• Home
  • »
  • News
  • »
  • entertainment
  • »
  • Puneeth Rajkumar: ಗಣೇಶನ ಜೊತೆ ಅಪ್ಪು, ಹಬ್ಬದ ಸಂಭ್ರಮದಲ್ಲೂ ಪರಮಾತ್ಮನ ಮರೆಯದ ಅಭಿಮಾನಿಗಳು

Puneeth Rajkumar: ಗಣೇಶನ ಜೊತೆ ಅಪ್ಪು, ಹಬ್ಬದ ಸಂಭ್ರಮದಲ್ಲೂ ಪರಮಾತ್ಮನ ಮರೆಯದ ಅಭಿಮಾನಿಗಳು

ಪುನೀತ್​ ರಾಜ್​ಕುಮಾರ್​

ಪುನೀತ್​ ರಾಜ್​ಕುಮಾರ್​

Puneeth Rajkumar with Ganesha Idol: ಗಣೇಶನ ಜೊತೆ ಪುನೀತ್ ಇರುವ ಗಣೇಶನ ಮೂರ್ತಿಗಳಿಗೆ ಹೆಚ್ಚು ಬೇಡಿಕೆ ಇದ್ದು, ಸದ್ಯ ಗಣೇಶನ ಜೊತೆ ಪುನೀತ್ ಇರುವ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.

  • Share this:

ಪುನೀತ್​ ರಾಜ್​ಕುಮಾರ್ (Puneeth Rajkumar) ನಮ್ಮನ್ನಗಲಿ ಸುಮಾರು 9 ತಿಂಗಳು ಕಳೆದಿದೆ. ಆದರೆ ಅಭಿಮಾನಿಗಳು (Fans) ಮಾತ್ರ ಎಂದಿಗೂ ಅವರನ್ನು ಮರೆತಿಲ್ಲ. ಅವರ ಹೆಸರಿನಲ್ಲಿ ದಿನಕ್ಕೊಂದು ಸಾಮಾಜಿಕ ಕಾರ್ಯಗಳು ನಡೆಯುತ್ತದೆ. ಅಭಿಮಾನಿಗಳು ಅವರನ್ನು ನೆನೆಯಲು ಒಂದೆಲ್ಲಾ ಒಂದು ಕಾರಣವನ್ನು ಹುಡುಕುತ್ತಾರೆ. ಒಂದು ಸಣ್ಣ ಕಾರಣ ಸಿಕ್ಕರೂ ಅಪ್ಪು ನೆನಪಿಸಿಕೊಳ್ಳುವುದನ್ನ ಮರೆಯುವುದಿಲ್ಲ. ಸದ್ಯ ಗಣೇಶ್​ ಹಬ್ಬ (Ganesha Festival) ಹತ್ತಿರದಲ್ಲಿದೆ. ಈಗಾಗಲೇ ತಯಾರಿ ಆರಂಭವಾಗಿದೆ. ಈ ಸಮಯದಲ್ಲಿ ಸಹ ಅಭಿಮಾನಿಗಳು ಪುನೀತ್ ರಾಜ್​ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ.


ಗಣೇಶನ ಜೊತೆ ಅಪ್ಪು 


ಕಳೆದ ಸುಮಾರು 2 ವರ್ಷಗಳಿಂದ ಕೊರೊನಾ ಕರಿ ನೆರಳು ದೇಶದ ಜನರ ಮೇಲಿತ್ತು. ಯಾವುದೇ ಹಬ್ಬವನ್ನು ಆಚರಣೆ ಮಾಡುವುದು ಸಾಧ್ಯವಾಗಿರಲಿಲ್ಲ. ಎಲ್ಲದರ ಮೇಲೆ ಗ್ರಹಣ ಬಡಿದ ಹಾಗಿತ್ತು. ಆದರೆ ಈಗ ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳಿದ್ದು, ಈ ಬಾರಿ ಗಣೇಶ್​ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಈಗಾಗಲೇ ಸಿದ್ದತೆ ಆರಂಭವಾಗಿದೆ. ಈ ಬಾರಿ ಗಣೇಶನ ಜೊತೆ ಅಪ್ಪು ಪೂಜಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ.


ಹೌದು, ಗಣೇಶನ ಜೊತೆ ಪುನೀತ್ ಇರುವ ಗಣೇಶನ ಮೂರ್ತಿಗಳಿಗೆ ಹೆಚ್ಚು ಬೇಡಿಕೆ ಇದ್ದು, ಸದ್ಯ ಗಣೇಶನ ಜೊತೆ ಪುನೀತ್ ಇರುವ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ. ಪ್ರಕೃತಿ ಆರ್ಟ್ಸೆಂಟರ್ ಎನ್ನುವ ಕಲಾವಿದರ ಕಲ್ಪನೆಯಲ್ಲಿ ಸದ್ಯ ಗಣೇಶನ ಜೊತೆ ಅಪ್ಪು ಇರುವ ಮೂರ್ತಿ ಮೂಡಿಬಂದಿದ್ದು, ಅಭಿಮಾನಿಗಳಿಗೆ ಬಹಳ ಇಷ್ಟವಾಗಿದೆ. ಈ ಫೋಟೋವನ್ನು ಪುನೀತ್ ಸಹೋದರ ರಾಜ್​ಕುಮಾರ್ ಸಹ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸದ್ಯ ಈ ಮೂರ್ತಿಗೆ ಬೇಡಿಕೆ ಬಂದಿದೆ.




ಇದನ್ನೂ ಓದಿ: ಊರ್ವಶಿ ರೌಟೇಲಾ ಬಟ್ಟೆ ನೋಡಿ ಟ್ರೋಲ್ ಮಾಡಿದ ನೆಟ್ಟಿಗರು, ಉರ್ಫಿ ಜಾವೇದ್​ ಗಾಳಿ ಬೀಸ್ತಾ ಎಂದು ಕಾಮೆಂಟ್​


ಪುನೀತ್ ರಾಜ್​ಕುಮಾರ್ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮಿ ಅವರ ಆರ್ಶೀವಾದ ಪಡೆಯುತ್ತಿರುವ ರೀತಿ ಮೂರ್ತಿಯನ್ನು ಮಾಡಲಾಗಿದ್ದು, ಇದನ್ನು ಶೇರ್ ಮಾಡಿಕೊಂಡಿರುವ ರಾಘವೇಂದ್ರ ರಾಜ್​ಕುಮಾರ್ ಎಂಥಹ ಸುಂದರ ಕಲ್ಪನೆ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು, ದೇವರಿಗೆ ಕರುಣೆ ಇಲ್ಲ, ನಮ್ಮಿಂದ ಪುನೀತ್ ಅವರನ್ನು ದೂರ ಮಾಡಿದ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಈ ಕಲ್ಪನೆಯನ್ನು ನೋಡಿ ಮೆಚ್ಚಿದ್ದು, ಸುಂದರವಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.


ಅಪ್ಪು ನೆನಪಿನಲ್ಲಿ ಅಭಿಮಾನಿಗಳು 


ಮೊದಲಿನಿಂದಲೂ ಗಣೇಶನ ಹಬ್ಬ ಎಂದರೆ ವಿಶೇಷವಾಗಿ ಆಚರಿಸಲಾಗುತ್ತದೆ. ಏನಾದರೂ ವಿಭಿನ್ನ ಥೀಮ್​ನಲ್ಲಿ ಮೂರ್ತಿ ಮಾಡಲಾಗುತ್ತದೆ. ಈ ಬಾರಿ ಅಪ್ಪು ನೆನಪಿನಲ್ಲಿ ಮಾಡಲಾಗುತ್ತಿದ್ದು, ಈ ಮೂರ್ತಿಗೆ ಜನರು ಡಿಮ್ಯಾಂಡ್​ ಮಾಡುತ್ತಿದ್ದಾರೆ. ಇನ್ನು ಅಪ್ಪು ಇಲ್ಲ ಎಂಬುದನ್ನ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಈ ಬಾರಿ ನಡೆಯುವ ಪುಷ್ಪೋತ್ಸವವನ್ನು ಪುನೀತ್ ಹೆಸರಲ್ಲಿ ಮಾಡಲಾಗುತ್ತಿದೆ. ಅಲ್ಲದೇ, ಇತ್ತೀಚೆಗೆ  ಶಿವಮೊಗ್ಗ ಜಿಲ್ಲೆಯ ಸಾಗರ   ತಾಲೂಕಿನ ತಳಗೆರೆ ಗ್ರಾಮದಲ್ಲಿ ಅಭಿಮಾನಿಗಳು ನೆಚ್ಚಿನ ನಟ ಪುನೀತ್ ರಾಜ್​ಕುಮಾರ್ ಸ್ಮಾರಕ ನಿರ್ಮಿಸಿದ್ದಾರೆ. ಅಗಲಿದ ಅಪ್ಪುವಿನ ನೆನಪಿಗೆ ಗ್ರಾಮಸ್ಥರು ಸ್ಮಾರಕ ನಿರ್ಮಾಣ ಮಾಡಿದ್ದು, ವಿಶೇಷ ಗೌರವ ನೀಡಿದ್ದಾರೆ.


ಇದನ್ನೂ ಓದಿ: ಡಬಲ್ ಸಂಭ್ರಮದಲ್ಲಿ ನಟ ಸೂರ್ಯ, ಹುಟ್ಟುಹಬ್ಬಕ್ಕೆ ಸಿಕ್ತು ರಾಷ್ಟ್ರಪ್ರಶಸ್ತಿಯ ಗಿಫ್ಟ್!


ವಿಜಯನಗರದ ಹೊಸಪೇಟೆಯಲ್ಲಿ ಸಹ ಅಪ್ಪು ಅಭಿಮಾನಿಗಳು ಪ್ರತಿಮೆ ನಿರ್ಮಿಸಿದ್ದಾರೆ. ಅಪ್ಪುಗೆ ಅಭಿಮಾನಿಗಳು ಎಂದರೆ ಪ್ರಾಣ, ಅದರಲ್ಲೂ ಅವರು ಹೊಸಪೇಟೆಯ ಬಗ್ಗೆ ಹೆಚ್ಚಿನ ಪ್ರೀತಿ ಹೊಂದಿದ್ದರಂತೆ. ಇಲ್ಲಿ ಅಭಿಮಾನಿಗಳು ಅವರ ಪ್ರತಿಮೆ ನಿರ್ಮಿಸಿದ್ದಾರೆ. ಅದರಲ್ಲೂ ಬರೋಬ್ಬರಿ 7.4 ಅಡಿ ಎತ್ತರದ ಪ್ರತಿಮೆ ಇದಾಗಿದ್ದು, ಕರುನಾಡಿಗೆ ಹೆಮ್ಮೆಯ ವಿಚಾರ ಎನ್ನಬಹುದು.

Published by:Sandhya M
First published: