ರಾಜ್​ಕುಮಾರ್​ ಕುಟುಂಬಕ್ಕೆ ಹುಬ್ಬಳ್ಳಿ ಅಂದ್ರೆ ತುಂಬಾ ವಿಶೇಷ ಪ್ರೀತಿ: ಕಾರಣ ಹೇಳಿದ ಪುನೀತ್​..!

ಮಾ.23ರಂದು ಮೈಸೂರಿನ ಮಾನಸಗಂಗೋತ್ರಿ ಆವರಣದಲ್ಲಿರುವ ಓಪನ್​ ಏರ್​ ಥಿಯೇಟರ್​ನಲ್ಲಿ ಬೆಳಿಗ್ಗೆ 1ಕ್ಕೆ ಹಾಗೂ ಮಧ್ಯಾಹ್ನ 1:30ಕ್ಕೆ ಮಂಡ್ಯದ ಸಿಲ್ವರ್​ ಜುಬಿಲಿ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಯುವರತ್ನ ಸಿನಿಮಾದ ಎರಡನೇ ಹಂತದ ಯುವಸಂಭ್ರಮ ಕಾರ್ಯಕ್ರಮ ದಿನಾಂಕವನನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸಲಾಗುವುದು ಎಂದು ಹೇಳಲಾಗುತ್ತಿದೆ.

ಹುಬ್ಬಳ್ಳಿಯಲ್ಲಿ ಯುವರತ್ನ ಚಿತ್ರತಂಡ

ಹುಬ್ಬಳ್ಳಿಯಲ್ಲಿ ಯುವರತ್ನ ಚಿತ್ರತಂಡ

  • Share this:
ಪುನೀತ್​ ರಾಜ್​ಕುಮಾರ್​ ಅಭಿನಯದ ಯುವರತ್ನ ಸಿನಿಮಾದ ಪ್ರಚಾರ ಕಾರ್ಯಕ್ಕೆ 21ರಂದು ಕಿಕ್​ ಸ್ಟಾರ್ಟ್​ ಸಿಕ್ಕಿದೆ. ಅದೂ ಕೂಡ ನಿನ್ನೆ ಬೆಳಿಗ್ಗೆ 10:30ಕ್ಕೆ ಕಲಬುರ್ಗಿಯಲ್ಲಿ ಯುವಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ಚಿತ್ರತಂಡ ಸಿನಿಮಾ ಪ್ರಚಾರ ಕಾರ್ಯವನ್ನು ಅಧಿಕೃವಾಗಿ ಆರಂಭಿಸಿದೆ. ಪುನೀತ್​ ರಾಜ್​ಕುಮಾರ್​, ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಸೇರಿದಂತೆ ಇಡೀ ಚಿತ್ರತಂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಅಭಿಮಾನಿಗಳನ್ನು ರಂಜಿಸಿದ್ದಾರೆ. ಪುನೀತ್​ ಅವರನ್ನು ನೋಡಲು ಲಕ್ಷಗಟ್ಟಲೆ ಜನರು ಗುಂಪು ಗುಂಪಾಗಿ ಸೇರಿದ್ದರು. ಬೆಳಿಗ್ಗೆ ಕಲಬುರ್ಗಿ, ಮಧ್ಯಾಹ್ನ ಬೆಳಗಾವಿ ಹಾಗೂ ಸಂಜೆ ಹುಬ್ಬಳ್ಳಿಯಲ್ಲಿ ಯುವಸಂಭ್ರಮ ಅದ್ದೂರಿಯಾಗಿ ನೆರವೇರಿತು. ಇನ್ನೇನು ಕೆಲವೇ ದಿನಗಳಲ್ಲಿ ಯುವರತ್ನ ಸಿನಿಮಾ ಬೆಳ್ಳಿ ಪರದೆಗೆ ಅಪ್ಪಳಿಸಲಿದೆ. ಲಾಕ್​ಡೌನ್​ ತೆರೆವುಗೊಂಡ ನಂತರ ರಿಲೀಸ್​ ಆಗುತ್ತಿರುವ ಪುನೀತ್​ ಅಭಿನಯದ ಸಿನಿಮಾ ಇದಾಗಿದೆ. 

ಏ.1ಕ್ಕೆ ಅಪ್ಪು ಯುವರತ್ನನಾಗಿ ಗ್ರ್ಯಾಂಡ್​ ಎಂಟ್ರಿ ಕೊಡಲಿದ್ದಾರೆ. ಈ ಸಲ ಕನ್ನಡದ ಜೊತೆ ತೆಲುಗಿನಲ್ಲೂ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ಟೀಸರ್​, ಹಾಡುಗಳು ಹಾಗೂ ಟ್ರೇಲರ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ರಾಜ್​ಕುಮಾರ್ ಕುಟುಂಬಕ್ಕೆ ಹುಬ್ಬಳ್ಳಿ ತುಂಬಾ ವಿಶೇಷ. ಕಾರಣ ಅಲ್ಲಿರುವ ಸಿದ್ಧಾರೂಢರ ಮಠ. ರಾಜ್​ಕುಮಾರ್ ಅವರು ತಮ್ಮ ಮೊದಲ ಸಿನಿಮಾ ಮಾಡಲು ಚೆನ್ನೈಗೆ ಹೋದಾಗ, ಪುನೀತ್​ ಅವರ ಅಜ್ಜಿ ಅವರನ್ನು 5 ತಿಂಗಳು ಇಲ್ಲೇ ಬಿಟ್ಟಿದ್ದರಂತೆ. ಅದಕ್ಕೆ ದೊಡ್ಮನೆಯವರಿಗೆ ಮಠ ಎಂದರೆ ತುಂಬಾ ಪ್ರೀತಿ. ದೊಡ್ಮನೆಯಿಂದ ಯಾರೇ ಭೇಟಿ ನೀಡಿದರೂ ಮಠಕ್ಕೆ ಭೇಟಿ ನೀಡದೆ ಹೋಗುವುದೇ ಇಲ್ಲ ಎನ್ನುತ್ತಾರೆ ಅಪ್ಪು.

Why I love coming back to Hubballi & Dharwad#Yuvarathnaa #Yuvasambhrama #PowerInU pic.twitter.com/HLZXlXyq5aಇಂದು ಬೆಳಿಗ್ಗೆ 9ಕ್ಕೆ ಬಳ್ಳಾರಿಯ ದುರ್ಗಾಂಬ ದೇವಾಲಯದಲ್ಲಿ, ಮಧ್ಯಾಹ್ನ 1ಕ್ಕೆ ಚಿತ್ರದುರ್ಗದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಾಗೂ ಸಂಜೆ 4:30ಕ್ಕೆ ತುಮಕೂರಿನ ಎಸ್​ಐಟಿ ಎಂಜಿನಿಯರಿಂಗ್​ ಕಾಲೇಜು ಮೈದಾನದಲ್ಲಿ ಅಪ್ಪು ಜೊತೆ ಯುವಸಂಭ್ರಮ ಕಾರ್ಯಕ್ರಮ ನಡೆಯಲಿದೆ.ಮಾ.23ರಂದು ಮೈಸೂರಿನ ಮಾನಸಗಂಗೋತ್ರಿ ಆವರಣದಲ್ಲಿರುವ ಓಪನ್​ ಏರ್​ ಥಿಯೇಟರ್​ನಲ್ಲಿ ಬೆಳಿಗ್ಗೆ 1ಕ್ಕೆ ಹಾಗೂ ಮಧ್ಯಾಹ್ನ 1:30ಕ್ಕೆ ಮಂಡ್ಯದ ಸಿಲ್ವರ್​ ಜುಬಿಲಿ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಯುವರತ್ನ ಸಿನಿಮಾದ ಎರಡನೇ ಹಂತದ ಯುವಸಂಭ್ರಮ ಕಾರ್ಯಕ್ರಮ ದಿನಾಂಕವನನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸಲಾಗುವುದು ಎಂದು ಹೇಳಲಾಗುತ್ತಿದೆ.

ಸಂತೋಷ್ ಆನಂದರಾಮ್ ನಿರ್ದೇಶನದ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟಿಸಿರುವ ಸಿನಿಮಾ ಯುವರತ್ನ ಈಗಾಗಲೇ ಸಿನಿಮಾದ ರಿಲೀಸ್​ ದಿನಾಂಕ ಪ್ರಕಟಿಸಿರುವ ಚಿತ್ರತಂಡ ಈಗ ಪ್ರೀ-ರಿಲೀಸ್​ ಇವೆಂಟ್​ ತಯಾರಿಯಲ್ಲಿದೆ. ನಾಳೆಯಿಂದ ಸಿನಿಮಾದ ಪ್ರಚಾರ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ಸಿಗಲಿದೆ.
Published by:Anitha E
First published: