Puneeth Rajkumar: ಅಪ್ಪು ಹುಟ್ಟುಹಬ್ಬಕ್ಕೂ ಮುನ್ನ ಡಬಲ್ ಗಿಫ್ಟ್​! `ಪವರಿಸಮ್’ - `ಮಹಾನುಭಾವ’ ಸಾಂಗ್ ರಿಲೀಸ್

ತಾನೊಬ್ಬ ದೊಡ್ಡ ನಟನ ಮಗ ಎಂಬುದನ್ನು ಎಂದಿಗೂ, ಯಾರ ಬಳಿಯೂ ತೋರಿಸಿಕೊಳ್ಳದೆ ಜೀವಿಸಿದವರು ಪುನೀತ್ ರಾಜ್‌ ಕುಮಾರ್‌ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಅಪ್ಪು(Appu) ಕಂಡರೆ ಎಲ್ಲಿರಿಗೂ ಅಚ್ಚು ಮೆಚ್ಚು. ಚಿತ್ರರಂಗದಲ್ಲೂ ಅಪ್ಪು ಕಂಡರೆ ಎಲ್ಲರಿಗೂ ಗೌರವ.

ನಟಿ ಪುನೀತ್​ ರಾಜ್​ಕುಮಾರ್​

ನಟಿ ಪುನೀತ್​ ರಾಜ್​ಕುಮಾರ್​

  • Share this:
ಸರಳ ಮತ್ತು ಸಜ್ಜನಿಕೆಗೆ ಹೆಸರಾದ ಅಭಿಮಾನಿಗಳ ನೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಅವರು ಕೇವಲ ತೆರೆಯ ಮೇಲೆ ಮಾತ್ರ ನಟನಾಗದೆ, ತೆರೆಯ ಹಿಂದೆಯೂ ನಿಜವಾದ ಹೀರೋ (Hero) ಆಗಿ ಜನಮಾನಸದಲ್ಲಿ ಇಂದಿಗೂ ಎಂದಿಗೂ ಅಚ್ಚಳಿಯದಂತೆ ಉಳಿದಿದ್ದಾರೆ ಎಂದರೆ ತಪ್ಪಾಗಲಾರದು. ತಾನೊಬ್ಬ ದೊಡ್ಡ ನಟನ ಮಗ ಎಂಬುದನ್ನು ಎಂದಿಗೂ, ಯಾರ ಬಳಿಯೂ ತೋರಿಸಿಕೊಳ್ಳದೆ ಜೀವಿಸಿದವರು ಪುನೀತ್ ರಾಜ್‌ ಕುಮಾರ್‌ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಅಪ್ಪು(Appu) ಕಂಡರೆ ಎಲ್ಲಿರಿಗೂ ಅಚ್ಚು ಮೆಚ್ಚು. ಚಿತ್ರರಂಗದಲ್ಲೂ ಅಪ್ಪು ಕಂಡರೆ ಎಲ್ಲರಿಗೂ ಗೌರವ. ಸರಳತೆಯ ಸಾಮ್ರಾಟ್​, ಅಭಿಮಾನಿಗಳ ಆರಾಧ್ಯದೈವ, ಕನ್ನಡ ಚಿತ್ರರಂಗದ ಬೆಟ್ಟದ ಹೂ, ಯುವಕರ ಪಾಲಿನ ಯುವರತ್ನ, ಅಪ್ಪು ಅಗಲಿಕೆಯ ನೋವನ್ನು ಇಂದಿಗೂ ಯಾರೂ ಮರೆತಿಲ್ಲ. ಮಾರ್ಚ್​ 17 ಅವರ ಹುಟ್ಟುಹಬ್ಬ(Appu Birthday). ಹೀಗಾಗಿ ಅವರಿಗಾಗಿ ವಿಶೇಷ ಹಾಡುಗಳ(Special Songs)ನ್ನು ಮಾಡಿ ಅಪ್ಪು ಅರ್ಪಿಸುತ್ತಿದ್ದಾರೆ.

ಫುಲ್​ ಪವರ್​ಫುಲ್​ ಆಗಿದೆ ಪವರಿಸಮ್​ ಸಾಂಗ್​!

2019ರಲ್ಲಿ ಪುನೀತ್​ ನಟನೆಯ, ರಾಕ್​​ಲೈನ್​ ವೆಂಕಟೇಶ್​ ನಿರ್ಮಾಣದ ‘ನಟಸಾರ್ವಭೌಮ’ ಸಿನಿಮಾ ತೆರೆಗೆ ಬಂದಿತ್ತು. ಈ ಚಿತ್ರದ ಟೈಟಲ್​ ಸಾಂಗ್​ ಸಖತ್​ ಹಿಟ್​ ಆಗಿತ್ತು. ಈಗ ಇದೇ ಟ್ಯೂನ್​ ಇಟ್ಟುಕೊಂಡು ‘ಪವರಿಸಮ್​..’ ಹಾಡನ್ನು ರಚಿಸಲಾಗಿದೆ. ಈ ಹಾಡಿಗೆ ಪವನ್​ ಒಡೆಯರ್​ ಸಾಹಿತ್ಯ ಬರೆದಿದ್ದಾರೆ. ಡಿ. ಇಮ್ಮಾನ್​ ಸಂಗೀತ ಸಂಯೋಜನೆ ಈ ಹಾಡಿಗೆ ಇದೆ. ಪುನೀತ್​ ನಟನೆಯ ಹಳೆಯ ಸಿನಿಮಾ ಟೈಟಲ್​ಗಳನ್ನು ಈ ಹಾಡಿನಲ್ಲಿ ಬಳಕೆ ಮಾಡಲಾಗಿದೆ. ರಿಲೀಸ್​ ಆದ ಕೆಲವೇ ಗಂಟೆಗಳಲ್ಲಿ ಯೂಟ್ಯೂಬ್​ನಲ್ಲಿ ಸಖತ್​ ಧೂಳೆಬಿಸುತ್ತಿದೆ. ಇದನ್ನು ಕಂಡ ಅಭಿಮಾನಿಗಳು ಫುಲ್ ದಿಲ್​ ಖುಷ್​ ಆಗಿದ್ದಾರೆ
.


ಸಖತ್​ ಮೀನಿಂಗ್​ಫುಲ್​ ಆಗಿದೆ ‘ಮಹಾನುಭಾವ’ ಸಾಂಗ್​

ಅಪ್ಪು ಹುಟ್ಟುಹಬ್ಬಕ್ಕೂ ಮುನ್ನವೇ ಮತ್ತೊಂದು ಸಾಂಗ್​​ ‘ಮಹಾನುಭಾವ. ಸಾಂಗ್​ ಕೂಡ ರಿಲೀಸ್​ ಆಗಿದೆ. ಪುನೀತ್​ ರಾಜ್​ಕುಮಾರ್ ಅವರ ಮೇಲಿನ ಅಭಿಮಾನಕ್ಕಾಗಿ ಸೋನು ನಿಗಮ್, ಶಂಕರ್​ ಮಹದೇವನ್​, ವಿಜಯ್​ ಪ್ರಕಾಶ್​ ಹಾಗೂ ಕೈಲಾಶ್​ ಖೇರ್ ಅವರು ಸಂಭಾವನೆ ಪಡೆಯದೇ ಈ ಹಾಡಿಗೆ ಧ್ವನಿ ನೀಡಿದ್ದಾರೆ. ಹಾಡಿನಲ್ಲಿರುವ ಸಾಹಿತ್ಯ ಕೂಡ ತುಂಬಾ ಮೀನಿಂಗ್​ ಫುಲ್​ ಆಗಿದೆ. ಅಪ್ಪು ಅವರಿಗೆ ಹೇಳಿ ಮಾಡಿಸಿದ ಹಾಗೇ ಸಾಹಿತ್ಯ ಇದೆ ಎಂದು ಅವರ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ.

ಇದನ್ನೂ ಓದಿ: `ನೀನೇ ರಾಜಕುಮಾರ’ ಎಂದ ಕಿಚ್ಚ ಸುದೀಪ್​! ಮೊದಲ ಅಪ್ಪು ಬಯೋಗ್ರಫಿ ಪುಸ್ತಕ ರಿಲೀಸ್​

ರಾಜ್ಯದಲ್ಲಿ ಶುರುವಾಗಿ ಜೇಮ್ಸ್​ ಫೀವರ್​!

ಬೆಂಗಳೂರಿನಲ್ಲಿ ದಾಖಲೆ ಮಟ್ಟದ ಟಿಕೆಟ್‌ಗಳು ಬುಕ್ ಆಗುತ್ತಿದೆ. ಕೇವಲ ಬೆಂಗಳೂರಿನಲ್ಲೇ 1.5 ಕೋಟಿ ಟಿಕೆಟ್‌ಗಳು ಬುಕ್ ಆಗಿದೆ. ಕನ್ನಡದ ಒಂದು ಚಿತ್ರದ ಮುಂಗಡ ಟಿಕೆಟ್ ಇಷ್ಟು ದೊಡ್ಡ ಪ್ರಮಾಣದಲ್ಲಿ ಖರೀದಿ ಆಗಿರುವುದು ಇದೇ ಮೊದಲು. ಮಾರ್ಚ್ 17 ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲೂ ಮುಂಜಾನೆ 4 ಗಂಟೆಯ ಶೋಗಳು ಇರುತ್ತವೆ. ಸೂರ್ಯ ಹುಟ್ಟೋಕು ಮುನ್ನವೇ ಚಿತ್ರಮಂದಿರದಲ್ಲಿ 'ಜೇಮ್ಸ್' ಅಬ್ಬರ ಶುರುವಾಗಿರುತ್ತದೆ. ಇದರ ಜೊತೆಗೆ ಸಿನಿಮಾ ರಿಲೀಸ್​ಗೆ ಇನ್ನೂ 3 ದಿನ ಬಾಕಿ ಇದೆ. ಟಿಕೆಟ್​ ಬುಕ್ಕಿಂಗ್​ ಮತ್ತಷ್ಟು ಹೆಚ್ಚಾಗಲಿದೆ.

ಇದನ್ನೂ ಓದಿ: ರಿಲೀಸ್​ಗೂ ಮುನ್ನವೇ ದಾಖಲೆ ಬರೆದ `ಜೇಮ್ಸ್’, ಕನ್ನಡಕ್ಕೆ ಇವ್ರೇ ರಾಯಭಾರಿ-ಫ್ಯಾನ್ಸ್​ಗೆ ಅಪ್ಪುನೇ ಗಾಡ್​!

ಅಪ್ಪು ಬಯೋಗ್ರಫಿ ‘ನೀನೇ ರಾಜಕುಮಾರ್’ ಬುಕ್​ ರಿಲೀಸ್​!

ಅತೀ ನಿರೀಕ್ಷಿತ ಪುನೀತ್ ರಾಜ್ ಕುಮಾರ್ ಅವರ ಬಯೋಗ್ರಫಿ ‘ನೀನೇ ರಾಜಕುಮಾರ್’ ಕೃತಿಯನ್ನು ಹೆಸರಾಂತ ನಟ ಕಿಚ್ಚ ಸುದೀಪ್ ಇಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು. ಪತ್ರಕರ್ತ ಡಾ. ಶರಣು ಹುಲ್ಲೂರು ಬರೆದಿರುವ ಈ ಕೃತಿ ಈಗಾಗಲೇ ಬಿಡುಗಡೆಗೂ ಮುನ್ನ ಎರಡನೇ ಮುದ್ರಣ ಕಂಡಿದೆ. ಕೃತಿಯ ಬಿಡುಗಡೆ ನಂತರ ಮಾತನಾಡಿದ ಸುದೀಪ್, ‘ಒಂದೊಳ್ಳೆಯ ಕೃತಿಯ ಮೂಲಕ ಶರಣು ಹುಲ್ಲೂರು ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸಿದ್ದಾರೆ. ಪುನೀತ್ ಅವರದ್ದು ಪುಸ್ತಕವಾಗುವಂತಹ ವ್ಯಕ್ತಿತ್ವ. ಈ ಕೃತಿ ಅವರ ಜೀವನವನ್ನು ಸೊಗಸಾಗಿ ಹಿಡಿದಿಟ್ಟಿದೆ’ ಎಂದಿದ್ದಾರೆ.
Published by:Vasudeva M
First published: