Puneeth Rajkumar: ಲಕ್ಕಿಮ್ಯಾನ್ ಮೂಲಕ ಭೂಮಿಗೆ ಬಂದ ಭಗವಂತ; ತೆರೆ ಮೇಲೆ ಅಪ್ಪು ಕಂಡು ಫ್ಯಾನ್ಸ್​​ ಭಾವುಕ

ಲವ್​ ಮಾಕ್ಟೇಲ್ ಖ್ಯಾತಿಯ ಡಾರ್ಲಿಂಗ್​ ಕೃಷ್ಣ, ಸಂಗೀತಾ ಶೃಂಗೇರಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಲಕ್ಕಿಮ್ಯಾನ್​ (Luckyman) ನೂರಾರು ಥಿಯೇಟರ್​ಗಳಲ್ಲಿ ರಿಲೀಸ್ ಆಗಿದೆ.

ಲಕ್ಕಿಮ್ಯಾನ್

ಲಕ್ಕಿಮ್ಯಾನ್

  • Share this:
ನಟ ಪುನೀತ್​ ರಾಜ್​ ಕುಮಾರ್ (Puneeth Rajkumar)​ ಅಭಿನಯದ ಕೊನೆಯ ಚಿತ್ರ ಬಹುನಿರೀಕ್ಷಿತ ಲಕ್ಕಿಮ್ಯಾನ್​​ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಲವ್​ ಮಾಕ್ಟೇಲ್ (Love Mocktailಖ್ಯಾತಿಯ ಡಾರ್ಲಿಂಗ್​ ಕೃಷ್ಣ (Darling Krishna), ಸಂಗೀತಾ ಶೃಂಗೇರಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಲಕ್ಕಿಮ್ಯಾನ್​ (Luckyman) ನೂರಾರು ಥಿಯೇಟರ್​ಗಳಲ್ಲಿ ರಿಲೀಸ್ ಆಗಿದೆ.  ಸೆ.8ರ ಸಂಜೆಯೇ ಆಯ್ದ ಕೆಲವು ಕಡೆಗಳಲ್ಲಿ ಪ್ರೀಮಿಯರ್​ ಶೋ ಏರ್ಪಡಿಸಲಾಗಿತ್ತು. ಚಿತ್ರ ನೋಡಿದ ಎಲ್ಲರಿಂದಲೂ ಮೆಚ್ಚುಗೆ ಮಾತುಗಳು ಕೇಳಿಬರುತ್ತಿವೆ. 

ನಾಗೇಂದ್ರ ಪ್ರಸಾದ್ ನಿರ್ದೇಶನದ ಮೊದಲ ಚಿತ್ರ

ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನದ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಸಂಗೀತಾ ಶೃಂಗೇರಿ ಲೀಡ್‌ ರೋಲ್‌ಗಳಲ್ಲಿ ಮಿಂಚಿದ್ದಾರೆ. ದಿವಂಗತ ಪುನೀತ್ ರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ದರ್ಶನ ಕೊಟ್ಟಿದ್ದಾರೆ. ಇನ್ನು ಚಿತ್ರದಲ್ಲಿ ಪ್ರಭುದೇವ ಹಾಗೂ ಪವರ್ ಸ್ಟಾರ್ ಹಾಡೊಂದಕ್ಕೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ.

ಅಪ್ಪು-ಪ್ರಭುದೇವ್​ ಮಸ್ತ್​ 

ಅಪ್ಪು-ಪ್ರಭು ಡ್ಯಾನ್ಸ್ ಮಾಡಿರೋ ಬಾರೋ ರಾಜಾ ಸಾಂಗ್ ರಿಲೀಸ್ ಆಗಿ ಸಖತ್ ಸದ್ದು ಮಾಡಿದೆ. ಹಿಂದೆ ಮೇಕಿಂಗ್‌ನ ಸಣ್ಣ ಝಲಕ್ ಕೂಡ ರಿಲೀಸ್ ಆಗಿ ಲಕ್ಷ ಲಕ್ಷ ವೀಕ್ಷಣೆ ಕಂಡಿದೆ. ಅಪ್ಪು ಅಭಿಮಾನಿಗಳು ಇದೀಗ ತೆರೆಮೇಲೆ ತಮ್ಮ ಆರಾಧ್ಯ ದೈವ ಪುನೀತ್​ ರಾಜ್​ ಕುಮಾರ್ ಅವರನ್ನು ಕಣ್ತುಂಬಿಕೊಳ್ತಿದ್ದಾರೆ.

ಇದನ್ನೂ ಓದಿ: Puneeth Rajkumar: ಲಕ್ಕಿ ಮ್ಯಾನ್​ನಲ್ಲಿ ಅಪ್ಪು-ಪ್ರಭು ಸಖತ್​ ಡ್ಯಾನ್ಸ್​; ಈ ಸಿನಿಮಾ ಮಿಸ್​ ಮಾಡ್ಕೊಬೇಡಿ ಎಂದ್ರು ಸುದೀಪ್​

ದೇವರಾಗಿ ಪುನೀತ್​ ದರ್ಶನ

ಲಕ್ಕಿಮ್ಯಾನ್ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ದೇವರಾಗಿ ಬಹಳ ವಿಶೇಷ ಪಾತ್ರದಲ್ಲಿ ದರ್ಶನ ಕೊಟ್ಟಿದ್ದಾರೆ. ಲಕ್ಕಿಮ್ಯಾನ್​ ಟೀಸರ್​ಗೂ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಾಕ್ಷ್ಯಚಿತ್ರ ಗಂಧದಗುಡಿ ಬಿಟ್ಟರೆ ಪುನೀತ್ ರಾಜ್‌ಕುಮಾರ್ ನಟಿಸಿರುವ ಕೊನೆಯ ಕಮರ್ಷಿಯಲ್ ಸಿನಿಮಾ ಇದಾಗಿದೆ.  ಹಾಗಾಗಿ ಸಹಜವಾಗಿಯೇ ಪ್ರೇಕ್ಷಕರ ನಿರೀಕ್ಷೆ ಇತ್ತು. ಅಪ್ಪು ಕೊನೆಯ ಸಿನಿಮಾವನ್ನು ಅಭಿಮಾನಿಗಳು ಕಣ್ತುಂಬಿಕೊಳ್ತಿದ್ದಾರೆ.

Luckyman Kannada film teaser released fans are happy to see puneeth rajkumar on screen
ಲಕ್ಕಿಮ್ಯಾನ್​


ತಮಿಳಿನ ಓ ಮೈ ಕಡವುಲೆ ರೀಮೆಕ್ ಆಗಿರುವ ಲಕ್ಕಿಮ್ಯಾನ್ ಚಿತ್ರಕ್ಕೆ ಪಿ. ಆರ್ ಮೀನಾಕ್ಷಿ ಸುಂದರಂ ಹಾಗೂ ಆರ್. ಸುಂದರ ಕಾಮರಾಜ್ ಬಂಡವಾಳ ಹೂಡಿದ್ದಾರೆ. ನಾಗಭೂಷಣ್, ಸುಂದರ್‌ ರಾಜ್, ಸುಧಾ ಬೆಳವಾಡಿ, ಸಾಧುಕೋಕಿಲ, ರೋಶನಿ ಚಿತ್ರದ ತಾರಾ ಬಳಗದಲ್ಲಿ ಹೊಂದಿದ್ದಾರೆ.

ಲಕ್ಕಿ ಮ್ಯಾನ್ ನೋಡಿ ಮೆಚ್ಚಿದ ಅಭಿಮಾನಿಗಳು

ಲಕ್ಕಿಮ್ಯಾನ್ ಸಿನಿಮಾ ಪೇಯ್ಡ್ ಪ್ರೀಮಿಯರ್‌ ಶೋಗಳು ಒಂದು ದಿನ ಮೊದಲೇ ಆಯೋಜಿಸಲಾಗಿತ್ತು. ಗುರುವಾರ ಸಂಜೆ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆಮೈಸೂರಿನ ಡಿಆರ್‌ಸಿ, ವುಡ್‌ಲ್ಯಾಂಡ್ಸ್ ಥಿಯೇಟರ್‌ಗಳು ಹಾಗೂ ಬೆಂಗಳೂರಿನ ಓರಾಯನ್ ಮಾಲ್‌ನಲ್ಲಿ ತಲಾ ಒಂದೊಂದು ಶೋಗಳನ್ನು ಆಯೋಜಿಸಲಾಗಿತ್ತು.

ಇದನ್ನೂ ಓದಿ:Dhananjay: ನಟ ಧನಂಜಯ್​ಗೆ ಸ್ಯಾಂಡಲ್​ವುಡ್​ ಕ್ವೀನ್​ ರಮ್ಯಾ ಸ್ಪೆಷಲ್​ ವಿಶ್; ಡಾಲಿ ಅಭಿಮಾನಿಗಳಿಗೆ ಬರ್ತಡೇ ಗಿಫ್ಟ್​!

ಎಲ್ಲೆಡೆ ಲಕ್ಕಿಮ್ಯಾನ್ ಕಟೌಟ್ ವಾರಕ್ಕೂ ಮೊದಲೇ ಲಕ್ಕಿಮ್ಯಾನ್ ಸಿನಿಮಾ ಕಟೌಟ್‌ಗಳು ಸಿದ್ಧವಾಗಿತ್ತು. ಸದಾಶಿವನಗರದ ಪುನೀತ್ ರಾಜ್‌ಕುಮಾರ್ ನಿವಾಸದ ಸಮೀಪದಲ್ಲೂ ಕಟೌಟ್ ಹಾಕಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ವಿತರಣೆ ಹಕ್ಕು ಖರೀದಿಸಿದ ಜಾಕ್‌ ಮಂಜು 

ಇತ್ತೀಚೆಗೆ ವಿಕ್ರಾಂತ್ ರೋಣ ಸಿನಿಮಾ ನಿರ್ಮಿಸಿ ಗೆದ್ದ ನಿರ್ಮಾಪಕ ಜಾಕ್‌ ಮಂಜು ಲಕ್ಕಿಮ್ಯಾನ್ ಚಿತ್ರದ ವಿತರಣೆ ಹಕ್ಕು ಖರೀದಿಸಿದ್ದಾರೆ. ಭಾರೀ ಮೊತ್ತಕ್ಕೆ ಅಪ್ಪು ಕೊನೆಯ ಸಿನಿಮಾ ಹಕ್ಕುಗಳನ್ನು ಮಂಜು ಸ್ವಂತ ಮಾಡಿಕೊಂಡಿದ್ದು, ಬಹಳ ದೊಡ್ಡಮಟ್ಟದಲ್ಲಿ ರಿಲೀಸ್ ಮಾಡಿದ್ದಾರೆ. ಇನ್ನು ಡಿಜಿಟಲ್ ರೈಟ್ಸ್, ಸ್ಯಾಟಲೈಟ್, ಓವರ್‌ಸೀಸ್‌ ಥ್ರಿಯೇಟ್ರಿಕಲ್ ರೈಟ್ಸ್‌  ಭಾರೀ ಮೊತ್ತದಲ್ಲಿ ಖರೀದಿಯಾಗಿದೆ.
Published by:Pavana HS
First published: