• Home
  • »
  • News
  • »
  • entertainment
  • »
  • Puneeth Rajkumar on Gandhadagudi: ನಿಮ್ಮನ್ನೆಲ್ಲ ನೋಡುವ ಕಾತರದಲ್ಲಿ! ಗಂಧದಗುಡಿ ಕುರಿತು ಟ್ವೀಟ್ ಮಾಡಿದ ಅಪ್ಪು!

Puneeth Rajkumar on Gandhadagudi: ನಿಮ್ಮನ್ನೆಲ್ಲ ನೋಡುವ ಕಾತರದಲ್ಲಿ! ಗಂಧದಗುಡಿ ಕುರಿತು ಟ್ವೀಟ್ ಮಾಡಿದ ಅಪ್ಪು!

ಅಪ್ಪು ಅಭಿನಯದ ಗಂಧದಗುಡಿ

ಅಪ್ಪು ಅಭಿನಯದ ಗಂಧದಗುಡಿ

ಹೌದು, ಗಂಧದಗುಡಿ ಸಿನಿಮಾದ ಕುರಿತಂತೆ ಪುನೀತ್ ರಾಜ್‌ಕುಮಾರ್ ಅವರ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ನಿಮ್ಮನ್ನೆಲ್ಲ ನೋಡುವ ಕಾತುರದಲ್ಲಿ... Looking forward to see you all in the theaters ಬರೆದು, ಜೊತೆಗೆ ಹಾರ್ಟ್ ಸಿಂಬಲ್ ಹಾಕಿ ಟ್ವೀಟ್ ಮಾಡಲಾಗಿದೆ.

  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Power Star Puneeth Rajkumar) ಅಭಿನಯದ ಗಂಧದ ಗುಡಿಯ (Gandhada Gudi) ಪ್ರೀಮಿಯರ್ ಶೋ (premiere show) ಈಗಾಗಲೇ ಶುರುವಾಗಿದೆ. ಒಂದೆಡೆ ಚಿತ್ರರಂಗ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಅಪ್ಪು (Appiu) ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ರಾಜ್ಯಾದ್ಯಂತ ದೊಡ್ಮನೆ ಹುಡುಗನ ಅಭಿಮಾನಿಗಳು (Fans), ಪುನೀತ್ ಹಬ್ಬವನ್ನೇ ಮಾಡುತ್ತಿದ್ದಾರೆ. ಈ ನಡುವೆ ಪುನೀತ್ ರಾಜ್‌ಕುಮಾರ್ ಅವರೇ ಗಂಧಗುಡಿ ಸಿನಿಮಾದ ಬಗ್ಗೆ ತಮ್ಮ ಟ್ವಿಟರ್ (Twitter) ಖಾತೆಯಲ್ಲಿ ಟ್ವೀಟ್ (Tweet) ಮಾಡಿದ್ದಾರೆ. ಅರೇ ಇದು ಆಶ್ಚರ್ಯವಾದರೂ ಸತ್ಯ! “ನಿಮ್ಮನ್ನೆಲ್ಲ ನೋಡುವ ಕಾತುರದಲ್ಲಿ...” ಅಂತ ಪುನೀತ್ ರಾಜ್‌ಕುಮಾರ್ ಅವರ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ಅದಕ್ಕೆ ಅಪ್ಪು ಅಭಿಮಾನಿಗಳು ಲೈಕ್ಸ್ ಒತ್ತುತ್ತಿದ್ದು, ಹಲವು ಬಾರಿ ಶೇರ್ ಆಗುತ್ತಿದೆ.  


 ಪುನೀತ್ ರಾಜ್‌ಕುಮಾರ್ ಟ್ವೀಟ್!


ಹೌದು, ಗಂಧದಗುಡಿ ಸಿನಿಮಾದ ಕುರಿತಂತೆ ಪುನೀತ್ ರಾಜ್‌ಕುಮಾರ್ ಅವರ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ನಿಮ್ಮನ್ನೆಲ್ಲ ನೋಡುವ ಕಾತುರದಲ್ಲಿ... Looking forward to see you all in the theaters ಬರೆದು, ಜೊತೆಗೆ ಹಾರ್ಟ್ ಸಿಂಬಲ್ ಹಾಕಿ ಟ್ವೀಟ್ ಮಾಡಲಾಗಿದೆ.



ಅಪ್ಪು ಟ್ವೀಟ್‌ಗೆ ಫ್ಯಾನ್ಸ್ ಫಿದಾ!


ಅಪ್ಪು ನಿಧನದ ನಂತ್ರ ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಟ್ವೀಟರ್ ಖಾತೆಯಿಂದ ಇಂದೇ  ಟ್ವೀಟ್ ಮಾಡಲಾಗಿದೆ. ಕಳೆದ ವರ್ಷ ಅಕ್ಟೋಬರ್‌ 26 ಕ್ಕೆ ಗಂಧದಗುಡಿ ಅಪ್ಡೇಟ್ ಬಗ್ಗೆ ಅಪ್ಪು ಟ್ವೀಟ್ ಮಾಡಿದ್ರು.  ಅಪ್ಪು ಆ ಟ್ವೀಟ್ ಮಾಡಿದ ಮೂರು ದಿನಕ್ಕೆ ನಮ್ಮನ್ನು ಅಗಲಿದ್ದರು. ಇನ್ನು ಕೊನೆಯದಾಗಿ ಶಿವರಾಜ್‌ಕುಮಾರ್ ಅಭಿನಯದ ಭಜರಂಗಿ 2 ಸಿನಿಮಾದ ಕುರಿತಂತೆ ಪುನೀತ್ ರಾಜ್‌ಕುಮಾರ್ ಟ್ವೀಟ್ ಮಾಡಿದ್ದರು.  ಅಪ್ಪು ಈಗ ಮತ್ತೆ ಅದೇ ಗಂಧದಗುಡಿಗಾಗಿ ಪುನೀತ್ ರಾಜ್ ಕುಮಾರ್ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡವಾಗಿದ್ದು,  ಅಪ್ಪು ಜೀವಂತ ಅಂತ ಫ್ಯಾನ್ಸ್ ಭಾವುಕರಾಗಿದ್ದಾರೆ.




 ಇದನ್ನೂ ಓದಿ: Gandhadagudi: ಶುರುವಾಯ್ತು ಗಂಧದಗುಡಿಯ ಕಂಪು, ಅಪ್ಪು ಕಣ್ತುಂಬಿಕೊಳ್ಳಲು ಬಂದ ಸೆಲಬ್ರಿಟಿಗಳು


 ಗಂಧದಗುಡಿ ಪ್ರೀಮಿಯರ್ ಶೋ


ಗಂಧದ ಗುಡಿಯ (Gandhadagudi) ಕಂಪು ಶುರುವಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Power star Puneeth Rajkumar) ಅಭಿನಯದ ಬಹು ನಿರೀಕ್ಷಿತ ಗಂಧದಗುಡಿ ಪ್ರದರ್ಶನ (Show) ಆರಂಭವಾಗಿದೆ. ಬೆಂಗಳೂರಿನ ಓರಾಯನ್ ಮಾಲ್‌ನಲ್ಲಿ (Orian Mall, Bengaluru) ಸೆಲಬ್ರಿಟಿ ಪ್ರೀಮಿಯರ್ ಶೋ (Celebrity Premior Show) ಆರಂಭವಾಗಿದೆ. ಅಪ್ಪು ಅಭಿನಯದ ಕೊನೆಯ ಸಿನಿಮಾ (Last Movie) ನೋಡಿ, ‘ದೊಡ್ಮನೆ ಹುಡುಗ’ನ ಅಭಿನಯವನ್ನು ಕಣ್ತುಂಬಿಕೊಳ್ಳಲು, ಕರುನಾಡಿನ ಪ್ರಕೃತಿ ಸೌಂದರ್ಯದಲ್ಲಿ ಮಿಂದೆದ್ದಿ ಬರಲು ಅನೇಕ ಸೆಲಬ್ರಿಟಿಗಳು ಆಗಮಿಸಿದ್ದಾರೆ.


ಅಪ್ಪು ನೋಡಲು ಬಂದ ದೊಡ್ಮನೆ ಸದಸ್ಯರು


ಒರಾಯಿನ್ ಮಾಲ್‌ನಲ್ಲಿ ಸೆಲಬ್ರಿಟಿ ಪ್ರೀಮಿಯರ್ ಶೋ ಆರಂಭವಾಗಿದೆ. ರಾಘವೇಂದ್ರ ರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ದೊಡ್ಮನೆ ಸದಸ್ಯರೆಲ್ಲ ಆಗಮಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ಕಿರಿಯ ಪುತ್ರಿ, ರಾಘವೇಂದ್ರ ರಾಜ್‌ಕುಮಾರ್ ಪುತ್ರರು ಸೇರಿದಂತೆ ಹಲವರು ಉಪಸ್ಥಿತರಿದ್ದಾರೆ.


ಇದನ್ನೂ ಓದಿ: Gandhada Gudi: ದೊಡ್ಮನೆ ದೊರೆಗೆ ಕ್ರಿಕೆಟಿಗರ ಅಭಿಮಾನದ ಪ್ರೀತಿ, ಗಂಧದಗುಡಿಗೆ ಟೀಂ ಇಂಡಿಯಾ ಆಟಗಾರರ ಶುಭಹಾರೈಕೆ!


ಪವರ್ ಸ್ಟಾರ್‌ ಕಣ್ತುಂಬಿಕೊಳ್ಳಲು ಆಗಮಿಸಿದ ಸೆಲಬ್ರಿಟಿಗಳು


ಇನ್ನು ಪವರ್ ಸ್ಟಾರ್ ಕಣ್ತುಂಬಿಸಿಕೊಳ್ಳಲು ಸೆಲಬ್ರಿಟಿಗಳ ದೊಡ್ಡ ದಂಡೇ ಬಂದಿದೆ. ಚಿತ್ರ ನಟಿ ರಮ್ಯಾ, ಇನ್ಫೋಸಿಸ್‌ನ ಸುಧಾ ಮೂರ್ತಿ, ನಟಿ ನಿಶ್ವಿಕಾ ನಾಯ್ಡು ಸೇರಿದಂತೆ ಹಲವು ನಟ ನಟಿಯರು ಆಗಮಿಸಿದ್ದಾರೆ. ಇನ್ನು ಇಡೀ ಕಾಂತಾರಾ ಚಿತ್ರತಂಡ ಗಂಧದಗುಡಿ ಪ್ರೀಮಿಯರ್ ಶೋಗೆ ಆಗಮಿಸಿದೆ.

Published by:Annappa Achari
First published: