Lucky Man Movie: ಅಪ್ಪು ನೆನಪಿಸಿಕೊಂಡು ಫ್ಯಾನ್ಸ್ ಕಣ್ಣೀರು, ಭಾವುಕರಾಗಿ ಸಿನಿಮಾ ನೋಡ್ತಿದ್ದಾರೆ ಜನ

Lucky Man: ಲಕ್ಕಿ ಮ್ಯಾನ್ ಸಿನಿಮಾ ಥಿಯೇಟರ್​ಗೆ ಲಗ್ಗೆ ಇಟ್ಟಿದೆ. ಅಪ್ಪು ಅಭಿಮಾನಿಗಳು ಸಿನಿಮಾ ನೋಡಿ ಕಣ್ಣೀರಾಗಿದ್ದಾರೆ. ಸಿನಿ ಪ್ರಿಯರು ಭಾವುಕರಾಗಿ ಥಿಯೇಟರ್​ನಿಂದ ಹೊರ ಬರುತ್ತಿದ್ದಾರೆ.

ಲಕ್ಕಿಮ್ಯಾನ್​

ಲಕ್ಕಿಮ್ಯಾನ್​

  • Share this:
ಬಹುನಿರೀಕ್ಷಿತ ಸಿನಿಮಾ ಲಕ್ಕಿ ಮ್ಯಾನ್ (Lucky Man) ಥಿಯೇಟರ್​ಗೆ ತಲುಪಿದೆ. ಸಿನಿ ಪ್ರಿಯರು ಈಗಾಗಲೇ ಪುನೀತ್ ರಾಜ್​​ಕುಮಾರ್ (Puneeth Rajkumar) ಅವರ ಲಕ್ಕಿ ಮ್ಯಾನ್ ಸಿನಿಮಾ ವೀಕ್ಷಿಸಿ ಭಾವುಕರಾಗಿದ್ದಾರೆ. ಕಳೆದ ಶುಕ್ರವಾರ ಲಕ್ಕಿಮ್ಯಾನ್ ಬಿಡುಗಡೆಯಾಗಿದ್ದು ಈಗ ಸಿನಿ ಪ್ರೇಮಿಗಳೆಲ್ಲ ಥಿಯೇಟರ್ ಕಡೆ ನಡೆಯುತ್ತಿದ್ದಾರೆ. ತಮ್ಮ ಪ್ರೀತಿಯ ನಟನನ್ನು ಮತ್ತೆ ಥಿಯೇಟರ್​ ಪರದೆಗಳಲ್ಲಿ ಕಂಡ ಜನರು ಭಾವುಕರಾಗುತ್ತಿದ್ದಾರೆ. ಸಿನಿಮಾ ನೋಡಿ ಕಣ್ತುಂಬಿಕೊಂಡು ಬರುತ್ತಿದ್ದಾರೆ ಸಿನಿಪ್ರೇಮಿಗಳು. ಡಾರ್ಲಿಂಗ್‌ ಕೃಷ್ಣ(Darling Krishna) ಹೀರೋ ಆಗಿ ನಟಿಸಿರು ಲಕ್ಕಿಮ್ಯಾನ್‌ ಸಿನಿಮಾದಲ್ಲಿ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ದೇವರ ಪಾತ್ರದಲ್ಲಿ ನಟಿಸಿದ್ದಾರೆ. ಹಾಗಂತ ಅವರು ಪೌರಾಣಿಕ ಕಾಸ್ಟ್ಯೂಮ್‌ನಲ್ಲಿ ಇಲ್ಲ. ಬದಲಿಗೆ ಮಾಡರ್ನ್‌ (Modern) ದೇವರಾಗಿದ್ದಾರೆ. ಶುಕ್ರವಾರ ಕರ್ನಾಟಕದ (Karnataka) ಎಲ್ಲಾ ಚಿತ್ರಮಂದಿರಗಳಲ್ಲಿಯೂ (Theater) ಅಭಿಮಾನಿಗಳು ಅಪ್ಪುವನ್ನು ದೇವರಾಗಿ ನೋಡಿ ಭಾವುಕರಾಗಿದ್ದಾರೆ. ಎಷ್ಟೋ ಜನ ಅಭಿಮಾನಿಗಳು  (Fans) ಚಿತ್ರಮಂದಿರದಲ್ಲಿ ಕಣ್ಣೀರು ಸುರಿಸಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ಕರ್ಪೂರದ ಆರತಿ ಬೆಳಗಲಾಗಿದೆ.

ಭಾವುಕರಾಗಿ ಥಿಯೇಟರ್​ನಿಂದ ಹೊರಗೆ ಬಂದ ಜನ

ಅಪ್ಪು ಹಾಗೂ ಪ್ರಭುದೇವ ಅವರ ಡ್ಯಾನ್ಸ್‌ ಬಂದಾಗ ಜನ ಶಿಳ್ಳೆ ಹೊಡೆದು ಡ್ಯಾನ್ಸ್‌ ಮಾಡುತ್ತಾರೆ. ಅದು ಮುಗಿದ ತಕ್ಷಣ ಪುನೀತ್ ರಾಜ್​ಕುಮಾರ್ ನಟಿಸಿದ್ದ ದೃಶ್ಯಗಳ ಮೇಕಿಂಗ್‌ ವಿಡಿಯೋ ಪ್ಲೇ ಮಾಡಲಾಗುತ್ತದೆ. ಪ್ರೇಕ್ಷಕರು ನೆಚ್ಚಿನ ನಟನ ವಿಡಿಯೋ ನೋಡಿ ಭಾವುಕರಾಗಿ ಥೊಯೇಟರ್​ನಿಂದ ಹೊರ ಹೋಗುತ್ತಾರೆ.

ಭಗವಂತನಾಗಿ ಬಂದ ಅಪ್ಪು

ಪವರ್​ ಸ್ಟಾರ್ ಪುನೀತ್​ ರಾಜ್​ಕುಮಾರ್​ ನಮ್ಮನ್ನೆಲ್ಲಾ ಅಗಲಿ 11 ತಿಂಗಳುಗಳೇ ಕಳೆದಿದೆ. ಆದ್ರೆ ಅಪ್ಪು ಅಭಿಮಾನಿಗಳ ಮನದಲ್ಲಿ ಚಿರಂಜೀವಿ ಆಗಿದ್ದಾರೆ. ಅವರು ಮಾಡಿ ಹೋಗಿರೋ ಸಮಾಜ ಸೇವೆ, ಸಾಮಾಜಿಕ ಕೆಲಸಗಳು ಸಹ ಅವರ ನೆನಪನ್ನು ಜೀವಂತವಾಗಿಸಿದೆ. ಕಾಕತಾಳೀಯ ಎಂಬಂತೆ ಕೊನೆಯ ಚಿತ್ರದಲ್ಲಿ ದೇವರಾಗಿ ಅಪ್ಪು ಕಾಣಿಸಿಕೊಂಡಿದ್ದಾರೆ.

ದೇವರ ರೂಪದಲ್ಲಿ ಅಪ್ಪು ನೋಡಿ ಅಭಿಮಾನಿಗಳು ಭಾವುಕ

ದೇವರ ಪಾತ್ರದಲ್ಲಿ ಅಪ್ಪು ನೋಡಿದ ಅಭಿಮಾನಿಗಳು ಭಾವುಕರಾಗಿದ್ದಾರೆ. ಪುನೀತ್​ ನಿಧನದ ಬಳಿಕ ಸಿನಿಮಾ ರಿಲೀಸ್​ ಆಗಿರೋ ಹಿನ್ನಲೆ ದೇವರ ಪಾತ್ರ ಅವರಿಗೆ ತುಂಬಾ ಚೆನ್ನಾಗಿ ಹೊಂದಿಕೆ ಆಗುತ್ತಿದೆ. ಆ ಕಾರಣದಿಂದಾಗಿ ಪ್ರೇಕ್ಷಕರಿಗೆ ಈ ಚಿತ್ರ ಇನ್ನಷ್ಟು ಹತ್ತಿರವಾಗಿದೆ.

ಇದನ್ನೂ ಓದಿ: Puneeth Rajkumar: ಲಕ್ಕಿ ಮ್ಯಾನ್​ನಲ್ಲಿ ಅಪ್ಪು-ಪ್ರಭು ಸಖತ್​ ಡ್ಯಾನ್ಸ್​; ಈ ಸಿನಿಮಾ ಮಿಸ್​ ಮಾಡ್ಕೊಬೇಡಿ ಎಂದ್ರು ಸುದೀಪ್​

ದಾಂಪತ್ಯ ಜೀವನದ ಏಳುಬೀಳಿನ ಕಥೆ

ಲಕ್ಕಿಮ್ಯಾನ್​ ಚಿತ್ರದ ಕಥಾನಾಯಕ (ಡಾರ್ಲಿಂಗ್ ಕೃಷ್ಣ) ಬಾಲ್ಯದ ಸ್ನೇಹಿತೆಯನ್ನೇ ವಿವಾಹವಾಗುತ್ತಾರೆ. ಜಗಳ ಮನಸ್ತಾಪದಿಂದಕ ದಾಂಪತ್ಯ ಜೀವನವೇ ಕಷ್ಟ ಎನ್ನುವ ನಿರ್ಧಾರಕ್ಕೆ ಬರುವ ನಾಯಕ ಡಿವೋರ್ಸ್​ ಪಡೆಯಲು ನಿರ್ಧರಿಸುತ್ತಾನೆ. ಇನ್ನೇನು ವಿಚ್ಛೇದನ ಸಿಗಬೇಕು ಎಂಬಷ್ಟರಲ್ಲಿ ಆತನಿಗೆ ದೇವರೇ (ಪುನೀತ್​) ಪ್ರತ್ಯಕ್ಷರಾಗ್ತಾರೆ. ದೇವರ ರೂಪದಲ್ಲಿ ಬರುವ ಪುನೀತ್ ರಾಜ್ ಕುಮಾರ್ ಕಥಾನಾಯಕನ ಮನಸ್ಸಿನಲ್ಲಿ ಬದಲಾವಣೆ ತರುತ್ತಾರೆ. ಮಾಡಿದ ತಪ್ಪನ್ನು ಸರಿಪಡಿಸಿಕೊಂಡು, ಬೇರೆ ಹುಡುಗಿಯನ್ನು ಮದುವೆಯಾಗಲು ದೇವರು 2ನೇ ಅವಕಾಶ ನೀಡುತ್ತಾರೆ.

ಇದನ್ನೂ ಓದಿ: Puneeth Rajkumar: ಲಕ್ಕಿ ಮ್ಯಾನ್​ನಲ್ಲಿ ಅಪ್ಪು-ಪ್ರಭು ಸಖತ್​ ಡ್ಯಾನ್ಸ್​; ಈ ಸಿನಿಮಾ ಮಿಸ್​ ಮಾಡ್ಕೊಬೇಡಿ ಎಂದ್ರು ಸುದೀಪ್​

ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಸಿಗಲಿದೆ ಉತ್ತರ

ಕಥಾ ನಾಯಕ ದೇವರು ಕೊಟ್ಟ 2ನೇ ಅವಕಾಶವನ್ನು ಕಥಾನಾಯಕ ಸರಿಯಾಗಿ ಉಪಯೋಗಿಸಿಕೊಳ್ಳುತ್ತಾನಾ? ಎರಡನೇ ಲೈಫ್​ನಲ್ಲಿ ಆತ ಯಾರನ್ನು ಮದುವೆ ಆಗ್ತಾನೆ? ಅಂತಿಮವಾಗಿ ಅವನಿಗೆ ಡಿವೋರ್ಸ್​ ಸಿಗುತ್ತಾ? ಈ ಎಲ್ಲ ಪ್ರಶ್ನೆಗಳಿಗೆ ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಉತ್ತರ ಸಿಗಲಿದೆ.
Published by:Divya D
First published: