ಪುನೀತ್​ ಇಲ್ಲದೇ ‘ಜೇಮ್ಸ್​’ ಶೂಟಿಂಗ್​ ರಿಸ್ಟಾರ್ಟ್​: ಕಣ್ಣೀರಿಡುತ್ತಲೇ ಕೆಲ್ಸ ಮಾಡ್ತಿರೋ ಚಿತ್ರತಂಡ!

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಇಲ್ಲದೇ ಜೇಮ್ಸ್​ ಚಿತ್ರ ಶೂಟಿಂಗ್​ ಮತ್ತೆ ಆರಂಭವಾಗಿದೆ. ಕಣ್ಣೀರು ಹಾಕುತ್ತಲೇ ಜೇಮ್ಸ್​ ಚಿತ್ರತಂಡ ಕೆಲಸ ಮಾಡ್ತಿದೆ. ಅಪ್ಪು ಅವರನ್ನು ಮಿಸ್​​ ಮಾಡಿಕೊಳ್ಳುತ್ತಿದ್ದೇವೆ ಅಂತ ಚಿತ್ರತಂಡ ಹೇಳಿದೆ.

ಜೇಮ್ಸ್​ ಚಿತ್ರದಲ್ಲಿ ಪುನೀತ್​ ರಾಜ್​ಕುಮಾರ್​

ಜೇಮ್ಸ್​ ಚಿತ್ರದಲ್ಲಿ ಪುನೀತ್​ ರಾಜ್​ಕುಮಾರ್​

  • Share this:
ಅಪ್ಪು(Appu) ಅವರ ಡ್ರೀಮ್​ ಪ್ರಾಜೆಕ್ಟ್​ ಗಂಧದ ಗುಡಿ(Gandhada Gudi) ಸಿನಿಮಾದ ಟೀಸರ್​​ ಬಿಡುಗಡೆಯಾಗುದೆ. ಅಭಿಮಾನಿಗಳು ಪುನೀತ್ ರಾಜ್​ಕುಮಾರ್​(Puneeth Rajumar) ಈ ಸಮಯದಲ್ಲಿ ನಮ್ಮೊಂದಿಗೆ ಇಲ್ಲ ಎಂದು ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಅಪ್ಪು ಅವರನ್ನು ನಮ್ಮಿಂದ ದೂರ ಮಾಡಿದ್ದಕ್ಕೆ ದೇವರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಮತ್ತೆ ಅಪ್ಪು ಅವರನ್ನು ತೆರೆ ಮೇಲೆ ನೋಡುವ ಭಾಗ್ಯ ಸಿಕ್ಕಿತು ಎಂದು ಖುಷಿ ಪಡುವುದಾ? ಇಲ್ಲ ಅಪ್ಪು ನಮ್ಮೊಂದಿಗೆ ಇಲ್ಲ ಅಂತ ದುಖಃ ಪಡಬೇಕಾ ಅಂತ ಕಣ್ಣೀರುಡುತ್ತಿದ್ದಾರೆ. ಈ ಮಧ್ಯೆ ಗಂಧದ ಗುಡಿ 2022ರಲ್ಲಿ ಚಿತ್ರಮಂದಿರಗಳಲ್ಲೇ ರಿಲೀಸ್​ ಆಗಲಿದೆ. ಅಪ್ಪು ಅವರು ಮತ್ತೊಂದು ಚಿತ್ರ 2022ರಲ್ಲೇ ತೆರೆಗೆ ಬರಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಅಪ್ಪು ನಟಿಸಿದ್ದ ಜೇಮ್ಸ್(James)​ ಚಿತ್ರ ಶೇಕಡಾ 80ರಷ್ಟು ಮುಗಿದಿತ್ತು. ಕೆಲ ಸಣ್ಣ ಪುಟ್ಟ ಟಾಕಿ ಪೋಷನ್​ಗಳು ಮಾತ್ರ ಬಾಕಿ ಇತ್ತು. ಆದರೆ, ವಿಧಿಯಾಟಕ್ಕೆ ಅಪ್ಪು ನಮ್ಮನ್ನೆಲ್ಲ ಬಿಟ್ಟು ದೂರದ ಊರಿಗೆ ಹೋಗಿದ್ದರು. ಅಪ್ಪು ಅವರ ಕಡೆಯ ಕಮರ್ಷಿಯಲ್​ ಸಿನಿಮಾ(Commercial Movie) ಬಿಡುಗಡೆಯಾಗೇ ಆಗುತ್ತೆ ಅಂತ ಚಿತ್ರದ ನಿರ್ದೇಶಕ ಚೇತನ್(Chethan)​ ಅಪ್ಪು ಅವರ ಅಭಿಮಾನಿಗಳಿಗೆ ಭರವಸೆ ನೀಡಿದ್ದರು. ಇದೀಗ ಆ ಕಾರ್ಯಗಳು ನಡೆಯುತ್ತಿವೆ. ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಇಲ್ಲದೇ ಜೇಮ್ಸ್​ ಚಿತ್ರ ಶೂಟಿಂಗ್​ ಮತ್ತೆ ಆರಂಭವಾಗಿದೆ. ಕಣ್ಣೀರು ಹಾಕುತ್ತಲೇ ಜೇಮ್ಸ್​ ಚಿತ್ರತಂಡ ಕೆಲಸ ಮಾಡ್ತಿದೆ. ಅಪ್ಪು ಅವರನ್ನು ಮಿಸ್​​ ಮಾಡಿಕೊಳ್ಳುತ್ತಿದ್ದೇವೆ ಅಂತ ಚಿತ್ರತಂಡ ಹೇಳಿದೆ.

ಮೊದಲ ಬಾರಿಗ ಅಪ್ಪುಗೆ ಆಕ್ಷನ್​ ಕಟ್​ ಹೇಳಿದ್ದ ಚೇತನ್​!

ನಿರ್ದೇಶಕ ಚೇತನ್ ಕುಮಾರ್  'ಜೇಮ್ಸ್’ ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ಪುನೀತ್‍ಗೆ ಆ್ಯಕ್ಷನ್ ಕಟ್ ಹೇಳಿದ್ದರು. ಈ ಚಿತ್ರದಲ್ಲಿ ಪುನೀತ್‌ ವಿಶೇಷ ಸ್ಟಂಟ್ಸ್‌, ಹೈವೋಲ್ಟೇಜ್‌ ಆ್ಯಕ್ಷನ್‌ ಜೊತೆಗೆ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದ ಟಾಕಿ ಪೋಷನ್ ಶೂಟಿಂಗ್ ಬಾಕಿ ಇತ್ತು. ಹಾಗಾಗಿ ಪುನೀತ್‌ ಇಲ್ಲದೇ ಚಿತ್ರೀಕರಣವನ್ನು  ಚಿತ್ರತಂಡ ಶುರು ಮಾಡಿದ್ದಾರೆ. ಅಪ್ಪು ಇಲ್ಲದೆ ಚಿತ್ರೀಕರಣ ಶುರು ಮಾಡಿದ್ದಕ್ಕೆ ಕಥೆಯಲ್ಲಿ ಏನಾದರೂ ಬದಲಾವಣೆ ಇರಬಹುದಾ ಅನ್ನುವ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಇದನ್ನು ಓದಿ: `ಗಂಧದ ಗುಡಿ’ಯಲ್ಲಿ ಅಪ್ಪು ಜೀವಂತ: ಚಿತ್ರಮಂದಿರದಲ್ಲೇ ರಿಲೀಸ್ ಆಗುತ್ತೆ ಪುನೀತ್​ ಡ್ರೀಮ್​​ ಪ್ರಾಜೆಕ್ಟ್​!

ಅಪ್ಪು ಬರ್ತ್​ಡೇಗೆ ಸಿನಿಮಾ ರಿಲೀಸ್​ ಮಾಡುವ ಪ್ಲ್ಯಾನ್​​

ಪುನೀತ್ ಹುಟ್ಟುಹಬ್ಬದ ದಿನ ಮಾರ್ಚ್ 17ಕ್ಕೆ 'ಜೇಮ್ಸ್‌' ಸಿನಿಮಾ‌ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಚಿತ್ರದ ಸ್ಯಾಟಲೈಟ್ ಹಕ್ಕುಗಳು ಈಗಾಗಲೇ 15 ಕೋಟಿಗೆ ಮಾರಾಟವಾಗಿದೆ. ಚಿತ್ರದ ನಿರ್ದೇಶಕ ಚೇತನ್​ ಅಪ್ಪು ಅವರ ಹುಟ್ಟುಹಬ್ಬದ ದಿನ ಅವರ ಅಭಿಮಾನಿಗಳಿಗೆ ಬಹುದೊಡ್ಡ ಗಿಫ್ಟ್ ನೀಡಬೇಕೆಂದು ‘ಜೇಮ್ಸ್​’ ಚಿತ್ರದ ಕೆಲಸಗಳನ್ನು ವೇಗವಾಗಿ ಮಾಡುತ್ತಿದ್ದಾರೆ. ಅಪ್ಪು ಅವರ ಮತ್ತೊಂದು ಸಿನಿಮಾ ಕೂಡ ಅನೌನ್ಸ್​ ಆಗಿತ್ತು. ಲೂಸಿಯಾ ಪವನ್​ ನಿರ್ದೇಶನ ದ್ವಿತ್ವ ಸಿನಿಮಾ ಶೂಟಿಂಗ್​ ಶುರುವಾಗುವ ಮುನ್ನ ಅಪ್ಪು ಇಹಲೋಕ ತ್ಯಜಿಸಿದ್ದರು.

ಇದನ್ನು ಓದಿ : ಡಿಫರೆಂಟ್ ಆಗಿ ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಿದ ಡೇವಿಡ್ ವಾರ್ನರ್: ವಿಡಿಯೋ ನೋಡಿ
 ನಿರ್ದೇಶಕ ಚೇತನ್​ ಪೋಸ್ಟ್​ ವೈರಲ್​

ಈ ಹಿಂದೆ ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಪುನೀತ್ ಜೊತೆಗಿನ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದು, ಜನುಮಕ್ಕಾಗುವಷ್ಟು ನೆನಪುಗಳನ್ನು ಕೊಟ್ಟಿದ್ದೀರಿ. ಪ್ರೋತ್ಸಾಹಿಸಿ ಬೆನ್ನು ತಟ್ಟಿದ್ದೀರಿ. ನೀವಿಲ್ಲ ಎಂದು ಊಹಿಸಿಕೊಳ್ಳುವುದು ಅಸಾಧ್ಯ . ಕನ್ನಡದ ರಾಯಭಾರಿಯಾಗಿ ,ಅಗೋಚರ ಶಕ್ತಿ ಯಾಗಿ ನೀವು ನಮ್ಮನ್ನ ಹರಸುತ್ತೀರಿ,ಮುನ್ನಡೆಸುತ್ತಿರಿ. ನಿಮ್ಮ ನೆನಪುಗಳು ನನ್ನೊಳಗೆ ಸದಾ ಜೀವಂತ. ಜನುಮ ಜನುಮಕ್ಕೂ ಚಿರ ಋಣಿ ಎಂದು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಈ ವಿಡಿಯೋ ಸಖತ್​ ವೈರಲ್​ ಆಗಿತ್ತು.
Published by:Vasudeva M
First published: