ಹೊಸ 'ಶೇಕಿ ಚಾಲೆಂಜ್​'ಗೆ ಕಿಕ್​ ಸ್ಟಾರ್ಟ್​ ಕೊಟ್ಟ ಪವರ್​ಸ್ಟಾರ್​ ಪುನೀತ್​..!

news18
Updated:August 7, 2018, 5:46 PM IST
ಹೊಸ 'ಶೇಕಿ ಚಾಲೆಂಜ್​'ಗೆ ಕಿಕ್​ ಸ್ಟಾರ್ಟ್​ ಕೊಟ್ಟ ಪವರ್​ಸ್ಟಾರ್​ ಪುನೀತ್​..!
news18
Updated: August 7, 2018, 5:46 PM IST
ಅನಿತಾ ಈ, ನ್ಯೂಸ್​ 18 ಕನ್ನಡ

ಫಿಟ್​ನೆಸ್​, ಕಿಕಿ, ಗ್ರೀನ್​ ಚಾಲೆಂಗಳಾಯಿತು. ಈಗ ಏನಿದ್ದರೂ ಸ್ಯಾಂಡಲ್​ವುಡ್​ನಲ್ಲಿ ಕೇವಲ ಪವರ್​ ಸ್ಟಾರ್​ ಪುನೀತ್​ ಅವರ ಹೊಸ ಚಾಲೆಂಜ್​ನದ್ದೇ ಹವಾ. ಏನಪ್ಪಾ ಈ ಹೊಸ ಚಾಲೆಂಜ್​ ಅಂತೀರಾ ಈ ವರದಿ ಓದಿ ನಿಮಗೆ ತಿಳಿಯುತ್ತೆ.

ಕೇಂದ್ರ ಸಚಿವ ರಾಜವರ್ಧನ್​ ರಾಥೋಡ್​ ಈ ಹಿಂದೆ 'ಹಮ್​ ಫಿಟ್​ ಹೈ ತೋ ಇಂಡಿಯಾ ಫಿಟ್​ ಹೈ' ಅನ್ನೋ ಅಡಿ ಬರಹದೊಂದಿಗೆ ಫಿಟ್​ನೆಸ್​ ಚಾಲೆಂಜ್​ಗೆ ಚಾಲನೆ ನೀಡಿದ್ದರು. ಅದಕ್ಕೆ ಉತ್ತಮ ಪ್ರತಿಕ್ರಿಯೆ ಸಹ ವ್ಯಕ್ತವಾಗಿತ್ತು. ನಂತರ ಆಂಧ್ರದಲ್ಲಿ ಖಾಸಗಿ ಸಂಸ್ಥೆಯೊಂದು 'ಹರಾ ಹೈ ತೋ ಬರಾ ಹೈ' ಅನ್ನೋ ಟ್ಯಾಗ್​ ಲೈನ್​ನೊಂದಿಗೆ ಹಸಿರು ಚಾಲೆಂಜ್​ ಆರಂಭಿಸಿದರು. ಇದರಲ್ಲಿ ಮೂರು ಸಸಿಗಳನ್ನು ನೆಟ್ಟು ಮೂರು ವರ್ಷ ಆರೈಕೆ ಮಾಡುವುದು. ಇನ್ನೂ ಎಲ್ಲೆಡೆ ನಿಷೇಧ ಹೇರಲಾಗಿರುವ ಫೇಮಸ್​ 'ಕಿಕಿ' ಚಾಲೆಂಜ್​ ಬಗ್ಗೆ ಹೇಳಲೇಬೇಕಿಲ್ಲ.

ಇವೆಲ್ಲದರ ಈಗ ಕರ್ನಾಟಕದಲ್ಲಿ ಈಗ ಪುನೀತ್​ ರಾಜ್​ಕುಮಾರ್​ ಕೆಲವೇ ಗಂಟೆಗಳ ಹಿಂದೆಯಷ್ಟೆ 'ಹ್ಯಾಂಡ್​ಶೇಕ್' ​ಚಾಲೆಂಜ್ ಅನ್ನು ಆರಂಭಿಸಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.ಹೌದು ಆತ್ಮವಿಶ್ವಾಸ ಹೆಚ್ಚಿಸಲು ಪುನೀತ್​ ತಮ್ಮ ಫೇಸ್​ಬುಕ್​  ಪುಟದಲ್ಲಿ ಹ್ಯಾಂಡ್ ಶೇಕ್ ಚಾಲೆಂಜ್​ಗೆ ಕಿಕ್ ಸ್ಟಾರ್ಟ್ ಕೊಟ್ಟಿದ್ದಾರೆ.  ಗಟ್ಟಿಯಾಗಿ ಕೈ ಹಿಡಿದು ಕುಲುಕುವುದರಿಂದ ಆತ್ಮವಿಶ್ವಾಸ ವೃದ್ದಿಯಾಗುತ್ತೆ ಎಂದು ಬರೆದುಕೊಂಡಿರುವ ಅಪ್ಪು ಕೈ ಕುಲುಕುತ್ತಿರುವ ತಮ್ಮ ಚಿತ್ರವನ್ನು ಪ್ರಕಟಿಸುವುದರೊಂದಿಗೆ ರಕ್ಷಿತ್ ಶೆಟ್ಟಿ, ಸಂತೋಷ್ ಆನಂದ್ ರಾಮ್, ಡ್ಯಾನಿಶ್ ಸೇಠ್​ ಅವರಿಗೆ ಈ ಸವಾಲನ್ನು ನೀಡಿದ್ದಾರೆ.ಪುನೀತ್​ ಆರಂಭಿಸಿರುವ ಈ ಅಭಿಯಾನಕ್ಕೆ ಚಿತ್ರರಂಗ ಸೇರಿದಂತೆ ಅವರ ಅಭಿಮಾನಿಗಳ ಪ್ರತಿಕ್ರಿಯೆ ಹೇಗಿರಲಿದೆ ಎಂದು ಮುಂದಿನ ದಿನಗಳಲ್ಲಿ ನಾವೇ ತಿಳಿಸುತ್ತೇವೆ.
First published:August 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ