ಪುನೀತ್ ರಾಜ್ಕುಮಾರ್ (Puneeth Rajkumar) ಅಭಿಮಾನಿಗಳು (Fans) ಒಂದೆಡೆ ಇಂದು ಸಂಭ್ರಮದಲ್ಲಿದ್ದಾರೆ, ಜೇಮ್ಸ್ (James) ಜಾತ್ರೆ ಶುರು ಮಾಡಿದ್ದಾರೆ, ಪವರ್ ಸ್ಟಾರ್ (Power Star) ಅವರನ್ನು ಮತ್ತೆ ನೋಡಿ ಸಂತಸಗೊಂಡಿದ್ದಾರೆ. ಮತ್ತೊಂದೆಡೆ ಅದೇ ಅಭಿಮಾನಿಗಳು ಭಾವುಕರಾಗಿದ್ದಾರೆ, ದುಃಖಿಸುತ್ತಾ ಇದ್ದಾರೆ.. “ವೀ ಮಿಸ್ ಯೂ ಅಪ್ಪು” (We Miss You Appu) ಅಂತ ಕಣ್ಮೀರು ಹಾಕುತ್ತಿದ್ದಾರೆ. ಹೌದು ಪುನೀತ್ ಅಭಿಮಾನಿಗಳಿಗೆ ಇಂದು ಡಬಲ್ ಸಂಭ್ರಮ ಮತ್ತು ದುಃಖದ ದಿನ. ಒಂದೆಡೆ ಪುನೀತ್ ರಾಜ್ ಕುಮಾರ್ ಬರ್ತ್ ಡೇ (Birth Day), ಮತ್ತೊಂದೆಡೆ ‘ಜೇಮ್ಸ್’ ಸಿನಿಮಾ (Cinema) ರಿಲೀಸ್ (Release) ಆಗಿದೆ. ಅದರ ನಡುವೆಯೇ ಪುನೀತ್ ರಾಜ್ಕುಮಾರ್ ದೈಹಿಕವಾಗಿ ನಮ್ಮ ಜೊತೆ ಇಲ್ಲ ನೋವು ಅಭಿಮಾನಿಗಳ ಹೃದಯವನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಜೇಮ್ಸ್ ಸಿನಿಮಾ ನೋಡಿ ಕಣ್ತುಂಬಿ ಕೊಂಡ ಅಭಿಮಾನಿಗಳು ಅಪ್ಪು ಅಭಿನಯಕ್ಕೆ ಚಪ್ಪಾಳೆ ತಟ್ಟಿದ್ದಾರೆ, ಶಿಳ್ಳೆ ಹೊಡೆದಿದ್ದಾರೆ, ಅವರನ್ನು ಮಿಸ್ ಮಾಡಿಕೊಂಡು ಕಣ್ಣೀರು ಇಟ್ಟಿದ್ದಾರೆ.
ಸಿನಿಮಾ ನೋಡೋದಕ್ಕೆ ದುಬೈ ಟಿಕೆಟ್ ಕ್ಯಾನ್ಸಲ್!
ಪುನೀತ್ ಕಟ್ಟಾ ಅಭಿಮಾನಿಯೊಬ್ಬ ದುಬೈ ಟಿಕೆಟ್ ಕ್ಯಾನ್ಸಲ್ ಮಾಡಿಕೊಂಡು ಸಿನಿಮಾ ನೋಡಲು ಬಂದಿದ್ದಾರೆ. ಬೆಳಗಾವಿಯ ಸವದತ್ತಿಯಿಂದ ಬೆಂಗಳೂರಿಗೆ ಬಂದಿದ್ದು, ಏರ್ ಪೋರ್ಟ್ ನಿಂದ ಬೆಳಗ್ಗೆ ಆರು ಗಂಟೆಗೆ ಪ್ಲೈಟ್ ಅಬುದಾಬಿಗೆ ಇತ್ತು.. ಆದರೆ ಜೇಮ್ಸ್ ಸಿನಿಮಾ ನೋಡಲೆಂದೇ ಟಿಕೆಟ್ ಕ್ಯಾನ್ಸಲ್ ಮಾಡಿಕೊಂಡು ತ್ರಿವೇಣಿ ಥಿಯೇಟರ್ ಗೆ ಬಂದಿರೋ ಹಿದಾಯತ್ ಅಬ್ದುಲ್ ಎಂಬ ಅಭಿಮಾನಿ ಸಿನಿಮಾ ವೀಕ್ಷಿಸಿದ್ದಾರೆ. ಅಪ್ಪು ಸಾವನ್ನಪ್ಪಿದಾಗ ದುಬೈನಲ್ಲಿದ್ದು ಬರಲಾಗಲಿಲ್ಲ.. ಹೀಗಾಗಿ ಇವತ್ತು ಅವರ ಕೊನೆ ಚಿತ್ರ ನೋಡಿ ಹೋಗ್ತೀನಿ ಎಂದು ಗೊಂಬೆ ಹೇಳುತೈತೆ ಎಂದು ಹಾಡು ಹಾಡಿದ್ರು..
ಜೇಮ್ಸ್ ಸಿನಿಮಾ ನೋಡಿದ ಹಿರಿಯಜ್ಜಿ
ಬೆಂಗಳೂರಿನು ವೀರೇಶ್ ಚಿತ್ರಮಂದಿರದಲ್ಲಿ ಹಿರಿಯ ಅಜ್ಜಿಯೊಬ್ಬರು ಜೇಮ್ಸ್ ಸಿನಿಮಾ ನೋಡಿ್ದ್ರು,. ಮೊದಲ ಷೋ ನೋಡಬೇಕೆಂಬ ಆಸೆಯಿಂದ ಕುಟುಂಬದ ಮಹಿಳಾ ಸದಸ್ಯರ ಜೊತೆ ಆಗಮಿಸಿದ ಹಿರಿಯಜ್ಜಿ, ಸಿನಿಮಾ ನೋಡಿದ್ರು, ಬಳಿಕ ಅಪ್ಪು ನೆನೆದು ಕಣ್ಣೀರು ಹಾಕಿದ್ರು.
ಇದನ್ನೂ ಓದಿ: Puneeth Rajkumar: 'ಜೇಮ್ಸ್' ಅವತಾರದಲ್ಲಿ 'ಅಪ್ಪು' ಅಬ್ಬರ, 'ಪವರ್ ಸ್ಟಾರ್' ಕಣ್ತುಂಬಿಕೊಂಡ ಜನಸಾಗರ!
ವಿಶೇಷ ಚೇತನ ಅಭಿಮಾನಿಗಳಿಂದ ಸಿನಿಮಾ ವೀಕ್ಷಣೆ
ಬೆಂಗಳೂರಿನ ವೀರೇಶ್ ಥಿಯೇಟರ್ನಲ್ಲಿ ಅಪ್ಪು ಸಿನಿಮಾ ನೋಡಲು ಐವರು ವಿಶೇಷ ಚೇತನರು. ಮೊದಲ ಷೋ ಟಿಕೆಟ್ ಸಿಕ್ಕಿದೆ. ಹೀಗಾಗಿ ಅದೆಷ್ಟೇ ಲೇಟಾಗಲಿ ಜೇಮ್ಸ್ ಸಿನಿಮಾ ನೋಡಿಯೇ ಹೋಗುತ್ತೇವೆ ಎಂದರು. ಇನ್ನು 330 ಕಿಲೋ ಮೀಟರ್ ದೂರದ ಬಳ್ಳಾರಿಯಿಂದ ಬೆಂಗಳೂರಿಗೆ ಸಿನಿಮಾ ನೋಡಲು ಬಂದ ವಿಶೇಷ ಚೇತನ, ಸ್ನೇಹಿತರ ಸಹಾಯದಿಂದ ಮೊದಲ ಷೋ ನೋಡಿದ್ರು.
ಮಧ್ಯರಾತ್ರಿ ಸಿನಿಮಾಕ್ಕೆ ಬಂದ ಮಹಿಳಾ ಅಭಿಮಾನಿಗಳು
ಜೇಮ್ಸ್ ಸಿನಿಮಾ ನೋಡಲು ಫ್ಯಾಮಿಲಿ ಸಮೇತ ಮಹಿಳಾ ಅಭಿಮಾನಿಗಳು ಬಂದಿದ್ದರು, ಮಗಳ ಆಸೆ ಈಡೇರಿಸಲು ಮಧ್ಯರಾತ್ರಿ ಬಂದ ಮಹಿಳಾ ಅಭಿಮಾನಿಗಳು, ಅಪ್ಪು ಹೆಸರೇಳುತ್ತಿದ್ದಂತೆ ಭಾವುಕರಾದರು. ಕಣ್ಣೀರು ಹಾಕುತ್ತಲೇ ಅಪ್ಪು ನೆನಪಿಕೊಂಡ ಯುವತಿ, ಅಪ್ಪು ಅವರನ್ನು ಜೀವಂತವಾಗಿ ನಾನು ನೋಡಲೇ ಇಲ್ಲ ಎಂದು ಕಣ್ಣೀರು ಹಾಕಿದ್ರು.
ಅಭಿಮಾನಿಗಳಿಗೆ ಅಪ್ಪು ಗೋಲ್ಡ್ ಕಾಯಿನ್
ಬೆಂಗಳೂರಿನ ಥಿಯೇಟರ್ ಒಂದರಲ್ಲಿ ಲಕ್ಕಿ ವಿಜೇತ ಅಭಿಮಾನಿಗಳಿಗೆ ಗೋಲ್ಡ್ ಕಾಯಿನ್ ವಿತರಿಸಲಾಯ್ತು. 2 ಗ್ರಾಂನ ಗೋಲ್ಡ್ ಕಾಯಿನ್ ಮೇಲೆ ಅಪ್ಪು ಅಮರ ಅಂತ ಬರೆಯಲಾಗಿದೆ.. ತಿಲಕನಗರದ ಅಭಿಮಾನಿಯೊಬ್ಬರು ಈ ಲಕ್ಕಿ ಗೋಲ್ಡ್ ಕಾಯಿನ್ ಪಡೆದಿದ್ದಾರೆ.
ಸಿನಿಮಾ ವೀಕ್ಷಿಸಿದ ಸಚಿವ ಗೋಪಾಲಯ್ಯ
ಬೆಂಗಳೂರಿನ ವೀರೇಶ್ ಥಿಯೇಟರ್ನಲ್ಲಿ ಸಚಿವ ಗೋಪಾಲಯ್ಯ ಜೇಮ್ಸ್ ಸಿನಿಮಾ ನೋಡಿದ್ರು. ನಾನೂ ಪುನೀತ್ ಫ್ಯಾನ್ ಎಂದ ಸಚಿವರು, ಇಷ್ಟು ಬೇಗ ಅಪ್ಪುನ ಕಳೆದುಕೊಳ್ಳಿತ್ತೀವಿ ಅಂತ ಅಂದುಕೊಂಡಿರಲಿಲ್ಲ. ನಾಳೆ ನವರಂಗ್, ವೀರಭದ್ರೇಶ್ವರ ಥಿಯೇಟರ್ ನಲ್ಲಿ ಒಂದು ಷೋ ಗೆ ಉಚಿತ ಟಿಕೇಟ್ ನೀಡ್ತಾ ಇದ್ದೀನಿ ಎಂದ್ರು.
ಪುನೀತ್ ನೆನೆದು ಕಣ್ಣೀರಿಟ್ಟ ಅಭಿಮಾನಿ
ಬೆಂಗಳೂರಿನಲ್ಲಿ ಗದಗದಿಂದ ಬಂದಿರುವ ಮಹಿಳಾ ಅಭಿಮಾನಿ ಅಪ್ಪುನೆನೆದು ಭಾವುಕರಾದ್ರು. ಅಪ್ಪು ಸರ್ ನನಗೆ ಬಹಳ ಸಹಾಯ ಮಾಡಿದ್ರು . ಕೆಲಸದ ವಿಚಾರವಾಗಿ ಅರ್ಜಿ ಹಾಕಿದ್ದೆ, ಆ ವೇಳೆ ಬಹಳ ಸಹಾಯ ಮಾಡಿದ್ರು. ಆದ್ರೆ ಈಗ ಅವ್ರೇ ಇಲ್ಲ ಎಂದು ಕಣ್ಣೀರು ಹಾಕಿದ್ರ.
ಅಭಿಮಾನಿಗಳಿಗೆ ಅನ್ನ ಸಂತರ್ಪಣೆ
ಬೆಂಗಳೂರಿನ ಜಾಲಹಳ್ಳಿ ಕ್ರಾಸ್ ನ ರಾಕ್ ಲೈನ್ ಚಿತ್ರ ಮಂದಿರದ ಬಳಿ ಸಿನಿಮಾ ವೀಕ್ಷಣೆಗೆ ಬಂದ ಅಭಿಮಾನಿಗಳ ಅನ್ನ ಸಂತರ್ಪಣೆ ಮಾಡಲು ಸಿದ್ಧತೆ ನಡೆಸಲಾಗಿದೆ. ಥಿಯೇಟರ್ ಮುಂದೆ ಡಾ. ಪುನೀತ್ ರಾಜ್ ಕುಮಾರ್ ಕಟೌಟ್ ಗೆ ಹೂವಿನಿಂದ ಅಲಂಕಾರ ಮಾಡಲಾಗಿದ್ದು ಎರಡು ಸಾವಿರ ಜನಕ್ಕೆ ಅನ್ನಹಾಕಲು ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: James Twitter Review: ಪುನೀತ್ ರಾಜ್ಕುಮಾರ್ 'ಜೇಮ್ಸ್' ಹೇಗಿದೆ? ಇಲ್ಲಿದೆ ಟ್ವಿಟರ್ ರಿವ್ಯೂ
ಆರತಿ ಬೆಳಗಿ ಸಿನಿಮಾ ವೀಕ್ಷಣೆ
ಕೋಲಾರದಲ್ಲಿ ಸಿನಿಮಾದಲ್ಲಿ ಪುನಿತ್ ಎಂಟ್ರಿ ಆಗುತ್ತಿದ್ದಂತೆ ಸ್ಕ್ರೀನ್ ಗೆ ಅಭಇಮಾನಿಗಳು ಆರತಿ ಬೆಳಗಿದರು. ಪುನೀತ್ ಎಂಟ್ರಿಗೆ ಥೇಟರ್ ತುಂಬ ಹರ್ಷೋದ್ಗಾರ ಕೇಳಿಬಂತು. ಇನ್ನು ಸಿನಿಮಾ ಪ್ರದರ್ಶನಕ್ಕೂ ಮೊದಲು ಅಪ್ಪುಗೆ ಶ್ರದ್ದಾಂಜಲಿ ಸಲ್ಲಿಸಲಾಯ್ತು,.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ