Puneeth Rajkumar: ಸೂರಿ ಪಾಪ್​ಕಾರ್ನ್ ಮಂಕಿ ಟೈಗರ್​ಗೆ ಪವರ್ ಸ್ಟಾರ್ ಪುನೀತ್ ಸಾಥ್

 ನಿರ್ದೇಶಕ ಸೂರಿ ಜೊತೆಗೆ ಪುನೀತ್​ 3 ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಪುನೀತ್​ ಅವರ ನೆಚ್ಚಿನ ನಿರ್ದೇಶಕರ ಸಾಲಿನಲ್ಲಿ ಸೂರಿ ಕೂಡ ನಿಲ್ಲುತ್ತಾರೆ. ಹೀಗಾಗಿ ಪುನೀತ್​ ‘ಪಾಪ್ ಕಾರ್ನ್ ಮಂಕಿ ಟೈಗರ್’​ ಆಡಿಯೋ ಹಕ್ಕನ್ನು ಖರೀದಿಸಲು ಮುದೆ ಬಂದಿದ್ದಾರೆ.

Rajesh Duggumane | news18-kannada
Updated:December 24, 2019, 12:30 PM IST
Puneeth Rajkumar: ಸೂರಿ ಪಾಪ್​ಕಾರ್ನ್ ಮಂಕಿ ಟೈಗರ್​ಗೆ ಪವರ್ ಸ್ಟಾರ್ ಪುನೀತ್ ಸಾಥ್
ಪುನೀತ್​ ರಾಜ್​ಕುಮಾರ್​
  • Share this:
‘ಟಗರು’ ಸಿನಿಮಾ ಹಿಟ್​ ಆದ ನಂತರ ನಿರ್ದೇಶಕ ಸೂರಿ ಮತ್ತು ಡಾಲಿ ಧನಂಜಯ ಮತ್ತೆ ಜೊತೆಯಾಗಿ ಕೆಲಸ ಮಾಡುತ್ತಿರುವ ‘ಪಾಪ್ ಕಾರ್ನ್ ಮಂಕಿ ಟೈಗರ್​’ ಸಿನಿಮಾ. ಈಗ ಈ ಸಿನಿಮಾಗೆ ಪವರ್​ ಸ್ಟಾರ್​ ಪುನೀತ್ ರಾಜ್​ಕುಮಾರ್​ ಸಾತ್​ ನೀಡಿದ್ದಾರೆ.

ಹಾಗಿದ್ದರೆ ಧನಂಜಯ್​ ಸಿನಿಮಾದಲ್ಲಿ ಪುನೀತ್​ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಾ? ಇಲ್ಲ, ‘ಪಾಪ್ ಕಾರ್ನ್ ಮಂಕಿ ಟೈಗರ್’​ ಸಿನಿಮಾದ ಆಡಿಯೋ ಹಕ್ಕನ್ನು ಪುನೀತ್ ರಾಜ್​ಕುಮಾರ್​ ಒಡೆತನದ ಪಿಆರ್​ಕೆ ಸ್ಟುಡಿಯೋ ತೆಗೆದುಕೊಂಡಿದೆ.

ನಿರ್ದೇಶಕ ಸೂರಿ ಜೊತೆಗೆ ಪುನೀತ್​ 3 ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಪುನೀತ್​ ಅವರ ನೆಚ್ಚಿನ ನಿರ್ದೇಶಕರ ಸಾಲಿನಲ್ಲಿ ಸೂರಿ ಕೂಡ ನಿಲ್ಲುತ್ತಾರೆ. ಹೀಗಾಗಿ ಪುನೀತ್​ ‘ಪಾಪ್ ಕಾರ್ನ್ ಮಂಕಿ ಟೈಗರ್’​ ಆಡಿಯೋ ಹಕ್ಕನ್ನು ಖರೀದಿಸಲು ಮುದೆ ಬಂದಿದ್ದಾರೆ. ಈಗಾಗಲೇ ಒಂದು ಹಂತದ  ಮಾತುಕಥೆಯಾಗಿದ್ದು, ಚಿತ್ರದ ಫಸ್ಟ್ ಲುಕ್ ಟೀಸರ್​​ನ ರಿಲೀಸ್ ಡೇಟ್ ವೇಳೆ ಈ ಬಗ್ಗೆ ಘೋಷಣೆ ಮಾಡಲು ಯೋಜನೆ ರೂಪಿಸಲಾಗಿದೆ.ಇದನ್ನೂ ಓದಿ: ಪಾಪ್​ಕಾರ್ನ್ ಮಂಕಿ ಟೈಗರ್​ನಲ್ಲಿ ಸ್ಟಾರ್ ನಟಿಯ ಗಂಡ; ಸೂರಿ ಸಿನಿಮಾ ಮೂಲಕ ಕಂಬ್ಯಾಕ್

ಈ ಮೊದಲು ಟಗರು ಸಿನಿಮಾದ ಹಾಡುಗಳು ಪಿ.ಆರ್.ಕೆ.  ಯೂಟ್ಯೂಬ್ ಚಾನೆಲ್​ನಲ್ಲಿ ಟ್ರೆಂಡ್ ಸೃಷ್ಟಿಸಿತ್ತು. ಇದೀಗ ಅದೇ ಸೂರಿ –ಚರಣ್ ಕಾಂಬಿನೇಷನ್ ನಲ್ಲೇ ಮೂಡಿ ಬಂದಿರುವ ‘ಪಾಪ್ ಕಾರ್ನ್ ಮಂಕಿ ಟೈಗರ್’ ಮತ್ತೊಂದು ಟ್ರೆಂಡ್ ಸೃಷ್ಟಿಸಲು ಸಿದ್ಧವಾಗಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರದ ಫಸ್ಟ್ ಲುಕ್ ಟೀಸರ್  ಹೊಸ ವರ್ಷಕ್ಕೆ ಲಾಂಚ್ ಆಗಲಿದೆ .

ದುನಿಯಾ ಸೂರಿ  ನಿರ್ದೇಶನದ ಈ ಚಿತ್ರವನ್ನು ಸುಧೀರ್ ಕೆ.ಎಂ ನಿರ್ಮಿಸುತ್ತಿದ್ದಾರೆ. ಶೇಖರ್ ಎಸ್ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ಸಂಯೋಜನೆ ಹಾಗೂ ದೀಪು ಎಸ್. ಕುಮಾರ್​ ಸಂಕಲನ ಚಿತ್ರಕ್ಕಿದೆ. ಡಾಲಿ ಧನಂಜಯ, ನಿವೇದಿತಾ, ಕಾಕ್ರೋಚ್, ನವೀನ್, ಅಮೃತಾ ಅಯ್ಯಂಗಾರ್, ಸಪ್ತಮಿ, ಮೋನಿಶಾ ನಾಡಿಗೇರ್ ಹಾಗೂ ಗೌತಮ್ ಚಿತ್ರದಲ್ಲಿ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
First published:December 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ