ಇಡೀ ಕರುನಾಡ ಜನರು ಕಾತುರದಿಂದ ಕಾಯುತ್ತಿರೋ ಸಿನಿಮಾ ಜೇಮ್ಸ್,(James) ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Puneeth Rajkumar) ಅಭಿನಯದ ಕೊನೆಯ ಚಿತ್ರ ಜೇಮ್ಸ್ ಬಿಡುಗಡೆಗೆ ಅಭಿಮಾನಿಗಳು (Fans) ಕಾಯ್ತಿದ್ದಾರೆ. ಮಾರ್ಚ್ 17ಕ್ಕೆ ಚಿತ್ರ ಬಿಡುಗಡೆ ಪಕ್ಕಾ ಆಗಿದೆ. ಇಂದು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಅಭಿಮಾನಿಗಳಿಗೆ ವಿಶೇಷ ದಿನ. ಇಂದು ‘ಜೇಮ್ಸ್’ ಸಿನಿಮಾ ‘ಟ್ರೇಡ್ ಮಾರ್ಕ್’ (Trade Mark) ಎಂಬ ಸಾಂಗ್ ಶಿವರಾತ್ರಿ (Shivaratri) ಹಿನ್ನೆಲೆ ರಿಲೀಸ್ ಆಗಿದೆ. ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಯೂಟ್ಯೂಬ್(Youtube)ನಲ್ಲಿ ಅಬ್ಬರಿಸುತ್ತಿದೆ. ಇನ್ನು ಈ ಹಾಡು ‘ಟ್ರೇಡ್ ಮಾರ್ಕ್’ ಅನ್ನೋ ಸಾಹಿತ್ಯದಿಂದ ಶುರುವಾಗಲಿದ್ದು, ಚರಣ್ ರಾಜ್ (Charan Raj) ಸಂಗೀತಕ್ಕೆ ಚೇತನ್ (Chetan) ಸಾಹಿತ್ಯ ಬರೆದಿದ್ದಾರೆ. ಅಲ್ಲದೆ ಈ ಹಾಡಿಗಾಗಿ ಬೆಂಗಳೂರಿನಲ್ಲಿ ಅದ್ದೂರಿ ವೆಚ್ಚದ ಸೆಟ್ ಹಾಕಿ ಆ ಕಲರ್ ಪುಲ್ ಸೆಟ್ಗಳಲ್ಲಿ ಪವರ್ ಸ್ಟಾರ್ ಗೆ ಪವರ್ ಪುಲ್ ಸ್ಟೆಪ್ ಗಳ ಕಂಪೋಸ್ ಮಾಡಿದ್ದಾರೆ ಟಾಲಿವುಡ್ ಸ್ಟಾರ್ ಕೋರಿಯೋಗ್ರಫರ್ ಶಂಕರ್.
ಅಪ್ಪು.. ನಿಮ್ಮನ್ನು ವರ್ಣಿಸೋಕೆ ಪದಗಳೇ ಸಾಲದು!
ಹೌದು, ಈ ಸಾಂಗ್ನ ಸಾಹಿತ್ಯ ಅಪ್ಪು ಅವರಿಗೆ ಹೇಳಿ ಮಾಡಿಸಿದ ಹಾಗಿದೆ. ಅಪ್ಪು ಅವರ ನಟನೆಗೆ, ಡ್ಯಾನ್ಸ್, ಫೈಟ್ ಅವರೇ ಸಾಟಿ. ‘ಗೇಮಿಗಿನೂ ಗನ್ನಿಗುನೂ ಟ್ರೇಡ್ ಮಾರ್ಕ್, ಬ್ರ್ಯಾಂಡ್ಗೂನೂ ಸೌಂಡ್ಗುನೂ ಟ್ರೇಡ್ ಮಾರ್ಕ್’ ಎಂಬ ಸಾಹಿತ್ಯವುಳ್ಳ ಈ ಹಾಡನ್ನು ಅಪ್ಪು ಅಭಿಮಾನಿಗಳು ರಿಪೀಟ್ ಮೋಡ್ನಲ್ಲಿ ಕೇಳುತ್ತಿದ್ದಾರೆ.
ಟ್ರೇಡ್ ಮಾರ್ಕ್ ಸಾಂಗ್ನಲ್ಲಿ ರಚಿತಾ, ಶ್ರೀಲೀಲಾ, ಆಶಿಕಾ!
ಹೌದು, ರಿಲೀಸ್ ಆಗಿರೋ ‘ಟ್ರೇಡ್ ಮಾರ್ಕ್’ ಸಾಂಗ್ನಲ್ಲಿ ರಚಿತಾ ರಾಮ್, ನಟಿ ಶ್ರೀಲೀಲಾ, ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ. ಇದು ಹೆಸರಿಗಷ್ಟೇ ಲಿರಿಕಲ್ ಸಾಂಗ್. ಈ ಸಾಂಗ್ನಲ್ಲಿ ಚಂದನ್ ಶೆಟ್ಟಿ, ಸಂಗೀತ ನಿರ್ದೇಶಕ ಕೂಡ ಕಾಣಿಸಿಕೊಂಡಿದ್ದಾರೆ. ಅಪ್ಪು ಅವರ ಬಗ್ಗೆ ಹಾಡಿದ್ದಾರೆ. ಚಂದನ್ ಶೆಟ್ಟಿಯ ಸ್ಟೈಲ್ನಲ್ಲಿ ಸಾಂಗ್ ಮೂಡಿಬಂದಿದೆ. ಪುನೀತ್ ರಾಜ್ಕುಮಾರ್ ಅವರ ವ್ಯಕ್ತಿತ್ವಕ್ಕೆ ಸರಿಯಾಗಿ ಹೊಂದುವಂತಿದೆ ಹಾಡಿನ ಲಿರಿಕ್ಸ್.
ಇದನ್ನೂ ಓದಿ : ಅಂತೆ-ಕಂತೆಗಳನ್ನು ನಂಬಬೇಡಿ.. ನಾವೇ ಎಲ್ಲ ಮಾಹಿತಿ ನೀಡ್ತೇವೆ ಎಂದ ಜೇಮ್ಸ್ ನಿರ್ಮಾಪಕ!
ಕಿಂಗ್ ಈಸ್ ಅಲ್ವೇಸ್ ಕಿಂಗು ಮಾಮ ಎಂದ ಗುರು!
ಇನ್ನೂ ಇದೇ ಹಾಡಿನಲ್ಲಿ ರಾಘವೇಂದ್ರ ರಾಜ್ಕುಮಾರ್ ಅವರ ಎರಡನೇ ಮಗ ಗುರು ರಾಜ್ಕುಮಾರ್ ಕೂಡ ಧನಿಗೂಡಿಸಿದ್ದಾರೆ. ಹಾಡಿನ ಮಧ್ಯದಲ್ಲಿ ಕಿಂಗ್ ಈಸ್ ಅಲ್ವೇಸ್ ಕಿಂಗು ಮಾಮ ಎಂಬ ಸಾಹಿತ್ಯ ಬರುತ್ತದೆ. ಅದಕ್ಕೆ ಸ್ವತಃ ಗುರು ರಾಜ್ಕುಮಾರ್ ಧನಿ ನೀಡಿದ್ದಾರೆ. ಒಟ್ಟಿನಲ್ಲಿ ಈ ಸಾಂಗ್ ಕೇಳಿದ ಪ್ರತಿಯೊಬ್ಬರು ಕೂಡ, ಅಪ್ಪು ಅವರನ್ನು ನೆನದು ಭಾವುಕರಾಗುತ್ತಿದ್ದಾರೆ, ಕಾರಣ ಈ ಸಾಹಿತ್ಯ ಅವರಿಗೆ ಹೇಳಿ ಮಾಡಿಸಿದ ಹಾಗಿದೆ.
ಇದನ್ನೂ ಓದಿ: ಆಕಾಶದಲ್ಲೂ ಮಿನುಗಲಿದೆ ಪವರ್'ಸ್ಟಾರ್'! ಉಪಗ್ರಹಕ್ಕೆ ಈಗ 'ವೀರ ಕನ್ನಡಿಗ'ನ ಹೆಸರು
ಮೇಕಿಂಗ್ ವಿಡಿಯೋದಲ್ಲೇ ಅಬ್ಬರಿಸಿ ಅಪ್ಪು!
ಇನ್ನೂ ಈ ಹಾಡಿನಲ್ಲಿ ಈ ಸಾಂಗ್ನ ಮೇಕಿಂಗ್ ದೃಶ್ಯಗಳು ಕೂಡ ಇವೆ. ಇದರಲ್ಲಿ ಅಪ್ಪು ಅವರನ್ನು ನೋಡುತ್ತಿದ್ದರೆ, ಮನಸ್ಸು ಭಾರವಾಗುತ್ತೆ. ‘ಟ್ರೇಡ್ಮಾರ್ಕ್ ಸಾಂಗ್ಅನ್ನು 5 ಗಾಯಕರು ಹಾಡಿದ್ದಾರೆ. ಫೋಟೋ ಮೇಲೆ ಲಿರಿಕ್ಸ್ ಹಾಕಿ ರಿಲೀಸ್ ಮಾಡುವ ಹಾಗೆ ಮಾಮೂಲಿಯಾಗಿ ಚಿತ್ರತಂಡ ಈ ಹಾಡನ್ನು ತಯಾರಿಸಿಲ್ಲ. ಇದು ಎಲ್ಲರ ಗಮನಸೆಳೆದಿದೆ. 5 ಭಾಷೆಗಳಲ್ಲಿ ಈ ಹಾಡು ರಿಲೀಸ್ ಆಗಿದ್ದು, ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ