James: ಕರ್ನಾಟಕದ 400 ಚಿತ್ರಮಂದಿರಗಳಲ್ಲಿ `ಜೇಮ್ಸ್’​ ಅಬ್ಬರ, ಜೋಶ್​​ಗೂ-ಕ್ರೇಜ್​ಗೂ ಅಪ್ಪುನೇ ಟ್ರೇಡ್​ಮಾರ್ಕ್!

‘ಜೇಮ್ಸ್’ ತಂಡ ಈಗಾಗಲೇ ಮೊದಲ ಹಂತದಲ್ಲಿ ಸುಮಾರು 130ಕ್ಕೂ ಅಧಿಕ ಚಿತ್ರಮಂದಿರಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ಬೆಂಗಳೂರಿನಲ್ಲಿ ಕೆಜಿ ರಸ್ತೆಯಲ್ಲಿರುವ ತ್ರಿವೇಣಿ, ವಿಜಯನಗರದಲ್ಲಿರುವ ವೀರೇಶ್, ಪ್ರಸನ್ನ, ವೀರಭದ್ರೇಶ್ವರ, ಅಂಜನ್ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​

  • Share this:
ಇಡೀ ಕರುನಾಡ ಜನರು ಕಾತುರದಿಂದ ಕಾಯುತ್ತಿರೋ ಸಿನಿಮಾ ಜೇಮ್ಸ್​,(James) ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ (Puneeth Rajkumar) ಅಭಿನಯದ ಕೊನೆಯ ಚಿತ್ರ ಜೇಮ್ಸ್​ ಬಿಡುಗಡೆಗೆ ಅಭಿಮಾನಿಗಳು (Fans) ಕಾಯ್ತಿದ್ದಾರೆ. ಮಾರ್ಚ್ 17ಕ್ಕೆ ಚಿತ್ರ ಬಿಡುಗಡೆ ಪಕ್ಕಾ ಆಗಿದೆ. ಈಗಾಗಲೇ ಅಭಿಮಾನಿಗಳು ಜೇಮ್ಸ್​ ಸಿನಿಮಾವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಪವರ್‌ಸ್ಟಾರ್ ಅಪ್ಪು (Appu) ಅವರ ಅಭಿನಯದ ಕೊನೆಯ ಸಿನಿಮಾ ‘ಜೇಮ್ಸ್’ (James) 5 ಭಾಷೆಗಳಲ್ಲಿ (5 Languages) ಮೂಡಿಬರುತ್ತಿರುವುದು ಎಲ್ಲರಿಗೂ ಗೊತ್ತೆ ಇದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power Star Puneeth Rajkumar) ಅವರ ಈ ಪವರ್ ಪ್ಯಾಕ್ಡ್ ಸಿನಿಮಾ (Power Packed Cinema) ರಿಲೀಸ್​ಗಾಗಿ ಕೇವಲ ಕರುನಾಡಿನ ಜನರಷ್ಟೇ ಅಲ್ದೇ ಪರಭಾಷಿಗರೂ ಕೂಡ ಕಾದುಕುಳಿತಿದ್ದಾರೆ.

ಕರ್ನಾಟಕದ 400 ಚಿತ್ರಮಂದಿರಗಳಲ್ಲಿ ಜೇಮ್ಸ್​ ರಿಲೀಸ್!

ಅಪ್ಪು ಅಗಲಿದ ದಿನದಿಂದ ಈ ಸಿನಿಮಾಗಾಗಿ ಅಪ್ಪು ಅಭಿಮಾನಿಗಳು ಕಾದು ಕೂತಿದ್ದಾರೆ. ಅಪ್ಪು ಅಭಿಮಾನಿಗಳು ದಿನಗಣನೆ ಶುರು ಮಾಡಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಜೇಮ್ಸ್ ಟೀಸರ್ (James Teaser) ಕಾತರತೆಯನ್ನ ಹೆಚ್ಚಿಸಿದೆ. ಮಾರ್ಚ್​ 17 ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರ ಹುಟ್ಟುಹಬ್ಬ(Birthday)ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಇನ್ನು ಜೇಮ್ಸ್ ಚಿತ್ರವನ್ನು ಅದ್ದೂರಿಯಾಗಿ ಸ್ವಾಗತಿಸಲು ದೊಡ್ಮೆನೆ ಅಭಿಮಾನಿಗಳು ದೊಡ್ಡ ಮಟ್ಟದ ತಯಾರಿ ಮಾಡ್ಕೊಂತಿದ್ದಾರೆ. ಇದೀಗ ‘ಜೇಮ್ಸ್​’ಸಿನಿಮಾದ ಥಿಯೇಟರ್​ ಲಿಸ್ಟ್​ ರಿಲೀಸ್​ ಆಗಿದೆ. ರಾಜ್ಯದ 400 ಚಿತ್ರಮಂದಿರಗಳಲ್ಲಿ ‘ಜೇಮ್ಸ್​’ ರಿಲೀಸ್​ ಆಗಲಿದೆ.

ಮೊದಲ ಹಂತದಲ್ಲಿ 130ಕ್ಕೂ ಅಧಿಕ ಚಿತ್ರಮಂದಿರಗಳ ಪಟ್ಟಿ ರಿಲೀಸ್​!

‘ಜೇಮ್ಸ್’ ತಂಡ ಈಗಾಗಲೇ ಮೊದಲ ಹಂತದಲ್ಲಿ ಸುಮಾರು 130ಕ್ಕೂ ಅಧಿಕ ಚಿತ್ರಮಂದಿರಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ಬೆಂಗಳೂರಿನಲ್ಲಿ ಕೆಜಿ ರಸ್ತೆಯಲ್ಲಿರುವ ತ್ರಿವೇಣಿ, ವಿಜಯನಗರದಲ್ಲಿರುವ ವೀರೇಶ್, ಪ್ರಸನ್ನ, ವೀರಭದ್ರೇಶ್ವರ, ಅಂಜನ್ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಮಲ್ಟಿಪ್ಲೆಕ್ಸ್‌ಗಳನ್ನು ಹೊರಪಡಿಸಿ, ಕೇವಲ ಸಿಂಗಲ್ ಸ್ಕ್ರೀನ್‌ನಲ್ಲಿಯೇ 130ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ‘ಜೇಮ್ಸ್​’ ಎಂಟ್ರಿಗೆ ಇನ್ನೂ ಕೇವಲ 10 ದಿನಗಳು ಮಾತ್ರ ಬಾಕಿ ಇದ್ದು, ಅಪ್ಪು ಅಭಿಮಾನಿಗಳ ಎದೆ ಬಡಿತ ಹೆಚ್ಚಾಗಿದೆ.

ಇದನ್ನೂ ಓದಿ: 15 ದೇಶಗಳಲ್ಲಿ ರಾರಾಜಿಸಲಿದ್ದಾನೆ `ಜೇಮ್ಸ್’​, ಯಾರೆ ಬರಲಿ.. ಯಾರೆ ಇರಲಿ.. ನಿಮ್ಮ ರೇಂಜಿಗೆ ಯಾರಿಲ್ಲ!

15 ದೇಶಗಳಲ್ಲಿ ರಾರಾಜಿಸಲಿದ್ದಾನೆ ‘ಜೇಮ್ಸ್​’!

ಜೇಮ್ಸ್​ ಸಿನಿಮಾವನ್ನು ಒಟ್ಟು 15 ದೇಶಗಳಲ್ಲಿ ರಿಲೀಸ್​ ಮಾಡಲು ಚಿತ್ರತಂಡ ತಯಾರಿ ನಡೆಸಿದೆಯಂತೆ. ಈ ಮೂಲಕ ಪುನೀತ್ ಕೊನೆ ಸಿನಿಮಾವನ್ನು ಪ್ರಪಂಚದ ಮೂಲೆ ಮೂಲೆಗೂ ತಲುಪಿಸಲು ಪ್ರಯತ್ನ ಮಾಡುತ್ತಿದ್ದೆ ಜೇಮ್ಸ್ ತಂಡ. ಈ ಸಿನಿಮಾ ಜರ್ಮನಿ, ನೆದರ್ಲೆಂಡ್ಸ್, ಆಸ್ಟ್ರೇಲಿಯಾ, ಪೋಲ್ಯಾಂಡ್, ಭಾರತ ಸೇರಿದಂತೆ ಒಟ್ಟು 15 ದೇಶಗಳಲ್ಲಿ ಜೇಮ್ಸ್ ರಿಲೀಸ್ ಆಗ್ತಿದೆ. ಈ ಕುರಿತು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಈ ವಿಚಾರ ಗೊತ್ತಾಗುತ್ತಿದ್ದ ಹಾಗೆ ಅಭಿಮಾನಿಗಳ ಖುಷಿ ದುಪ್ಪಟ್ಟಾಗಿದೆ.

ಇದನ್ನೂ ಓದಿ: ಅಪ್ಪು ಕೊನೆಯ ಚಿತ್ರದ ಅಪರೂಪದ ಫೋಟೋಗಳು, ಹೇಗಿದ್ದಾನೆ ನೋಡಿ ಜೇಮ್ಸ್

ಅಪ್ಪು ನೆನೆದು ಭಾವುಕರಾದ ಶಿವಣ್ಣ!

ಜೇಮ್ಸ್​ ಸಿನಿಮಾದ ಸುದ್ದಿಗೋಷ್ಠಿ (Press Meet) ಮಾರ್ಚ್​6 ರಂದು ಬೆಂಗಳೂರಿನಲ್ಲಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಶಿವರಾಜ್​ಕುಮಾರ್ ​(Shivarajkumar) ಭಾಗಿಯಾಗಿದ್ದರು. ಇದೇ ವೇಳೆ ವೇದಿಕೆ ಮೇಲೆ ಶಿವಣ್ಣ ಭಾವುಕರಾದರು. ಸಾಕಷ್ಟು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ. ‘ಮಾತನಾಡೋಕೆ ಕಷ್ಟ ಆಗುತ್ತಿದೆ. ನಾಲ್ಕು ತಿಂಗಳಿಂದ ನಗ್ತೀವೀ, ಊಟ ಮಾಡ್ತೀವಿ, ಶೂಟಿಂಗ್​ನಲ್ಲಿ ಭಾಗಿ ಆಗ್ತೀವಿ. ಆದರೆ, ಮನಸ್ಸಲ್ಲಿರೋ ನೋವು ಕಡಿಮೆ ಆಗುತ್ತಿಲ್ಲ. ಬದುಕಬೇಕು ಬದುಕುತ್ತಾ ಇದ್ದೇವೆ. ಅಪ್ಪು ಚಿಕ್ಕ ವಯಸ್ಸಿಗೆ ಹೋದ. ನೆನಪಿಸಿಕೊಂಡಾಗೆಲ್ಲ ನೋವು ಜಾಸ್ತಿನೇ ಆಗ್ತಿದೆ. ಅಪ್ಪುನ ಬಿಟ್ಟು ಬದುಕೋಕೆ ಕಷ್ಟ ಆಗುತ್ತಿದೆ’ ಎಂದು ಶಿವಣ್ಣ ಹೇಳುತ್ತಾ ಭಾವುಕರಾದರು.
Published by:Vasudeva M
First published: