'ನಟಸಾರ್ವಭೌಮ'ನಿಗೆ ಕೋಟೆ ಕಟ್ಟಿದ ಅಭಿಮಾನಿಗಳು : ರಿಲೀಸ್‍ಗೂ ಮೊದಲೇ ಅಭಿಮಾನಿಗಳ ಹಬ್ಬ ಶುರು !

ಅಪ್ಪು ಅಭಿಮಾನಿಗಳು ಎಲೆಮರೆ ಕಾಯಿಯ ತರಹ ಇರುತ್ತಾರೆ. ಮೊದಲ ದಿನ ಮೊದಲ ಪ್ರದರ್ಶನ ಚಿತ್ರಮಂದಿರದ ಒಳಗೆ ನುಗ್ಗಿದಾಗಲೇ ಗೊತ್ತಾಗೋದು ಅಲ್ಲೊಂದು ಅಭಿಮಾನದ ಸಾಗರವೇ ಹರಿಯುತ್ತಿದೆ ಅಂಥ. ಪುನೀತ್ ಸಿನಿಮಾಗೆ ಈ ಬಾರಿ 'ನಟಸಾರ್ವಭೌಮ'ನ ಪವರ್ ಸೇರಿಕೊಂಡಿದೆ.

Anitha E | news18
Updated:February 6, 2019, 1:03 PM IST
'ನಟಸಾರ್ವಭೌಮ'ನಿಗೆ ಕೋಟೆ ಕಟ್ಟಿದ ಅಭಿಮಾನಿಗಳು : ರಿಲೀಸ್‍ಗೂ ಮೊದಲೇ ಅಭಿಮಾನಿಗಳ ಹಬ್ಬ ಶುರು !
'ನಟಸಾರ್ವಭೌಮ' ಸಿನಿಮಾದಲ್ಲಿ ಪುನೀತ್ ರಾಜ್​ಕುಮಾರ್​
Anitha E | news18
Updated: February 6, 2019, 1:03 PM IST
ಕನ್ನಡದಲ್ಲಿ ಇನ್ನು ಯಾವುದೇ ದೊಡ್ಡ ಬಜೆಟ್ ಸಿನಿಮಾ ರಿಲೀಸ್ ಆದರೂ 'ಕೆ.ಜಿ.ಎಫ್‍'ಗೆ ಹೋಲಿಕೆ ಮಾಡಲಾಗುತ್ತದೆ. ದೊಡ್ಡ ರಿಲೀಸ್ ಅಂದ್ರೆ... 'ಕೆ.ಜಿ.ಎಫ್' ಮಟ್ಟಕ್ಕೆ ರಿಲೀಸಾಗುತ್ತಾ ? ಹಿಟ್ ಅಂದ್ರೆ... 'ಕೆ.ಜಿ.ಎಫ್' ದಾಖಲೆ ಮುರಿಯುತ್ತಾ ? ಬಿಡುಗಡೆ ಎಂದರೆ... 'ಕೆ.ಜಿ.ಎಫ್‍'ನಷ್ಟು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಾ ? ಈ ತರಹದ್ದೊಂದು ಗೋಲ್ ಸೆಟ್ ಮಾಡಿ ಹೋಗಿದೆ 'ಕೆ.ಜಿ.ಎಫ್'. 'ನಟಸಾರ್ವಭೌಮ'ನಿಗೂ ಈಗ 'ಕೆ.ಜಿ.ಎಫ್' ಅಬ್ಬರವನ್ನು ಹೋಲಿಸಲಾಗುತ್ತಿದೆ. ಹಾಗಾದರೆ ಪವರ್​ ಸ್ಟಾರ್​ ಪವರ್​ಫುಲ್​ ಸಿನಿಮಾದ ರಿಲೀಸ್ ಯಾವ ಮಟ್ಟಕ್ಕಿರುತ್ತೆ ಎನ್ನುವುದರ ಆಸಕ್ತಿಕರ ಮಾಹಿತಿ ಇಲ್ಲಿದೆ ಓದಿ...

ಇದನ್ನೂ ಓದಿ: 'ಯಜಮಾನ' ಟೈಟಲ್ ಟ್ರ್ಯಾಕ್​: ಸಾಮಾಜಿಕ ಜಾಲತಾಣದಲ್ಲಿ ದಚ್ಚು ಅಭಿಮಾನಿಗಳ ಹಬ್ಬ..!​

ಅಪ್ಪು ಅಭಿಮಾನಿಗಳು ಎಲೆಮರೆ ಕಾಯಿಯ ತರಹ ಇರುತ್ತಾರೆ. ಮೊದಲ ದಿನ ಮೊದಲ ಪ್ರದರ್ಶನ ಚಿತ್ರಮಂದಿರದ ಒಳಗೆ ನುಗ್ಗಿದಾಗಲೇ ಗೊತ್ತಾಗೋದು ಅಲ್ಲೊಂದು ಅಭಿಮಾನದ ಸಾಗರವೇ ಹರಿಯುತ್ತಿದೆ ಅಂಥ. ಪುನೀತ್ ಸಿನಿಮಾಗೆ ಈ ಬಾರಿ 'ನಟಸಾರ್ವಭೌಮ'ನ ಪವರ್ ಸೇರಿಕೊಂಡಿದೆ. ಅಣ್ಣಾವರ ಅಷ್ಟೂ ಅಭಿಮಾನಿಗಳು ಈ ಸಿನಿಮಾ ನೋಡೋಕೆ ತಯಾರಾಗಿರುವುದರಲ್ಲಿ ಅನುಮಾನವಿಲ್ಲ. ಸಿನಿಮಾ ರಿಲೀಸ್‍ಗೂ ಮೊದಲೇ ಹಬ್ಬವಂತೂ ಆರಂಭವಾಗಿದೆ.

ಇದು ಬನಶಂಕರಿಯಲ್ಲಿ 'ನಟಸಾರ್ವಭೌಮ'ನ ಸ್ವಾಗತಕ್ಕೆ ನಡೆದಿರೋ ತಯಾರಿ, ಹಾಗೇ ರಾಜ್ಯಾದ್ಯಂತ ಹಲವು ಕಡೆ ಮಧ್ಯರಾತ್ರಿ 12 ಗಂಟೆಗೇ 'ನಟಸಾರ್ವಭೌಮ'ನನ್ನು ನೋಡಲೇಬೇಕು ಅಂತ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಬೆಳಿಗ್ಗೆ 4 ಗಂಟೆಗೆ ಮೊದಲ ಶೋ ನೋಡುವ ಅಭ್ಯಾಸವನ್ನು ಬ್ರೇಕ್ ಮಾಡಿ  ಅಪ್ಪು ಅಭಿಮಾನಿಗಳು ಮಧ್ಯರಾತ್ರಿ 12ರಿಂದ ಮರುದಿನ ಮತ್ತೆ ಮಧ್ಯರಾತ್ರಿ 12ರವರೆಗೂ ಅಂದರೆ  24 ಗಂಟೆ ಸತತವಾಗಿ 8 ಶೋಗಳನ್ನು ನೋಡುವ ನಿರ್ಧಾರ ಮಾಡಿದ್ದಾರೆ. ಊರ್ವಶಿ  ಹಾಗೂ ಗೌಡನಪಾಳ್ಯದ  ಶ್ರೀನಿವಾಸ ಚಿತ್ರಮಂದಿರದಲ್ಲಿ ಹೀಗೆ ಒಂದೇ ದಿನ 8 ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತಿದೆ.

ಯಶ್ ಅಭಿನಯದ 'ಕೆ.ಜಿ.ಎಫ್' ರಿಲೀಸ್‍ಗೂ ಮೊದಲು ದೊಡ್ಡ ಹವಾ ಕ್ರಿಯೇಟ್ ಮಾಡಿತ್ತು. ಕಳೆದ ಡಿಸೆಂಬರ್ 21ಕ್ಕೆ ರಿಲೀಸ್ ಆಗಿದ್ದ ಚಿತ್ರಕ್ಕೆ ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳು ಸಿಕ್ಕಿದ್ದವು. 'ನಟಸಾರ್ವಭೌಮ' ಕೂಡ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಥಿಯೇಟರ್ ಬುಕ್ಕಿಂಗ್ ವಿಚಾರದಲ್ಲೂ ಪವರ್ ಫ್ಯಾನ್ಸ್ ಫುಲ್ ಜೋಷ್‍ನಲ್ಲಿ ಮುನ್ನುಗ್ಗಿದ್ದು ಬುಕ್ ಮೈ ಶೋನಲ್ಲಿ ಫಾಸ್ಟ್ ಬುಕ್ಕಿಂಗ್ ತೋರಿಸುತ್ತಿದೆ.

ಇದನ್ನೂ ಓದಿ: ಅಪ್ಪು ಅಭಿಮಾನಿಗಳಲ್ಲಿ 'ನಟಸಾರ್ವಭೌಮ'ನ ಫೀವರ್​: ಎರಡು ಚಿತ್ರಮಂದಿರಗಳಲ್ಲಿ ಸತತ 24 ಗಂಟೆಗಳ ಶೋ..!
Loading...

ಮೊದಲ ದಿನಕ್ಕೆ 100ಕ್ಕೂ ಹೆಚ್ಚು ಶೋಗಳಲ್ಲಿ 'ನಟಸಾರ್ವಭೌಮ'ನ ಅಬ್ಬರ ಇರಲಿದ್ದು, ಇನ್ನೆರೆಡು ದಿನಗಳಲ್ಲಿ ದೇಶಾದ್ಯಂತ ಟಿಕೆಟ್ ಬುಕ್ಕಿಂಗ್ ಹವಾ ಇನ್ನೂ ಜೋರಾಗಲಿದೆ. ಇನ್ನು ಈ ಸಿನಿಮಾ ಅಪ್ಪುಗೇ ವಿಶೇಷ. ಯಾಕಂದರೆ ಇಲ್ಲಿ ಪತ್ರಕರ್ತನ ಪಾತ್ರದಲ್ಲಿ ಅಪ್ಪು ಕಾಣಿಸಿಕೊಳ್ಳಲಿದ್ದಾರೆ. ಕೇವಲ ಆ್ಯಕ್ಷನ್, ರೊಮ್ಯಾನ್ಸ್, ಫ್ಯಾಮಿಲಿ ಮ್ಯಾನ್ ಪಾತ್ರದಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಅಪ್ಪು, ಈಗ ಜರ್ನಲಿಸ್ಟ್ ಪಾತ್ರದ ಮೂಲಕ ಮೊದಲ ಬಾರಿ ಕಂಗೊಳಿಸಲಿದ್ದಾರೆ. ಸುದ್ದಿಯ ಹಿಂದೆ ಬೀಳೋ ಪತ್ತೆದಾರಿ ರಿಪೋರ್ಟರ್ ಆಗಿ ಅಪ್ಪು ಕ್ಷಣಕ್ಷಣಕ್ಕೂ ಥ್ರಿಲ್ ಕೊಡಲಿದ್ದಾರೆ. ಅದರ ಝಲಕ್‍ಗಳು ಈಗಾಗಲೇ ಟ್ರೈಲರ್​ನಲ್ಲಿ ಸಿಕ್ಕಿವೆ.

ಪುನೀತ್​ಗೆ ಸಿನಿಮಾ ಹೊಸತಲ್ಲ.. ಹಿಟ್ ಸೂಪರ್ ಹಿಟ್ ಬ್ಲಾಕ್‍ಬಸ್ಟರ್ ಇದ್ಯಾವುದೂ ಹೊಸತಲ್ಲ. ಸೋಲು-ಗೆಲುವು ಇದನ್ನು ಯೋಚಿಸಿ ಸಿನಿಮಾ ಮಾಡುವ ನಟ ಅಲ್ಲ ಅಪ್ಪು. ಒಳ್ಳೇ ಸಿನಿಮಾ ಮಾಡುವ, ಹೊಸ ರೀತಿಯ ಪ್ರಯೋಗಗಳಿಗೆ ಒಗ್ಗಿಕೊಳ್ಳುವ ಮೂಲಕ ಹಾರರ್ ಟಚ್ ಇರುವ ಪಾತ್ರವನ್ನೂ ಮೊದಲ ಬಾರಿಗೆ ಟಚ್ ಮಾಡಿದ್ದಾರೆ ಪುನೀತ್. ಇದೂ ಕೂಡ ಕುತೂಹಲ ದುಪ್ಲ್ಪಟ್ಟು ಆಗೋಕೆ ಇನ್ನೊಂದು ಕಾರಣ. ಈ ಎಲ್ಲ ಕುತೂಹಲಗಳಿಗೆ ಉತ್ತರ ಸಿಗೋಕೆ 48 ಗಂಟೆಗಳಷ್ಟೇ ಬಾಕಿ ಇದೆ.

PHOTOS: ಸ್ಟಾರ್​ ನಿರ್ದೇಶಕ 'ಕೆ.ಜಿ.ಎಫ್' ಖ್ಯಾತಿಯ ಪ್ರಶಾಂತ್​ ನೀಲ್​ರ ಅಪರೂಪದ ಚಿತ್ರಗಳು..!
First published:February 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...