Breaking News: ರಾಜ್ಯಾದ್ಯಂತ `ಜೇಮ್ಸ್’​​ ಸ್ಪೆಷಲ್​ ಶೋಗಳು ಕ್ಯಾನ್ಸಲ್​.. ಅಪ್ಪು ಅಭಿಮಾನಿಗಳಿಗೆ ತೀವ್ರ ಬೇಸರ!

ಏಕಾಏಕಿ 144 ಸೆಕ್ಷನ್ ಹಿನ್ನೆಲೆ ಜೇಮ್ಸ್(James)  ಚಿತ್ರದ ಮಧ್ಯರಾತ್ರಿ ಶೋಗಳು ಕ್ಯಾನ್ಸಲ್​(Mid Night Show Cancel) ಆಗಿದೆ. ಜಾಲಹಳ್ಳಿ ರಸ್ತೆಯ ರಾಕ್ ಲೈನ್ ಮಾಲ್(Rockline Mall)​ನಲ್ಲಿ ತಡರಾತ್ರಿ 9 ಶೋ ಗಳ ಟಿಕೆಟ್ ಬುಕ್ ಆಗಿದ್ದವು.  ಈಗ ಮಧ್ಯರಾತ್ರಿ1:30ಕ್ಕೆ ಆರಂಭವಾಗ ಬೇಕಿದ್ದ ಶೋ ಗಳು ಕ್ಯಾನ್ಸಲ್ ಆಗಿದೆ. ರಾಜ್ಯಾದ್ಯಂತ ಬೆಳಗ್ಗೆ 6 ಗಂಟೆಗೆ ಜೇಮ್ಸ್ ಮೊದಲ ಪ್ರದರ್ಶನ ಆರಂಭವಾಗಲಿದೆ.

ಜೇಮ್ಸ್​ ಕಟೌಟ್​ಗಳು

ಜೇಮ್ಸ್​ ಕಟೌಟ್​ಗಳು

  • Share this:
`ಜೇಮ್ಸ್’(James) ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Power Star Puneeth Rajkumar) ಅಭಿಮಾನಿಗಳು ನಿದ್ದೆ ಬಿಟ್ಟು ಕಾಯುತ್ತಿರುವ ಸಿನಿಮಾ. ಬೆಳ್ಳಿ ತೆರೆ ಮೇಲೆ ‘ಜೇಮ್ಸ್’ ಅಬ್ಬರಿಸೋಕೆ ಕೆಲವೇ ಗಂಟೆಗಳು ಬಾಕಿ ಇದ್ದು, ರಾಜ್ಯದ ಎಲ್ಲಾ ಚಿತ್ರಮಂದಿರಗಳ ಮುಂದೆ ಹೌಸ್ ಪುಲ್ ಬೋರ್ಡ್(Houseful Board) ರಾರಾಜಿಸುವದಂತೂ ಪಕ್ಕಾ ಆಗಿದೆ. ಆದರೆ, ಇದೀಗ ಅಪ್ಪು ಅಭಿಮಾನಿಗಳಿಗೆ ಒಂದು ವಿಚಾರ ಬೇಸರ ಮೂಡಿಸಿದೆ. ನಾಳೆ ಕರ್ನಾಟಕ ಬಂದ್(Karnataka Bundh)​ಗೆ ಹಲವು ಸಂಘಟನೆಗಳು ಕರೆಕೊಟ್ಟಿವೆ. ಇದರಿಂದ ರಾಜ್ಯದಲ್ಲಿ 144 ಸೆಕ್ಷೆನ್​ ಮೊದಲಿನಿಂದಲೂ ಇದೆ. ಇದೀಗ ಏಕಾಏಕಿ 144 ಸೆಕ್ಷನ್ ಹಿನ್ನೆಲೆ ಜೇಮ್ಸ್(James)  ಚಿತ್ರದ ಮಧ್ಯರಾತ್ರಿ ಶೋಗಳು ಕ್ಯಾನ್ಸಲ್​(Mid Night Show Cancel) ಆಗಿದೆ. ಜಾಲಹಳ್ಳಿ ರಸ್ತೆಯ ರಾಕ್ ಲೈನ್ ಮಾಲ್(Rockline Mall)​ನಲ್ಲಿ ತಡರಾತ್ರಿ 9 ಶೋ ಗಳ ಟಿಕೆಟ್ ಬುಕ್ ಆಗಿದ್ದವು.

ಜೇಮ್ಸ್​ ಸ್ಪೆಷಲ್​ ಶೋಗಳು ಕ್ಯಾನ್ಸಲ್​!

ಈಗ ಮಧ್ಯರಾತ್ರಿ1:30ಕ್ಕೆ ಆರಂಭವಾಗ ಬೇಕಿದ್ದ ಶೋ ಗಳು ಕ್ಯಾನ್ಸಲ್ ಆಗಿದೆ. ರಾಜ್ಯಾದ್ಯಂತ ಬೆಳಗ್ಗೆ 6 ಗಂಟೆಗೆ ಜೇಮ್ಸ್ ಮೊದಲ ಪ್ರದರ್ಶನ ಆರಂಭವಾಗಲಿದೆ. ರಾಜ್ಯದಲ್ಲಿ ನಾಳೆ ಬಂದ್​ ಮಾಡುವಂತೆ ಹಲವು ಮುಸ್ಲಿಂ ಸಮುದಾಯದವರು ಕರೆ ಕೊಟ್ಟಿದ್ದಾರೆ. ಹೀಗಾಗಿ ಮುಂಜಾಗ್ರತ ಕ್ರಮವಾಗಿ ಮಧ್ಯರಾತ್ರಿ ಶೋಗಳನ್ನು ಕ್ಯಾನ್ಸಲ್​ ಮಾಡಲಾಗಿದೆ. ನಾಳೆ ಬೆಳಗ್ಗೆ  6 ಗಂಟೆಗೆ ಮೊದಲ ಶೋ ಆರಂಭವಾಗಲಿದೆ. ಆದರೆ, ರಾಜ್ಯಾದ್ಯಂತ ಈಗಾಗಲೇ ತಡರಾತ್ರಿ ಶೋಗಳು ಬುಕ್​ ಆಗಿದ್ದು, ಅಭಿಮಾನಿಗಳು ಜೇಮ್ಸ್​ ಸಿನಿಮಾವನ್ನು ನೋಡಲು ಕಾತುರದಿಂದ ಕಾಯುತ್ತಿದ್ದರು.

ಮೈಸೂರಿನಲ್ಲಿ ಹೆಲಿಕಾಪ್ಟರ್​ನಿಂದ ಪುಷ್ಪಾರ್ಷನೆ ಮಾಡಲು ಅನುಮತಿ!

ನಾಳೆ ಪುನೀತ್ ರಾಜ್‍ಕುಮಾರ್ ಜೇಮ್ಸ್ ಚಿತ್ರ ಬಿಡುಗಡೆ ಹಿನ್ನಲೆಯಲ್ಲಿ, ನಾಳೆ ಬಿಎಂಹೆಚ್ ಮಾಲ್ ಮೇಲೆ ಹೆಲಿಕಾಪ್ಟರ್ ಹಾರಾಟಕ್ಕೆ ಅನುಮತಿ ನೀಡಲಾಗಿದೆ.ಮೈಸೂರಿನ ಜಯಲಕ್ಷ್ಮಿ ಪುರಂ ನಲ್ಲಿಇರುವ ಮಾಲ್​ನಲ್ಲಿ ಅಪ್ಪು ಅಭಿಮಾನಿಗಳಿಂದ ಹೆಲಿಕಾಪ್ಟರ್ ಮೂಲಕ ಪುನೀತ್ ರಾಜ್‍ಕುಮಾರ್ ಕಟೌಟ್ ಗೆ ಪುಷ್ಬಾರ್ಚನೆ ಮಾಡಲಿದ್ದಾರೆ.ನಾಳೆ ಬೆಳಿಗ್ಗೆ ೧೧ ಗಂಟೆಗೆ ಪುಷ್ಬಾರ್ಚನೆ ಕಾರ್ಯ ನಡೆಯಲಿದೆ ಅಪ್ಪು ಉತ್ಸವ ಹೆಸರಿನ ಪುಷ್ಬಾರ್ಚನೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಅನುಮತಿ ಪೊಲೀಸ್ ಇಲಾಖೆ  ಸಹ ಅನುಮತಿ ನೀಡಿದೆ

ಇದನ್ನೂ ಓದಿ: ಸೈಡಿಗ್​ ಹೋಗು.. ಸೈಡಿಗ್​ ಹೋಗು `ಜೇಮ್ಸ್​’ ಬರ್ತವ್ರೆ.. ರೆಕಾರ್ಡ್​ಗಳನ್ನೆಲ್ಲ ಉಡೀಸ್​​ ಮಾಡ್ತಾರೆ!

ಅಪ್ಪನ ಚಿತ್ರವನ್ನು ತಡರಾತ್ರಿಯೇ ನೋಡಲಿದ್ದಾರೆ ಮಗಳು!

ಅಪ್ಪನ ಕೊನೆಯ ಚಿತ್ರ ಜೇಮ್ಸ್​ ಸಿನಿಮಾವನ್ನು ಇಂದು ಮಧ್ಯರಾತ್ರಿಯೇ  ಅಪ್ಪು ಹಿರಿಯ ಪುತ್ರಿ ಧೃತಿ ನೋಡಲಿದ್ದಾರೆ. ಅಮೆರಿಕಾದಲ್ಲಿರುವ ಅಪ್ಪು ಪುತ್ರಿ ಇಂದು ರಾತ್ರಿಯೇ ಜೇಮ್ಸ್​ ಚಿತ್ರ ನೋಡಲಿದ್ದಾರೆ. ಅಮೆರಿಕಾದ ಧೃತಿ ನಿವಾಸದಲ್ಲಿಯೇ ಸಿನಿಮಾ ನೋಡಲು ವ್ಯವಸ್ಥೆ ಮಾಡಲಾಗಿದೆ.

ರಜೆ ಕೋರಿ ಪತ್ರ ಬರೆದ ಎಂಪ್ಲಾಯಿಗಳು!

ಇದೀಗ ಎಲ್ಲ ಐಟಿ ಕಂಪನಿಗಳು ಮಾರ್ಚ್ 17ರಂದು ರಜೆ ಕೋರಿ ಮನವಿ ಪತ್ರ ಸಲ್ಲಿಸುತ್ತಿದ್ದಾರೆ. ನಾಳೆ ಅಪ್ಪು ಬಾಸ್ ನೋಡಲು ಹೋಗಲೇಬೇಕು ರಜೆ ಕೊಡಿ ಎಂದು ಬರೆದಿರುವ ಪತ್ರಗಳು ಸಖತ್​ ವೈರಲ್​ ಆಗುತ್ತಿದೆ.

ಇದನ್ನೂ ಓದಿ: RRR ಚಿತ್ರಕ್ಕೆ ಸಿಕ್ಕ ಅನುಮತಿ Jamesಗೆ ಯಾಕಿಲ್ಲ? ಸರ್ಕಾರದ ನಡೆ ವಿರುದ್ಧ ಅಪ್ಪು ಫ್ಯಾನ್ಸ್​ ಫುಲ್​ ಗರಂ

ಆರ್​ಆರ್​ಆರ್​ಗೆ ಸಿಕ್ಕ ಅನುಮತಿ ಜೇಮ್ಸ್​ಗೆ ಯಾಕಿಲ್ಲ!

ಚಿಕ್ಕಬಳ್ಳಾಪುರದಲ್ಲಿ ಮೊದಲು ಮಾ.15 ರಿಂದ 20 ರ ವರೆಗೂ 144 ಘೋಷಣೆ ಮಾಡಲಾಗಿದೆ. 144, ಸೆಕ್ಷನ್ ಘೋಷಸಿದ ಕೆಲವು ಘಂಟೆಗಳಲ್ಲಿ ಮತ್ತೆ ಹೊಸ ನಿಯಮ ಜಾರಿ ಮಾಡಲಾಗಿದೆ. ಮಾ. 20 ರವರೆಗೂ ಇದ್ದ 144ಸೆಕ್ಷನ್ ಅನ್ನು ಮಾ.17 ರವರೆಗೆ ಜಿಲ್ಲಾಡಳಿತ ಕಡಿತ ಮಾಡಿದೆ. ಪರಭಾಷ ಚಿತ್ರದ ಸೆಲೆಬ್ರೇಶನ್ಗೆ  ಸಿಕ್ಕ ಅನುಮತಿ ಕನ್ನಡದ ಚಿತ್ರಕ್ಕೆ ಯಾಕೆ ಸಿಕ್ಕಿಲ್ಲ ಅಂತ ಅಪ್ಪು ಅಭಿಮಾನಿಗಳು ಸರ್ಕಾರದ ನಡೆ ವಿರುದ್ಧ ಸಖತ್​ ಗರಂ ಆಗಿದ್ದಾರೆ.
Published by:Vasudeva M
First published: