• Home
 • »
 • News
 • »
 • entertainment
 • »
 • Salaga: ಸಂಚಿತ್ ಹೆಗ್ಡೆ ಕಂಠದಿಂದ ಮತ್ತೊಂದು ಮೆಲೋಡಿ ಹಾಡು: ಸಲಗ ಚಿತ್ರದ ಹೊಸ ಸಾಂಗ್ ವೈರಲ್

Salaga: ಸಂಚಿತ್ ಹೆಗ್ಡೆ ಕಂಠದಿಂದ ಮತ್ತೊಂದು ಮೆಲೋಡಿ ಹಾಡು: ಸಲಗ ಚಿತ್ರದ ಹೊಸ ಸಾಂಗ್ ವೈರಲ್

ಸಲಗ

ಸಲಗ

Maleye Maleye: ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಹ್ಯಾಂಡ್ಸ್​ಅಪ್​​ ಹಾಡಿನ ಖ್ಯಾತಿಯ ನಾಗರ್ಜುನ್​​​ ಶರ್ಮಾ ಅವರು ‘ಮಳೆಯೇ ಮಳೆಯೇ’ ಹಾಡಿಗೆ ಸಾಹಿತ್ಯ ಬರೆದಿದ್ದು, ಚರಣ್​​ ರಾಜ್​​ ಸಂಗೀತ ಸಂಯೋಜನೆ ಮಾಡಿದ್ದಾರೆ.

 • Share this:

  ದುನಿಯಾ ವಿಜಯ್​ ನಟನೆ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ ಸಲಗ. ಬಹಳ ಪರಿಶ್ರಮ ಹಾಕಿಕೊಂಡು ಸಗಲ ಚಿತ್ರವನ್ನು ಪ್ರೇಕ್ಷಕರಿಗೆ ಭಿನ್ನವಾಗಿ ಕಟ್ಟಿಕೊಡಲು ದುನಿಯಾ ವಿಜಯ್​ ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಸಿನಿಮಾದ ಯಶಸ್ವಿಗೆ ಕಾರಣವಾಗುವ ಒಳ್ಳೆಯ ಹಾಡುಗಳನ್ನು ರಚಿಸಿ ಬಿಡುಗಡೆ ಮಾಡುತ್ತಿದ್ದಾರೆ. ಇತ್ತೀಚೆಗೆ ‘ಸೂರಿ ಅಣ್ಣ’ ಹಾಡು ಬಿಡುಗಡೆ ಮಾಡುವ ಮೂಲಕ ಭರ್ಜರಿ ಯಶಸ್ವಿ ಕಂಡಿತು. ಖ್ಯಾತ ಗಾಯಕ ಆ್ಯಂಟೋನಿ ದಾಸನ್​​​ ಈ ಹಾಡನ್ನು ಹಾಡಿದ್ದರು. ಯ್ಯೂಟೂಬ್​ನಲ್ಲಿ ಬಿಡುಗಡೆಗೊಂಡ ಈ ಹಾಡು 48 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಇದೀಗ ಚಿತ್ರತಂಡ ಚಿತ್ರದ ಮತ್ತೊಂದು ಹಾಡನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಸರ್​ಪ್ರೈಸ್​ ನೀಡಿದೆ. ಸಲಗ ಟೀಮ್​ ‘ಮಳೆಯೇ ..ಮಳೆಯೇ’ ಹಾಡನ್ನು ರಚಿಸಿ ಬಿಡುಗಡೆ ಮಾಡಿದ್ದಾರೆ. ಪವರ್​ ಸ್ಟಾರ್​​ ಪುನೀತ್ ರಾಜ್​​ಕುಮಾರ್​ ಅವರಿಂದ ಹಾಡನ್ನು ಚಿತ್ರತಂಡ ಬಿಡುಗಡೆಗೊಳಿಸಿದ್ದಾರೆ. 


  ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಹ್ಯಾಂಡ್ಸ್​ಅಪ್​​ ಹಾಡಿನ ಖ್ಯಾತಿಯ ನಾಗರ್ಜುನ್​​​ ಶರ್ಮಾ ಅವರು ‘ಮಳೆಯೇ ಮಳೆಯೇ’ ಹಾಡಿಗೆ ಸಾಹಿತ್ಯ ಬರೆದಿದ್ದು, ಚರಣ್​​ ರಾಜ್​​ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಂಚಿತ್​ ಹೆಗ್ಡೆ ಮತ್ತು ಐಶ್ವರ್ಯಾ ರಂಗರಾಜನ್​ ಹಾಡಿಗೆ ಧ್ವನಿ ನೀಡಿದ್ದಾರೆ. ಸದ್ಯ ಮಳೆಯ ಸೀಸನ್​ಗೆ ಸಕತ್​​ ಆಗಿರುವ ಹಾಡನ್ನು ಸಲಗ ಟೀಮ್​ ಎ2 ಯ್ಯೂಟೂಬ್​ ಖಾತೆಯಲ್ಲಿ ಬಿಡುಗಡೆ ಮಾಡಿದೆ. ಸಿನಿ ಪ್ರಿಯರು ಈ ಹಾಡನ್ನು ಯ್ಯೂಟೂಬ್​ನಲ್ಲಿ ವೀಕ್ಷಿಸುವ ಮೂಲಕ ಸಲಗ ಚಿತ್ರತಂಡಕ್ಕೆ  ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


  ‘ಮಳೆಯೇ ಮಳೆಯೇ’ ಹಾಡು ಚಿಕ್ಕಮಗಳೂರು, ಮುಳ್ಳಯ್ಯನಗಿರಿ ಮತ್ತು ಸಕಲೇಶಪುರದ ಸುತ್ತಮುತ್ತಲಿನ ತಾಣದಲ್ಲಿ ಚಿತ್ರೀಕರಣಗೊಂಡಿದೆ. ಸಲಗ ಚಿತ್ರದ ಪ್ರಮುಖ ಹಾಡುಗಳಲ್ಲಿ ಈ ಹಾಡು ಕೂಡ ಒಂದಾಗಿದೆ.


  ದುನಿಯಾ ವಿಜಯ್​ ಮೊದಲ ಬಾರಿಗೆ ನಟಿಸುತ್ತಾ ಜೊತೆಗೆ ಡೈರೆಕ್ಟರ್​ ಕ್ಯಾಪ್​ ತೊಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಕೆಲಸಗಳು ಭರದಿಂದ ಸಾಗುತ್ತಿದೆ. ನಟ ಡಾಲಿ ಧನಂಜಯ್​​ ಸಲಗದಲ್ಲಿ ಬಣ್ಣ ಹಚ್ಚಿದ್ದಾರೆ. ಅದಂರಂತೆ ನಟಿ ಸಂಜನಾ ಆನಂದ್​ ಅವರು ದುನಿಯಾ ವಿಜಯ್​ಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
  ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದೆ. ಸೆನ್ಸಾರ್​ ಮಂಡಳಿಯಿಂದ ಪ್ರಮಾಣ ಪತ್ರ ಪಡೆಯುದೊಂದೆ ಬಾಕಿಯಿದೆ. ಸದ್ಯ ಕೊರೋನಾ ಸಮಯವಾಗಿದರಿಂದ ಚಿತ್ರತಂಡ ಚಿತ್ರಮಂದಿರದ ಬಾಗಿಲು ಯಾವಾಗ ತೆರೆಯುತ್ತೇ ಎಂದು ಎದುರು ನೊಡುತ್ತಿದ್ದಾರೆ.

  Published by:Harshith AS
  First published: