Movie Review: 'ನಾಟ್ಯಸಾರ್ವಭೌಮ'ನಾಗಿ ಪ್ರೇಕ್ಷಕರ ಮನಕ್ಕೆ ಲಗ್ಗೆ ಇಟ್ಟ 'ನಟಸಾರ್ವಭೌಮ'

'ನಟಸಾರ್ವಭೌಮ'ನನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದ ಅಭಿಮಾನಿಗಳು ಒಂದು ದಿನ ಮುಂಚಿತವಾಗಿಯೇ ಸಿನಿಮಾ ತೆರೆ ಕಾಣುವಂತೆ ಮಾಡಿದರು. ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಚಿತ್ರ ತಂಡ ಫೆ.6ರಂದು ರಾತ್ರಿಯೇ ಸಿನಿಮಾ ಬಿಡುಗಡೆ ಮಾಡಿತು. ಇಷ್ಟೆಲ ನಿರೀಕ್ಷೆ ಹುಟ್ಟಿಸಿದ ಈ ಸಿನಿಮಾ ಹೇಗಿದೆ ಗೊತ್ತಾ..?

Anitha E | news18
Updated:February 7, 2019, 4:30 PM IST
Movie Review: 'ನಾಟ್ಯಸಾರ್ವಭೌಮ'ನಾಗಿ ಪ್ರೇಕ್ಷಕರ ಮನಕ್ಕೆ ಲಗ್ಗೆ ಇಟ್ಟ 'ನಟಸಾರ್ವಭೌಮ'
ನಟಸಾರ್ವಭೌಮ
Anitha E | news18
Updated: February 7, 2019, 4:30 PM IST
-ಆನಂದ್ ಸಾಲುಂಡಿ, 

ಸಿನಿಮಾ: ನಟಸಾರ್ವಭೌಮ

ನಿರ್ದೇಶನ: ಪವನ್​ ಒಡೆಯರ್​

ತಾರಾಗಣ: ಪುನೀತ್​ ರಾಜ್​ಕುಮಾರ್​, ರಚಿತಾ ರಾಮ್​, ರವಿಶಂಕರ್​, ಚಿಕ್ಕಣ್ಣ, ಬಿ. ಸರೋಜಾದೇವಿ, ಅನುಪಮಾ ಪರಮೇಶ್ವರನ್​.

 

ಪುನೀತ್ ಅಭಿಮಾನಿಗಳ ಕಾತರ, ಆತುರ ಮುಗಿಲು ಮುಟ್ಟಿತ್ತು. ಅಧಿಕೃತವಾಗಿ ನಟಸಾರ್ವಭೌಮ ರಿಲೀಸ್ ದಿನಾಂಕ ಪ್ರಕಟವಾದಾಗಲೇ ಈ ಸಿನಿಮಾವನ್ನ ಮೊದಲ ದಿನ ಮೊದಲ ಶೋ ನೋಡಲೇಬೇಕು ಅಂತ ನಿರ್ಧರಿಸಿದ್ದರು ಅಭಿಮಾನಿಗಳು. ಸಿನಿಮಾ ರಿಲೀಸ್ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ಅಭಿಮಾನಿಗಳ ಉತ್ಸಾಹ ಮತ್ತೊಂದು ಮಟ್ಟಕ್ಕೆ ತಲುಪಿತ್ತು.

ಫೆಬ್ರವರಿ 7 ರಂದು ಸಿನಿಮಾ ಬಿಡುಗಡೆ ಮಾಡೋಕೆ ರೆಡಿ ಮಾಡಿಕೊಂಡಿದ್ದ ಚಿತ್ರತಂಡ, ಅಭಿಮಾನಿಗಳ ಒತ್ತಾಯದ ಮೇರೆಗೆ, ಹಿಂದಿನ ದಿನದ ರಾತ್ರಿಯೇ ಪ್ರದರ್ಶನ ಆರಂಭಿಸುವಂತಾಗಿತ್ತು. ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ಫೆಬ್ರವರಿ 6ರಂದೇ 9.45ಕ್ಕೆ 'ನಟಸಾರ್ವಭೌಮನ' ಮೊದಲ ಪ್ರದರ್ಶನ ಆರಂಭವಾಗಿದ್ದೇ ಇದಕ್ಕೆ ಸಾಕ್ಷಿ. ಹಾಗೆ ಲಾಲ್‍ಬಾಗ್‍ನ ಊರ್ವಶಿ ಚಿತ್ರಮಂದಿರ ಸೇರಿ ಇನ್ನೂ ಹಲವು ಕಡೆ ಮಧ್ಯರಾತ್ರಿಯೇ ಸಿನಿಮಾ ಪ್ರದರ್ಶನ ಶುರುವಾಗಿದೆ.
Loading...

ಇಷ್ಟೆಲ್ಲ ನಿರೀಕ್ಷೆಗಳನ್ನಿಟ್ಟುಕೊಂಡು ತೆರೆಕಂಡ  ಈ ಸಿನಿಮಾ ಸದ್ಯ ಪ್ರೇಕ್ಷಕರ ಮನ ಗೆದ್ದಿದೆ. ಸಿನಿಮಾ ನೋಡಿದ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. ಪುನೀತ್ ಈ ಸಿನಿಮಾದಲ್ಲಿ ಬೇರೆ ರೀತಿಯೇ ಕಾಣಿಸಿಕೊಂಡಿದ್ದಾರೆ. ಇದು ಪುನೀತ್ ಅಭಿಮಾನಿಗಳಿಗೆ ಬೇರೆಯದ್ದೇ ಫೀಲ್ ನೀಡುವ ಸಿನಿಮಾ. ಅಪ್ಪು ಸಿನಿಮಾ ಅಂದರೆ ಅದೊಂಥರಾ ಕಂಪ್ಲೀಟ್ ಪ್ಯಾಕೆಜ್ ಅಂತ. ಆದರೆ ಈ ಬಾರಿ ನಿಮ್ಮನ್ನೆಲ್ಲ ಬೆಚ್ಚಿ ಬೀಳಿಸೋ ಅಂಶವೂ ಚಿತ್ರದಲ್ಲಿ ಸೇರಿಕೊಂಡಿದೆ. ಅದೇ ಈ ಸಿನಿಮಾದ ಹೈಲೈಟ್.

ಇದನ್ನೂ ಓದಿ: Movie Review: 'ನಾಟ್ಯಸಾರ್ವಭೌಮ'ನಾಗಿ ಪ್ರೇಕ್ಷಕರ ಮನಕ್ಕೆ ಲಗ್ಗೆ ಇಟ್ಟ 'ನಟಸಾರ್ವಭೌಮ'

ನಿರ್ದೇಶಕ ಪವನ್ ಒಡೆಯರ್ ಪುನೀತ್ ಇಮೇಜ್ ಅನ್ನ ಗಮನದಲ್ಲಿಟ್ಕೊಂಡೇ ಸಿನಿಮಾ ಮಾಡಿದ್ದಾರೆ. ನಿಮ್ಮನ್ನ ನಕ್ಕು ನಗಿಸುತ್ತಲೇ ಒಂದು ಆ್ಯಕ್ಷನ್ ತೋರಿಸ್ತಾರೆ. ಆ್ಯಕ್ಷನ್​ ನಂತರ ಅಪ್ಪು ಡ್ಯಾನ್ಸ್​ ಬರುತ್ತೆ. ಇನ್ನು ಇದೆಲ್ಲದರ ಜೊತೆ ಹಾರರ್ ಪ್ಲಸ್ ಸಸ್ಪೆನ್ಸ್ ಸಹ ಸೇರಿಕೊಂಡಿವೆ. ಭಯ ಬೀಳಿಸುತ್ತಾ ಥ್ರಿಲ್ ನೀಡೋದು ಸಹ ಒಂಥರಾ ಮನರಂಜನೆಯೇ.

ಪವನ್ ಒಡೆಯರ್ ನಿರ್ದೇಶನದ ಬಗ್ಗೆ ಹೇಳೋಕೆ ಮುನ್ನ ಅಪ್ಪು ಬಗ್ಗೆ ಹೇಳಲೇಬೇಕು. ಇಡೀ ಸಿನಿಮಾವನ್ನ ಅವರು ಒನ್ ಮ್ಯಾನ್​ ಆರ್ಮಿಯಂತೆ ಹೊತ್ತು ನಡೆದಿದ್ದಾರೆ. ಇಡೀ ಸಿನಿಮಾದ ಹೈಲೈಟ್​ ಅಪ್ಪು ಅಭಿನಯ. ಅವರ ಮತ್ತೊಂದು ಪ್ಲಸ್​ ಪಾಯಿಂಟ್​ ಡಾನ್ಸ್​...ಅದರಲ್ಲೂ ಈ ಸಿನಿಮಾ ನಂತರ ಅಪ್ಪು ಅವರನ್ನು 'ನಾಟ್ಯಸಾರ್ವಭೌಮ' ಅಂತಲೇ ಕರೆದರೆ ಅದು ಹೆಚ್ಚುಗಾರಿಕೆ ಅನಿಸಲ್ಲ. ಹೌದು, ಈ ಸಿನಿಮಾದಲ್ಲಿನ ಅಪ್ಪು ಡ್ಯಾನ್ಸ್ ಅಂತಿಂಥ ಡ್ಯಾನ್ಸ್ ಅಲ್ಲ. ಇಲ್ಲಿಯವರೆಗೂ ಅಪ್ಪು ಅಂದ್ರೆ ಡ್ಯಾನ್ಸ್​ ಅನ್ನೋದು ಟ್ರೇಡ್ ಮಾರ್ಕ್ ಆಗಿತ್ತು.. ಆದರೆ ಪುನೀತ್​ ಈ ಮಟ್ಟಕ್ಕೆ ಡ್ಯಾನ್ಸ್ ಮಾಡಬಲ್ಲರು ಎಂಬುದನ್ನ ಈ ಸಿನಿಮಾದಲ್ಲಿ ತೋರಿಸಲಾಗಿದೆ.

ನಿಜಕ್ಕೂ ಸ್ಪ್ರಿಂಗ್‍ನಂತೆಯೇ ಬಳುಕ್ತಾರೆ ಪವರ್​ ಸ್ಟಾರ್​. ಅದ್ಯಾವ ಮೂಮೆಂಟ್ಸ್ ಕೂಡ ಅವರಿಗೆ ಕಷ್ಟ ಅನಿಸೋದೆ ಇಲ್ವೇನೋ. ಎಲ್ಲವೂ ಲೀಲಾಜಾಲ ಎನಿಸುವಷ್ಟು ಸುಲಭವಾಗಿ ಬಳುಕಿದ್ದಾರೆ. ಅಪ್ಪು ಡ್ಯಾನ್ಸ್ ಮಾಡ್ತಿದ್ರೆ ಬಾಯ್ಮೇಲೆ ಬೆರಳಿಟ್ಕೊಂಡು ನೋಡ್ತಾನೇ ಇರಬೇಕು ಅನ್ನೋದಂತೂ ಸತ್ಯ.

ಇನ್ನು ನೃತ್ಯದಷ್ಟೇ ಒತ್ತನ್ನು ಈ ಸಿನಿಮಾದಲ್ಲಿ ಸಾಹಸ ದೃಶ್ಯಗಳಿಗೂ ನೀಡಲಾಗಿದೆ. ಬಾಹುಬಲಿ, ಮಗಧೀರ ಖ್ಯಾತಿಯ ಪೀಟರ್​ ಹೆನ್​ ಸಿಂಪ್ಲಿ ಸೂಪರ್ಬ್ ಅನ್ನೋ ರೀತಿ ಫೈಟ್ಸ್ ಕಂಪೋಸ್ ಮಾಡಿದ್ದಾರೆ. ನ್ಯಾಚುರಲ್ ಆಗಿ ಅಪ್ಪು ಅವರ ಸಿಗ್ನೇಚರ್ ಸ್ಟೈಲ್‍ ಅನ್ನೇ ಹೆಚ್ಚಾಗಿ ಬಳಸಿಕೊಂಡೇ ಸಾಹಸ ದೃಶ್ಯಗಳನ್ನು ಕಂಪೋಸ್ ಮಾಡಿರೋದು 'ನಟಸಾರ್ವಭೌಮ' ಹೈಲೈಟ್ಸ್.

ಸಿನಿಮಾದಲ್ಲಿ ಸಂಭಾಷಣೆ ಚೆನ್ನಾಗಿದೆ. ಆದರೂ ಇಲ್ಲಿ ಕೆಲವು ಕಡೆಗಳಲ್ಲಿ ಅಗತ್ಯವಿಲ್ಲದಿದ್ದರೂ ಅಭಿಮಾನಿಗಳಿಗಾಗಿಯೇ ಕೆಲವು ಡೈಲಾಗ್ಸ್​ಗಳನ್ನು ಬರೆಯಲಾಗಿದೆ. ನಿರೀಕ್ಷಯಂತೆ ಇಂತಹ ಡೈಲಾಗ್​ಗಳಿಗೆ ಚಪ್ಪಾಳೆ, ಶಿಳ್ಳೆ ಬರುವುದಂತೂ ಖಂಡಿತ. ಈ ಸಿನಿಮಾದಲ್ಲಿ ಬೆಂಗಳೂರು, ಕೋಲ್ಕತ್ತಾವನ್ನು ಸುಂದರವಾಗಿ ತೋರಿಸಲಾಗಿದ್ದು, ಒಟ್ಟಾರೆಯಾಗಿ ಅಪ್ಪು ಅಭಿಮಾನಿಗಳಿಗೆ ಈ ಸಿನಿಮಾ ಹಬ್ಬವೆಂದೆ ಹೇಳಬಹುದು. ಕೆಲವೊಂದು ಚಿಕ್ಕ ಪುಟ್ಟ ನ್ಯೂನ್ಯತೆಗಳನ್ನು ಹೊರತುಪಡಿಸಿದರೆ, ಒಮ್ಮೆ ಚಿತ್ರಮಂದಿರಕ್ಕೆ ಹೋಗಿ ಈ ಸಿನಿಮಾವನ್ನು ನೋಡಬಹುದಾಗಿದೆ.

ನಟಸಾರ್ವಭೌಮನಿಗೆ ಫಿದಾ ಆದ ಪ್ರೇಕ್ಷಕ: ಅಭಿಮಾನಿಗಳಿಗೆ ಚಿರಋಣಿ ಎಂದ ಅಪ್ಪು..!

First published:February 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...