ಸ್ಯಾಂಡಲ್ವುಡ್ನಲ್ಲಿ ಸಖತ್ ಸೌಂಡ್ ಮಾಡಿದ್ದ ಯುವರತ್ನ ಇದೀಗ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದೆ. ದಸರಾ ಹಬ್ಬದಂದು ಬಿಡುಗಡೆಯಾಗಿದ್ದ ಈ ವಿಡಿಯೋ ತುಣುಕಿನಲ್ಲಿನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪವರ್ಫುಲ್ ಎಂಟ್ರಿ ಸಿನಿಪ್ರಿಯರಿಗೆ ಹೊಸ ಅನುಭವ ನೀಡಿತ್ತು.
ಚಿತ್ರದಲ್ಲ ರಗ್ಬಿ ಆಟಗಾರನಾಗಿ ಕಾಣಿಸಿಕೊಂಡಿದ್ದ ಅಪ್ಪು ಎಂಟ್ರಿಯಲ್ಲೇ ಮೋಡಿ ಮಾಡಿದ್ದರು. ಇನ್ನು ಸಂತೋಷ್ ಆನಂದ್ರಾಮ್ ಅವರ ನಿರ್ದೇಶನ ಮತ್ತೊಮ್ಮೆ ಮನಮೋಹಕವಾಗಿ ಮೂಡಿಬಂದಿದೆ ಎಂಬ ಮಾತುಗಳು ಕೇಳಿ ಬಂದಿತ್ತು.
ಈ ದುನಿಯಾದಲ್ಲಿ ಮೂರು ಥರ ಗಂಡಸರು ಇರುತ್ತಾರೆ. ರೂಲ್ನ ಫಾಲೋ ಮಾಡೋರು. ರೂಲ್ನ ಬ್ರೇಕ್ ಮಾಡೋರು. ಮೂರನೇ ಅವರು ನನ್ ಥರ ರೂಲ್ ಮಾಡೋರು ಎಂಬ ಡೈಲಾಗ್ ಅಪ್ಪು ಅಭಿಮಾನಿಗಳಂತು ಹೊಸ ರೋಮಾಂಚನ ನೀಡಿತ್ತು. ಇದೀಗ ಖುದ್ದು ಅಪ್ಪುವೇ ರೂಲ್ ಮಾಡಿದ್ದಾರೆ. ಅಂದರೆ ಯುವರತ್ನ ಟೀಸರ್ ಸ್ಯಾಂಡಲ್ವುಡ್ನಲ್ಲಿ ವಿಭಿನ್ನ ದಾಖಲೆಯೊಂದನ್ನು ಬರೆದಿದೆ.
ಈ ಸಿನಿಮಾದ ಟೀಸರ್ ಇದುವರೆಗೂ 31 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೊಳಪಟ್ಟಿದೆ. ಅಲ್ಲದೆ ಯುವರತ್ನನಿಗೆ 1.34 ಲಕ್ಷ ಜನರು ಲೈಕ್ ಒತ್ತಿದ್ದಾರೆ. ಇದರೊಂದಿಗೆ ಜನರ ಪ್ರತಿಕ್ರಿಯೆ ಹೊಸ ದಾಖಲೆಯನ್ನು ಬರೆದಿದೆ. ಯುವರತ್ನ ಟೀಸರ್‌ಗೆ 64 ಸಾವಿರಕ್ಕೂ ಅಧಿಕ ಕಾಮೆಂಟ್ಸ್‌ಗಳು ಸಿಕ್ಕಿವೆ. ಕನ್ನಡ ಚಿತ್ರವೊಂದರ ಟೀಸರ್‌ಗೆ ಇಷ್ಟೊಂದು ಪ್ರಮಾಣದಲ್ಲಿ ಕಾಮೆಂಟ್ಸ್ ಬಂದಿರುವುದು ಇದೇ ಮೊದಲು. ಆ ಮೂಲಕ ಮೊದಲ ಎಂಟ್ರಿಯಲ್ಲೇ ಅಪ್ಪು ಪವರ್ ತೋರಿಸಿದ್ದಾರೆ. ಇಂತಹದೊಂದು ವಿಶೇಷ ದಾಖಲೆ ನಿರ್ಮಿಸಿದ ಖುಷಿಯನ್ನು ಖುದ್ದು ಹೊಂಬಾಳೆ ಫಿಲಂಸ್ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ