ಡಿಯರ್ ಸತ್ಯನಿಗೆ ಸಿಕ್ತು ಅಪ್ಪುವಿನ ಅಪ್ಪುಗೆಯ ಹಾರೈಕೆ..!

ಡಿಯರ್ ಸತ್ಯ ಸಿನಿಮಾ ಇದೀಗ ಆಡಿಯೋ ಬಿಡುಗಡೆ  ಮಾಡಿಕೊಳ್ಳುತ್ತಿದೆ. ಆದಷ್ಟು ಬೇಗ ಬಿಡುಗಡೆ ಆಗಲಿ. ಒಟ್ಟಿಗೆ ಕುಳಿತು ಸಿನಿಮಾ ನೋಡೋಣ. ಸಂತೂ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ.

Dear Sathy movie team

Dear Sathy movie team

  • Share this:
ಇತ್ತೀಚೆಗಷ್ಟೇ ನೂರು ಜನ್ಮಕೂ ಖ್ಯಾತಿಯ ಸಂತೋಷ್ ಡ್ರಗ್ ವಿಚಾರದಲ್ಲಿ ಸುದ್ದಿ ಮಾಡಿದ್ರು. ಸಿಸಿಬಿ ಅವರನ್ನ ಕರೆಸಿ ವಿಚಾರಣೆ ಕೂಡ ಮಾಡಿತ್ತು. ಈಗ ಬಹಳ ದಿನಗಳ ನಂತರ ಸಿನಿಮಾ ಮೂಲಕ ಸುದ್ದಿಗೆ ಬಂದಿದ್ದು, ಸಂತೋಷ್ ನಟನೆಯಲ್ಲಿ ಡಿಯರ್ ಸತ್ಯ ಎಂಬ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಮೂಡಿ ಬಂದಿದೆ. ಆ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಶನಿವಾರ ನೆರವೇರಿತು. ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್ ಮತ್ತು ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅತಿಥಿಗಳಾಗಿ ಆಗಮಿಸಿ ಆಡಿಯೋ ಬಿಡುಗಡೆ ಮಾಡಿ ತಂಡಕ್ಕೆ ಶುಭಹಾರೈಸಿದರು.

ಅಂದಹಾಗೆ PRE  ಮ್ಯೂಸಿಕ್​ ಚಿತ್ರದ ಹಾಡುಗಳನ್ನು ಹೊರತಂದಿದೆ. ಶಿವಗಣೇಶನ್​ ನಿರ್ದೇಶನಲ್ಲಿ ಮೂಡಿಬಂದಿರುವ ಈ ಸಿನಿಮಾಕ್ಕೆ ಗಣೇಶ್​ ಪಾಪಣ್ಣ, ರಾಕ್​ಲೈನ್​ ವೆಂಕಟೇಶ್​ ಪುತ್ರ ಯತೀಶ್ ವೆಂಕಟೇಶ್​, ಶ್ರೀನಿವಾಸ್ ಮತ್ತು ಅಜಯ್​ ರಾವ್​ ಬಂಡವಾಳ ಹೂಡಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಇದೀಗ ಆಡಿಯೋ ಬಿಡುಗಡೆ ಮಾಡಿಕೊಂಡಿರುವ ಸಿನಿಮಾ, ಫೆಬ್ರವರಿ ಮಾರ್ಚ್​ ವೇಳೆಗೆ ಬಿಡುಗಡೆ ಮಾಡುವುದು ತಂಡದ ಪ್ಲ್ಯಾನ್​. ಇನ್ನು ಅತಿಥಿಯಾಗಿ ಆಗಮಿಸಿ ಮಾತನಾಡಿದ ಪುನೀತ್, ‘ಡಿಯರ್ ಸತ್ಯ ಸಿನಿಮಾ ಇದೀಗ ಆಡಿಯೋ ಬಿಡುಗಡೆ  ಮಾಡಿಕೊಳ್ಳುತ್ತಿದೆ. ಆದಷ್ಟು ಬೇಗ ಬಿಡುಗಡೆ ಆಗಲಿ. ಒಟ್ಟಿಗೆ ಕುಳಿತು ಸಿನಿಮಾ ನೋಡೋಣ. ಸಂತೂ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ. ನಿರ್ಮಾಪಕರಲ್ಲೊಬ್ಬರಾದ ಯತೀಶ್​ ನನ್ನ ತಮ್ಮನಿದ್ದಂತೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ’ ಎನ್ನುತ್ತ ಸಂಪೂರ್ಣವಾಗಿ ವೈರಸ್ ಹೋಗಿಲ್ಲ. ಸೋಷಿಯಲ್ ಡಿಸ್ಟನ್ಸ್ ಕಾಪಾಡಿಕೊಳ್ಳಿ, ಮಾಸ್ಕ್​ ಧರಿಸಿಯೇ ಹೊರನಡೆಯಿರಿ ಎಂದರು ಪುನೀತ್.

ಡಿಯರ್ ಸತ್ಯ ಚಿತ್ರತಂಡದೊಂದಿಗೆ ಪುನೀತ್ ರಾಜ್​ ಕುಮಾರ್


ಒಂದೊಳ್ಳೆ ಸ್ನೇಹಿತರ ಸಂಘವನ್ನು ಕಟ್ಟಿಕೊಂಡು ಈ ಸಿನಿಮಾ ಸಿದ್ಧವಾಗಿದೆ. ಗೆಳೆಯ ಸಂತೋಷ್​ಗೆ ಇದು ಕನಸಿನ ಕೂಸು. ಶಕ್ತಿ ಮೀರಿ ಕೆಲಸ ಮಾಡಿದ್ದಾನೆ. ಆ ಶ್ರಮಕ್ಕೆ ಸೂಕ್ತ ಮನ್ನಣೆ ಮತ್ತು ಯಶಸ್ಸು ಸಿಗಲಿ ಕೊರೋನಾ ಹಿನ್ನೆಲೆಯಲ್ಲಿ ನಮ್ಮ ಕಾಳಜಿಯಲ್ಲಿ ನಾವಿರೋಣ ಎಂದರು ವಿಜಯ್ ರಾಘವೇಂದ್ರ.

ಸಂತೋಷ್ ಗೆ ನಾಯಕಿಯಾಗಿ  ಅರ್ಚನಾ ಕೊಟ್ಟಿಗೆ ನಟಿಸಿದ್ದಾರೆ. ಅರುಣಾ ಬಾಲರಾಜ್, ಅಶ್ವಿನ್ ರಾವ್​ ಪಲ್ಲಕ್ಕಿ. ಅರವಿಂದ್ ರಾವ್, ಅಪ್ಪಣ್ಣ, ಗುರುರಾಜ್, ಆದರ್ಶ್​ ಚಂದ್ರಶೇಖರ್ ಇತರರು ಪಾತ್ರವರ್ಗದಲ್ಲಿದ್ದಾರೆ. ತಾಂತ್ರಿಕ ವರ್ಗದ ಬಗ್ಗೆ ಹೇಳುವುದಾದರೆ,  ವಿನೋಧ ಭಾರತಿ ಛಾಯಾಗ್ರಹಣ, ಮೋಹನ್ ಮಾಸ್ಟರ್​ ಕೋರಿಯಾಗ್ರಾಫಿ, ಸುರೇಶ್​ ಆರ್ಮುಗಮ್ ಸಂಕಲನ, ಶ್ರೀಧರ್ ವಿ ಸಂಭ್ರಮ ಸಂಗೀತ, ಭಾರ್ಗವಿ ವಿಖ್ಯಾತಿ ಕಾಸ್ಟೂಮ್​ ವಿನ್ಯಾಸ ಮಾಡಿದ್ದಾರೆ.


ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಕಿಂಗ್ ಪ್ರಕಟ: ಟಾಪ್ 10 ಪಟ್ಟಿಯಲ್ಲಿ ಇಬ್ಬರು ಭಾರತೀಯರು
Published by:zahir
First published: