James: ನ್ಯೂಯಾರ್ಕ್​ನಲ್ಲೂ `ಜೇಮ್ಸ್​’ ಅಬ್ಬರ.. ಸಿನಿಮಾ ನೋಡಿ ಅಪ್ಪುಗೆ ಫ್ಯಾನ್ಸ್​ ಜೈಕಾರ!

‘ಪವರ್ ಸ್ಟಾರ್’ ಅವರಿಗೆ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶ-ವಿದೇಶದಲ್ಲೂ ಅಭಿಮಾನಿಗಳು ಇದ್ದಾರೆ. ಜಗತ್ತಿನ ನಾನಾ ಭಾಗದಲ್ಲಿರುವ ಕನ್ನಡಿಗರು ಅಪ್ಪು ಅಗಲಿಕೆಯ ಸುದ್ದಿ ಕೇಳಿ ಕಣ್ಣೀರು ಹಾಕಿದ್ದರು. ಇದೀಗ ‘ಜೇಮ್ಸ್​’ ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ.

ಪುನೀತ್​ ರಾಜ್​​ಕುಮಾರ್​

ಪುನೀತ್​ ರಾಜ್​​ಕುಮಾರ್​

  • Share this:
ಪುನೀತ್ ರಾಜ್​ಕುಮಾರ್ ಅವರ (Puneeth Rajkumar) ಬಹು ನಿರೀಕ್ಷಿತ ಚಿತ್ರ ಜೇಮ್ಸ್ (James) ಅದ್ದೂರಿ ಬಿಡುಗಡೆಗೊಂಡಿದೆ, ಚಿತ್ರಮಂದಿರಗಳಿಗೆ ರಭಸವಾಗಿಯೇ ಅಪ್ಪಳಿಸಿದೆ. ಅಭಿಮಾನಿಗಳು ಜೇಮ್ಸ್ ಚಿತ್ರಕ್ಕೆ ಚಿತ್ರಮಂದಿರಗಳಲ್ಲಿ ಭಾರಿ ಸ್ವಾಗತವನ್ನು ನೀಡಿದ್ದರು. ಪುನೀತ್ ಅಭಿನಯದ ಜೇಮ್ಸ್ ಸಿನಿಮಾ ಬರೀ ಬೆಂಗಳೂರು ಅಥವಾ ರಾಜ್ಯದಲ್ಲಷ್ಟೇ ಅಲ್ಲ, ಇಡೀ ವಿಶ್ವದಾದ್ಯಂತ ರಿಲೀಸ್ ಆಗಿತ್ತು. ವಿಶ್ವದಾದ್ಯಂತ ಇಂದು ಸುಮಾರು 4000 ಸ್ಕ್ರೀನ್ ಗಳಲ್ಲಿ ಜೇಮ್ಸ್ ರಿಲೀಸ್ ಆಗಿದೆ. ಬೆಟ್ಟದ ಹೂವು, ಅರಸು, ಜಾಕಿ, ಅಣ್ಣಾಬಾಂಡ್, ರಣ ವಿಕ್ರಮ, ಯುವರತ್ನ, ರಾಜಕುಮಾರ, ನಟಸಾರ್ವಭೌಮ ಮತ್ತು ಇನ್ನೂ ಹಲವು ಜನಮೆಚ್ಚಿದ ಚಿತ್ರಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನಮ್ಮನ್ನು ರಂಜಿಸಿದ್ದಾರೆ. ಇದೀಗ ಜೇಮ್ಸ್ ಮೂಲಕ ಭೌತಿಕವಾಗಿ ನಮ್ಮನ್ನು ಅಗಲಿದ್ದರೂ ಕನ್ನಡದ ಕಣ್ಮಣಿ ಅಪ್ಪು ಅಭಿಮಾನಿಗಳಿಗೆ ರಸದೌತಣ ಉಣಬಡಿಸಿದ್ದಾರೆ. 

ವಿದೇಶದಲ್ಲೂ ಅಪ್ಪು ಜೇಮ್ಸ್​ ಅಬ್ಬರ!

‘ಪವರ್ ಸ್ಟಾರ್’ ಅವರಿಗೆ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶ-ವಿದೇಶದಲ್ಲೂ ಅಭಿಮಾನಿಗಳು ಇದ್ದಾರೆ. ಜಗತ್ತಿನ ನಾನಾ ಭಾಗದಲ್ಲಿರುವ ಕನ್ನಡಿಗರು ಅಪ್ಪು ಅಗಲಿಕೆಯ ಸುದ್ದಿ ಕೇಳಿ ಕಣ್ಣೀರು ಹಾಕಿದ್ದರು. ಈಗಲೂ ಅವರು ವಿಶ್ವದ ಮೂಲೆ ಮೂಲೆಯಲ್ಲಿರುವ ಕನ್ನಡಿಗರ ಮನದಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಸದ್ಯ ಪುನೀತ್​ ರಾಜ್​ಕುಮಾರ್​ ಅವರ ‘ಜೇಮ್ಸ್​’ ಸಿನಿಮಾದಲ್ಲೂ ರಿಲೀಸ್​ ಆಗಿದ್ದು, ಸಖತ್​ ಸೌಂಡ್​ ಮಾಡುತ್ತಿದೆ. ನ್ಯೂಯಾರ್ಕ್​ನಲ್ಲಿ ಜೇಮ್ಸ್​ ಸಿನಿಮಾ ನೋಡಿದ ಅಭಿಮಾನಿಗಳು ಅಪ್ಪುಗೆ ಜೈಕಾರ ಹಾಕಿದ್ದಾರೆ.

ಅಪ್ಪುಗೆ ಜೈಕಾರ ಹಾಕಿದ ವಿಡಿಯೋ ವೈರಲ್​!

‘ಜೇಮ್ಸ್’ ಸಿನಿಮಾವು ಭಾರತ ಸೇರಿದಂತೆ ವಿಶ್ವಾದ್ಯಂತ ಏಕಕಾಲಕ್ಕೆ ತೆರೆಗೆ ಬಂದಿದ ಆಸ್ಟ್ರೇಲಿಯಾ, ಕೆನಡಾ ಸೇರಿ ಹಲವು ದೇಶಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಪ್ಪು ಹುಟ್ಟುಹಬ್ಬದಂದು ಅವರು ಸಿನಿಮಾ ನೋಡಿ  ‘ಜೇಮ್ಸ್​’ ಜಾತ್ರೆ ಮಾಡಿದ್ದಾರೆ. ಟ್ವಿಂಕಲ್ ಟ್ವಿಂಕಲ್‌ ಲಿಟಲ್ ಸ್ಟಾರ್..ಪುನೀತ್ ಈಸ್ ಸೂಪರ್ ಸ್ಟಾರ್ ಅಂತ ಜೈಕಾರ ಹಾಕಿದ್ದಾರೆ.ನ್ಯೂ ಯಾರ್ಕ್ ನಲ್ಲಿ ಜೇಮ್ಸ್ ಮೆಚ್ಚಿಅಭಿಮಾನಿಗಳು  ಶುಭ ಹಾರೈಸಿದ್ದಾರೆ. ಕಾರ್​​​ನಲ್ಲಿ ಹೋಗುವಾಗ ಒಂದೆಡೆ ಸೇರಿ ಹಾರೈಸಿದ್ದಾರೆ.


ಇದನ್ನೂ ಓದಿ: ಮೊದಲ ದಿನವೇ 'ಕೆಜಿಎಫ್‌' ದಾಖಲೆ ಮುರಿದ 'ಜೇಮ್ಸ್'! 'ಪವರ್ ಸ್ಟಾರ್' ಅಬ್ಬರಕ್ಕೆ ಬಾಕ್ಸ್ ಆಫೀಸ್ ಶೇಕ್!

‘ಕೆಜಿಎಫ್​’ ದಾಖಲೆ ಮುರಿದ ‘ಜೇಮ್ಸ್​’ 

ಜೇಮ್ಸ್ ಸಿನಿಮಾ ದಾಖಲೆ  (Record) ಮೇಲೆ ದಾಖಲೆ ಬರೆಯುತ್ತಾ ಇದೆ. ರಾಕಿಂಗ್ ಸ್ಟಾರ್ (Rocking Star) ಯಶ್ (Yash) ಅಭಿನಯದ ಕೆಜಿಎಫ್ (KGF) ಸಿನಿಮಾದ ದಾಖಲೆಯನ್ನೇ ಜೇಮ್ಸ್ ಮುರಿದಿದೆ. ಒಂದು ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ (Box Office Collection) ವಿಚಾರದಲ್ಲಿ ಕೆಜಿಎಫ್‌ ದಾಖಲೆಯನ್ನು ಜೇಮ್ಸ್ ಮುರಿದಿದೆ ಎನ್ನಲಾಗಿದೆ. ಇದು ಹೀಗೆ ಮುಂದುವರೆದರೆ ಪವರ್ ಸ್ಟಾರ್ ಪವರ್‌ಗೆ ಬಾಕ್ಸ್ ಆಫೀಸ್‌ ಶೇಕ್ ಆಗೋದ್ರಲ್ಲಿ ಡೌಟೇ ಇಲ್ಲ ಅಂತ ಸಿನಿ ಪಂಡಿತರು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ಜೇಮ್ಸ್ ಚಿತ್ರ ವೀಕ್ಷಣೆ ಬಳಿಕ ಸುದ್ದಿಗೋಷ್ಠಿಯಲ್ಲಿ ‘ಅಪ್ಪು’ ನೆನೆದು ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ

ಮೊದಲ ದಿನದ ಬಾಕ್ಸ್ ಆಫೀಸ್ ಗಳಿಕೆ ವಿಚಾರದಲ್ಲಿ ಜೇಮ್ಸ್ ಸಿನಿಮಾ ಕೆಜಿಎಫ್ ಸಿನಿಮಾದ ದಾಖಲೆಯನ್ನೂ ಮುರಿದಿದೆ. ಕೆಜಿಎಫ್ ಸಿನಿಮಾ ಕನ್ನಡದಲ್ಲಿ ಮೊದಲ ದಿನ 12.5 ಕೋಟಿ ಗಳಿಸಿತ್ತು. ಆದರೆ ಜೇಮ್ಸ್ ಸಿನಿಮಾ ಮೊದಲ ದಿನವೇ 15 ಕೋಟಿ ಗಳಿಸಿದೆ. ಈ ಮೂಲಕ ಕೆಜಿಎಫ್‌ನ ದಾಖಲೆ ಮುರಿದಿದೆ.

ಸ್ಯಾಟಲೈಟ್‌ ಹಕ್ಕುಗಳ ಮಾರಾಟದಲ್ಲೂ ದಾಖಲೆ

ಜೇಮ್ಸ್ ಸ್ಯಾಟಲೈಟ್ ರೈಟ್ಸ್ ಕನ್ನಡದಲ್ಲಿ ಬರೋಬ್ಬರಿ 13.80 ಕೋಟಿಗೆ ಮಾರಾಟವಾಗಿದೆ.  ಈ ಹಿಂದೆ ರಾಕಿಂಗ್ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಸ್ಯಾಟಲೈಟ್ ರೈಟ್ಸ್ ಬರೋಬ್ಬರಿ 6 ಕೋಟಿಗೆ ಮಾರಾಟವಾಗಿ ದಾಖಲೆ ಮಾಡಿತ್ತು, ಆದರೆ ಜೇಮ್ಸ್ ಬಿಡುಗಡೆಗೂ ಮುನ್ನವೇ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದ್ದು, ಕೆಜಿಎಫ್ ಗಿಂತ ಎರಡು ಪಟ್ಟು ಹೆಚ್ಚಿನ ಬೆಲೆಗೆ ಜೇಮ್ಸ್ ರೈಟ್ಸ್ ಸೇಲ್​ ಆಗಿದ್ದು, ಮೂಲಗಳ ಪ್ರಕಾರ ವಿವಿಧ ಭಾಷೆಗಳು ಸೇರಿ 80 ಕೋಟಿಗೆ ಟಿವಿ ರೈಟ್ಸ್ ಗೆ ಸೇಲಾಗಿದೆ ಎನ್ನಲಾಗಿದೆ.
Published by:Vasudeva M
First published: