Puneeth Rajkumar: ಗಣೇಶ್ ಹಬ್ಬದಂದು ಗಂಧದ ಗುಡಿ ಚಿತ್ರದ ಹೊಸ ಪೋಸ್ಟರ್ ರಿಲೀಸ್; ಸಿನಿಮಾ ಬಿಡುಗಡೆ ದಿನಾಂಕವೂ ಫಿಕ್ಸ್!

ಗಣೇಶ ಹಬ್ಬದ ದಿನ ಆನೆಯ ಮುಂದೆ ಪವರ್‌ಸ್ಟಾರ್ ನಿಂತಿರೋ ಫೋಟೊವನ್ನು ಪಿಆರ್‌ಕೆ ಸಂಸ್ಥೆ ರಿಲೀಸ್ ಮಾಡಿದೆ. ಗಂಧದ ಗುಡಿಯ ಈ ಪೋಸ್ಟರ್ ಅಪ್ಪು ಅಭಿಮಾನಿಗಳ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಗಂಧದ ಗುಡಿ ಹೊಸ ಪೋಸ್ಟರ್​

ಗಂಧದ ಗುಡಿ ಹೊಸ ಪೋಸ್ಟರ್​

  • Share this:
ಗಣೇಶ ಚತುರ್ಥಿಯಂದು (Ganesh chaturthi) ಪುನೀತ್​ ರಾಜ್​ ಕುಮಾರ್​ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ನೀಡಲಾಗಿದೆ. ಪವರ್ ಸ್ಟಾರ್​ ಪುನೀತ್​ ರಾಜ್​ಕುಮಾರ್ (Power Star Puneeth Rajkumar)​ ಅವರ ಕೊನೆಯ ಚಿತ್ರ ಗಂಧದ ಗುಡಿ, (Gandadagudi) ಈ ಚಿತ್ರ ನೋಡಲು ಇಡೀ ಕರುನಾಡೇ ಕಾದು ಕುಳಿತಿದೆ.  ಪುನೀತ್ ನೆನಪಲ್ಲಿ ಹಬ್ಬ ಆಚರಿಸುತ್ತಿರೋ ಅಭಿಮಾನಿಗಳಿಗಾಗಿ ಹಬ್ಬದ ಉಡುಗೊರೆ (Gift) ಕೊಟ್ಟಿರೋ ಚಿತ್ರ ತಂಡ ಗಂಧದ ಗುಡಿ ಹೊಸ ಪೋಸ್ಟರ್ (New Poster) ಬಿಡುಗಡೆ ಜೊತೆಗೆ ಚಿತ್ರದ ರಿಲೀಸ್​ ದಿನಾಂಕವನ್ನು ಸಹ ಘೋಷಣೆ ಮಾಡಿದೆ. ಅಕ್ಟೋಬರ್​ 28ರಂದು ಗಂಧದ ಗುಡಿ ಚಿತ್ರ  ತೆರೆಮೇಲೆ ಬರಲಿದೆ ಎಂದು ಘೋಷಣೆ ಮಾಡಲಾಗಿದೆ.

ಅಪ್ಪು ನೆನಪಲ್ಲಿ ಗಣೇಶ ಚತುರ್ಥಿ 

ನಾಡಿನಲ್ಲಿ ಗಣೇಶ ಚತುರ್ಥಿ  ಸಂಭ್ರಮ ಮನೆ ಮಾಡಿದ್ದು, ಎಲ್ಲೆಲ್ಲೂ ಗಣೇಶನ ಮೂರ್ತಿಗಳನ್ನು ಇಟ್ಟು ಪೂಜೆ ಮಾಡೋದು ಸಾಮಾನ್ಯ, ಈ ವರ್ಷ ಪುನೀತ್​ ರಾಜ್​ ಕುಮಾರ್ ಅವರನ್ನು ಕಳೆದುಕೊಂಡ ದುಃಖದಲ್ಲಿರೋ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಪವರ್​​ ಸ್ಟಾರ್​ರನ್ನು ನೆನಪು ಮಾಡಿಕೊಳ್ತಿದ್ದಾರೆ. ಅಪ್ಪು ಪ್ರತಿಮೆ ಇರೋ ಗಣೇಶನ ಮೂರ್ತಿಗಳನ್ನು ತಂದು ಪೂಜೆ ಮಾಡಿ ಗೌರವ ಸಲ್ಲಿಸುತ್ತಾರೆ.

ಗಂಧದ ಗುಡಿ ಹೊಸ ಪೋಸ್ಟರ್ ರಿಲೀಸ್

ಮತ್ತೊಂದೆಡೆ ಟ್ವಿಟರ್​ನಲ್ಲಿ (Twitter)  ಗಣೇಶ ಚತುರ್ಥಿ ಹಿನ್ನೆಲೆ ಪುನೀತ್ ಚತುರ್ಥಿ (Puneeth Chaturthi) ಟ್ರೆಂಡ್​ ಶುರುವಾಗಿದೆ.  ಇದೇ ವೇಳೆ ಪಿಆರ್‌ಕೆ ಪ್ರೊಡೆಕ್ಷನ್​ ಗಂಧದ ಗುಡಿ ಹೊಸ ಪೋಸ್ಟರ್ ರಿಲೀಸ್ ಮಾಡೋ ಮೂಲಕ ಅಭಿಮಾನಿಗಳ ಸಂಭ್ರಮವನ್ನು ದುಪ್ಪಟ್ಟು ಮಾಡಿದೆ.





ಅಪ್ಪು ಕನಸು ನನಸು ಮಾಡ್ತಿರೋ ಅಶ್ವಿನಿ

ಪವರ್‌ಸ್ಟಾರ್ ಕನಸಿನ ಪ್ರಾಜೆಕ್ಟ್ ಗಂಧದ ಗುಡಿ, ಅವರದ್ದೇ ಪಿಆರ್‌ಕೆ ಸಂಸ್ಥೆ ಈ ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ಮುಂದಾಗಿತ್ತು. ಆದರೆ, ಈ ಸಿನಿಮಾವನ್ನು ನೋಡುವ ಮೊದಲೇ ಅಪ್ಪು ಅಗಲಿದ್ದಾರೆ. ಇದರ ಸಂಪೂರ್ಣ ಹೊಣೆಯನ್ನು ಅಶ್ವಿನಿ ಪುನೀತ್​ ರಾಜ್​ಕುಮಾರ್ ಹೊತ್ತಿದ್ದು. ಅಪ್ಪು ಕನಸನ್ನು ನನಸು ಮಾಡಲು ಮುಂದಾಗಿದ್ದಾರೆ. ಆನೆಯ ಮುಂದೆ ಪವರ್‌ಸ್ಟಾರ್ ನಿಂತಿರೋ ಫೋಟೊವನ್ನು ಪಿಆರ್‌ಕೆ ಸಂಸ್ಥೆ ರಿಲೀಸ್ ಮಾಡಿದೆ. ಗಂಧದ ಗುಡಿಯ ಈ ಪೋಸ್ಟರ್ ಅಪ್ಪು ಅಭಿಮಾನಿಗಳ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಅಕ್ಟೋಬರ್​ 28ಕ್ಕೆ ಚಿತ್ರ ರಿಲೀಸ್​

ಗಂಧದ ಗುಡಿ ಸಿನಿಮಾ ಅಕ್ಟೋಬರ್ 28ಕ್ಕೆ ರಿಲೀಸ್ ಆಗಲಿದೆ. ಈಗಾಗಲೇ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಈ ಸಿನಿಮಾದ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಿದ್ದಾರೆ. ಇದೇ ಅಕ್ಟೋಬರ್ 29ಕ್ಕೆ ಪುನೀತ್ ರಾಜ್‌ಕುಮಾರ್ ಅವರು ಅಭಿಮಾನಿಗಳನ್ನು ಅಗಲಿ ಒಂದು ವರ್ಷ ಆಗಲಿದೆ. ಅದಕ್ಕೂ ಒಂದು ದಿನ ಮೊದಲೇ ಪವರ್‌ಸ್ಟಾರ್ ಅಭಿಮಾನಿಗಳಿಗೆ, ಸಿನಿಪ್ರಿಯರಿಗೆ ಗಂಧದ ಗುಡಿ ಮೂಲಕ ಪುನೀತ್​ ರಾಜ್​ಕುಮಾರ್​ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ.





ಪುನೀತ್ ರಾಜ್​ಕುಮಾರ್ ಅತಿಥಿ ಪಾತ್ರ ಮಾಡಿದ ‘ಲಕ್ಕಿ ಮ್ಯಾನ್​’ ಸಿನಿಮಾ ಆಗಸ್ಟ್ ತಿಂಗಳಲ್ಲಿ ತೆರೆಗೆ ಬರಲಿದೆ. ಹೀಗಾಗಿ ಅವರ ಕೊನೆಯ ಚಿತ್ರ ಎಂದರೆ ‘ಗಂಧದ ಗುಡಿ’. ಪುನೀತ್​ ರಾಜ್​ಕುಮಾರ್ ನಿಧನ ಹೊಂದಿದ ದಿನಾಂಕಕ್ಕಿಂತ ಒಂದು ದಿನ ಮೊದಲು ರಿಲೀಸ್​ ಆಗುತ್ತಿದೆ.
Published by:Pavana HS
First published: