ಅಪ್ಪ ನಾ ಬದುಕುವುದಿಲ್ಲ, ಒಮ್ಮೆ ಪವರ್​ ಸ್ಟಾರ್​ನ ಭೇಟಿ ಮಾಡಿಸು: ಅಭಿಮಾನಿಯ ಕೋರಿಕೆಗೆ ಸ್ಪಂದಿಸಿದ ಪುನೀತ್ ರಾಜ್​ ಕುಮಾರ್

ಅನಾರೋಗ್ಯವಿದ್ದರೂ ಆರಂಭದಲ್ಲಿ ಭೂಮಿಕಾಗೆ ಅಂತಹ ದೊಡ್ಡ ಸಮಸ್ಯೆಯಿರಲಿಲ್ಲ. ಆದರೆ ವೈದ್ಯರು ಮಾಡಿದ ಎಡವಟ್ಟಿನಿಂದಾಗಿ ಇಂದು ಮಗಳು ಕೋಮಾ ಹಂತಕ್ಕೆ ಹೋಗುವ ಸ್ಥಿತಿಯಲ್ಲಿದ್ದಾರೆ ಎಂದು ಭೂಮಿಕಾಳ ತಂದೆ ಕಣ್ಣೀರಿಡುತ್ತಿದ್ದಾರೆ.

zahir | news18
Updated:June 28, 2019, 9:15 PM IST
ಅಪ್ಪ ನಾ ಬದುಕುವುದಿಲ್ಲ, ಒಮ್ಮೆ ಪವರ್​ ಸ್ಟಾರ್​ನ ಭೇಟಿ ಮಾಡಿಸು: ಅಭಿಮಾನಿಯ ಕೋರಿಕೆಗೆ ಸ್ಪಂದಿಸಿದ ಪುನೀತ್ ರಾಜ್​ ಕುಮಾರ್
ಪುನೀತ್ ರಾಜ್ ಕುಮಾರ್
  • News18
  • Last Updated: June 28, 2019, 9:15 PM IST
  • Share this:
ಸಿನಿಮಾ ತಾರೆಗಳನ್ನು ಅಭಿಮಾನಿಗಳು ದೇವರಂತೆ ಆರಾಧಿಸುತ್ತಾರೆ. ತಮ್ಮ ನೆಚ್ಚಿನ ನಟನಿಗಾಗಿ ಎಂತಹ ತ್ಯಾಗಕ್ಕೂ ಸಿದ್ಧರಾಗಿರುತ್ತಾರೆ. ಇಂತಹ ನೂರಾರು ಅಭಿಮಾನಿಗಳ ದೊಡ್ಡ ಆಸೆಯೆಂದರೆ ತಾವು ಆರಾಧಿಸುವ ನಟನನ್ನು ಜೀವನದಲ್ಲಿ ಒಮ್ಮೆಯಾದರೂ ಭೇಟಿಯಾಗಬೇಕು ಎಂಬುದು. ಭೂಮಿಕಾ ಎಂಬ ಪುಟ್ಟ ಹೆಣ್ಣು ಮಗಳಿಗೂ ಅಂತಹದೊಂದು ಆಸೆಯಿದೆ. ಅದು ಕೂಡ ಸ್ಯಾಂಡಲ್​ವುಡ್​ 'ರಾಜಕುಮಾರ' ಪುನೀತ್ ರಾಜ್​ಕುಮಾರ್ ಅವರನ್ನು ಒಮ್ಮೆ ನೋಡಬೇಕೆಂಬ ಮಹದಾಸೆ.

ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಭೂಮಿಕಾ(17) ಸದ್ಯ ಕೋಮಾ ಸ್ಥಿತಿಗೆ ತಲುಪುವ ಹಂತದಲ್ಲಿದ್ದಾರೆ. ತಮ್ಮ ಮಗಳನ್ನು ಉಳಿಸಲು ವೃತ್ತಿಯಲ್ಲಿ ಲಾರಿ ಚಾಲಕರಾಗಿರುವ ಭೂಮಿಕಾ ಅವರ ತಂದೆಯು ಪಡಬಾರದ ಕಷ್ಟವನ್ನೆಲ್ಲಾ ಪಡುತ್ತಿದ್ದಾರೆ. ಈ ನಡುವೆ ಮಗಳು ತಂದೆಗೆ ತನ್ನನ್ನು ಮನೆಗೆ ಕರೆದುಕೊಂಡು ಹೋಗುವಂತೆ ಕೇಳಿಕೊಂಡಿದ್ದಳು. ಇದಕ್ಕೆ ಕಾರಣ, ತನಗಾಗಿ ನಾಳೆ ಅಪ್ಪ ಸಾಲಗಾರನಾಗಲಿದ್ದಾರೆ ಎಂಬ ಭಯ. ಇಂತಹದೊಂದು ಕರುಣಾಜನಕ ಸ್ಥಿತಿಯಲ್ಲಿರುವ ಕುಟುಂಬದ ಅಪ್ಪಟ ಅಪ್ಪು ಅಭಿಮಾನಿ ಭೂಮಿಕಾ. ಆಸ್ಪತ್ರೆಯಿಂದಲೇ ತಾನು ಕೊನೆಯುಸಿರೆಳೆಯುವ ಮುನ್ನ ಒಮ್ಮೆಯಾದರೂ ಪವರ್ ಸ್ಟಾರ್ ಅವರನ್ನು ನೋಡಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದಾಳೆ.

ಭೂಮಿಕಾ


ಅಪ್ಪುಗಾಗಿ ಪತ್ರ ಬರೆದ ಭೂಮಿಕಾ:
ಅನಾರೋಗ್ಯವಿದ್ದರೂ ಆರಂಭದಲ್ಲಿ ಭೂಮಿಕಾಗೆ ಅಂತಹ ದೊಡ್ಡ ಸಮಸ್ಯೆಯಿರಲಿಲ್ಲ. ಆದರೆ ವೈದ್ಯರು ಮಾಡಿದ ಎಡವಟ್ಟಿನಿಂದಾಗಿ ಇಂದು ಮಗಳು ಕೋಮಾ ಹಂತಕ್ಕೆ ಹೋಗುವ ಸ್ಥಿತಿಯಲ್ಲಿದ್ದಾರೆ ಎಂದು ಭೂಮಿಕಾಳ ತಂದೆ ಕಣ್ಣೀರಿಡುತ್ತಿದ್ದಾರೆ. ಈ ನಡುವೆ ಮಾತನಾಡಲು ಸಾಧ್ಯವಾಗದ ಭೂಮಿಕಾ ಬರವಣಿಗೆಯ ಮೂಲಕ ತನ್ನ ಕೊನೆಯ ಆಸೆಯನ್ನು ತಂದೆಗೆ ತಿಳಿಸಿದ್ದಾರೆ. 'ಅಪ್ಪ ನನ್ನನ್ನು ಮನೆಗೆ ಕರೆದುಕೊಂಡು ಹೋಗು, ನಾನು ಉಳಿಯುವುದಿಲ್ಲ. ನೀನು ಸಾಲಗಾರ ಆಗಬೇಡ, ನಾನು ಪುನೀತ್​ ರಾಜ್​ಕುಮಾರ್​ ಅವರನ್ನು ನೋಡಬೇಕು. ಪ್ಲೀಸ್ ಅಪ್ಪ ಆಸೆ ಈಡೇರಿಸು' ಎಂದು  ಪತ್ರದಲ್ಲಿ ತಿಳಿಸಿದ್ದಾಳೆ.ಅಭಿಮಾನಿಗಳೇ ದೇವರು:ಅಭಿಮಾನಿಗಳನ್ನೇ ಮನೆ ದೇವರು ಎಂದುಕೊಂಡಿರುವ ದೊಡ್ಮನೆ ಹುಡ್ಗನ ಕಿವಿಗೆ ಈ ಸುದ್ದಿ ಬಿದ್ದಿದೆ. ಅದರಂತೆ ಭೂಮಿಕಾಗೆ ಕರೆ ಮಾಡಿರುವ ಅಪ್ಪು, ಏನೂ ಆಗಲ್ಲಮ್ಮ, ಧೈರ್ಯವಾಗಿರು. ನಿನ್ನ ಆಸೆಯನ್ನು ಪೂರೈಸುತ್ತೇನೆ ಎಂದು  ಧೈರ್ಯ ತುಂಬಿದ್ದಾರೆ. ನಾನು ಸದ್ಯ ಹುಬ್ಬಳಿಯಲ್ಲಿ ಶೂಟಿಂಗ್​ನಲ್ಲಿದ್ದು, ಆದಷ್ಟು ಬೇಗ ನಿನ್ನನ್ನು ಬಂದು ನೋಡುವುದಾಗಿಯು ಅಪ್ಪು ಭರವಸೆ ನೀಡಿದ್ದಾರೆ. ಈ ಒಂದು ಮಾತಿನಿಂದ ಕಳೆದ ಒಂದು ತಿಂಗಳಿನಿಂದ ಕೋಮಾ ಸ್ಥಿತಿಯಲ್ಲಿ ನರಳುತ್ತಿದ್ದ ಬಾಲಕಿ ತುಸು ತಲೆ ಅಲ್ಲಾಡಿಸಿ ಖುಷಿ ವ್ಯಕ್ತಪಡಿಸಿದ್ದಾಳೆ. ಒಟ್ಟಿನಲ್ಲಿ ಅಭಿಮಾನಿಯ ಚಿಂತಾಜನಕ ಸುದ್ದಿ ತಿಳಿದು ಕರೆ ಮಾಡುವ ಮೂಲಕ ಭೂಮಿಕಾಳ ಪಾಲಿಗೆ ಪವರ್ ಸ್ಟಾರ್ ನಿಜವಾದ  'ರಾಜಕುಮಾರ' ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: ಪೈಲ್ವಾನ್ ಚಿತ್ರ ನಟನ ಮಗಳೊಂದಿಗೆ ಕ್ರಿಕೆಟಿಗ ಕೆ.ಎಲ್ ರಾಹುಲ್ ಡೇಟಿಂಗ್..?
First published:June 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ