• Home
  • »
  • News
  • »
  • entertainment
  • »
  • James New Poster: `ಜೇಮ್ಸ್​’ ಸಿನಿಮಾದ ಸ್ಪೆಷಲ್​ ಪೋಸ್ಟರ್​ ರಿಲೀಸ್​, ಯೋಧನ ಅವತಾರದಲ್ಲಿ ಅಪ್ಪುನ ಕಂಡು ಫ್ಯಾನ್ಸ್​ ಥ್ರಿಲ್​!

James New Poster: `ಜೇಮ್ಸ್​’ ಸಿನಿಮಾದ ಸ್ಪೆಷಲ್​ ಪೋಸ್ಟರ್​ ರಿಲೀಸ್​, ಯೋಧನ ಅವತಾರದಲ್ಲಿ ಅಪ್ಪುನ ಕಂಡು ಫ್ಯಾನ್ಸ್​ ಥ್ರಿಲ್​!

ಜೇಮ್ಸ್​ ಚಿತ್ರದ ಪೋಸ್ಟರ್​

ಜೇಮ್ಸ್​ ಚಿತ್ರದ ಪೋಸ್ಟರ್​

ಗಣರಾಜ್ಯೋತ್ಸವದ  ದಿವವೇ ಪುನೀತ್​  ರಾಜ್ ಕುಮಾರ್ ಅವರ ಕೊನೆಯ ಚಿತ್ರ ‘ಜೇಮ್ಸ್​’ ಚಿತ್ರದ ಸ್ಪೆಷಲ್​ ಪೋಸ್ಟರ್ ಬಿಡುಗಡೆಯಾಗಿದೆ. ಪುನೀತ್​ ಅವರ ಜನ್ಮದಿನದ ಪ್ರಯುಕ್ತ ಮಾರ್ಚ್​ 17ರಂದು ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ.ಪುನೀತ್​ ಹೀರೋ ಆಗಿ ನಟಿಸಿದ ಕೊನೆಯ ಚಿತ್ರ ‘ಜೇಮ್ಸ್​’  ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇದೆ.

ಮುಂದೆ ಓದಿ ...
  • Share this:

ಪವರ್ ಸ್ಟಾರ್(Power Star)​.. ನಟಸಾರ್ವಭೌಮ.. ರಣವಿಕ್ರಮ.. ರಾಜಕುಮಾರ.. ಯುವರತ್ನ.. ಈ ಸಿನಿಮಾಗಳ ಹೆಸರು ನೆನಪಾದರೆ ಸಾಕು ಹೃದಯವೇ ಕಿವುಚಿದ ಹಾಗೇ ಆಗುತ್ತೆ. ಅಪ್ಪು ನಮ್ಮೊಂದಿಗೆ ಇರಬೇಕಿತ್ತು ಅನ್ನಿಸುತ್ತೆ. ಇನ್ನೂ ಕೂಡ ಕರುನಾಡು ಪುನೀತ್​ ರಾಜ್​ಕುಮಾರ್(Puneeth Rajkumar)​ ಅವರನ್ನು ನೆನೆದು ಕಣ್ಣೀರಿಡುತ್ತಿದೆ. ಅವರು ಕೊನೆಯದಾಗಿ ನಟಿಸಿದ ‘ಜೇಮ್ಸ್​’(James) ಸಿನಿಮಾದ ಹೊಸ ಪೋಸ್ಟರ್​ ಕೂಡ ಬಿಡುಗಡೆಯಾಗಿದೆ. ಗಣರಾಜ್ಯೋತ್ಸವದ  ದಿವವೇ ಪುನೀತ್​  ರಾಜ್ ಕುಮಾರ್ ಅವರ ಕೊನೆಯ ಚಿತ್ರ ‘ಜೇಮ್ಸ್​’ ಚಿತ್ರದ ಸ್ಪೆಷಲ್​ ಪೋಸ್ಟರ್(James Special Poster) ಬಿಡುಗಡೆಯಾಗಿದೆ. ಪುನೀತ್​ ಅವರ ಜನ್ಮದಿನದ ಪ್ರಯುಕ್ತ ಮಾರ್ಚ್​ 17ರಂದು ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ.ಪುನೀತ್​ ಹೀರೋ ಆಗಿ ನಟಿಸಿದ ಕೊನೆಯ ಚಿತ್ರ ‘ಜೇಮ್ಸ್​’  ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಈಗ ಹೊಸದಾಗಿ ರಿಲೀಸ್​ ಆಗಿರುವ ಪೋಸ್ಟರ್​ ಈ ಸಿನಿಮಾದ ಮೇಲಿದ್ದ ನಿರೀಕ್ಷೆಯನ್ನು ದುಪ್ಟಟ್ಟು ಮಾಡಿದೆ. ಈ ಪೋಸ್ಟರ್​ ಕಂಡು ಅಪ್ಪು ಅಭಿಮಾನಿಗಳು ಅಪ್ಪು ವಿ ಮಿಸ್​ ಯೂ(We Miss You) ಅಂತಿದ್ದಾರೆ. ಈ ಸಿನಿಮಾದ ಶೂಟಿಂಗ್​ ಇತ್ತೀಚೆಗೆ ಪೂರ್ಣಗೊಂಡಿತ್ತು. ಈಗ ಗಣರಾಜ್ಯೋತ್ಸವ(Republic Day)ದ ಪ್ರಯುಕ್ತ ಸಿನಿಮಾದಿಂದ ವಿಶೇಷ ಪೋಸ್ಟರ್​ ಒಂದು ರಿಲೀಸ್​ ಆಗಿದೆ. ಅಪ್ಪು ಅಗಲಿಕೆ ನೋವಲ್ಲಿ ಕಾಲ ಕಳೆಯುತ್ತಿರುವ ಅಭಿಮಾನಿಗಳಿಗೆ ಈ ವಿಚಾರ ಖುಷಿ ನೀಡಿದೆ. ಮತ್ತೊಂದೆಡೆ ಈ ಸಂಭ್ರಮವನ್ನು ಅಪ್ಪು ಅವರ ಜೊತೆ ಆಚರಿಸಲು ಇನ್ನೇಂದು ಸಾಧ್ಯವಿಲ್ಲ ಎಂದು ಅಭಿಮಾನಿಗಳು ಬೇಸರ  ವ್ಯಕ್ತಪಡಿಸುತ್ತಿದ್ದಾರೆ.



ಇದನ್ನು ಓದಿ : ಪ್ಯಾನ್​ ಇಂಡಿಯಾ ಸಿನಿಮಾ ಅಖಾಡಕ್ಕೆ ಶಿವಣ್ಣ ಎಂಟ್ರಿ.. ರೆಟ್ರೋ ಗೆಟಪ್​ನಲ್ಲಿ ಮಿಂಚಲಿದ್ದಾರೆ ಸೆಂಚೂರಿ ಸ್ಟಾರ್​!


ಯೋಧನ ಅವತಾರದಲ್ಲಿ ಪುನೀತ್​ ರಾಜ್​ಕುಮಾರ್​!


ಹೌದು, ಗಣರಾಜ್ಯೋತ್ಸವದ ದಿನ ಬಿಡುಗಡೆಯಾಗಿರುವ ಜೇಮ್ಸ್​ ಸಿನಿಮಾದಲ್ಲಿ ಅಪ್ಪು ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್​ ಕಂಡು ಅಭಿಮಾನಿಗಳು ಸಖತ್​ ಥ್ರಿಲ್​ ಆಗಿದ್ದಾರೆ. ಕೈಯಲ್ಲಿ ಗನ್​ ಹಿಡಿದು, ಅಪ್ಪು ನಡೆದುಕೊಂಡು ಬರುತ್ತಿರುವ ಪೋಸ್ಟರ್​ ಇದಾಗಿದೆ. ಗಡಿ ಕಾಯುವ ಸೈನಿಕನಂತೆ ಅಪ್ಪು ಅವರ ಗೆಟಪ್​ ಇದೆ. ಹೀಗಾಗಿ ಜೇಮ್ಸ್​ ಸಿನಿಮಾದಲ್ಲಿ ಅಪ್ಪು ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಅಂತಿದ್ದಾರೆ ಅವರ ಅಭಿಮಾನಿಗಳು.ಆ್ಯಕ್ಷನ್​ ಸಿನಿಮಾಗಳ ಮೂಲಕ ಫೇಮಸ್​ ಆಗಿರುವವರು ನಿರ್ದೇಶಕ ಚೇತನ್​ ಕುಮಾರ್​. ಅದೇ ರೀತಿ, ಪುನೀತ್​ ರಾಜ್​ಕುಮಾರ್​ ಸಿನಿಮಾಗಳಲ್ಲೂ ಭರ್ಜರಿ ಆ್ಯಕ್ಷನ್​ ಇದ್ದೇ ಇರುತ್ತದೆ.


ಇದನ್ನು ಓದಿ : ರಸ್ತೆಗೆ ಪುನೀತ್​ ಹೆಸರಿಡುವುದಕ್ಕೆ ಅಂಬರೀಷ್​ ಅಭಿಮಾನಿಗಳ ಮನಸ್ತಾಪ, ಅಸಲಿಗೆ ನಡೆದಿದ್ದೇನು?


101 ಈಡುಗಾಯಿ ಒಡೆದ ಅಭಿಮಾನಿಗಳು


ಪುನೀತ್​ ರಾಜ್​ಕುಮಾರ್​ ಅವರ ‘ಜೇಮ್ಸ್​’ ಸಿನಿಮಾದ ಹೊಸ ಪೋಸ್ಟರ್​ ರಿಲೀಸ್​ ಆಗುತ್ತಿದ್ದಂತೆ, ಅಪ್ಪು ಅಭಿಮಾನಿಗಳು ಪುನೀತ್​ ಸ್ಮಾರಕದ ಎದುರು 101 ಈಡುಗಾಯಿ ಹೊಡೆದಿದ್ದಾರೆ. ಕಂಠೀರವ ಸ್ಟುಡಿಯೋಗೆ ಅಭಿಮಾನಿಳ ದಂಡೆ ಆಗಮಿಸಿದೆ. ಅಪ್ಪು ನಮ್ಮ ಜೊತೆ ಇಲ್ಲದಿರುವುದನ್ನು ನೆನೆಸಿಕೊಂಡು ಮರುಕ ಪಡುತ್ತಿದ್ದಾರೆ.

Published by:Vasudeva M
First published: