Puneeth Rajkumar: ಗಂಧದಗುಡಿ ರಿಲೀಸ್‌ಗೆ ಮುಹೂರ್ತ ಫಿಕ್ಸ್! ಅಶ್ವಿನಿ ಪುನೀತ್ ರಾಜ್‌ಕುಮಾರ್ ಮಾಡಿದ್ರು ಡೇಟ್ ಅನೌನ್ಸ್

ಗಂಧದಗುಡಿ ರಿಲೀಸ್ ಯಾವಾಗ ಅಂತ ಅಭಿಮಾನಿಗಳಂತೂ (Fans) ತುದಿಗಾಲಲ್ಲಿ ನಿಂತಿದ್ದಾರೆ. ಅಪ್ಪು ಡಾಕ್ಯುಮೆಂಟರಿ ರಿಲೀಸ್ ಯಾವಾಗ ಅಂತ ಸೋಶಿಯಲ್ ಮೀಡಿಯಾಗಳಲ್ಲಿ (Social Media) ಪ್ರತಿದಿನ ಚರ್ಚೆ ಆಗ್ತಿತ್ತು. ಇದೀಗ ಈ ಪ್ರಶ್ನೆ, ನಿರೀಕ್ಷೆ, ಕುತೂಹಲಕ್ಕೆಲ್ಲ ಉತ್ತರ ಸಿಕ್ಕಿದೆ.

ಗಂಧದಗುಡಿ ಅಕ್ಟೋಬರ್ 28ಕ್ಕೆ ರಿಲೀಸ್

ಗಂಧದಗುಡಿ ಅಕ್ಟೋಬರ್ 28ಕ್ಕೆ ರಿಲೀಸ್

  • Share this:
ಪವರ್ ಸ್ಟಾರ್ (Power Star) ಪುನೀತ್ ರಾಜ್‌ಕುಮಾರ್ (Puneeth Rajkumar) ಕೊನೆಯ ಬಾರಿಗೆ ಆ್ಯಕ್ಟ್ (Act) ಮಾಡಿದ್ದು ಯಾವ ಸಿನಿಮಾದಲ್ಲಿ (Cinema) ಅಂದ್ರೆ ಜೇಮ್ಸ್ (James) ಎನ್ನುತ್ತೀರಿ. ಆದರೆ ಅವರು ಕೊನೆ ಬಾರಿ ಆ್ಯಕ್ಟ್ ಮಾಡಿದ್ದು ಗಂಧದಗುಡಿ (Gandhadagudi) ಎಂಬ ಡಾಕ್ಯುಮೆಂಟರಿಯಲ್ಲಿ. ಈ ಡಾಕ್ಯುಮೆಂಟರಿ (Documentary) ಈಗಾಗಲೇ ಭಾರೀ ಕುತೂಹಲ, ನಿರೀಕ್ಷೆ ಮೂಡಿಸಿದೆ. ಗಂಧದಗುಡಿ ರಿಲೀಸ್ (Release) ಯಾವಾಗ ಅಂತ ಅಭಿಮಾನಿಗಳಂತೂ (Fans) ತುದಿಗಾಲಲ್ಲಿ ನಿಂತಿದ್ದಾರೆ. ಅಪ್ಪು ಡಾಕ್ಯುಮೆಂಟರಿ ರಿಲೀಸ್ ಯಾವಾಗ ಅಂತ ಸೋಶಿಯಲ್ ಮೀಡಿಯಾಗಳಲ್ಲಿ (Social Media) ಪ್ರತಿದಿನ ಚರ್ಚೆ ಆಗ್ತಿತ್ತು. ಇದೀಗ ಈ ಪ್ರಶ್ನೆ, ನಿರೀಕ್ಷೆ, ಕುತೂಹಲಕ್ಕೆಲ್ಲ ಉತ್ತರ ಸಿಕ್ಕಿದೆ. ಗಂಧದ ಗುಡಿ ರಿಲೀಸ್ ಯಾವಾಗ ಅನ್ನೋದನ್ನು ಖುದ್ದು ಪುನೀತ್ ರಾಜ್‌ಕುಮಾರ್ ಅವರ ಪತ್ನಿ, ಶ್ರೀಮತಿ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ಅವರೇ ಅನೌನ್ಸ್ (Announce) ಮಾಡಿದ್ದಾರೆ.

 ಅಕ್ಟೋಬರ್ 28ಕ್ಕೆ ಗಂಧದ ಗುಡಿ ರಿಲೀಸ್

 ಹೌದು, ಇದೇ ಅಕ್ಟೋಬರ್ 28ಕ್ಕೆ ಬಹು ನಿರೀಕ್ಷಿತ ಗಂಧದಗುಡಿ ಡಾಕ್ಯುಮೆಂಟರಿ ರಿಲೀಸ್ ಆಗಲಿದೆ. ಈ ಬಗ್ಗೆ ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರೇ ತಮ್ಮ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಅಧಿಕೃತವಾಗಿ ಅನೌನ್ಸ್ ಮಾಡಿದ್ದಾರೆ.

ಇನ್ಸ್‌ಸ್ಟಾಗ್ರಾಮ್‌ನಲ್ಲಿ ಡೇಟ್ ಘೋಷಣೆ

 ಈ ಬಗ್ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದು ಕೊಂಡಿದ್ದಾರೆ. ಅಪ್ಪು ಅವರ ಕೊನೆಯ ಚಿತ್ರ. ಅವರು ಅವರಾಗಿಯೇ ಕಾಣಿಸಿಕೊಂಡಿರುವ ವಿಶಿಷ್ಟ ಕಥನ. ಕರ್ನಾಟಕದ ಅದ್ಭುತ ಜಗತ್ತನ್ನು ಅನ್ವೇಷಿಸುವ ಪಯಣ. ಅವರಿಗೆ ಅಪಾರ ಪ್ರೀತಿಯನ್ನು ಕೊಟ್ಟ ನಾಡಿಗೆ ಅವರ ಪ್ರೀತಿಯ ಕಾಣಿಕೆ ಅಂತ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದು ಕೊಂಡಿದ್ದಾರೆ.

ಇದನ್ನೂ ಓದಿ: Puneeth Rajkumar: ಅಪ್ಪುಗೆ ಅಪಮಾನ ಮಾಡಿತಾ ಟ್ವಿಟರ್? ಪವರ್ ಸ್ಟಾರ್ ಅಭಿಮಾನಿಗಳಿಂದ ಆಕ್ರೋಶ

 ಡಾಕ್ಯುಮೆಂಟರಿಗಾಗಿ ಕಾಡು ಮೇಡು ಅಲೆದ ಅಪ್ಪು

ಅಪ್ಪು ಗಂಧದ ಗುಡಿ (Gandhada Gudi) ಸಿನಿಮಾ ಕೂಡ ಚಿತ್ರಮಂದಿರದಲ್ಲಿ ರಿಲೀಸ್ ಆಗಲಿದೆ. ಇದು ಕಮಷಿರ್ಯಲ್​ ಸಿನಿಮಾ ಅಲ್ಲ. ಕಾಡು ಮೇಡಿನ ಕಾಡು ಅಲೆದು ಅಪ್ಪು ಡಾಕ್ಯುಮೆಂಟರಿ (Documentary) ಮಾಡಿದ್ದಾರೆ. ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರ ಡ್ರೀಮ್​ ಪ್ರಾಜೆಕ್ಟ್ ಗಂಧದಗುಡಿ ಪಿಆರ್‌ಕೆ ಸ್ಟುಡಿಯೋ ನಿರ್ಮಾಣ ಮಾಡುತ್ತಿದೆ.

ಥಿಯೇಟರ್‌ನಲ್ಲೇ ರಿಲೀಸ್ ಆಗಲಿದೆ ಗಂಧದಗುಡಿ

ಈ ಸಾಕ್ಷ್ಯಾ ಚಿತ್ರವನ್ನು 2021ರ ನವೆಂಬರ್​ ನಲ್ಲಿ ಬಿಡುಗಡೆ ಮಾಡಲು ಅಪ್ಪು ಚಿಂತಿಸಿದ್ದರಂತೆ. ಆದರೆ ಅವರು ನಿಧನ ಹೊಂದಿದ ಕಾರಣದಿಂದಾಗಿ ಇನ್ನು ಮುಂದೂಡಲಾಗಿದೆ. ಅಲ್ಲದೇ ಗಂಧದಗುಡಿ ಚಿತ್ರವನ್ನು ಥಿಯೇಟರ್​ ನಲ್ಲಿ ರಿಲೀಸ್ ಮಾಡುವುದಾಗಿ ಈಗಾಗಲೇ ಘೋಷಣೆ ಮಾಡಲಾಗಿದೆ. ಸಾಮಾನ್ಯವಾಗಿ ಡಾಕ್ಯುಮೆಂಟ್​ ಸಿನಿಮಾಗಳನ್ನು ಥಿಯೇಟರ್​​ನಲ್ಲಿ ರಿಲೀಸ್​ ಮಾಡುವುದು ಕಡಿಮೆ. ಆದರೆ ಅಪ್ಪು ಅವರ ಗಂಧದ ಗುಡಿ ಸಿನಿಮಾವನ್ನು ಚಿತ್ರಮಂದಿರದಲ್ಲೇ ರಿಲೀಸ್​ ಆಗಲಿದೆ.

ಇದನ್ನೂ ಓದಿ: Flower Show: ಈ ಬಾರಿ ಲಾಲ್​ಬಾಗ್​ನಲ್ಲಿ ‘ಪವರ್’ ಶೋ; ಹೂಗಳಲ್ಲಿ ಅರಳಲಿದೆ ಗಾಜನೂರಿನ ಗೂಡು

 ಗಂಧದ ಗುಡಿಯಲ್ಲಿ ಅಪ್ಪು ದರ್ಶನ

‘ಕರ್ನಾಟಕದ ಕಾಡು ಉಳಿಸಿ’ ಎಂಬ ಡಾ. ರಾಜ್ ಸಂದೇಶದ ಮರುಜನ್ಮವೇ ಹೊಸ ಗಂಧದ ಗುಡಿಯ ಕಥೆಯ ಸೀಕ್ರೇಟ್. ನಾನು ಪವರ್ ಸ್ಟಾರ್ ಅಲ್ಲ, ಸಾಮಾನ್ಯ ವ್ಯಕ್ತಿಯಾಗಿ ಕಾಣಿಸಿಕೊಳ್ತೀನಿ ಎಂದು ‘ಪವರ್ ಸ್ಟಾರ್’ ಬದಿಗೆ ಸರಿಸಿ ದಿವಂಗತ ನಟ ಪುನೀತ್ ನಟಿಸಿರುವ 'ಗಂಧದ ಗುಡಿ' ಕಥೆ ಹುಟ್ಟಿ ಬೆಳೆದಿದ್ದು, ನಿರ್ಮಾಣ, ಪುನೀತ್ ನಟನೆ ಕುರಿತು ವೈಲ್ಡ್ ಕರ್ನಾಟಕ ಖ್ಯಾತಿ ನಿರ್ದೇಶಕ ಅಮೋಘವರ್ಷ ಈ ಹಿಂದೆ ಹೇಳಿದ್ದರು.
Published by:Annappa Achari
First published: