• Home
  • »
  • News
  • »
  • entertainment
  • »
  • Yuvarathnaa: ಯುವರತ್ನ ಚಿತ್ರದ ಮೊದಲ ಹಾಡು ರಿಲೀಸ್​: ತೆಲುಗಿನಲ್ಲೂ ತೆರೆಕಾಣಲಿದೆ ಪುನೀತ್ ಸಿನಿಮಾ..!

Yuvarathnaa: ಯುವರತ್ನ ಚಿತ್ರದ ಮೊದಲ ಹಾಡು ರಿಲೀಸ್​: ತೆಲುಗಿನಲ್ಲೂ ತೆರೆಕಾಣಲಿದೆ ಪುನೀತ್ ಸಿನಿಮಾ..!

ಯುವರತ್ನ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​

ಯುವರತ್ನ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​

Puneeth Rajkumar Tollywood Debut:

  • Share this:

ಪವರ್ ಸ್ಟಾರ್​ ಪುನೀತ್​ ರಾಜ್​ಕುಮಾರ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಯುವರತ್ನ. ಸಂತೋಷ್​ ಆನಂದ್ ರಾಮ್​ ಅಪ್ಪು ಅಭಿಮಾನಿಗಳಿಗೆ ಡಬಲ್​ ಸಿಹಿ ಸುದ್ದಿ ಕೊಟ್ಟಿದ್ದಾರೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಸಯೇಷಾ, ಪುನೀತ್​ಗೆ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಬೇರೆ ಭಾಷೆಯ ಸಿನಿಮಾಗಳು ಕನ್ನಡಕ್ಕೆ ಡಬ್​ ಆಗುತ್ತಿರುವುದನ್ನು ನೋಡುತ್ತಿದ್ದೇವೆ. ಅಂತೆಯೇ  ಈಗ ಕನ್ನಡ ಸಿನಿಮಾ ಸಹ ತೆಲುಗಿನಲ್ಲಿ ರಿಲೀಸ್​ ಆಗಲು  ತಯಾರಿ ನಡೆಸಿದೆ. ಪುನೀತ್​ ಅವರ ಸಿನಿಮಾ ಇದೇ ಮೊದಲ ಬಾರಿಗೆ ತೆಲುಗಿನಲ್ಲಿ ತೆರೆ ಕಾಣಲಿದೆ. ಹೌದು, ಪುನೀತ್​ ಟಾಲಿವುಡ್​ನಲ್ಲಿ ಯುವರತ್ನ ಸಿನಿಮಾ ಮೂಲಕ ಡೆಬ್ಯೂ ಮಾಡಲಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್​ ನಲ್ಲಿ ವಿಜಯ್ ಕಿರಗಂದೂರು ನಿರ್ಮಾಣದ ಸಿನಿಮಾ ಯುವರತ್ನ ಟಾಲಿವುಡ್​ನಲ್ಲೂ ತೆರೆಕಾಣಲಿದೆ. ಈ ವಿಷಯವನ್ನು ಪುನೀತ್​ ರಾಜ್​ಕುಮಾರ್​ ತಮ್ಮ ಟ್ವೀಟ್​ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. 


ಇದೇ ಮೊದಲ ಬಾರಿಗೆ ದ್ವಿಭಾಷೆಯಲ್ಲಿ ರಿಲೀಸ್ ಆಗಲಿದೆ ಪುನೀತ್ ಅಭಿನಯದ ಯುವರತ್ನ ಸಿನಿಮಾ. ಯುವರತ್ನ ತೆಲುಗಿನಲ್ಲೂ ತೆರೆ ಕಾಣಲಿದೆ. ನಿಮ್ಮ ಬೆಂಬಲ ಹಾಗೂ ಶುಭ ಹಾರೈಕೆ ನಮ್ಮ ಮೇಲಿರಲಿ ಎಂದು ಪುನೀತ್​ ಈ ವಿಷಯವನ್ನು ಟ್ವೀಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.


ಇನ್ನು, ಪುನೀತ್​ ರಾಜ್​ಕುಮಾರ್ ಅಭಿಮಾನಿಗಳ ಬೇಡಿಕೆ ಕಡೆಗೂ ಈಡೇರಿದೆ. ಯುವರತ್ನ ಚಿತ್ರದ ಮೊದಲ ಹಾಡು ರಿಲೀಸ್​ಗೆ ರೆಡಿಯಾಗಿದೆ. ಫಸ್ಟ್​ ಸಿಂಗಲ್​ ರಿಲೀಸ್​ಗೆ ದಿನಾಂಕ ನಿಗದಿಯಾಗಿದೆ. ಡಿಸೆಂಬರ್ 2ರಂದು ಪವರ್ ಆಫ್ ಯೂತ್ ಸಾಂಗ್ ಎರಡೂ ಭಾಷೆಗಳಲ್ಲಿ ರಿಲೀಸ್ ಆಗಲಿದೆ.

ಪುನೀತ್​ ರಾಜ್​ಕುಮಾರ್ ಅವರ ಟಾಲಿವುಡ್​ ಎಂಟ್ರಿಗೆ ತೆಲುಗು ಸೆಲೆಬ್ರಿಟಿಗಳು ಸ್ವಾಗತ ಕೋರಿದ್ದಾರೆ. ನಿರ್ದೇಶಕ ಪೂರಿ ಜಗನ್ನಾಥ್​ ಟ್ವೀಟ್​ ಮಾಡುವ ಮೂಲಕ ಪುನೀತ್​ ಅವರನ್ನು ಟಾಲಿವುಡ್​ಗೆ ಸ್ವಾಗತಿಸಿದ್ದಾರೆ.


ಲಾಕ್​ಡೌನ್​ನಲ್ಲಿ ಪುನೀತ್​ ಅಭಿಮಾನಿಗಳು ಯುವರತ್ನ ಸಿನಿಮಾದ ಹಾಡು ರಿಲೀಸ್​ ಮಾಡುವಂತೆ ಸಾಮಾಜಿಕ ಜಾಲತಾಣದ ಮೂಲಕ ಒತ್ತಡ ಹೇರಿದ್ದರು. ಆದರೆ ಆಗ ತಾವು ಏನೂ ಮಾಡ ಪರಿಸ್ಥಿತಿಯಲ್ಲಿರುವುದಾಗಿ ಸಂಗೀತ ನಿರ್ದೇಶಕ ತಮನ್​ ಅಭಿಮಾನಿಗಳಲ್ಲಿ ತಮ್ಮ ಕಷ್ಟ ಹೇಳಿಕೊಂಡಿದ್ದರು.

Published by:Anitha E
First published: