Pailwaan Audio Launch: ಸುದೀಪ್​ ಬೆಂಬಲಕ್ಕೆ ನಿಂತ ಪುನೀತ್​; ಪೈಲ್ವಾನ್​ ಆಡಿಯೋ ಲಾಂಚ್​ ಕಾರ್ಯಕ್ರಮದಲ್ಲಿ ಯುವರತ್ನ!

ಈಗಾಗಲೇ ‘ಪೈಲ್ವಾನ್​’ ಚಿತ್ರದ ಮೂರು ಹಾಡುಗಳು ರಿಲೀಸ್​ ಆಗಿದ್ದು, ಪ್ರೇಕ್ಷಕರ ಮನಗೆದ್ದಿದೆ. ಮುಂಬರುವ ಹಾಡುಗಳು ಹೇಗಿರಲಿವೆ ಎನ್ನುವ ಕುತೂಹಲ ಸಿನಿರಸಿಕರದ್ದು.

news18
Updated:August 8, 2019, 3:38 PM IST
Pailwaan Audio Launch: ಸುದೀಪ್​ ಬೆಂಬಲಕ್ಕೆ ನಿಂತ ಪುನೀತ್​; ಪೈಲ್ವಾನ್​ ಆಡಿಯೋ ಲಾಂಚ್​ ಕಾರ್ಯಕ್ರಮದಲ್ಲಿ ಯುವರತ್ನ!
ಸುದೀಪ್​-ಪುನೀತ್​ ರಾಜ್​ಕುಮಾರ್​
news18
Updated: August 8, 2019, 3:38 PM IST
ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಶುಕ್ರವಾರ (ಆ.8) ಸುದೀಪ್​ ನಟನೆಯ ‘ಪೈಲ್ವಾನ್​’ ಸಿನಿಮಾದ ಆಡಿಯೋ ಲಾಂಚ್​ ಆಗಲಿದೆ. ದೊಡ್ಡ ಮಟ್ಟದಲ್ಲಿ ಚಿತ್ರದುರ್ಗದಲ್ಲಿ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಲಕ್ಷಾಂತರ ಜನರು ಸೇರುವ ಸಾಧ್ಯತೆ ಇದೆ. ಈ ಕಾರ್ಯಕ್ರಮಕ್ಕೆ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಕೂಡ ಪಾಲ್ಗೊಳ್ಗೊಳ್ಳುತ್ತಿದ್ದಾರೆ.

ಪುನೀತ್​ ರಾಜ್​ಕುಮಾರ್ ಸ್ಯಾಂಡಲ್​ವುಡ್​ನ ಎಲ್ಲ ಕಲಾವಿದರ ಜೊತೆಗೂ ಉತ್ತಮ ಸಂಬಂಧ ಹೊಂದಿದ್ದಾರೆ. ಅನೇಕ ಸಿನಿಮಾ ಕಾರ್ಯಕ್ರಮಗಳಿಗೆ ಮುಖ್ಯ ಅತಿಥಿಯಾಗಿ ತೆರಳಿದ್ದಿದೆ. ಈಗ ‘ಪೈಲ್ವಾನ್​’ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೂ ಅವರು ಹಾಜರಿ ಹಾಕಲಿದ್ದಾರೆ. ಈ ಕಾರ್ಯಕ್ರಮಕ್ಕೆ ಬಾಲಿವುಡ್​ ನಟ ಸುನೀಲ್​ ಶೆಟ್ಟಿ ಕೂಡ ಪಾಲ್ಗೊಳ್ಳುತ್ತಿದ್ದಾರೆ.

ಈಗಾಗಲೇ ‘ಪೈಲ್ವಾನ್​’ ಚಿತ್ರದ ಮೂರು ಹಾಡುಗಳು ರಿಲೀಸ್​ ಆಗಿದ್ದು, ಪ್ರೇಕ್ಷಕರ ಮನಗೆದ್ದಿದೆ. ಮುಂಬರುವ ಹಾಡುಗಳು ಹೇಗಿರಲಿವೆ ಎನ್ನುವ ಕುತೂಹಲ ಸಿನಿರಸಿಕರದ್ದು.

‘ಗಜಕೇಸರಿ’, ‘ಹೆಬ್ಬುಲಿ’ ಚಿತ್ರದ ನಿರ್ದೇಶಕ ಕೃಷ್ಣ ‘ಪೈಲ್ವಾನ್​’ಗೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ‘ಹೆಬ್ಬುಲಿ’ ನಂತರ ಅವರು ಮತ್ತೊಮ್ಮೆ ಸುದೀಪ್​ ಜೊತೆ ಕೈಜೋಡಿಸಿದ್ದಾರೆ. ಬಾಲಿವುಡ್​ ನಟರಾದ ಸುನೀಲ್​ ಶೆಟ್ಟಿ, ಕಬೀರ್​ ದುಹಾನ್​ ಸಿಂಗ್​, ಸುಶಾಂತ್​ ಸಿಂಗ್​ ಚಿತ್ರದಲ್ಲಿ ಬಣ್ಣ ಹಚ್ಚಿರುವುದು ವಿಶೇಷ. ಆಕಾಂಕ್ಷಾ ಚಿತ್ರಕ್ಕೆ ನಾಯಕಿ. ಈ ಸಿನಿಮಾ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ.

ಇದನ್ನೂ ಓದಿ: ಸುದೀಪ್​ ಅಭಿನಯದ ಪೈಲ್ವಾನ್ ಆಡಿಯೋ ಲಾಂಚ್​ಗೆ ಮುಹೂರ್ತ ಫಿಕ್ಸ್!; ಎಲ್ಲಿ, ಯಾವಾಗ? ಇಲ್ಲಿದೆ ವಿವರ

First published:August 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...