Video: ಕಾವೇರಿಗಾಗಿ ಮತ್ತೆ ಮೈಕ್ ಹಿಡಿದ ಪುನೀತ್ ರಾಜ್​ಕುಮಾರ್; ಜಗ್ಗಿ ವಾಸುದೇವ್​ ಹಾಡಿಗೆ ಪವರ್ಫುಲ್​ ಧ್ವನಿ

ಇಶಾ ಫೌಂಡೇಷನ್​ನಿಂದ ಸದ್ಗುರು ಜಗ್ಗಿ ವಾಸುದೇವ್‌ ಆರಂಭಿಸಿರುವ ಕಾವೇರಿ ಕೂಗು ಅಭಿಯಾನಕ್ಕೆ ಈಗಾಗಲೇ ರಾಕಿಂಗ್ ಸ್ಟಾರ್ ಯಶ್ ಕೈಜೋಡಿಸಿ ಬೆಂಬಲ ಸೂಚಿಸಿದ್ದಾರೆ. ಇದೀಗ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಕೂಡ ನದಿಗಳನ್ನು ಉಳಿಸಿ ಎಂದು ಕರೆನೀಡಿದ್ದು, ಕಾವೇರಿ ಕುರಿತಾದ ವಿಶೇಷ ವಿಡಿಯೋ ಆಲ್ಬಂನಲ್ಲಿ ಹಾಡಿದ್ದಾರೆ.

Sushma Chakre | news18-kannada
Updated:August 28, 2019, 12:26 PM IST
Video: ಕಾವೇರಿಗಾಗಿ ಮತ್ತೆ ಮೈಕ್ ಹಿಡಿದ ಪುನೀತ್ ರಾಜ್​ಕುಮಾರ್; ಜಗ್ಗಿ ವಾಸುದೇವ್​ ಹಾಡಿಗೆ ಪವರ್ಫುಲ್​ ಧ್ವನಿ
ಪುನೀತ್ ರಾಜ್​ಕುಮಾರ್
Sushma Chakre | news18-kannada
Updated: August 28, 2019, 12:26 PM IST
ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿನಯದಲ್ಲಷ್ಟೇ ಅಲ್ಲ ಗಾಯನದಲ್ಲೂ ಎತ್ತಿದ ಕೈ ಎಂಬುದು ಗೊತ್ತಿಲ್ಲದ ಸಂಗತಿಯೇನಲ್ಲ. ರಾಜ್​ಕುಮಾರ್ ಅಭಿನಯದ ಹಲವು ಸಿನಿಮಾಗಳಲ್ಲಿ ಬಾಲ ಗಾಯಕನಾಗಿ ಹಾಡಿದ್ದ ಪುನೀತ್​ ಬಳಿಕ, 'ಅಪ್ಪು', 'ಅಭಿ', 'ವೀರ ಕನ್ನಡಿಗ', 'ಆಕಾಶ್', 'ವಂಶಿ', 'ಜಾಕಿ', 'ಅಣ್ಣಾ ಬಾಂಡ್', 'ಅಧ್ಯಕ್ಷ', 'ಪವರ್', 'ಕೃಷ್ಣ-ಲೀಲಾ', 'ರಣವಿಕ್ರಮ', 'ಚಕ್ರವ್ಯೂಹ' 'ರಾಜಕುಮಾರ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಹಾಡಿದ್ದಾರೆ. ಇದೀಗ ಮತ್ತೆ ಅಪ್ಪು ಮೈಕ್ ಹಿಡಿದಿದ್ದು, ಈ ಬಾರಿ ಕಾವೇರಿ ನೀರಿಗಾಗಿ ಒಂದು ಹಾಡು ಹಾಡಿದ್ದಾರೆ.

ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದಲ್ಲಿ ನದಿ ನೀರು ಸಂರಕ್ಷಣೆಗಾಗಿ 2017ರಲ್ಲಿ ಡ್ಯಾಲಿ ಫಾರ್ ರಿವರ್ ಅಭಿಯಾನ ಆರಂಭಿಸಲಾಗಿತ್ತು. ಅದಕ್ಕೆ ಪುನೀತ್ ರಾಜ್​ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್ ಸೇರಿದಂತೆ ಹಲವು ಸ್ಯಾಂಡಲ್​ವುಡ್ ನಟರು ಕೈಜೋಡಿಸಿದ್ದರು. ಅದರ ಭಾಗವಾಗಿ ಇದೀಗ ಕಾವೇರಿ ನದಿ ನೀರು ಸಂರಕ್ಷಣೆಯ ಅಭಿಯಾನ ನಡೆಯುತ್ತಿದೆ. ಈ ಬಗ್ಗೆ ಈಗಾಗಲೇ ರಾಕಿಂಗ್ ಸ್ಟಾರ್ ಯಶ್​ ತಮ್ಮ ಬೆಂಬಲ ಸೂಚಿಸಿ ವಿಡಿಯೋ ಹರಿಬಿಟ್ಟಿದ್ದರು. ಇದೀಗ ಪವರ್​ಸ್ಟಾರ್​ ಪುನೀತ್​ ಕಾವೇರಿ ರಕ್ಷಣೆಗೆ ಧ್ವನಿಯಾಗಿದ್ದಾರೆ.

ನಮ್ಮ ತಾಯಿಯನ್ನು ಉಳಿಸಿಕೊಳ್ಳೋದು ನಮ್ಮೆಲ್ಲರ ಆದ್ಯ ಕರ್ತವ್ಯ: ಕಾವೇರಿ ಕೂಗಿಗೆ ಮಿಡಿದ ರಾಕಿ ಭಾಯ್​

ಕಾವೇರಿಯನ್ನು ಹೆಣ್ಣಿಗೆ ಹೋಲಿಸಿ ಸದ್ಗುರು ಜಗ್ಗಿ ವಾಸುದೇವ್ ಬರೆದಿರುವ ಹಾಡನ್ನು ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್ ಹಾಡಿದ್ದಾರೆ. ಯೂಟ್ಯೂಬ್​ನಲ್ಲಿ ಟ್ರೆಂಡಿಂಗ್​ನಲ್ಲಿರುವ ಈ ಹಾಡಿನ ವಿಡಿಯೋವನ್ನು ಪುನೀತ್ ರಾಜ್​ಕುಮಾರ್ ತಮ್ಮ ಫೇಸ್​ಬುಕ್ ಮತ್ತು ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.



ಸದ್ಗುರು ಜಗ್ಗಿ ವಾಸುದೇವ್‌ ಅವರ ಇಶಾ ಫೌಂಡೇಶನ್‌ ನಡೆಸಿರುವ 'ಕಾವೇರಿ ಕೂಗು' ಅಭಿಯಾನದ ಅಂಗವಾಗಿ ಈ ವಿಡಿಯೋ ಹಾಡು ಚಿತ್ರೀಕರಿಸಲಾಗಿದೆ. ಇದಕ್ಕೆ ಸದ್ಗುರು ಅವರೇ ಗೀತರಚನೆ ಮಾಡಿದ್ದಾರೆ. ಕಾವೇರಿಯೆಂಬ ತಾಯಿಯ ಮಡಿಲಿನಲ್ಲಿ ಆಡಿದ ನಾವು ಆಕೆಯ ಎದೆಹಾಲು ಕುಡಿದು ಆಕೆಗೇ ಕತ್ತಿ ಹಾಕುತ್ತಿದ್ದೇವೆ ಎಂಬ ಅರ್ಥದಲ್ಲಿ ಇರುವ ಈ ವಿಡಿಯೋ ಆಲ್ಬಂನಲ್ಲಿ ಹಿರಿಯ ನಟಿ ಭಾರ್ಗವಿ ನಾರಾಯಣ್​ ಕೂಡ ಹಾಡಿದ್ದಾರೆ. ಸದ್ಗುರು ವಾಸುದೇವ್​ ಕೂಡ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು, ಪುನೀತ್​ ಹಾಡುತ್ತಿರುವ ಮೇಕಿಂಗ್​ನ ವಿಡಿಯೋ ತುಣುಕುಗಳು ಕೂಡ ಇವೆ.



ನಾವು ನಮ್ಮ ಜೀವನದಿಯಾದ ಕಾವೇರಿಯ ಉಳಿವಿಗಾಗಿ ಹಾಗೂ ದೇಶದ ಎಲ್ಲ ನದಿಗಳ ರಕ್ಷಣೆಗಾಗಿ ಕೈಲಾದಷ್ಟು ಪ್ರಯತ್ನ ಮಾಡೋಣ ಎಂಬ ಸಂದೇಶವನ್ನು ಪುನೀತ್​ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನೀಡಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:August 28, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...