Puneeth Rajkumar : `ಜೇಮ್ಸ್​’ ಚಿತ್ರ ರಿಲೀಸ್​ ಆಗೇ ಆಗುತ್ತೆ: ಅಪ್ಪು ಫ್ಯಾನ್ಸ್​ಗೆ ನಿರ್ದೇಶಕ ಚೇತನ್​ ಭರವಸೆ

Puneeth Rajkumar : ಪವರ್​ ಸ್ಟಾರ್​ ಅಪ್ಪು ಇನ್ನೂ ನೆನಪು ಮಾತ್ರ. ಕನ್ನಡ ಚಿತ್ರರಂಗದ ಮಗನಂತಿದ್ದ ಅಪ್ಪುನ  ಕಳೆದುಕೊಂಡು, ಇಡೀ ಕರ್ನಾಟಕ ಶೋಕಸಾಗರದಲ್ಲಿ ಮುಳುಗಿದೆ.

ಜೇಮ್ಸ್​ ಚಿತ್ರದ ಪೋಸ್ಟರ್​

ಜೇಮ್ಸ್​ ಚಿತ್ರದ ಪೋಸ್ಟರ್​

  • Share this:
ಪವರ್​ ಸ್ಟಾರ್​ ಅಪ್ಪು(Power Star Appu) ಇನ್ನೂ ನೆನಪು ಮಾತ್ರ. ಕನ್ನಡ ಚಿತ್ರರಂಗದ ಮಗನಂತಿದ್ದ ಅಪ್ಪುನ  ಕಳೆದುಕೊಂಡು, ಇಡೀ ಕರ್ನಾಟಕ(Karntaka) ಶೋಕಸಾಗರದಲ್ಲಿ ಮುಳುಗಿದೆ. ಪ್ರತಿಯೊಂದು ಮನೆಯಲ್ಲೂ ಸೂತಕದ ವಾತಾವರಣ ಸೃಷ್ಟಿಯಾಗಿದೆ. ಸದಾ ನಗುಮುಖದಿಂದಲೇ ಮಾತನಾಡುತ್ತಿದ್ದ, ಅಪ್ಪು ಅವರ ನಗು ಮುಖವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕಂಠೀರವ ಸ್ಟೇಡಿಯಂ(Kanteerava Stadium)ನಲ್ಲಿ ಅಪ್ಪು ಅಂತಿಮ ದರ್ಶನ ಪಡೆದ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಎಲ್ಲಾ ಭಾಷೆಯ ನಟ, ನಟಿಯರು ಆಗಮಿಸಿ ಕೊನೆ ಬಾರಿ ಅಪ್ಪು ದರ್ಶನ ಪಡೆಯುತ್ತಿದ್ದಾರೆ. ಸ್ಯಾಂಡಲ್​ವುಡ್​​ನ(Sandalwood)ಲ್ಲಿ ಅಪ್ಪು ಬಹುಬೇಡಿಕೆ ನಟ ಆಗಿದ್ದರು, ಅವರು ಮಾಡಿದ  ಪ್ರತಿಯೊಂದು ಸಿನಿಮಾ ಕೂಡ ಸೂಪರ್​ ಹಿಟ್(Super Hit).​ ಸೋಲನ್ನೇ ನೋಡಿರದ ಅಪ್ಪು, ಇಂದು ವಿಧಿಯ ಮುಂದೆ ಸೋತು ಸುಮ್ಮನೆ ಮಲಗಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ಫ್ಯಾ,ಮಿಲಿ(Family) ಪೂರ್ತಿ ಚಿತ್ರಮಂದಿರಕ್ಕೆ ಬಂದು ಅಪ್ಪು ಸಿನಿಮಾವನ್ನು ನೋಡುತ್ತಿದ್ದರು. ಅವರ ಕಾಲ್​ ಶೀಟ್ ಪಡೆಯಲು ನಿರ್ಮಾಪಕರು ಕಾದು ಕೂರುತ್ತಿದ್ದರು, ಅಪ್ಪು ಅಗಲಿಕೆಗೂ ಮುನ್ನ ಹಲವಾರು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದರು. 

ಜೇಮ್ಸ್​ ಸಿನಿಮಾ ಬಿಡುಗಡೆ ಆಗುತ್ತೆ- ಚೇತನ್​

ಪುನೀತ್​ ರಾಜ್​ಕುಮಾರ್​ ಅವರ  ‘ಜೇಮ್ಸ್​’ ಸಿನಿಮಾ ಹೆಚ್ಚು ನಿರೀಕ್ಷೆ ಮೂಡಿಸಿತ್ತು. ಯಶಸ್ವಿ ನಿರ್ದೇಶಕ ಚೇತನ್​ ಕುಮಾರ್​ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿತ್ತು. ಚಿತ್ರದ ಕೆಲಸಗಳು ಪೂರ್ಣಗೊಳ್ಳುವುದಕ್ಕೂ ಮುನ್ನವೇ ಪುನೀತ್​ ರಾಜ್​ಕುಮಾರ್​ ಇಹಲೋಕ ತ್ಯಜಿಸಿದ್ದಾರೆ. ಆದರೂ ಕೂಡ ‘ಜೇಮ್ಸ್​’ ಬಿಡುಗಡೆ ಆಗಲಿದೆ ಎಂಬ ಮಾಹಿತಿ ಈಗ ಸಿಕ್ಕಿದೆ. ಈ ಕುರಿತು ಚೇತನ್​ ಕುಮಾರ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಜೇಮ್ಸ್​ ಚಿತ್ರಕ್ಕೆ ಬಹುತೇಕ ಶೂಟಿಂಗ್​ ಮುಕ್ತಾಯ ಆಗಿತ್ತು. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇತ್ತು. ಸಾಂಗ್​ ಶೂಟಿಂಗ್​ ಮಾಡಲು ನ.8ರಿಂದ ಪುನೀತ್​ ರಾಜ್​ಕುಮಾರ್​ ಅವರು ಡೇಟ್ಸ್​​ ನೀಡಿದ್ದರು. ಅವರ ಪಾತ್ರದ ಡಬ್ಬಿಂಗ್​ ಅರ್ಧ ಬಾಕಿ ಉಳಿದಿದೆ. ಈ ಸಿನಿಮಾ ಖಂಡಿತ ರಿಲೀಸ್​ ಆಗಲಿದೆ’ ಎಂದು ಚೇತನ್​ ಕುಮಾರ್​ ಹೇಳಿದ್ದಾರೆ.

ಇದನ್ನು ಓದಿ : Puneeth Rajkumar ಅಂತ್ಯಸಂಸ್ಕಾರ ನಾಳೆ: ಸಿಎಂ ಬಸವರಾಜ ಬೊಮ್ಮಾಯಿ





ಬಾಕಿ ಇರುವ ಡಬ್ಬಿಂಗ್​ ಕೆಲಸವನ್ನು ಮುಗಿಸಿ ಸಿನಮಾ ಬಿಡುಗಡೆ ಮಾಡುವುದಾಗಿ ಚೇತನ್​ ಹೇಳಿದ್ದಾರೆ. ಕೊನೆಯ ಬಾರಿ ಅಪ್ಪು ಅವರನ್ನು ಅವರ ಅಭಿಮಾನಿಗಳು ಕಣ್ತುಂಬಿಕೊಳ್ಳಲಿ. ತಮ್ಮ ನೆಚ್ಚಿನ ಅಕಾಲಿಕ ಮರಣದಿಂದ ಅಭಿಮಾನಿಗಳು ದುಖಃದಲ್ಲಿದ್ದಾರೆ. ಇದೆಲ್ಲ ಮುಗಿಯಲಿ. ಆಮೇಲೆ ಸಿನಿಮಾದ ಕೆಲಸಗಳನ್ನು ಪೂರ್ಣ ಮಾಡಿ ಅವರ ಸಿನಿಮಾ ಬಿಡುಗಡೆಮಾಡುತ್ತೇವೆ ಎಂದು ನಿರ್ದೇಶಕ ಚೇತನ್​ ಭರವಸೆ ನೀಡಿದ್ದಾರೆ.







ಮುಂದೆ ಬರಬೇಕಿದ್ದ ಬಿಗ್​ ಬಜೆಟ್​ ಸಿನಿಮಾಗಳು

ಪುನೀತ್​ ಬದುಕಿದ್ದಾಗ ರಿಲೀಸ್​ ಆದ ಅವರ ಕೊನೇ ಸಿನಿಮಾ ‘ಯುವರತ್ನ’. ಆ ಚಿತ್ರಕ್ಕೆ ಸಂತೋಷ್​ ಆನಂದ್​ ರಾಮ್​ ನಿರ್ದೇಶನ ಮಾಡಿದ್ದರು. ಇನ್ನು, ‘ಲೂಸಿಯಾ’ ಖ್ಯಾತಿಯ ಪವನ್​ ಕುಮಾರ್​ ನಿರ್ದೇಶನದ ‘ದ್ವಿತ್ವ’ ಚಿತ್ರದಲ್ಲೂ ಪುನೀತ್​ ನಟಿಸಬೇಕಿತ್ತು. ಇದಾದ ಬಳಿಕ ದಿನಕರ್​ ತೂಗುದೀಪ ಅವರು ಪುನೀತ್ ಜೊತೆ ಸಿನಿಮಾ ಮಾಡಲು ಸಕಲ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೇ ಸಂತೋಷ್​ ಆನಂದ್​ ರಾಮ್​ ಜೊತೆ ಮತ್ತೊಂದು ಸಿನಿಮಾವನ್ನು ಅನೌನ್ಸ್​ ಮಾಡಬೇಕಿತ್ತು. ಜೇಮ್ಸ್​, ದ್ವಿತ್ವ ಶೂಟಿಂಗ್​ ಮುಗಿದ ಬಳಿಕ ಅನೌನ್ಸ್​ ಮಾಡೋಣ ಎಂದು ಆನಂದ್​ ರಾಮ್​ಗೆ ಅಪ್ಪು ಹೇಳಿದ್ದರಂತೆ.  ಇದಾದ ಬಳಿಕ ಯೋಗರಾಜ್​ ಭಟ್​ ಅವರ ಬಳಿಯೂ ಅಪ್ಪು ಅವರ ಡೇಟ್​ ಇತ್ತು. ಅವರು ಕೂಡ ಪುನೀತ್​​ಗೆ ಸೂಟ್​ ಆಗುವಂತಹ ಕಥೆಯನ್ನು ರೆಡಿಮಾಡುವಲ್ಲಿ ಬ್ಯುಸಿಯಾಗಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಸದಾ ಜನರನ್ನು ರಂಜಿಸುತ್ತಿದ್ದ, ಅಪ್ಪು ಹೀಗೆ ಸುಮ್ಮನೆ ಮಲಗಿರುವುದನ್ನ ಕಂಡು  ಏನು ಹೇಳಬೇಕು ನೀವೇ ಹೇಳಿ.




Published by:Vasudeva M
First published: