James: ಸೈಡಿಗ್​ ಹೋಗು.. ಸೈಡಿಗ್​ ಹೋಗು `ಜೇಮ್ಸ್​’ ಬರ್ತವ್ರೆ.. ರೆಕಾರ್ಡ್​ಗಳನ್ನೆಲ್ಲ ಉಡೀಸ್​​ ಮಾಡ್ತಾರೆ!

ಅಪ್ಪುಇಲ್ಲದ ನೋವಿನ ನಡುವೆಯೂ ಪವರ್ ಸ್ಟಾರ್ ಹುಟ್ಟು ಹಬ್ಬ(Power Star Puneeth Rajkumar Birthday)ಕ್ಕೆ ‘ಜೇಮ್ಸ್’ ರಿಲೀಸ್ ಆಗುತ್ತಿರುವ ಕಾರಣ ಈ ಚಿತ್ರಕ್ಕೆ ಪುಲ್​ ಡಿಮ್ಯಾಂಡ್ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಹೆಚ್ಚಿನ ಶೋ(Show)ಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಪುನೀತ್​ ರಾಜ್​ಕುಮಾರ್​​

ಪುನೀತ್​ ರಾಜ್​ಕುಮಾರ್​​

  • Share this:
‘ಜೇಮ್ಸ್’(James) ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power Star Puneeth Rajkumar) ಅಭಿಮಾನಿಗಳು ನಿದ್ದೆ ಬಿಟ್ಟು ಕಾಯುತ್ತಿರುವ ಸಿನಿಮಾ. ಬೆಳ್ಳಿ ತೆರೆ ಮೇಲೆ ‘ಜೇಮ್ಸ್’ ಅಬ್ಬರಿಸೋಕೆ ಕೆಲವೇ ಗಂಟೆಗಳು ಬಾಕಿ ಇದ್ದು, ರಾಜ್ಯದ ಎಲ್ಲಾ ಚಿತ್ರಮಂದಿರಗಳ ಮುಂದೆ ಹೌಸ್ ಪುಲ್ ಬೋರ್ಡ್ (Houseful Board) ರಾರಾಜಿಸುವದಂತೂ ಪಕ್ಕಾ ಆಗಿದೆ. ಚಿತ್ರ ತಂಡದ ಮಾಹಿತಿ ಪ್ರಕಾರ ನಾಳೆ ಒಂದೇ ದಿನ ಸುಮಾರು 2000 ಸ್ಕ್ರೀನ್​​ಗಳಲ್ಲಿ‘ಜೇಮ್ಸ್’ ರಿಲೀಸ್ ಆಗಲಿದೆ. ಅಪ್ಪುಇಲ್ಲದ ನೋವಿನ ನಡುವೆಯೂ ಪವರ್ ಸ್ಟಾರ್ ಹುಟ್ಟು ಹಬ್ಬ(Power Star Puneeth Rajkumar Birthday)ಕ್ಕೆ ‘ಜೇಮ್ಸ್’ ರಿಲೀಸ್ ಆಗುತ್ತಿರುವ ಕಾರಣ ಈ ಚಿತ್ರಕ್ಕೆ ಪುಲ್​ ಡಿಮ್ಯಾಂಡ್ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಹೆಚ್ಚಿನ ಶೋ(Show)ಗಳಿಗೆ ಅವಕಾಶ ಕಲ್ಪಿಸಲಾಗಿದೆ. ವಿಶೇಷ ಅಂದರೆ ನಾಳಿನ ಎಲ್ಲಾ ಶೋಗಳ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ (Ticket Sold Out) ಆಗಿದ್ದು, ಬರೋಬ್ಬರಿ 2000 ಶೋಗಳ ಟಿಕೆಟ್ ಸೇಲ್ ಆಗಿವೆ.

ಆಲ್​ ಟೈಮ್​ ರೆಕಾರ್ಡ್ ಕ್ರಿಯೇಟ್​ ಮಾಡಿದ ಜೇಮ್ಸ್​!

ಮುಂಗಡ ಟಿಕೆಟ್​ ಬುಕ್ಕಿಂಗ್​​ನಲ್ಲಿ ಸ್ಯಾಂಡಲ್​ವುಡ್​ನ ಆಲ್ ಟೈಮ್ ರೆಕಾರ್ಡ್ ಅಂತಿದ್ದಾರೆ ಗಾಂಧಿನಗರ ಸಿನಿಪಂಡಿತರು. ಅಲ್ಲದೆ ನಾಳೆ ಜೇಮ್ಸ್ ಚಿತ್ರ ಮೊದಲ ದಿನ 30ಕೋಟಿ ಗಳಿಕೆ ಮಾಡುವುದರಲ್ಲಿ ಡೌಟೇ ಇಲ್ಲ ಅನ್ನುತ್ತಿದ್ದಾರೆ ಅಪ್ಪು ಅಭಿಮಾನಿಗಳು. ಇತಿಹಾಸದಲ್ಲಿ ಮೈಸೂರಿನಲ್ಲಿ ಮೊದಲ ದಿನ 80 ಶೋ ಫುಲ್​​ ಆದ ದಾಖಲೆಯೇ ಇಲ್ಲ. ಆದರೆ, ಜೇಮ್ಸ್ ಬರೋಬ್ಬರಿ 85 ಶೋಗಳ ಟಿಕೆಟ್ ಈಗಾಗಲೇ ಅಭಿಮಾನಿಗಳ ಕೈ ಸೇರಿವೆ. ಅಲ್ಲದೆ ಶಿವಮೊಗ್ಗದಲ್ಲಿ ನಾಳೆ 28 ಶೋಗಳು ಹೌಸ್ ಪುಲ್ ಆಗಿದೆ. ಉತ್ತರ ಕರ್ನಾಟಕದಲ್ಲಿ ಜೇಮ್ಸ್ ಬಿರುಗಾಳಿ ಚಿತ್ರಮಂದಿರಗಳ ಸುತ್ತುವರೆದಿದೆ.

ಮೆಜೆಸ್ಟಿಕ್​​ನ 2 ಚಿತ್ರಮಂದಿರಗಲ್ಲಿ ಜೇಮ್ಸ್​ ರಿಲೀಸ್!

ಅಲ್ಲದೆ ಫಸ್ಟ್ ಟೈಂ ಪುನೀತ್ ರಾಜ್​​ಕುಮಾರ್ ಅಭಿನಯದ ಸಿನಿಮಾ ಕೆಜಿ ರಸ್ತೆಯಲ್ಲಿ ಎರಡು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಮೆಜೆಸ್ಟಿಕ್​ನ ತ್ರಿವೇಣಿ ಹಾಗೂ ಅನುಪಮ ಚಿತ್ರಮಂದಿರಗಳಲ್ಲಿ ಜೇಮ್ಸ್ ರಿಲೀಸ್ ಆಗಲಿದ್ದು, ಎರಡು ಚಿತ್ರಮಂದಿರಗಳಲ್ಲಿ ನಾಳಿನ ಎಲ್ಲಾ ಶೋಗಳು ಪುಲ್ ಹೌಸ್ ಆಗಿವೆ. ಇನ್ನು ಮಾಗಡಿ ರಸ್ತೆಯ ವೀರೇಶ ಚಿತ್ರಮಂದಿರದಲ್ಲಿ ನಾಳೆ 6 ಶೋಗಳಿದ್ದು, ಆರು ಶೋಗಳ ಟಿಕೆಟ್ ಒಂದು ದಿನ ಮುಂಚೆಯೇ ಸೋಲ್ಡ್ ಔಟ್ ಆಗಿವೆ.

ಇದನ್ನೂ ಓದಿ: RRR ಚಿತ್ರಕ್ಕೆ ಸಿಕ್ಕ ಅನುಮತಿ Jamesಗೆ ಯಾಕಿಲ್ಲ? ಸರ್ಕಾರದ ನಡೆ ವಿರುದ್ಧ ಅಪ್ಪು ಫ್ಯಾನ್ಸ್​ ಫುಲ್​ ಗರಂ!

ಪಕ್ಕದ ರಾಜ್ಯದಲ್ಲೂ ಅಪ್ಪು ಹವಾ!

ಇದು ಕರ್ನಾಟಕದಲ್ಲಿ ‘ಜೇಮ್ಸ್’  ಹವಾ. ಇನ್ನೂ ಅಕ್ಕ ಪಕ್ಕದ ರಾಜ್ಯದಲ್ಲೂ ‘ಜೇಮ್ಸ್’ ಅಬ್ಬರ ಜೋರಾಗಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ 300 ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಜೇಮ್ಸ್ ರಿಲೀಸ್ ಆಗುತ್ತಿದೆ. ಅಲ್ಲದೆ ಕೇರಳ, ತಮಿಳು ನಾಡು,ಹಾಗೂ ಮುಂಬೈನಲ್ಲೂ ಜೇಮ್ಸ್ ಜಾತ್ರೆ ಜೋರಾಗಿದೆ. ಒಟ್ಟಿನಲ್ಲಿ ರಾಜ್ಯದ ಮೂಲೆಮೂಲೆಯಲ್ಲೂ ಜೇಮ್ಸ್ ಹವಾ ಮತ್ತು ಹವಾಮಾನ ಬಲು ಜೋರಾಗಿದೆ.

ಸಾಗರದಾಚೆಯೂ ಅಬ್ಬರಿಸಲಿದ್ದಾರೆ ‘ಜೇಮ್ಸ್​’

ಇದಲ್ಲದೆ ಜೇಮ್ಸ್ ಸಾಗರದಾಚೆಯು ಅಬ್ಬರಿಸಲು ಸಜ್ಜಾಗಿದ್ದು, ಕೆನಡಾ, ಆಸ್ಟ್ರೇಲಿಯಾ, ಅಮೆರಿಕ, ದುಬೈನಲ್ಲೂ ನಾಳೆ ಜೇಮ್ಸ್ ದರ್ಶನವಾಗಲಿದೆ. ವಿಶೇಷ ಅಂದ್ರೆ ಆಸ್ಟ್ರೇಲಿಯಾದಲ್ಲಿ 150 ಸ್ಕ್ರೀನ್​ಗಳಲ್ಲಿ ಜೇಮ್ಸ್ ರಿಲೀಸ್ ಆಗಲಿದೆ. ಒಟ್ಟಿನಲ್ಲಿ ಜೇಮ್ಸ್ ಕ್ರಿಯೇಟ್ ಮಾಡಿರುವ ಹೈಪ್ ನೋಡಿದ್ರೆ ಒಂದೇ ವಾರದಲ್ಲಿ ಜೇಮ್ಸ್ 100 ಕೋಟಿ ಕ್ಲಬ್ ಸೇರೋದು ಪಕ್ಕಾ ಅಂತಿದ್ದಾರೆ ಸಿನಿಮಾ ಪಂಡಿತರು.

ಇದನ್ನೂ ಓದಿ: ಅಪ್ಪು ಹುಟ್ಟುಹಬ್ಬಕ್ಕೂ ಮುನ್ನ ಡಬಲ್ ಗಿಫ್ಟ್​! `ಪವರಿಸಮ್’ - `ಮಹಾನುಭಾವ’ ಸಾಂಗ್ ರಿಲೀಸ್

ಐವರು ಮಕ್ಕಳಿಗೆ ಪುನೀತ್​ ಹೆಸರು ನಾಮಕರಣ!

ಸ್ಯಾಂಡಲ್‌ವುಡ್ ನಟಿ ತಾರಾ ಪುನೀತ್ ಅವರ ಹೆಸರಲ್ಲಿ ಐದು ಮಕ್ಕಳಿಗೆ ನಾಮಕರಣ ಮಾಡಿದ್ದಾರೆ. ಇಂತದ್ದೊಂದು ಸಮಾರಂಭಕ್ಕೆ ಇವತ್ತು ರಾಜ್ ಕುಟುಂಬದವರು ಸಾಕ್ಷಿಯಾಗಿದ್ದಾರೆ. ನಗರದ ಕಾಕ್ಸ್ ಟೌನ್‌ನಲ್ಲಿ ಜನಿಸಿರುವ ಐದು ಮಕ್ಕಳಿಗೆ ಪುನೀತ್ ರಾಜ್‌ ಕುಮಾರ್ ಎಂದು ನಾಮಕರಣ ಮಾಡಿದ್ದಾರೆ. ಪುನೀತ್ ಹೆಸರನ್ನು ಮಕ್ಕಳಿಗೆ ಇಡೋದು ಈ ಮಕ್ಕಳ ಪೋಷಕರ ಕನಸು ಕೂಡ ಆಗಿತ್ತು. ಅದರಂತೆ ನಟಿ ತಾರ ಇಂದು ಆಸ್ಪತ್ರೆ ಸಿಬ್ಬಂದಿಗಳು ಹಾಗೂ ಪೋಷಕರ ಸಮ್ಮುಖದಲ್ಲಿ ಐವರು ಮಕ್ಕಳ ಕಿವಿಯಲ್ಲಿ ಪುನೀತ್ ರಾಜ್‌ಕುಮಾರ್ ಎಂದು ಹೆಸರು ಹೇಳುವ ಮೂಲಕ ನಾಮಕರಣ ಮಾಡಿದ್ದಾರೆ.
Published by:Vasudeva M
First published: