಾ ನನಸಾಗಿಸಬೇಕು ಎಂದು ಪ್ರಕಾಶ್​ ರಾಜ್ ಹೇಳಿದ್ದಾರೆ.


ಇದನ್ನೂ ಓದಿ: Puneeth Rajkumar: ಪುನೀತ ಪರ್ವದಲ್ಲಿ ತಾರೆಯರ ಸಮಾಗಮ; ಮುಗಿಲು ಮುಟ್ಟಿದ ಅಪ್ಪು ಗುಣಗಾನ!


ಅಪ್ಪು ಹೆಸರಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಆ್ಯಂಬುಲೆನ್ಸ್​


ಅಪ್ಪು ಹೋದ ಮೇಲೆ ನನಗೆ ತಿಂಗಳ ಕಾಲ ನಿದ್ದೆ ಮಾಡಿಲ್ಲ. ಏನಾದ್ರೂ ಮಾಡ್ಲೇ ಬೇಕು ಎಂದು ನಾನು ಶಿವಣ್ಣ ಮನೆಗೆ ಹೋದೆ. ನನಗೆ ಒಂದು ಆಸೆ ಇದೆ ಅಪ್ಪು ಹೆಸರಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಒಂದೊಂದು ಆ್ಯಂಬುಲೆನ್ಸ್ ಇರಬೇಕು ಎಂದು ಯೋಚಿಸಿದ್ದಾನೆ. ನಟ ಸೂರ್ಯ ಕೂಡ ಒಂದು ಆ್ಯಂಬುಲೆನ್ಸ್​ ಕೊಡ್ತೀನಿ ಎಂದ್ರು ಬಳಿಕ ಚಿರಂಜೀವಿ ಒಂದು ಆ್ಯಂಬುಲೆನ್ಸ್​ ಕೊಡ್ತೀವಿ ಎಂದ್ರು ಇದಕ್ಕೆಲ್ಲಾ ಅಪ್ಪು ಮೇಲಿನ ಜನರ ಪ್ರೀತಿಯೇ ಸಾಕ್ಷಿ ಎಂದು ಪ್ರಕಾಶ್​ ರಾಜ್ ಹೇಳಿದ್ರು.


ಆ್ಯಂಬುಲೆನ್ಸ್ ನೀಡುವುದಾಗಿ ಘೋಷಿಸಿದ ಯಶ್


ಬಳಿಕ ವೇದಿಕೆ ಮೇಲೆ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್, ಉಳಿದ ಎಲ್ಲಾ ಜಿಲ್ಲೆಗಳಿಗೆ ತಾವೇ ಆ್ಯಂಬುಲೆನ್ಸ್ ಕೊಡುವುದಾಗಿ ಘೋಷಿಸಿದ್ದಾರೆ. ಉಳಿದ ಎಲ್ಲಾ ಜಿಲ್ಲೆಗಳಿಗೆ ತಮ್ಮದೇ ಯಶೋಮಾರ್ಗ ಫೌಂಡೇಶನ್‌ನಿಂದ ಆ್ಯಂಬುಲೆನ್ಸ್ ಕೊಡುವಾಗಿ ಯಶ್ ಘೋಷಿಸಿದ್ದಾರೆ. ಅದರಲ್ಲೂ ಎಲ್ಲಾ ಆ್ಯಂಬುಲೆನ್ಸ್‌ಗಳನ್ನು ಪುನೀತ್ ರಾಜ್‌ ಕುಮಾರ್ ಹೆಸರಲ್ಲೇ ನೀಡುವುದಾಗಿ ಯಶ್ ಘೋಷಿಸಿದ್ದಾರೆ.


ಇದನ್ನೂ ಓದಿ: Puneeth Rajkumar: ಅಪ್ಪು ಅಭಿನಯದ ಗಂಧದಗುಡಿ ಚಿತ್ರಕ್ಕೆ ತೆರಿಗೆ ವಿನಾಯಿತಿ; ಸಿಎಂ ಬೊಮ್ಮಾಯಿ ಘೋಷಣೆ


ಪುನೀತ ಪರ್ವದಲ್ಲಿ ತಾರೆಯರ ಸಮಾಗಮ


ಪುನೀತ್​ ರಾಜ್​ಕುಮಾರ್​ ಅವರಿಗೆ ಎಲ್ಲರೂ ಸೇರಿ ವಿಶೇಷ ರೀತಿಯಲ್ಲಿ ನಮನ ಸಲ್ಲಿಸುತ್ತಿದ್ದಾರೆ. ಡಾ. ರಾಜ್​ಕುಮಾರ್​ ಕುಟುಂಬದವರು ತುಂಬ ಕಾಳಜಿ ವಹಿಸಿ ಈ ಕಾರ್ಯಕ್ರಮ ಮಾಡುತ್ತಿದ್ದಾರೆ.  ಅಶ್ವಿನಿ ಪುನೀತ್​ ರಾಜ್​ಕುಮಾರ್ (Ashwini Puneeth Rajkumar)​, ಶಿವರಾಜ್​ಕುಮಾರ್​, ರಾಘವೇಂದ್ರ ರಾಜ್​ ಕುಮಾರ್​ ಸೇರಿದಂತೆ ರಾಜ್​ ಕುಟುಂಬಸ್ಥರು ಭಾಗಿ ಆಗಿದ್ದಾರೆ.


ಸುಧಾಮೂರ್ತಿ ಬಾಯಲ್ಲಿ ಅಪ್ಪು ಗುಣಗಾನ


ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಇನ್ಫೋಸಿಸ್ ಸುಧಾ ಮೂರ್ತಿ ಅವರು ಪುನೀತ್​ ಬಗ್ಗೆ ಗುಣಗಾನ ಮಾಡಿದ್ದಾರೆ.  ಒಮ್ಮೆ ವಿಮಾನ ನಿಲ್ದಾಣದಲ್ಲಿ ಪುನೀತ್​ ಸಿಕ್ಕಾಗ ಅಲ್ಲೇ ಅವ್ರು ನನ್ನ ಆಶೀರ್ವಾದ ಪಡೆದ್ರು. ಈ ವೇಳೆ ನಾನು ಇಲ್ಲೆಲ್ಲಾ ಬೇಡ ಎಂದೆ. ಅದಕ್ಕೆ ಅವ್ರು ಎಲ್ಲಿದ್ರೂ ದೊಡ್ಡವರು ದೊಡ್ಡವರೇ ಎಂದ್ರು.  ಅವರ ಸರಳತೆಯನ್ನು ಮೆಚ್ಚಲೇಬೇಕು. ನಾನು ಅವ್ರನ್ನು ಲೋಹಿತ್ ಎಂದೇ ಕರೆಯುತ್ತಿದ್ದೆ. ಅವ್ರು ಲೋಹಿತ್​ ಎಂದೇ ನನಗೆ ಪರಿಚಯವಾಗಿದ್ದವರು ಎಂದು ಸುಧಾಮೂರ್ತಿ ಹೇಳಿದ್ರು.

Published by:ಪಾವನ ಎಚ್ ಎಸ್
First published: