• Home
  • »
  • News
  • »
  • entertainment
  • »
  • Puneeth Rajkumar: ಸೈಕಲ್​ ಹತ್ತಿ ಬೆಂಗಳೂರಿನ ರಸ್ತೆಗಳಲ್ಲಿ ಸುತ್ತಾಡಿದ ಪುನೀತ್​ ರಾಜ್​ಕುಮಾರ್​: ವಿಡಿಯೋ ಹಂಚಿಕೊಂಡ ಅಪ್ಪು..!

Puneeth Rajkumar: ಸೈಕಲ್​ ಹತ್ತಿ ಬೆಂಗಳೂರಿನ ರಸ್ತೆಗಳಲ್ಲಿ ಸುತ್ತಾಡಿದ ಪುನೀತ್​ ರಾಜ್​ಕುಮಾರ್​: ವಿಡಿಯೋ ಹಂಚಿಕೊಂಡ ಅಪ್ಪು..!

ಪುನೀತ್​ ರಾಜ್​ಕುಮಾರ್

ಪುನೀತ್​ ರಾಜ್​ಕುಮಾರ್

Pedal Towards Fit Morning: ಪುನೀತ್ ಅವರು ವರ್ಕೌಟ್​ ಜೊತೆಗೆ ಸೈಕ್ಲಿಂಗ್​ ಸಹ ಮಾಡುತ್ತಾರೆ. ಆಗಾಗ ಸೈಕಲ್ ಹತ್ತಿ ನಂದಿಬೆಟ್ಟಕ್ಕೂ ಹೋಗುತ್ತಾರೆ ಅಪ್ಪು. ಯೂಟ್ಯೂಬ್​ನಲ್ಲಿರುವ ಪಿಆರ್​ಕೆ ಆಡಿಯೋ ಚಾನೆಲ್​ನಲ್ಲಿ ತಮ್ಮ ಸೈಕ್ಲಿಂಗ್​ ವಿಡಿಯೋ ಪೋಸ್ಟ್​ ಮಾಡಿದ್ದಾರೆ. ಈ ವಿಡಿಯೋ ಅಭಿಮಾನಿಗಳಿಗೆ ಸಖತ್ ಇಷ್ಟವಾಗುತ್ತಿದೆ.

ಮುಂದೆ ಓದಿ ...
  • Share this:

ಪುನೀತ್​ ರಾಜ್​ಕುಮಾರ್ ಎಷ್ಟು ಫಿಟ್ನೆಸ್​ ಫ್ರೀಕ್​ ಅನ್ನೋದು ಪದೇ ಪದೇ ಹೇಳಬೇಕಿಲ್ಲ. ಲಾಕ್​ಡೌನ್​ನಲ್ಲಿ ಅವರು ಹಂಚಿಕೊಂಡ ವಿಡಿಯೋಗಳೇ ಅದಕ್ಕೆ ಸಾಕ್ಷಿ. ಮನೆಯಲ್ಲಿ ಖಾಲಿ ಇದ್ದರೆ ಸಾಕು ವರ್ಕೌಟ್​ ಮಾಡೋಕೆ ಆರಂಭಿಸುತ್ತಾರೆ. ಅವರ ಅಭಿನಯದ ಯುವರತ್ನ ಸಿನಿಮಾದಲ್ಲಿ ಕಾಲೇಜು ವಿದ್ಯಾರ್ಥಿ ಪಾತ್ರದಲ್ಲಿ ನಟಿಸುತ್ತಿದ್ದು, ಅದಕ್ಕಾಗಿಯೂ ಸಿಕ್ಕಾಪಟ್ಟೆ ವರ್ಕೌಟ್ ಮಾಡಿದ್ದಾರಂತೆ ಅಪ್ಪು.


ಪುನೀತ್ ಅವರು ವರ್ಕೌಟ್​ ಜೊತೆಗೆ ಸೈಕ್ಲಿಂಗ್​ ಸಹ ಮಾಡುತ್ತಾರೆ. ಆಗಾಗ ಸೈಕಲ್ ಹತ್ತಿ ನಂದಿಬೆಟ್ಟಕ್ಕೂ ಹೋಗುತ್ತಾರೆ ಅಪ್ಪು. ಯೂಟ್ಯೂಬ್​ನಲ್ಲಿರುವ ಪಿಆರ್​ಕೆ ಆಡಿಯೋ ಚಾನೆಲ್​ನಲ್ಲಿ ತಮ್ಮ ಸೈಕ್ಲಿಂಗ್​ ವಿಡಿಯೋ ಪೋಸ್ಟ್​ ಮಾಡಿದ್ದಾರೆ. ಈ ವಿಡಿಯೋ ಅಭಿಮಾನಿಗಳಿಗೆ ಸಖತ್ ಇಷ್ಟವಾಗುತ್ತಿದೆ.









View this post on Instagram





A day without workout is a day wasted.....


A post shared by Puneeth Rajkumar (@puneethrajkumar.official) on





ಪುನೀತ್​ ಬೆಳಗೆದ್ದು ಸೈಕಲ್​ ಹತ್ತಿ ಸದಾಶಿವನಗರದಲ್ಲಿರುವ ತಮ್ಮ ನಿವಾಸದಿಂದ ಹೊರಟು ವಿಧಾನಸೌಧದ ಸುತ್ತಮುತ್ತ ಸುತ್ತಾಡುತ್ತಾರೆ. ಸೈಕಲ್​ನಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಓಡಾಡಿರುವ ವಿಡಿಯೋವನ್ನು ಹಂಚಿಕೊಂಡಿರುವ ಪುನೀತ್ ಪೆಡಲ್​ ಟುವರ್ಡ್ಸ್​ ಫಿಟ್​ ಮಾರ್ನಿಂಗ್​- ನಮ್ಮ ಬೆಂಗಳೂರು ಎಂದು ಬರೆದುಕೊಂಡಿದ್ದಾರೆ.




ನಿತ್ಯ ಆರೋಗ್ಯಕ್ಕಾಗಿ ಪೆಡಲ್​ ಮಾಡಿ ಅಂದರೆ ಸೈಕಲ್ ತುಳಿಯಿರಿ ಎಂಬ ಸಂದೇಶದೊಂದಿಗೆ ಈ ವಿಡಿಯೋ ಹಂಚಿಕೊಂಡಿದ್ದಾರೆ. ಆದರೆ ಖಾಲಿ ಇರುವ ರಸ್ತೆಗಳನ್ನು ನೋಡಿದರೆ, ಈ ವಿಡಿಯೋವನ್ನು ನೋಡಿದ ಅಭಿಮಾನಿಗಳು ನಮ್ಮ ಏರಿಯಾಗೆ ಬಂದಿದ್ದಾರೆ ಎಂದು ಖುಷಿಯಿಂದ ಕಮೆಂಟ್​ ಮಾಡುತ್ತಿದ್ದಾರೆ.




ಪುನೀತ್​ ರಾಜ್​ ಕುಮಾರ್ ಸಂತೋಷ್​ ಆನಂದ್​ ರಾಮ್​ ಅವರ ಕಾಂಬಿನೇಷನ್​ನಲ್ಲಿ ಬರುತ್ತಿರುವ ಸಿನಿಮಾ ಯುವರತ್ನ. ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ಈ ಸಿನಿಮಾದ ಡಬ್ಬಿಂಗ್​ ಕೆಲಸ ಆರಂಭವಾಗಿತ್ತು. ಈ ಬಗ್ಗೆ ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.


ಇದನ್ನೂ ಓದಿ: Chhota Shakeel Exclusive: ರಿಯಾಗೆ ಭೂಗತ ಜಗತ್ತಿನ ಜೊತೆಗೆ ನಂಟಿರುವ ಕುರಿತು ಮಾತನಾಡಿರುವ ಛೋಟಾ ಶಕೀಲ್​ ..!


ಈ ಪೋಸ್ಟ್​ನಿಂದಾಗಿ ಅಪ್ಪು ಅಭಿಮಾನಿಗಳಿಗೆ ಖುಷಿಯಾಗಿದ್ದರು. ಆದರೆ ಈಗ ಈ ಚಿತ್ರದ ಹಾಡನ್ನು ರಿಲೀಸ್​ ಮಾಡುವಂತೆ ಬಹಳ ಸಮಯದಿಂದ ಒತ್ತಡ ಹೇರುತ್ತಿದ್ದಾರೆ. ಅಪ್ಪು ಹಂಚಿಕೊಂಡಿರುವ ಸೈಕಲ್​ ವಿಡಿಯೋದ ಕಮೆಂಟ್​ ಬಾಕ್ಸ್​ನಲ್ಲೂ ಇದೇ ಬೇಡಿಕೆಯನ್ನು ಇಡುತ್ತಿದ್ದಾರೆ ಫ್ಯಾನ್ಸ್​.

Published by:Anitha E
First published: