Puneeth Rajkumar: ಲಕ್ಕಿ ಮ್ಯಾನ್​ನಲ್ಲಿ ಅಪ್ಪು-ಪ್ರಭು ಸಖತ್​ ಡ್ಯಾನ್ಸ್​; ಈ ಸಿನಿಮಾ ಮಿಸ್​ ಮಾಡ್ಕೊಬೇಡಿ ಎಂದ್ರು ಸುದೀಪ್​

ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ನಟ ರಾಘವೇಂದ್ರ ರಾಜ್​ ಕುಮಾರ್​, ನಟ ಕಿಚ್ಚ ಸುದೀಪ್​ ಹಾಗೂ ಡ್ಯಾನ್ಸರ್​ ಪ್ರಭುದೇವ್ ಅವರು ಭಾಗಿಯಾಗಿದ್ರು. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ವಿಶೇಷ ವಿಡಿಯೋ ಪ್ಲೇ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು

ಲಕ್ಕಿಮ್ಯಾನ್​

ಲಕ್ಕಿಮ್ಯಾನ್​

  • Share this:
ನಟ ಡಾರ್ಲಿಂಗ್​ ಕೃಷ್ಣ ನಟನೆಯ ಲಕ್ಕಿ ಮ್ಯಾನ್ ಚಿತ್ರದಲ್ಲಿ ಪುನೀತ್ ರಾಜ್​ಕುಮಾರ್ (Puneeth Rajkumar) ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಪುನೀತ್​ ನಟನೆಯ ಕೊನೆಯ ಚಿತ್ರ ‘ಲಕ್ಕಿ ಮ್ಯಾನ್​’ ಸಿನಿಮಾ (Lucky Man Movie) ರಿಲೀಸ್​ಗೆ ರೆಡಿ ಆಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಈ ಚಿತ್ರ ತೆರೆಗೆ ಬರುತ್ತಿದೆ. ಈ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮ ಇಂದು (ಆಗಸ್ಟ್ 23) ನಡೆಯುತ್ತಿದೆ. ಈ ಚಿತ್ರದ ಟ್ರೇಲರ್ ಈಗಾಗಲೇ ಮೆಚ್ಚುಗೆ ಪಡೆದುಕೊಂಡಿದೆ. ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ನಟ ರಾಘವೇಂದ್ರ ರಾಜ್​ ಕುಮಾರ್​, ನಟ ಕಿಚ್ಚ ಸುದೀಪ್ (Sudeep)​ ಹಾಗೂ ಡ್ಯಾನ್ಸರ್​ ಪ್ರಭುದೇವ್ ಅವರು ಭಾಗಿಯಾಗಿದ್ರು. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ವಿಶೇಷ ವಿಡಿಯೋ ಪ್ಲೇ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು

ಅಪ್ಪು ನೆನೆದ ರಾಘಣ್ಣ

ಕಾರ್ಯಕ್ರಮದಲ್ಲಿ ಅಪ್ಪು ನೆನೆದು ಮಾತಾಡಿ ನಟ ರಾಘವೇಂದ್ರ ರಾಜ್​ ಕುಮಾರ್​, ಟೈಟಲ್ ನೋಡಿ ಲಕ್ಕಿಮ್ಯಾನ್ ಅಂದ್ರೆ ಅದೃಷ್ಟವಂತ, ನಾನು 46 ವರ್ಷ ಅದೃಷ್ಟವಂತನಾಗಿದ್ದೆ ಅದ್ರೆ ಈಗ ದುರಾದೃಷ್ಟವಂತ ಎಂದ್ರು. ಅಪ್ಪು ಕಾರ್ಯಕ್ರಮಗಳಿಗೆ  ಬರಬಾರದು ಅನ್ಕೊತೀನಿ, ಅದರು ಎಲ್ಲಾ ಹೋಗಿ ಅಂತಾರೆ. ಅಪ್ಪು ಕಾರ್ಯಕ್ರಮಗಳಿಗೆ ಬಂದರೆ 2 ದಿನ ಬೇಕು ನಾನು ಸುಧಾರಿಸಿ ಕೊಳ್ಳೊಕೆ.

ಹಾಡು ಆಲ್ಬಂನಲ್ಲಿ ಸದಾ ಇರುತ್ತೆ

ಅಪ್ಪು ನನ್ನ ಬಳಿ ಸಾಕಷ್ಟು ಆಸೆಗಳನ್ನು ಹೇಳಿಕೊಂಡಿದ್ದ, ಮಣಿರತ್ನಂ ಅವರ ಸಿನಿಮಾದಲ್ಲಿ ನಟಿಸಬೇಕು ಅವರ ಸಿನಿಮಾದಲ್ಲಿ ನಾನು ಫ್ರೀ ಆಗಿ ನಟಿಸ್ತಿನಿ. ಎ.ಅರ್ ರೆಹಮಾನ್ ಸಂಗೀತದ ಸಿನಿಮಾದಲ್ಲಿ ನಟಿಸಬೇಕು. ನನ್ನ ಸಿನಿಮಾದ ಹಾಡನ್ನು ಪ್ರಭುದೇವ ಅವರು ಕೊರಿಯೋಗ್ರಫಿ ಮಾಡಬೇಕು ಮಾಡಿಸಿ ಅಂತ ಅಪ್ಪು ಹೇಳಿದ್ದ, ಅದು ಆಗಲಿಲ್ಲ ಅದ್ರೆ ಈ ಸಿನಿಮಾದಲ್ಲಿ ಪ್ರಭುದೇವ ಜೊತೆ ಡ್ಯಾನ್ಸ್ ಮಾಡಿದ್ದಾನೆ. ಈ ಹಾಡು ನಾನು ಇರೋವರೆಗೂ ನನ್ನ ಆಲ್ಬಂನಲ್ಲಿ ಇರುತ್ತೆ ಎಂದು ರಾಘಣ್ಣ ಹೇಳಿದ್ದಾರೆ.

ಈ ಸಿನಿಮಾ ಮಿಸ್​ ಮಾಡಿಕೊಳ್ಳಲೇಬೇಡಿ

ಇದೇ ವೇಳೆ ಮಾತಾಡಿದ ನಟ ಸುದೀಪ್​, ಲಕ್ಕಿಮ್ಯಾನ್ ಸಿನಿಮಾವನ್ನು ತಬ್ಬಿಕೊಂಡು ನೋಡಿ ಎಂದ್ರು. ಕೆಲವು ಇರಬೇಕಾದ್ರೆ ಬೆಲೆ ಕೊಡ್ತಿವಿ ಕಳ್ಕೊಂಡ ಮೇಲೆ ಇನ್ನು ಜಾಸ್ತಿ ಬೆಲೆ ಕೊಡ್ತಿವಿ. ಈ ಸಿನಿಮಾವನ್ನು ಅನುಭವಿಸಿ ಮತ್ತೆ ಬೇಕು ಅಂದ್ರೆ ಸಿಗಲ್ಲ ಎಂದು ನಟ ಸುದೀಪ್​ ಹೇಳಿದ್ರು



ಮಿಸ್​ ಯು ಅಪ್ಪು ಎಂದ್ರು ಪ್ರಭುದೇವ್​

ನನ್ನ ತಮ್ಮ ಪ್ರಸಾದ್ ಗೆ ಹೀರೋ ಆಗಿ ನನ್ನ ಅಪ್ಪ ಚಾನ್ಸ್ ಕೊಟ್ರು, ಎರಡನೇ ಸಲ ನಿರ್ದೇಶಕನಾಗಿ  ಅಪ್ಪು ಸರ್ ಚಾನ್ಸ್ ಕೊಟ್ಟಿದ್ದಾರೆ. ಟ್ರೈಲರ್ ನೋಡ್ತಿದ್ದೆ ಅಪ್ಪು ಸರ್ ‌ನೋಡಿ ನಾನು ಭಾವುಕನಾದೆ. ಈ ಡ್ಯಾನ್ಸ್ ಮಾಡುವಾಗ  ನನ್ನ ಸಿನಿಮಾಗೆ ಕೊರಿಯೋಗ್ರಫಿ ಮಾಡಿ ಅಂತ ಕೇಳಿದ್ರು. ನಿಮ್ಮ ಎಲ್ಲಾ ಸಿನಿಮಾಗೂ ಹೇಳಿ ಬಂದು ಮಾಡ್ತಿನಿ ಎಂದು ನಾನು ಅಪ್ಪು ಅವರಿಗೆ ಹೇಳಿದ್ದೆ. ಮಿಸ್ ಯು ಅಪ್ಪು ಎಂದು ಹೇಳಿ ವೇದಿಕೆಯಿಂದ ತೆರಳಿದ್ರು.

ಇದನ್ನೂ ಓದಿ:Dhananjay: ನಟ ಧನಂಜಯ್​ಗೆ ಸ್ಯಾಂಡಲ್​ವುಡ್​ ಕ್ವೀನ್​ ರಮ್ಯಾ ಸ್ಪೆಷಲ್​ ವಿಶ್; ಡಾಲಿ ಅಭಿಮಾನಿಗಳಿಗೆ ಬರ್ತಡೇ ಗಿಫ್ಟ್​!

ಬಹುನಿರೀಕ್ಷಿತ 'ಲಕ್ಕಿಮ್ಯಾನ್' ಈಗಾಗಲೇ ದಾಖಲೆಗಳನ್ನು ಬರೆಯಲು ಶುರು ಮಾಡಿದೆ. ಭಾರೀ ಮೊತ್ತಕ್ಕೆ ಚಿತ್ರದ ವಿತರಣೆ ಹಕ್ಕು ಮಾರಾಟವಾಗಿದೆ. ಸೆಪ್ಟೆಂಬರ್ 9ಕ್ಕೆ ಚಿತ್ರವನ್ನು ದೊಡ್ಡಮಟ್ಟದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೀತಿದ್ದು, ಸಿನಿರಸಿಕರು ಕಾತರದಿಂದ ಕಾಯುತ್ತಿದ್ದಾರೆ. ಈ ರೊಮ್ಯಾಂಟಿಕ್ ಫ್ಯಾಮಿಲಿ ಎಂಟರ್‌ಟೈನರ್‌ನ ಕಂಪ್ಲೀಟ್ ಫ್ಯಾಮಿಲಿ ನೋಡಿ ಎಂಜಾಯ್ ಮಾಡಬಹುದು.
Published by:Pavana HS
First published: