Puneeth Rajkumar: ಆ ಕಾರ್ಯಕ್ರಮದಲ್ಲಿ Jeff Bezos ಇದ್ರೂ ಅಪ್ಪು ಮಾತ್ರ ಇನ್ಯಾರನ್ನೋ ಹುಡುಕ್ತಾ ಇದ್ರಂತೆ, ಯಾರದು?

Puneeth Rajkumar wanted to meet this actor: ಮತ್ತೊಂದು ಪೀಳಿಗೆಯನ್ನು ರೂಪಿಸಬೇಕಾಗಿರುವ ಜವಾಬ್ದಾರಿ ಒಂದು ಪೀಳಿಗೆಯ ಮೇಲಿದೆ. ಒಂದು ಪೀಳಿಗೆಯನ್ನು ಸ್ಥಾಪಿಸುವ ಕೆಲಸವನ್ನು ಇನ್ನೊಂದು ತಲೆಮಾರು ತೆಗೆದುಕೊಳ್ಳುತ್ತದೆ. ನಮ್ಮ ಪ್ರೇಕ್ಷಕರಿಗೆ ಯಾವಾಗಲೂ ಮನರಂಜನೆ ನೀಡಬೇಕು ಎಂದಿದ್ದರು ಪುನೀತ್.

ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್

ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್

  • Share this:
Puneeth Rajkumar, a brilliant Human: ನಟ ಪುನೀತ್ ರಾಜ್ ಕುಮಾರ್ (Puneeth Rajkumar) ಬೆಂಗಳೂರಿನಲ್ಲಿ ಹೃದಯಾಘಾತದಿಂದ (Cardiac arrest) ನಿಧನರಾದರು. ಅವರಿಗೆ ವಯಸ್ಸು ಕೇವಲ 46. ಕನ್ನಡ ಚಿತ್ರರಂಗದಲ್ಲಿ ಪವರ್‌ ಸ್ಟಾರ್‌ (Power Star) ಎಂದೇ ಖ್ಯಾತಿ ಪಡೆದಿದ್ದ ಪುನೀತ್ ರಾಜ್‍ಕುಮಾರ್ ಅವರ ನಿಧನ ಅಭಿಮಾನಿಗಳು ಮತ್ತು ಸಹೋದ್ಯೋಗಿಗಳಿಗೆ ಆಘಾತವನ್ನುಂಟು ಮಾಡಿದೆ. ಕನ್ನಡ ತಾರೆಯರು ಅಪ್ಪು ನಿಧನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಂತಾಪ ಸೂಚಿಸುತ್ತಾ ಅವರೊಟ್ಟಿಗಿನ ಒಡನಾಡಿದ ನೆನಪುಗಳನ್ನು ಮೆಲುಕುಹಾಕುತ್ತಾ ಬಿಕ್ಕುತ್ತಿದ್ದಾರೆ.

ಹಾಸ್ಯನಟ ಮತ್ತು ನಟ ಡ್ಯಾನಿಶ್ ಸೇಟ್ (Danish Sait) ಕೂಡ ಇನ್‍ಸ್ಟಾಗ್ರಾಮ್‍ನಲ್ಲಿ ಭಾವನಾತ್ಮಕ ಸಂದೇಶದ ಮೂಲಕ ತಮ್ಮ "ಮಾರ್ಗದರ್ಶಿ ಮತ್ತು ನಾಯಕ"ಗೆ ಸಂತಾಪ ಸೂಚಿಸಿದ್ದಾರೆ. ಪುನೀತ್ ರಾಜ್‍ಕುಮಾರ್ ನಿರ್ಮಾಣದ ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ನಟಿಸಿದ ಡ್ಯಾನಿಶ್ ಹೀಗೆ ಬರೆದಿದ್ದಾರೆ: "ನಾನು ನಾಶವಾಗಿ ಹೋಗಿದ್ದೇನೆ, ಹೃದಯವು ಛಿದ್ರವಾಗಿದೆ ಮತ್ತು ಪ್ರಮಾಣಿಕವಾಗಿ ನಾನು ಏನು ಬರೆಯದ ಸ್ಥಿತಿ ತಲುಪಿದ್ದೇನೆ" ಎಂದು ಬರೆದಿದ್ದಾರೆ.

ನನ್ನ ಪುನೀತ್ ಅಣ್ಣ ಇನ್ನಿಲ್ಲ, ಎಂದು ಬರೆದುಕೊಂಡಿರುವ ಅವರು, ಪುನೀತ್ ರಾಜ್‍ಕುಮಾರ್ ಅವರನ್ನು "ವಿಶ್ವದ ಅತ್ಯುತ್ತಮ ಮನುಷ್ಯ" ಎಂದು ನೆನಪಿಸಿಕೊಂಡಿದ್ದಾರೆ.

ಅದು ಅಮೇಜಾನ್ ಪ್ರೈಮ್ ಕಾರ್ಯಕ್ರಮ

ಪುನೀತ್ ರಾಜ್‍ಕುಮಾರ್ ಅವರ ಪಿಆರ್‌ಕೆ ನಿರ್ಮಾಣದ ಬೆಂಬಲದೊಂದಿಗೆ ಫ್ರೆಂಚ್ ಬಿರಿಯಾನಿ ಕಳೆದ ವರ್ಷ ಜುಲೈನಲ್ಲಿ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಬಿಡುಗಡೆಯಾಯಿತು. ತಮ್ಮ ಇನ್‍ಸ್ಟಾಗ್ರಾಮ್ ಪೋಸ್ಟ್ ನಲ್ಲಿ, ಡ್ಯಾನಿಶ್ ಸೇಟ್ ಕನ್ನಡದ ತಾರೆಯ ಬಗ್ಗೆ "ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಜನರಿಂದ ಕೇಳಿದ ಕಥೆಯನ್ನು ನೆನಪಿಸಿಕೊಂಡಿದ್ದಾರೆ. ಪುನೀತ್ ರಾಜ್ ಕುಮಾರ್ ಒಮ್ಮೆ ಜೆಫ್ ಬೆಜೋಸ್ ಜೊತೆ ಅಮೆಜಾನ್ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಇದು ಚಲನಚಿತ್ರ ತಾರೆಯರ ಕಾರ್ಯಕ್ರಮವಾಗಿತ್ತು ಮತ್ತು ಎಲ್ಲರೂ ಪರಸ್ಪರ ಭೇಟಿಯಾಗುವುದರಲ್ಲಿ ಅಥವಾ ಜೆಫ್ ಬೆಜೋಸ್ ಅವರೊಂದಿಗೆ ಚಿತ್ರಗಳನ್ನು ಕ್ಲಿಕ್ಕಿಸಿಕೊಳ್ಳುವಲ್ಲಿ ನಿರತರಾಗಿದ್ದರು.

ಯಾರ ಜೊತೆ ಫೋಟೋ ಬೇಕು ಅಪ್ಪು?

ಪುನೀತ್ ರಾಜ್‍ಕುಮಾರ್ ಇವರೆಲ್ಲರಿಂದ ಅಂತರ ಕಾಯ್ದುಕೊಂಡಿದ್ದರು. ಡ್ಯಾನಿಶ್ ಪ್ರಕಾರ, ಅಮೆಜಾನ್ ಪ್ರೈಮ್ ವಿಡಿಯೋ ತಂಡವು ಅವರ ಬಳಿಗೆ ಹೋಗಿ "ಅಪ್ಪು, ನಿಮಗೆ ಯಾರೊಂದಿಗೂ ಫೋಟೋಗಳು ಏಕೆ ಬೇಡ? ನೀವು ಯಾಕೆ ಸದ್ದಿಲ್ಲದೆ ಮೂಲೆಯಲ್ಲಿ ನಿಂತಿದ್ದೀರಿ? ನೀವು ವ್ಯಕ್ತಿಯ ಹೆಸರನ್ನು ಹೇಳಿ ಮತ್ತು ನಾವು ಅವರನ್ನೇ ನಿಮ್ಮ ಬಳಿ ತರುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: Puneeth Rajkumar: ಎರಡು ವಾರದ ಹಿಂದಷ್ಟೇ ಸಣ್ಣದೊಂದು ಚಿಕಿತ್ಸೆ ಪಡೆದಿದ್ದ ಅಪ್ಪು, ಅದೊಂದು ತಪ್ಪು ಮಾಡಬಾರದಿತ್ತು ಎನ್ನುತ್ತಾರೆ ವೈದ್ಯರು

ಇದಕ್ಕೆ ಪ್ರತಿಕ್ರಿಯೆಯಾಗಿ, ಪುನೀತ್ ಮುಗುಳ್ನಗುತ್ತಾ, "ನಿಜವಾಗಿಯೂ? ನಾನು ಪಂಕಜ್ ತ್ರಿಪಾಠಿಯನ್ನು ಭೇಟಿಯಾಗಲು ಬಯಸುತ್ತೇನೆ" ಎಂದು ಹೇಳಿದರು. ಪಂಕಜ್ ತ್ರಿಪಾಠಿ ಇಂದು ಚಲನಚಿತ್ರೋದ್ಯಮದಲ್ಲಿ ಚಿರಪರಿಚಿತ ಹೆಸರು. ಆದರೆ 2012ರಲ್ಲಿ ಗ್ಯಾಂಗ್ಸ್ ಆಫ್ ವಾಸ್ಸೇಪುರ್‌ನಲ್ಲಿ ಅವರ ಅದ್ಭುತ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೊದಲು ಸುಮಾರು ವರ್ಷಗಳ ಕಾಲ ಹೋರಾಡಿದರು.

ಪ್ರತಿಭೆಯನ್ನು ಗುರುತಿಸುವ ನಿಜವಾದ ಕಲಾವಿದ

"ನನ್ನ ಅಪ್ಪು ಅಣ್ಣ ಯಾವಾಗಲೂ ಕಿಕ್ಕಿರಿದ ಕೋಣೆಯಲ್ಲಿ ಪ್ರತಿಭೆಯನ್ನು ಗುರುತಿಸುತ್ತಾರೆ. ಅವರು ಹೊಳೆಯುವ ನಕ್ಷತ್ರಗಳ ನಡುವೆ ಮನುಷ್ಯರನ್ನು ಗುರುತಿಸಿದ್ದಾರೆ" ಎಂದು ಎಂದು ಡ್ಯಾನಿಶ್ ಬರೆದಿದ್ದಾರೆ.

ಡ್ಯಾನಿಶ್ ಸೇಟ್ ಅವರು ಪುನೀತ್ ರಾಜ್‍ಕುಮಾರ್ ಅವರೊಂದಿಗೆ ನಡೆಸಿದ ಸಂಭಾಷಣೆಗಳನ್ನು ಮತ್ತು ಹೊಸ ತಲೆಮಾರಿನ ಪ್ರತಿಭೆಗಳ ಮೇಲೆ ಹಣಹೂಡಿ ಚಲನಚಿತ್ರಗಳನ್ನು ನಿರ್ಮಿಸುವ ಅವರ ಕನಸನ್ನು ನೆನಪಿಸಿಕೊಂಡಿದ್ದಾರೆ. ಒಮ್ಮೆ ಪುನೀತ್ ಅವರನ್ನು ಹೊಸ ನಟರ ಮೇಲೆ ತಮ್ಮ ಹಣವನ್ನು ಪಣಕ್ಕಿಡುವ ಬದಲು ಸ್ವಂತ ಚಿತ್ರಗಳನ್ನು ಏಕೆ ನಿರ್ಮಿಸಲಿಲ್ಲ ಎಂದು ಡ್ಯಾನಿಶ್ ಕೇಳಿದರು.

ಸಿನಿಮಾ ದೊಡ್ಡ ಜವಾಬ್ದಾರಿ

ಇದಕ್ಕೆ ಪ್ರತಿಕ್ರಿಯಿಸಿದ್ದ ಪುನೀತ್, "ಡ್ಯಾನಿ ಮತ್ತೊಂದು ಪೀಳಿಗೆಯನ್ನು ರೂಪಿಸಬೇಕಾಗಿರುವ ಜವಾಬ್ದಾರಿ ಒಂದು ಪೀಳಿಗೆಯ ಮೇಲಿದೆ. ಒಂದು ಪೀಳಿಗೆಯನ್ನು ಸ್ಥಾಪಿಸುವ ಕೆಲಸವನ್ನು ಇನ್ನೊಂದು ತಲೆಮಾರು ತೆಗೆದುಕೊಳ್ಳುತ್ತದೆ. ನಮ್ಮ ಪ್ರೇಕ್ಷಕರಿಗೆ ಯಾವಾಗಲೂ ಮನರಂಜನೆ ನೀಡಬೇಕು" ಎಂದು ಪುನೀತ್ ಹೇಳಿದರು.

ಇದನ್ನೂ ಓದಿ: Puneeth Rajkumar: ಇವತ್ತು ನಾಳೆಯೊಳಗೆ ಇಬ್ಬರ ಬದುಕಿನಲ್ಲಿ ಅಪ್ಪು ಇಂದ ಬೆಳಕು ಬರಲಿದೆ, ಥೇಟ್ ಅವರ ತಂದೆಯಂತೆಯೇ…!

"ನಾನು ಇಂದು ನನ್ನ ಸ್ವಂತಿಕೆಯನ್ನು ಕಳೆದುಕೊಂಡಿದ್ದೇನೆ. ಪುನೀತ್ ಕುಟುಂಬವಾಗಿದ್ದರು. ಈ ನಷ್ಟವನ್ನು ನಾನು ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಅವರು ಜನರನ್ನು ತುಂಬಾ ಪ್ರೀತಿ ಮತ್ತು ಗೌರವದಿಂದ ನಡೆಸಿಕೊಂಡರು. ಐದು ನಿಮಿಷ ಅವರೊಂದಿಗೆ ಸಮಯ ಕಳೆದರೂ ಸಾಕು ನಿಮಗೆ ಅವರು ಅದ್ಭುತ ಎನಿಸುತ್ತಾರೆ. ನಾನು ಇದುವರೆಗೆ ವಿನಯವಂತ, ಭೂಮಿ ತೂಕದ ವ್ಯಕ್ತಿಯನ್ನು ಭೇಟಿಯಾಗಿಲ್ಲ ಎಂದು ಹೇಳಿದ್ದಾರೆ.
Published by:Soumya KN
First published: