James: 15 ದೇಶಗಳಲ್ಲಿ ರಾರಾಜಿಸಲಿದ್ದಾನೆ `ಜೇಮ್ಸ್’​, ಯಾರೆ ಬರಲಿ.. ಯಾರೆ ಇರಲಿ.. ನಿಮ್ಮ ರೇಂಜಿಗೆ ಯಾರಿಲ್ಲ!

ಮಾರ್ಚ್​ 17 ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರ ಹುಟ್ಟುಹಬ್ಬ(Birthday)ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಇನ್ನು ಜೇಮ್ಸ್ ಚಿತ್ರವನ್ನು ಅದ್ದೂರಿಯಾಗಿ ಸ್ವಾಗತಿಸಲು ದೊಡ್ಮೆನೆ ಅಭಿಮಾನಿಗಳು ದೊಡ್ಡ ಮಟ್ಟದ ತಯಾರಿ ಮಾಡ್ಕೊಂತಿದ್ದಾರೆ. ಈ ಗ್ಯಾಪ್ ನಲ್ಲಿ ಈಗ ಪುನೀತ್ ಅಭಿಮಾನಿ ದೇವರುಗಳಿಗೆ ‘ಜೇಮ್ಸ್’ ಸಿನಿ ಬಳಗದಿಂದ ಮತ್ತೊಂದು ಸಿಹಿ ಸುದ್ದಿ ಬಂದಿದೆ.

ಪುನೀತ್​ ರಾಜ್​ಕುಮಾರ್​​

ಪುನೀತ್​ ರಾಜ್​ಕುಮಾರ್​​

  • Share this:
ಅಪ್ಪು (Appu) ಅವರ ಅಭಿನಯದ ಕೊನೆಯ ಸಿನಿಮಾ ‘ಜೇಮ್ಸ್’ (James) 5 ಭಾಷೆಗಳಲ್ಲಿ (5 Languages) ಮೂಡಿಬರುತ್ತಿರುವುದು ಎಲ್ಲರಿಗೂ ಗೊತ್ತೆ ಇದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power Star Puneeth Rajkumar) ಅವರ ಈ ಪವರ್ ಪ್ಯಾಕ್ಡ್ ಸಿನಿಮಾ (Power Packed Cinema) ರಿಲೀಸ್​ಗಾಗಿ ಕೇವಲ ಕರುನಾಡಿನ ಜನರಷ್ಟೇ ಅಲ್ದೇ ಪರಭಾಷಿಗರೂ ಕೂಡ ಕಾದುಕುಳಿತಿದ್ದಾರೆ. ಅಪ್ಪು ಅಭಿಮಾನಿಗಳು ದಿನಗಣನೆ ಶುರು ಮಾಡಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಜೇಮ್ಸ್ ಟೀಸರ್ (James Teaser) ಕಾತರತೆಯನ್ನ ಹೆಚ್ಚಿಸಿದೆ. ಮಾರ್ಚ್​ 17 ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರ ಹುಟ್ಟುಹಬ್ಬ(Birthday)ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಇನ್ನು ಜೇಮ್ಸ್ ಚಿತ್ರವನ್ನು ಅದ್ದೂರಿಯಾಗಿ ಸ್ವಾಗತಿಸಲು ದೊಡ್ಮೆನೆ ಅಭಿಮಾನಿಗಳು ದೊಡ್ಡ ಮಟ್ಟದ ತಯಾರಿ ಮಾಡ್ಕೊಂತಿದ್ದಾರೆ. ಈ ಗ್ಯಾಪ್ ನಲ್ಲಿ ಈಗ ಪುನೀತ್ ಅಭಿಮಾನಿ ದೇವರುಗಳಿಗೆ ‘ಜೇಮ್ಸ್’ ಸಿನಿ ಬಳಗದಿಂದ ಮತ್ತೊಂದು ಸಿಹಿ ಸುದ್ದಿ ಬಂದಿದೆ.

15 ದೇಶಗಳಲ್ಲಿ ರಾರಾಜಿಸಲಿದ್ದಾನೆ ‘ಜೇಮ್ಸ್​’!

ಜೇಮ್ಸ್​​ ಸಿನಿಮಾದ ಬಗ್ಗೆ ಮತ್ತೊಂದು ಸೆನ್ಷೇಷನಲ್ ಸುದ್ದಿ ಹೊರಬಿದ್ದಿದೆ. ಅದೇನು ಅಂದರೆ ಈ ಜೇಮ್ಸ್​ ಸಿನಿಮಾವನ್ನು ಒಟ್ಟು 15 ದೇಶಗಳಲ್ಲಿ ರಿಲೀಸ್​ ಮಾಡಲು ಚಿತ್ರತಂಡ ತಯಾರಿ ನಡೆಸಿದೆಯಂತೆ. ಈ ಮೂಲಕ ಪುನೀತ್ ಕೊನೆ ಸಿನಿಮಾವನ್ನು ಪ್ರಪಂಚದ ಮೂಲೆ ಮೂಲೆಗೂ ತಲುಪಿಸಲು ಪ್ರಯತ್ನ ಮಾಡುತ್ತಿದ್ದೆ ಜೇಮ್ಸ್ ತಂಡ. ಈ ಸಿನಿಮಾ ಜರ್ಮನಿ, ನೆದರ್ಲೆಂಡ್ಸ್, ಆಸ್ಟ್ರೇಲಿಯಾ, ಪೋಲ್ಯಾಂಡ್, ಭಾರತ ಸೇರಿದಂತೆ ಒಟ್ಟು 15 ದೇಶಗಳಲ್ಲಿ ಜೇಮ್ಸ್ ರಿಲೀಸ್ ಆಗ್ತಿದೆ. ಈ ಕುರಿತು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಈ ವಿಚಾರ ಗೊತ್ತಾಗುತ್ತಿದ್ದ ಹಾಗೆ ಅಭಿಮಾನಿಗಳ ಖುಷಿ ದುಪ್ಪಟ್ಟಾಗಿದೆ.

ನಾಳೆ ರಿಲೀಸ್​ ಆಗ್ತಿದೆ ಫಸ್ಟ್ ಸಾಂಗ್​ ‘ಟ್ರೆಡ್​ ಮಾರ್ಕ್​’!

ಮಾರ್ಚ್ 1 ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ 5  ಭಾಷೆಗಳಲ್ಲಿ ಈ ಹಾಡನ್ನು ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್​ ಮಾಡಿದ್ದೇವೆ ಎಂದು ಚೇತನ್ ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾರೆ.‌ ಇನ್ನು ಈ ಹಾಡು ‘ಟ್ರೇಡ್  ಮಾರ್ಕ್’ ಅನ್ನೋ ಸಾಹಿತ್ಯದಿಂದ ಶುರುವಾಗಲಿದ್ದು, ಚರಣ್ ರಾಜ್ ಸಂಗೀತಕ್ಕೆ ಚೇತನ್ ಸಾಹಿತ್ಯ ಬರೆದಿದ್ದಾರೆ. ಅಲ್ಲದೆ ಈ ಹಾಡಿಗಾಗಿ ಬೆಂಗಳೂರಿನಲ್ಲಿ ಅದ್ದೂರಿ ವೆಚ್ಚದ ಸೆಟ್ ಹಾಕಿ ಆ ಕಲರ್ ಪುಲ್ ಸೆಟ್ ಗಳಲ್ಲಿ ಪವರ್ ಸ್ಟಾರ್ ಗೆ ಪವರ್ ಪುಲ್ ಸ್ಟೆಪ್ ಗಳ ಕಂಪೋಸ್ ಮಾಡಿದ್ದಾರೆ ಟಾಲಿವುಡ್ ಸ್ಟಾರ್ ಕೋರಿಯೋಗ್ರಫರ್ ಶಂಕರ್.

ಇದನ್ನೂ ಓದಿ: ಅಪ್ಪು ಕೊನೆಯ ಚಿತ್ರದ ಅಪರೂಪದ ಫೋಟೋಗಳು, ಹೇಗಿದ್ದಾನೆ ನೋಡಿ ಜೇಮ್ಸ್

ಹೊಸಪೇಟೆಯಿಂದ ಜೇಮ್ಸ್ ಪ್ರಚಾರದ ತೇರು

ಈಗಾಗಲೇ ಅಪ್ಪು ರಾಜ್ಯದಲ್ಲಿ ಜೇಮ್ಸ್ ಫೀವರ್ ಶುರುವಾಗಿದೆ. ಜೊತೆಗೆ ಈ ಫೀವರ್  ಮತ್ತಷ್ಟು ಹೈ ಆಗುವಂತ  ಸಿಹಿ ಸಮಾಚಾರವೊಂದು ಜೇಮ್ಸ್ ಸಿನಿ ಬಳಗದಿಂದ ಹೊರಬಿದ್ದಿದೆ. ಜೇಮ್ಸ್ ಚಿತ್ರವನ್ನು ಗ್ರ್ಯಾಂಡ್​ ಆಗಿ ರಿಲೀಸ್ ಮಾಡಲು ನಿರ್ಮಾಪಕ ಕಿಶೋರ್ ಪ್ಲ್ಯಾನ್​ ಮಾಡಿದ್ದಾರೆ. ದೊಡ್ಮನೆ "ರಾಜಕುಮಾರ"ನನ್ನು ದೇವರಂತೆ ಆರಾಧಿಸುವ ಅಭಿಮಾನಿಗಳ ಸಾಗರವೇ ಇರುವ ವಿಜಯನಗರ ಜಿಲ್ಲೆಯ ಹೊಸಪೇಟೆ ಜಿಲ್ಲೆಯಿಂದ ಜೇಮ್ಸ್ ಪ್ರಚಾರದ ತೇರನ್ನು ಎಳೆಯೋಕೆ ಪ್ಲಾನ್ ಮಾಡಿದ್ದಾರೆ.

ಇದನ್ನೂ ಓದಿ: ಅಂತೆ-ಕಂತೆಗಳನ್ನು ನಂಬಬೇಡಿ.. ನಾವೇ ಎಲ್ಲ ಮಾಹಿತಿ ನೀಡ್ತೇವೆ ಎಂದ ಜೇಮ್ಸ್​ ನಿರ್ಮಾಪಕ!

ಸಿನಿಮಾ ರಿಲೀಸ್​ ದಿನವೇ ‘ಜೇಮ್ಸ್​ ಉತ್ಸವ’!

ಪುನೀತ್ ಅಭಿನಯದ ಜೇಮ್ಸ್​ ಚಿತ್ರದ ರಿಲೀಸ್ ದಿನವೇ, ಜೇಮ್ಸ್ ಉತ್ಸವ ಮಾಡಲು ಚಿತ್ರತಂಡ ಈಗಾಗಲೇ ಡಿಸೈಡ್ ಮಾಡಿದೆ. ಮಾರ್ಚ್ 17 ರಿಂದ ಮಾರ್ಚ್ 20ರ ವರೆಗೆ ನಾಲ್ಕು ದಿನಗಳು ಅಪ್ಪು ಹೆಸರಲ್ಲಿ ದಾಸೋಹ ಕಾರ್ಯಕ್ರಮ ಮಾಡಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಇದು ಅಭಿಮಾನಿಗಳ ಅಭಿಮಾನದ ಆರಾಧನೆಯಾದ್ರೆ. ಪುನೀತ್ ರಾಜ್ ಕುಮಾರ್ ಇಲ್ಲ ಅನ್ನೋ ನೋವು ಅವರ ಅಭಿಮಾನಿಗಳಿಗೆ ಕಾಡದಿರಲಿ ಅಂತ ಅದ್ದೂರಿ ಪ್ರಚಾರದ ಮೂಲಕ ಜೇಮ್ಸ್  ಚಿತ್ರವನ್ನು ರಿಲೀಸ್ ಮಾಡಲು ಚಿತ್ರದ ನಿರ್ದೇಶಕ ಚೇತನ್ ಹಾಗೂ ನಿರ್ಮಾಪಕ ಕಿಶೋರ್ ಪ್ಲ್ಯಾನ್ ಮಾಡಿದ್ದಾರೆ.
Published by:Vasudeva M
First published: