HOME » NEWS » Entertainment » PUNEETH RAJKUMAR STARRER YUVARATHNAA PAATASHAALA SONG IS RELEASING IN MARCH AE

Paatashaala Song: ಕಡೆಗೂ ರಿಲೀಸ್​ ಆಗುತ್ತಿದೆ ಯುವರತ್ನ ಸಿನಿಮಾ ಪಾಠಶಾಲಾ ಹಾಡು...!

Yuvarathnaa Puneeth Rajkumar: ಯುವರತ್ನ ಸಿನಿಮಾದ ನಾಲ್ಕನೇ ಹಾಡು ಪಾಠಶಾಲಾ... ರಿಲೀಸ್​ಗೆ ಸಜ್ಜಾಗಿದೆ. ಮಾರ್ಚ್​ ಅಂದರೆ ಮುಂದಿನ ತಿಂಗಳು ಈ ಹಾಡು ಬಿಡುಗಡೆಯಾಗಲಿದೆ.

Anitha E | news18-kannada
Updated:February 27, 2021, 3:27 PM IST
Paatashaala Song: ಕಡೆಗೂ ರಿಲೀಸ್​ ಆಗುತ್ತಿದೆ ಯುವರತ್ನ ಸಿನಿಮಾ ಪಾಠಶಾಲಾ ಹಾಡು...!
ಯುವರತ್ನ ಸಿನಿಮಾದಲ್ಲಿ ಪುನೀರ್​ ರಾಜ್​ಕುಮಾರ್​
  • Share this:
ಪುನೀತ್​ ರಾಜ್​ಕುಮಾರ್ ಹಾಗೂ ಸಂತೋಷ್​ ಆನಂದ್​ ರಾಮ್​ ಕಾಂಬಿನೇಶನ್​ನಲ್ಲಿ ಮೂಡಿ ಬರುತ್ತಿರುವ ಸಿನಿಮಾ ಯುವರತ್ನ. ಈಗಾಗಲೇ ರಿಲೀಸ್ ದಿನಾಂಕ ಪ್ರಕಟಿಸಿರುವ ಚಿತ್ರತಂಡ ಸಿನಿಮಾದ ಪ್ರಚಾರಕಾರ್ಯ ಸಹ ಆರಂಭಿಸಿದೆ. ಜೊತೆಗೆ ಇತ್ತೀಚೆಗಷ್ಟೆ ಸಿನಿಮಾದ ಊರಿಗೊಬ್ಬ ರಾಜ ವಿಡಿಯೋ ಹಾಡನ್ನು ರಿಲೀಸ್ ಮಾಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇನ್ನು ಅಪ್ಪು ಅಭಿಮಾನಿಗಳು ಪುನೀತ್​ ಹಾಕಿರುವ ಸಖತ್ ಸ್ಟೆಪಗಳಿಗೆ ಫಿದಾ ಆಗಿದ್ದಾರೆ. ಇನ್ನು ಈ ಹಿಂದೆಯೇ ರಿಲೀಸ್ ಆಗಬೇಕಿದ್ದ ಪಾಠಶಾಲ ಹಾಡು ತಾಂತ್ರಿಕ ಕಾರಣಗಳಿಂದಾಗಿ ಬಿಡುಗಡೆಯಾಗಲಿಲ್ಲ. ಅದಕ್ಕಾಗಿ ಪುನೀತ್ ಅಭಿಮಾನಿಗಳಿಗೆ ತಾಳ್ಮೆಯಿಂದ ಕಾಯುವಂತೆ ಮನವಿ ಮಾಡಿದ್ದರು. ಅದಕ್ಕಾಗಿಯೇ ಊರಿಗೊಬ್ಬ ಹಾಡನ್ನು ಚಿತ್ರತಂಡ ರಿಲೀಸ್​ ಮಾಡಿತ್ತು. ಈಗ ಕೊನೆಯೂ ಪಾಠಶಾಲ ಹಾಡು ರಿಲೀಸ್ ಆಗಲಿದೆ. ಚಿತ್ರತಂಡ ಈಗ ಈ ಹಾಡಿನ ಹೊಸ ರಿಲೀಸ್​ ದಿನಾಂಕ ಪ್ರಕಟಿಸಿದೆ. 

ಅಪ್ಪು ಅಭಿನಯದ ಬಹುನಿರೀಕ್ಷಿತ ಯುವರತ್ನ. ಇನ್ನು ಬೆಳ್ಳಿ ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಹೊಸ ವರ್ಷದ ದಿನ ಅಂದರೆ ಜನವರಿ ಒಂದರಂದು ಯುವರತ್ನ ಸಿನಿಮಾದ ರಿಲೀಸ್ ದಿನಾಂಕವನ್ನು ಪ್ರಕಟಿಸುವ ಮೂಲಕ ಚಿತ್ರತಂಡ ಅಪ್ಪು ಅಭಿಮಾನಿಗಳಿಗೆ ಸರ್ಪ್ರೈಸ್​ ಕೊಟ್ಟಿತ್ತು. ಈಗ ಈ ಸಿನಿಮಾದ ನಾಲ್ಕನೇ ಹಾಡು ಪಾಠಶಾಲಾ... ರಿಲೀಸ್​ಗೆ ಸಜ್ಜಾಗಿದೆ. ಮಾರ್ಚ್​ ಅಂದರೆ ಮುಂದಿನ ತಿಂಗಳು ಈ ಹಾಡು ಬಿಡುಗಡೆಯಾಗಲಿದೆ.



ಮಾರ್ಚ್​ 3ರಂದು ಮಧ್ಯಾಹ್ನ 3:28ಕ್ಕೆ ಪಾಠಶಾಲಾ ಹಾಡು ರಿಲೀಸ್​ ಆಗಲಿದೆ. ಥಮನ್​ ಸಂಗೀತ ನೀಡಿರುದ್ದ ಕಲ್ಯಾಣ್​ ಅವರು ಸಾಹಿತ್ಯ ಬರೆದಿದ್ದಾರೆ. ಹೊಂಬಾಳೆ ​​ಫಿಲಂಸ್​ನಲ್ಲಿ ಯೂಟ್ಯೂಬ್​ ಚಾನಲ್​ನಲ್ಲಿ ಈ ಹಾಡು ಬಿಡುಗಡೆಯಾಗಲಿದೆ.


ಇತ್ತೀಚೆಗಷ್ಟೆ ರಿಲೀಸ್ ಆಗಿರುವ ಊರಿಗೊಬ್ಬ ರಾಜ ಹಾಡಿಗೆ ಸಖತ್​ ಪ್ರತಿಕ್ರಿಯೆ ವ್ಯಕ್ತಪವಾಗಿದೆ. ಪುನೀತ್​ ರಾಜ್​ಕುಮಾರ್​ ಹಾಡಿರುವ ಈ ಹಾಡಿಗೆ ಈಗಾಗಲೇ 20 ಲಕ್ಷಕ್ಕೂ ಅಧಿಕ ವೀಕ್ಷಣೆ ಸಿಕ್ಕಿದೆ.



ಹೊಂಬಾಳೆ ಫಿಲಂಸ್​ ನಿರ್ಮಾಣದ ಹಾಗೂ ಸಂತೋಷ್​ ಆನಂದ್​ ರಾಮ್​ ನಿರ್ದೇಶನದ ಯುವರತ್ನ ಸಿನಿಮಾ ಏಪ್ರಿಲ್​ 1ರಂದು ರಿಲೀಸ್ ಆಗಲಿದೆ. ಇನ್ನು ಈಗಾಗಲೇ ರಿಲೀಸ್​ ಆಗಿರುವ ಹಾಡುಗಳು, ಪೋಸ್ಟರ್​ಗಳು ಹಾಗೂ ಟೀಸರ್​ ಅಭಿಮಾನಿಗಳಿಗೆ ತುಂಬಾ ಇಷ್ಟ ಆಗಿದೆ.

ಇದನ್ನೂ ಓದಿ: ರಾಜ ಎನಿಸಿಕೊಳ್ಳುವುದು ಹೇಗೆಂದು ಪಾಠ ಮಾಡಿದ ನಿಖಿಲ್ ಕುಮಾರಸ್ವಾಮಿ..!

ಥಮನ್​ ಸಂಗೀತ ನಿರ್ದೇಶನ ಮಾಡಿರುವ ಯುವರತ್ನ ಸಿನಿಮಾದಿಂದ ಪಾಠಶಾಲಾ ಎಂಬ ಹಾಡು ಹೇಗಿರಲಿದೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿದೆ. ಪಾಠಶಾಲಾ ಹಾಡಿನಲ್ಲಿ ಗುರುವಿನ ಬಗ್ಗೆ ಹೆಚ್ಚಾಗಿ ಚಿತ್ರೀಕರಿಸಲಾಗಿದೆಯಂತೆ. ಇನ್ನು ಶಾಲಾ-ಕಾಲೇಜುಗಳಿಗೆ ಹೋಗುವವರಿಗಾಗಿ ಇದನ್ನು ಮಾಡಲಾಗಿದೆ ಎಂದು ಸಂಗೀತ ನಿರ್ದೇಶಕ ಥಮನ್​ ಹೇಳಿಕೊಂಡಿದ್ದಾರೆ.

ಯುವರತ್ನ ಸಿನಿಮಾದಲ್ಲಿ ಪುನೀತ್​ ಮತ್ತೆ ಕಾಲೇಜು ವಿದ್ಯಾರ್ಥಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕಾಗಿ ಅವರು ತಮ್ಮ ದೇಹದ ಮೇಲೆ ತುಂಬಾ ಕೆಲಸ ಮಾಡಿದ್ದಾರೆ. ಈ ಸಿನಿಮಾದಲ್ಲಿ ಪುನೀತ್​ಗೆ ನಾಯಕಿಯಾಗಿ ಸಯೇಷಾ ನಟಿಸಿದ್ದಾರೆ. ಬಹಳ ಹಿಂದೆಯೇ ರಿಲೀಸ್ ಆಗಿರುವ ಈ ಸಿನಿಮಾದ ಪವರ್​ ಆಫ್​ ಯೂತ್​​ ಹಾಡು ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ.

ಇದನ್ನೂ ಓದಿ: Sumalatha: ನವಜೋಡಿಗಳಿಗೆ ಶುಭ ಹಾರೈಸಲು ಸುಮಲತಾ ಅಂಬರೀಷ್ ವಿಶೇಷ ಫೋಟೋ ಶೂಟ್; ಸಖತ್ತಾಗಿ ಮಿಂಚುತ್ತಿರುವ ಸಂಸದೆ

ಪುನೀತ್ ಅವರೊಂಗಿದೆ ಟಗರು ಖ್ಯಾತಿಯ ಡಾಲಿ ಧನಂಜಯ್​ ಸಹ ಕಾಣಿಸಿಕೊಂಡಿದ್ದಾರೆ. ಇವರ ಜೊತೆ ಸುಧಾರಾಣಿ, ದಿಗಂತ್​, ಸೋನು ಗೌಡ, ರಾಧಿಕಾ ಶರತ್​ಕುಮಾರ್​, ಪ್ರಕಾಶ್​ ರೈ ಹಾಗೂ ಇತರರ ತಾರಾಬಳಗವಿದೆ. ಸದ್ಯ ಪುನೀತ್​ ಜೇಮ್ಸ್​ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೆ ಉತ್ತರ ಕರ್ನಾಟಕದಲ್ಲಿ ಜೇಮ್ಸ್​ ಸಿನಿಮಾದ ಶೂಟಿಂಗ್​ ಶೆಡ್ಯೂಲ್​ ಮುಗಿಸಿದ್ದಾರೆ.
Published by: Anitha E
First published: February 27, 2021, 3:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories