James: 'ಜೇಮ್ಸ್'​ ಚಿತ್ರೀಕರಣದ ಸೆಟ್​ನಿಂದ ಲೀಕ್​ ಆಯ್ತು ಪುನೀತ್​ ರಾಜ್​ಕುಮಾರ್​ ಫೋಟೋ..!

Puneeth Rajkumar: 'ಭರಾಟೆ' ಸಿನಿಮಾದ ನಂತರ ನಿರ್ದೇಶಕ ಚೇತನ್​ ಕುಮಾರ್​ ಆ್ಯಕ್ಷನ್​ ಕಟ್​ ಹೇಳುತ್ತಿರುವ ಚಿತ್ರ 'ಜೇಮ್ಸ್​'. ಈ ಚಿತ್ರದ ಮುಹೂರ್ತ ಹೊಸ ವರ್ಷದ ಆರಂಭದಲ್ಲೇ ನೆರವೇರಿತ್ತು. ಇದರ ಚಿತ್ರೀಕರಣ ಮಾತ್ರ ಆರಂಭವಾಗಿರಲಿಲ್ಲ. ಆದರೆ ಈಗ ಪುನೀತ್ ಅಭಿಮಾನಿಗಳಿಗೆ ಪ್ರೇಮಿಗಳ ದಿನದಂದು ಸಿಹಿ ಸುದ್ದಿ ಸಿಕ್ಕಿದೆ.

'ಜೇಮ್ಸ್​' ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​

'ಜೇಮ್ಸ್​' ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​

  • Share this:
ಪುನೀತ್​ ರಾಜ್​ ಕುಮಾರ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ ಅಂದರೆ 'ಯುವರತ್ನ'. ಆದರೆ ಈ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡ ಕಾರಣ ಈಗ ಅಪ್ಪು ತಮ್ಮ ಮತ್ತೊಂದು ಸಿನಿಮಾ 'ಜೇಮ್ಸ್​'ನಲ್ಲಿ ಬ್ಯುಸಿಯಾಗಿದ್ದಾರೆ.

'ಭರಾಟೆ' ಸಿನಿಮಾದ ನಂತರ ನಿರ್ದೇಶಕ ಚೇತನ್​ ಕುಮಾರ್​ ಆ್ಯಕ್ಷನ್​ ಕಟ್​ ಹೇಳುತ್ತಿರುವ ಚಿತ್ರ 'ಜೇಮ್ಸ್​'. ಈ ಚಿತ್ರದ ಮುಹೂರ್ತ ಹೊಸ ವರ್ಷದ ಆರಂಭದಲ್ಲೇ ನೆರವೇರಿತ್ತು. ಇದರ ಚಿತ್ರೀಕರಣ ಮಾತ್ರ ಆರಂಭವಾಗಿರಲಿಲ್ಲ. ಆದರೆ ಈಗ ಪುನೀತ್ ಅಭಿಮಾನಿಗಳಿಗೆ ಪ್ರೇಮಿಗಳ ದಿನದಂದು ಸಿಹಿ ಸುದ್ದಿ ಸಿಕ್ಕಿದೆ.

Mayabazar 2016 Kannada Movie Teaser is out Now
ನಟ ಪುನೀತ್​ ರಾಜ್​ ಕುಮಾರ್​


ಪುನೀತ್​ ಅವರ ಅಭಿನಯದ ಜೇಮ್ಸ್​ ಸಿನಿಮಾದ ಚಿತ್ರೀಕರಣ ಇಂದಿನಿಂದ ಆರಂಭಾಗಿದೆಯಂತೆ. ಅದೂ ನಗರದ ವೈಟ್​ಫೀಲ್ಡ್​ನಲ್ಲಿ ಒಂದು ಸೆಟ್​ ಹಾಕಲಾಗಿದ್ದು, ಫೈಟ್​ ದೃಶ್ಯದಿಂದಲೇ ಚಿತ್ರೀಕರಣ ಆರಂಭಿಸಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಹಿಂದಿ ಸಿನಿಮಾ ನೋಡಿದ್ದೀರಾ ಎಂದ ಬಾಲಿವುಡ್ ನಟಿಗೆ ಈ ಏರ್​ಲೈನ್​ ಸಿಬ್ಬಂದಿ ನೀಡಿದ ಉತ್ತರ ಏನು ಗೊತ್ತಾ?

ಇದೇ ಚಿತ್ರೀಕರಣದ ವೇಳೆ ಅಭಿಮಾನಿಯೊಬ್ಬರು ಪುನೀತ್​ ಸೆಟ್​ನಲ್ಲಿರುವಾಗ ಫೋಟೋ ತೆಗೆದಿದ್ದಾರೆ. ಅದನ್ನು ಅಪ್ಪು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರಲ್ಲಿ ಪುನೀತ್​ ಒಂದು ಕಾರಿನ ಮುಂದೆ ನಿಂತಿದ್ದಾರೆ.

#PowerStarPuneethRajkumar In #James 🔥🔥🔥🔥🔥#PowerStar #PuneethRajkumar https://t.co/xx9YFfb3f2 pic.twitter.com/0xi9lFJWn7ಈ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್ ಅವರಿಗೆ ಜೋಡಿಯಾಗಿ ಕಿರಿಕ್​ ಜೋಡಿ ರಶ್ಮಿಕಾ ಮಂದಣ್ಣ ಅಭಿನಯಿಸಲಿದ್ದಾರೆ ಅನ್ನೋ ಟಾಕ್ ಆರಂಭವಾಗಿದೆ. ಆದರೆ ಈ ಕುರಿತಾಗಿ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರ ಬಂದಿಲ್ಲ.

Nikhil - Revathi: ನಿಖಿಲ್​ ಕುಮಾರಸ್ವಾಮಿ ಜೊತೆ ಫುಲ್​ ಮಾಡರ್ನ್​ ಲುಕ್​ನಲ್ಲಿ ಕಾಣಿಸಿಕೊಂಡ ರೇವತಿ..!

First published: