ಇಡೀ ಕರುನಾಡ ಜನರು ಕಾತುರದಿಂದ ಕಾಯುತ್ತಿರೋ ಸಿನಿಮಾ ಜೇಮ್ಸ್,(James) ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Puneeth Rajkumar) ಅಭಿನಯದ ಕೊನೆಯ ಚಿತ್ರ ಜೇಮ್ಸ್ ಬಿಡುಗಡೆಗೆ ಅಭಿಮಾನಿಗಳು (Fans) ಕಾಯ್ತಿದ್ದಾರೆ. ಮಾರ್ಚ್ 17ಕ್ಕೆ ಚಿತ್ರ ಬಿಡುಗಡೆ ಪಕ್ಕಾ ಆಗಿದೆ. ಶಿವರಾತ್ರಿ ದಿನ ಬೆಳಗ್ಗೆ 11ಗಂಟೆ 11 ನಿಮಿಷಕ್ಕೆ ‘ಜೇಮ್ಸ್’ ಚಿತ್ರದ ಅಪ್ಪು ಇಂಟ್ರಡಕ್ಷನ್ ಸಾಂಗ್(Introduction Song) ಅಭಿಮಾನಿಗಳ ಅಂಗಳದಲ್ಲಿ ಅರಳಿದೆ. ಜೇಮ್ಸ್ ಚಿತ್ರದ ಟ್ರೇಡ್ ಮಾರ್ಕ್(Trade Mark) ಸಾಂಗ್(Song) ಕೇಳಿ ದೊಡ್ಮನೆ ಅಭಿಮಾನಿ ದೇವರುಗಳು ಸಖತ್ ಥ್ರಿಲ್ ಆಗಿದ್ದಾರೆ. ಟ್ರೇಡ್ ಮಾರ್ಕ್ ಸಾಂಗ್ ಅನ್ನು ಉತ್ಸವದಂತೆ ಸಂಭ್ರಮಿಸಿ ಸ್ವಾಗತಿಸಿದ್ದಾರೆ. ವಿಜಯನಗರದ ಬಾಲಗಂಗಾಧರ ನಾಥ ಸ್ವಾಮೀಜಿ ಕ್ರೀಡಾಂಗಣದಲ್ಲಿ ಅದ್ದೂರಿಯಾದ ವೇದಿಕೆ ಭರ್ಜರಿ ಕಾರ್ಯಕ್ರಮದ ಮೂಲಕ ಜೇಮ್ಸ್ ಚಿತ್ರದ ಮೊದಲ ಸಾಂಗ್ ಅನ್ನು ಅರಸು ಅಭಿಮಾನಿಗಳು ಬರಮಾಡಿಕೊಂಡಿದ್ದಾರೆ.
ಟ್ರೆಂಡ್ ಹುಟ್ಟುಹಾಕಿದ ಟ್ರೇಡ್ ಮಾರ್ಕ್ ಸಾಂಗ್!
‘ಜೇಮ್ಸ್’ ಚಿತ್ರದ ಟ್ರೇಡ್ ಮಾರ್ಕ್ ಸಾಂಗ್ ಸ್ಯಾಂಡಲ್ವುಡ್ನಲ್ಲಿ ಹೊಸ ಟ್ರೇಡ್ ಮಾರ್ಕ್ ಅನ್ನು ಕ್ರಿಯೇಟ್ ಮಾಡಿದೆ. ಅಪ್ಪು ನಿಧನದ ನಂತರ ‘ಜೇಮ್ಸ್’ ಅಬ್ಬರ ಸಾಗರದಾಚೆಗೂ ವ್ಯಾಪಿಸಿದೆ.. ಕರುನಾಡಿನ ಅದೇಷ್ಟೊ ಹೃದಯಗಳು ‘ಜೇಮ್ಸ್’ ಚಿತ್ರಕ್ಕೆ ಅಭಿಮಾನದ ಅಭಿಷೇಕ ಮಾಡಲು ಯೋಧರಂತೆ ಸನ್ನದ್ದರಾಗಿದ್ದಾರೆ. ಜೊತೆಗೆ ಅಪ್ಪು ಪವರ್ ಪುಲ್ ಪಾತ್ರಕ್ಕೆ ಶಿವಣ್ಣ ಡಬ್ ಮಾಡಿರೋದು ಚಿತ್ರಪ್ರೇಮಿಗಳ ನಿದ್ದೆ ಕೆಡಿಸಿದೆ.
ಟ್ರೇಡ್ ಮಾರ್ಕ್ನಲ್ಲಿ ತಾರೆಯರ ದಂಡು!
‘ಜೇಮ್ಸ್’ ಚಿತ್ರದ ಟ್ರೇಡ್ ಮಾರ್ಕ್ ಪ್ರಪೋಷನಲ್ ಸಾಂಗ್ನಲ್ಲಿ ಸ್ಯಾಂಡಲ್ ವುಡ್ ತಾರೆಯರ ದಂಡೆ ಸಮಾಗಮವಾಗಿದೆ. ಟ್ರೇಡ್ ಮಾರ್ಕ್ ಸಾಂಗ್ ನಲ್ಲಿ ಚಂದನವನದ ಚೆಲುವೆಯರಾದ ರಚಿತಾ ರಾಮ್, ಶ್ರೀಲೀಲಾ, ಅಶಿಕಾ ರಂಗನಾಥ್ ಹೆಜ್ಜೆ ಹಾಕಿದ್ದಾರೆ. ಇವರಿಗೆ ನಾವೇನು ಕಮ್ಮಿನ ಅಂತ ಚಂದನ್ ಶೆಟ್ಟಿ, ಸಂಗೀತಾ ನಿರ್ದೇಶಕ ಚರಣ್ ರಾಜ್ ಹಾಗೂ ಕೊರಿಯೋಗ್ರಫರ್ ಮೋಹನ್ ಈ ಹಾಡಿನಲ್ಲಿ ಕುಣಿದು ಕುಪ್ಪಳಿಸಿದ್ದಾರೆ.
ಇದನ್ನೂ ಓದಿ: ಇಂದಿನಿಂದ ಅಸಲಿ ಆಟ ಶುರು ಅಂದಿದ್ಯಾಕೆ ಕಿಚ್ಚ? ಹಿಂಗ್ ಹೇಳಿದ್ದು ಅವ್ರಲ್ಲ.. `ವಿಕ್ರಾಂತ್ ರೋಣ’!
ಯೂಟ್ಯೂಬ್ನಲ್ಲಿ ರೆಕಾರ್ಡ್ ಸೃಷ್ಟಿಸಿದ ‘ಟ್ರೇಡ್ಮಾರ್ಕ್’
ಚರಣ್ ರಾಜ್ ಕಂಪೋಸ್ ಮಾಡಿರುವ ಈ ಟ್ಯೂನ್ಗೆ ಚೇತನ್ ಕುಮಾರ್ ಸಾಹಿತ್ಯವಿದ್ರೆ. ಟಾಲಿವುಡ್ ಸ್ಟಾರ್ ಕೋರಿಯೋಗ್ರಾಫರ್ ಶಂಕರ್ ಈ ಹಾಡಿಗೆ ಡ್ಯಾನ್ಸ್ ಕಂಪೋಸ್ ಮಾಡಿದ್ದಾರೆ. ಜೊತೆಗೆ ಈ ಹಾಡಿನ ಮತ್ತೊಂದು ವಿಶೇಷ ಅಂದ್ರೆ ಈ ಹಾಡನ್ನು 5 ಗಾಯಕರು ಹಾಡಿದ್ದು, ಅದರಲ್ಲಿ ದೊಡ್ಮನೆ ಕುಡಿ ಯುವರಾಜ್ ಧ್ವನಿ ಇರೋದು ವಿಶೇಷವಾಗಿದೆ. ಒಂದು ಕಡೆ ಮಾರ್ಚ್ ತಿಂಗಳಲ್ಲಿ ‘ಜೇಮ್ಸ್’ ಉತ್ಸವವನ್ನೆ ಮಾಡಲು ಅಭಿಮಾನಿಗಳು ಸಿದ್ದರಾಗಿದ್ದಾರೆ.
ಇದನ್ನೂ ಓದಿ: 'ಸಲಗ'ವನ್ನೇ ಗೆದ್ದು ‘ಭೀಮ'ನಾದ ವಿಜಯ್! ಹುಷಾರ್.. ಇವರನ್ನ ಕೆಣಕದಿದ್ರೆ ನಿಮಗೇ ಕ್ಷೇಮ
ಕಿಂಗ್ ಈಸ್ ಅಲ್ವೇಸ್ ಕಿಂಗು ಮಾಮ ಎಂದ ಗುರು!
ಇನ್ನೂ ಇದೇ ಹಾಡಿನಲ್ಲಿ ರಾಘವೇಂದ್ರ ರಾಜ್ಕುಮಾರ್ ಅವರ ಎರಡನೇ ಮಗ ಗುರು ರಾಜ್ಕುಮಾರ್ ಕೂಡ ಧನಿಗೂಡಿಸಿದ್ದಾರೆ. ಹಾಡಿನ ಮಧ್ಯದಲ್ಲಿ ಕಿಂಗ್ ಈಸ್ ಅಲ್ವೇಸ್ ಕಿಂಗು ಮಾಮ ಎಂಬ ಸಾಹಿತ್ಯ ಬರುತ್ತದೆ. ಅದಕ್ಕೆ ಸ್ವತಃ ಗುರು ರಾಜ್ಕುಮಾರ್ ಧನಿ ನೀಡಿದ್ದಾರೆ. ಒಟ್ಟಿನಲ್ಲಿ ಈ ಸಾಂಗ್ ಕೇಳಿದ ಪ್ರತಿಯೊಬ್ಬರು ಕೂಡ, ಅಪ್ಪು ಅವರನ್ನು ನೆನದು ಭಾವುಕರಾಗುತ್ತಿದ್ದಾರೆ, ಕಾರಣ ಈ ಸಾಹಿತ್ಯ ಅವರಿಗೆ ಹೇಳಿ ಮಾಡಿಸಿದ ಹಾಗಿದೆ.
(ವರದಿ- ಸತೀಶ್ ಎಂ,ಬಿ) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ