Video: 'ಬೆಟ್ಟದ ಹೂವು' ಚಿತ್ರೀಕರಿಸಿದ 'ಅತ್ತಿಗುಂಡಿ'ಗೆ ದಿಢೀರ್​ ಭೇಟಿ ನೀಡಿದ ಪುನೀತ್ ಹೇಳಿದ್ದೇನು ಗೊತ್ತಾ..?

Anitha E | news18
Updated:November 8, 2018, 5:41 PM IST
Video: 'ಬೆಟ್ಟದ ಹೂವು' ಚಿತ್ರೀಕರಿಸಿದ 'ಅತ್ತಿಗುಂಡಿ'ಗೆ ದಿಢೀರ್​ ಭೇಟಿ ನೀಡಿದ ಪುನೀತ್ ಹೇಳಿದ್ದೇನು ಗೊತ್ತಾ..?
Anitha E | news18
Updated: November 8, 2018, 5:41 PM IST
ನ್ಯೂಸ್​ 18 ಕನ್ನಡ 

ದೊಡ್ಮನೆ ಹುಡುಗ  ಪುನೀತ್​ ರಾಜ್​ಕುಮಾರ್​ ಅವರಿಗೂ 'ಬೆಟ್ಟದ ಹೂವು' ಸಿನಿಮಾಗೂ ಏನೋ ಬಿಡಿಸಲಾಗದ ಅನುಬಂಧ. ಅದಕ್ಕಾಗಿಯೇ ಅವರಿಗೆ ಸಿನಿಮಾಗೆ ಸಂಬಂಧಿಸಿದ ಪ್ರತಿಯೊಂದು ವಿಷಯವೂ ಸದಾ ನೆನಪಿರುತ್ತದೆ.

ಇತ್ತೀಚೆಗೆ 'ನಟಸಾರ್ವಭೌಮ' ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದ ವೇಳೆ  ಚಿಕ್ಕಮಗಳೂರಲ್ಲಿ ಅತ್ತಿಗುಂಡಿ ಕಡೆಯಿಂದ ಪ್ರಯಾಣಿಸುತ್ತಿದ್ದರಂತೆ. ಆಗ ಅವರಿಗೆ 'ಬೆಟ್ಟದ ಹೂವು' ಸಿನಿಮಾದ ಚಿತ್ರೀಕರಣ ನಡೆದ ಸ್ಥಳದ ನೆನಪಾಗಿದೆ. ಕೂಡಲೇ ಕಾರನ್ನು ಅತ್ತಿಗುಂಡಿಯಲ್ಲಿ ಶೂಟಿಂಗ್​ ಸೆಟ್​ ಕಡೆ ತಿರುಗಿಸಿದ ಪುನೀತ್​ ಅಲ್ಲಿಗೆ ಹೋಗಿದ್ದಾರೆ.

ಇದನ್ನೂ ಓದಿ...

ಅನುಷ್ಕಾ ಶೆಟ್ಟಿ ವಿದೇಶದಲ್ಲಿ ಚಿಕಿತ್ಸೆ ಪಡೆಯಲು ಕಾರಣ ತಿಳಿಯೋಕೆ ಈ ಲಿಂಕ್​ ಕ್ಲಿಕ್​ ಮಾಡಿ

ನಂತರ ಅಲ್ಲಿ ಸಿನಿಮಾಗಾಗಿ ಸೆಟ್​ ಹಾಕಿದ್ದ ಸ್ಥಳದ ಹುಡುಕಾಟುವಾಗ ಜನರಿಗೆ ಪುನೀತ್​ ಬಂದಿರುವುದು ತಿಳಿಯಲಿಲ್ಲ. ನಂತರ ಖುದ್ದು ಪುನೀತ್​  ಸ್ಥಳೀಯರನ್ನು ಚಿತ್ರೀಕರಣ ನಡೆದಿ ಜಾಗದ ಬಗ್ಗೆ ಕೇಳಿದಾಗ, ಅವರಿಗೆ ತಿಳಿದಿದೆ.
Loading...

ಪುನೀತ್​ ಆ ಸ್ಥಳಕ್ಕೆ ಭೇಟಿ ನೀಡಿ, ಹಳೆ ನೆನಪುಗಳನನ್ನು ಮೆಲುಕು ಹಾಕಿದ್ದನ್ನು ವಿಡಿಯೋ ಮಾಡಿಸಿದ್ದು, ಅದನ್ನು ತಮ್ಮ ಫೇಸ್​ಬುಕ್​ನಲ್ಲಿ ಪ್ರಕಟಿಸಿದ್ದಾರೆ. ಅದರ ವಿಡಿಯೋ ಇಲ್ಲಿದೆ ನೋಡಿ...

ಇತ್ತೀಚೆಗೆ ನಟಸಾರ್ವಭೌಮ Shooting ಮಾಡೋ Timeಅಲ್ಲಿ ಚಿಕ್ಕಮಗಳೂರಲ್ಲಿ ಅತ್ತಿಬೆಲೆ ಮೂಲಕ ಪಾಸಾದಾಗ ಬೆಟ್ಟದಹೂವು ಚಿತ್ರೀಕರಣ ಮಾಡಿದ್ದೂ ಇಲ್ಲೇ ಎಂದು ನೆನಪಾಯ್ತು..... ಅದರ ಒಂದು ಸಣ್ಣ Video.....

ಪುನೀತ್​ ರಾಜ್​ಕುಮಾರ್​ ಅವರಿಗೆ ಹತ್ತು ವರ್ಷವಿದ್ದಾಗ 'ಬೆಟ್ಟದ ಹೂವು' ಸಿನಿಮಾ ಚಿತ್ರೀಕರಿಸಲಾಗಿತ್ತು. ಈ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅವರಿಗೆ ರಾಷ್ಟ್ರ ಪ್ರಶಸ್ತಿಯೂ ಸಿಕ್ಕಿದೆ.

ಈ ಹಿಂದೆ ಅವರಿಗೆ ಅಭಿಮಾನಿಯೊಬ್ಬರು ಇದೇ ಸಿನಿಮಾದಲ್ಲಿ ಅವರು ಖರೀದಿಸಲು ಬಯಸುವ 'ಸಂಪೂರ್ಣ ರಾಮಾಯಣ' ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದರು. ಅದರ ಬಗ್ಗೆ ಪುನೀತ್ ಮುಖಪುಟದಲ್ಲಿ​ ಬರದುಕೊಳ್ಳುವುದರ ಜತೆಗೆ ತಮ್ಮ ಫೋಟೋವನ್ನೂ ಹಾಕಿದ್ದರು.



ಒಟ್ಟಾರೆ 34 ವರ್ಷಗಳ ಅವರ ಸವಿ ನೆನಪುಗಳನ್ನು ನೆನಪಿಸುವ ಘಟನೆಗಳು ಅವರ ಜೀವನದಲ್ಲಿ ಮತ್ತೆ ಮತ್ತೆ ಮರುಕಳಿಸುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿಯೇ ಎನ್ನಬಹುದು.

First published:November 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626