• Home
  • »
  • News
  • »
  • entertainment
  • »
  • Puneeth Rajkumar: ಮಂತ್ರಾಲಯದ ರಾಯರ ಸನ್ನಿಧಿಯಲ್ಲಿ ಅಪ್ಪನ ಹಾಡನ್ನು ಹಾಡಿದ ಪುನೀತ್ ರಾಜ್​ಕುಮಾರ್​

Puneeth Rajkumar: ಮಂತ್ರಾಲಯದ ರಾಯರ ಸನ್ನಿಧಿಯಲ್ಲಿ ಅಪ್ಪನ ಹಾಡನ್ನು ಹಾಡಿದ ಪುನೀತ್ ರಾಜ್​ಕುಮಾರ್​

ಮಂತ್ರಾಲಯದಲ್ಲಿ ಪುನೀತ್​ ರಾಜ್​ಕುಮಾರ್​

ಮಂತ್ರಾಲಯದಲ್ಲಿ ಪುನೀತ್​ ರಾಜ್​ಕುಮಾರ್​

Puneeth In Mantralaya: ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಪುನೀತ್​ ರಾಜ್​ಕುಮಾರ್​, ಅಲ್ಲಿ ಅವರ ತಂದೆ ಹಾಡಿರುವ 'ವಾರ ಬಂತಮ್ಮ ಗುರುವಾರ ಬಂತಮ್ಮ...' ಹಾಡನ್ನು ಹಾಡಿದ್ದಾರೆ. ನಂತರ ಪುನೀತ್​ ಅವರಿಗೆ ಮಠದ ಕಡೆಯಿಂದ ಸನ್ಮಾನ ಮಾಡಲಾಯಿತು.

  • Share this:

ಪುನೀತ್​ ರಾಜ್​ಕುಮಾರ್ ಅವರಿಗೂ ಅಪ್ಪನಂತೆ ಮಂತ್ರಾಲಯದ ರಾಯರೆಂದರೆ ತುಂಬಾ ಭಕ್ತಿ. ರಾಜ್​ಕುಮಾರ್​ ಅವರೂ ತಮ್ಮ ಭಕ್ತಿಯನ್ನು ಹಾಡುಗಳ ಮೂಲಕ ತೋರಿದ್ದುಂಟು. ಈಗ ಪುನೀತ್​ ನಿನ್ನೆ ಮಂತ್ರಾಲಯದ ರಾಯರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.


ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಪುನೀತ್​ ರಾಜ್​ಕುಮಾರ್​, ಅಲ್ಲಿ ಅವರ ತಂದೆ ಹಾಡಿರುವ 'ವಾರ ಬಂತಮ್ಮ ಗುರುವಾರ ಬಂತಮ್ಮ...' ಹಾಡನ್ನು ಹಾಡಿದ್ದಾರೆ. ನಂತರ ಪುನೀತ್​ ಅವರಿಗೆ ಮಠದ ಕಡೆಯಿಂದ ಸನ್ಮಾನ ಮಾಡಲಾಯಿತು.ಮಂತ್ರಾಲಯದ ಮಠದಲ್ಲಿ ಏಳು ದಿನಗಳ ಕಾಲ ನಡೆಯುವ ಶ್ರೀ ರಾಘವೇಂದ್ರ ಗುರು ವೈಭವೋತ್ಸವದಲ್ಲಿ ಪುನೀತ್​ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಒಂದು ಕ್ಷಣ ಭಾವುಕರಾಗಿ ಮೌನಕ್ಕೆ ಜಾರಿದರು.


ಇದನ್ನೂ ಓದಿ: Actress Kidnap: ಪ್ರಭಾಸ್​ ಜೊತೆ ನಟಿಸಲು ಅವಕಾಶ ಕೊಡಿಸುವುದಾಗಿ ನಂಬಿಸಿ ನಟಿ ಅಪಹರಣ..!


ಸದ್ಯ ಪುನೀತ್​ ರಾಜ್​ಕುಮಾರ್​ ಯುವರತ್ನ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಅದರ ಹಾಡಿನ ಶೂಟಿಂಗ್​ಗಾಗಿ ವಿದೇಶಕ್ಕೆ ತೆರಳುವ ತಯಾರಿಯಲ್ಲಿದ್ದಾರೆ. ಇನ್ನು ಈ ಸಿನಿಮಾದ ಟಾಕಿ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ.


Diljit Dosanjh-Ivanka Trump: ಸೋಷಿಯಲ್ ಮೀಡಿಯಾದಲ್ಲಿ ಡೊನಾಲ್ಡ್ ಟ್ರಂಪ್ ಮಗಳ ಎಡಿಟೆಡ್ ಇಮೇಜ್​ಗಳು; ಫೋಟೋ ನೋಡಿ ಸ್ವತಃ ಖುಷಿಯಾದ ಇವಾಂಕಾ..!


Published by:Anitha E
First published: