Appu ಕೊನೆಯದಾಗಿ ನೋಡಿ ಮನಸಾರೆ ನಕ್ಕಿದ್ದ ಸಿನಿಮಾ ರಿಲೀಸ್​ಗೆ ರೆಡಿ : ಫೆ.3ಕ್ಕೆ `ಒನ್​ ಕಟ್​​ ಟು ಕಟ್’ ಚಿತ್ರ​ ಬಿಡುಗಡೆ

ದಾನಿಶ್​ ಕಂಡರೆ ಅಪ್ಪುಗೂ ಅಚ್ಚುಮೆಚ್ಚು. ಈ ಬಗ್ಗೆ ಹಲವಾರು ಸಂದರ್ಶನದಲ್ಲೂ ಹೇಳಿದ್ದರು. ‘ಒನ್​ ಕಟ್​ ಟು ಕಟ್’​ ಸಿನಿಮಾದ ಕೆಲ ದೃಶಗಳನ್ನು ನೋಡಿ ಸಿಕ್ಕಾಪಟ್ಟೆ ಎಂಜಾಯ್​ ಮಾಡಿದ್ದರು. ಈಗ ಆ ಸಿನಿಮಾವನ್ನು ಕನ್ನಡಿಗರ ಮುಂದೆ ತರಲು ಅಮೇಜಾನ್​ ಪ್ರೈಮ್​(Amazon Prime) ಮುಂದಾಗಿದೆ.

ದಾನಿಶ್​ ಸೇಠ್​, ಅಪ್ಪು

ದಾನಿಶ್​ ಸೇಠ್​, ಅಪ್ಪು

  • Share this:
ಪವರ್ ಸ್ಟಾರ್(Power Star) ನಮ್ಮ ಜೊತೆಯಲ್ಲೇ ಇದ್ದಾರೆ. ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಅಪ್ಪು ಎಂದಿಗೂ ಅಮರ.. ಅಜರಾಮರ.. ಅಪ್ಪು(Appu) ಅವರ ‘ಜೇಮ್ಸ್​’(James) ಸಿನಿಮಾದಲ್ಲಿ ಅಣ್ಣಾವ್ರ ಮೂರು ಮುತ್ತುಗಳು ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ವಿಚಾರ ಅಭಿಮಾನಿಗಳಿಗೆ ಸಂತಸ ಮೂಡಿಸಿತ್ತು. ಇದೀಗ ಅಪ್ಪು ಅವರು ಕೊನೆಯದಾಗಿ ಒಂದು ಸಿನಿಮಾ ನೋಡಿ ಮನಸಾರೆ ನಕ್ಕಿದ್ದರಂತೆ. ಇನ್ನೂ ಚಿತ್ರ ಕಂಪ್ಲೀಟ್​ ಆಗಿರಲಿಲ್ಲ. ಕೆಲವೊಂದು ದೃಶ್ಯಗಳನ್ನು ಕಂಡ ಅಪ್ಪು ತುಂಬಾ ಎಂಜಾಯ್​ ಮಾಡಿದ್ದರಂತೆ. ಇದೀಗ ಆ ಸಿನಿಮಾ ರಿಲೀಸ್​ಗೆ ರೆಡಿಯಾಗಿದೆ. ಹೌದು, ಪಿಆರ್​ಕೆ ಪ್ರೋಡಕ್ಷನ್​ ಅವರ ಮತ್ತೊಂದು ಸಿನಿಮಾ, ‘ಒನ್​ ಕಟ್​ ಟು ಕಟ್’(One Cut Two Cut)​ ಸಿನಿಮಾ ಅಮೇಜಾನ್​ ಪ್ರೈಮ್(Amazon Prime)​ನಲ್ಲಿ ಫೆಬ್ರವರಿ 3ರಂದು ಬಿಡುಗಡೆಯಾಗುತ್ತಿದೆ. ಮುಖ್ಯ ಭೂಮಿಕೆಯಲ್ಲಿ ದಾನಿಶ್​ ಸೇಠ್​(Danish Sait) ನಟಿಸಿದ್ದಾರೆ. ಈ ಹಿಂದೆ ಪಿಆರ್​ಕೆ ಪ್ರೊಡಕ್ಷನ್​ನಿಂದ ಬಂದಿದ್ದ ಫ್ರೆಂಚ್​ ಬಿರಿಯಾನಿ ಸಿನಿಮಾದಲ್ಲಿ ದಾನಿಶ್​ ಸೇಠ್​ ನಟಿಸಿದ್ದರು. ದಾನಿಶ್​ ಕಂಡರೆ ಅಪ್ಪುಗೂ ಅಚ್ಚುಮೆಚ್ಚು. ಈ ಬಗ್ಗೆ ಹಲವಾರು ಸಂದರ್ಶನದಲ್ಲೂ ಹೇಳಿದ್ದರು. ‘ಒನ್​ ಕಟ್​ ಟು ಕಟ್’​ ಸಿನಿಮಾದ ಕೆಲ ದೃಶಗಳನ್ನು ನೋಡಿ ಸಿಕ್ಕಾಪಟ್ಟೆ ಎಂಜಾಯ್​ ಮಾಡಿದ್ದರು. ಈಗ ಆ ಸಿನಿಮಾವನ್ನು ಕನ್ನಡಿಗರ ಮುಂದೆ ತರಲು ಅಮೇಜಾನ್​ ಪ್ರೈಮ್​(Amazon Prime) ಮುಂದಾಗಿದೆ.

ಫೆಬ್ರವರಿ 3ಕ್ಕೆ ‘ಒನ್​ ಕಟ್​ ಟು ಕಟ್​’ ಬಿಡುಗಡೆ!

ವಂಶೀಧರ ಭೋಗರಾಜ್ ನಿರ್ದೇಶನದ ಡ್ಯಾನಿಶ್ ಸೇಠ್ ಅಭಿನಯದ ಪಿಆರ್ ಕೆ ಪ್ರೊಡಕ್ಷನ್ ಹೌಸ್ ನ ಒನ್ ಕಟ್ ಟು ಕಟ್ ಹಾಸ್ಯಪ್ರಧಾನ ಚಿತ್ರ ಫೆಬ್ರವರಿ 3ರಂದು ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಬಿಡುಗಡೆಯಾಗಲಿದೆ. ಪುನೀತ್ ರಾಜ್ ಕುಮಾರ್ ಅವರು ಆರಂಭಿಸಿದ್ದ ಈಗ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ನಡೆಸಿಕೊಂಡು ಹೋಗುತ್ತಿರುವ ಪಿಆರ್ ಕೆ ಪ್ರೊಡಕ್ಷನ್ ಹೌಸ್ ಸಂಸ್ಥೆಯ ನಿರ್ಮಾಣದ ಮೂರು ಚಿತ್ರಗಳು ತನ್ನ ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಲಿದೆ ಎಂದು ಅಮೆಜಾನ್ ಪ್ರೈಮ್ ಈ ಹಿಂದೆ ಪ್ರಕಟಿಸಿತ್ತು. ಪುನೀತ್ ಗೌರವಾರ್ಥ ಅವರು ನಟಿಸಿರುವ 5 ಚಿತ್ರಗಳನ್ನು ಫೆಬ್ರವರಿ ತಿಂಗಳಿನಲ್ಲಿ ಪ್ರೇಕ್ಷಕರಿಗೆ ಉಚಿತವಾಗಿ ತೋರಿಸಲಾಗುವುದು ಎಂದು ಕೂಡ ಪ್ರಕಟಿಸಿದೆ.



ಇದನ್ನು ಓದಿ: ಒಂದೇ ಸಿನಿಮಾದಲ್ಲಿ ಅಣ್ಣಾವ್ರ ಮೂರು ಮುತ್ತುಗಳು: ಅಮ್ಮನ ಆಸೆ ನೆರವೇರಿತು, ಆದ್ರೆ ಅಪ್ಪುನೇ ಜೊತೆ ಇಲ್ಲ!

ಕನ್ನಡ ಶಿಕ್ಷಕ ಗೋಪಿ ಪಾತ್ರದಲ್ಲಿ ದಾನಿಶ್​ ಸೇಠ್​!

ಕನ್ನಡ ಕಾಮಿಡಿ ಡ್ರಾಮಾ ಆಗಿರುವ 'ಒನ್ ಕಟ್ ಟು ಕಟ್‌' ಚಿತ್ರದಲ್ಲಿ, ಕಾಮಿಡಿ ಪಾತ್ರದಾರಿ, ಕಲಾ ಶಿಕ್ಷಕ ಗೋಪಿಯಾಗಿ ದಾನಿಶ್​​ ಸೇಠ್​ ಕಾಣಿಸಿಕೊಂಡಿದ್ದಾರೆ. ವಿಡಂಬನೆಯ ಜೊತೆಗೆ ಕಾಮಿಡಿ ಮಾತಿನ ಮೂಲಕ ಅವರು ಮನಸೆಳೆಯಲಿದ್ದು, ಇದು 2022ರ ಫೆಬ್ರವರಿ 3 ರಿಂದು ಅಮೆಜಾನ್‌ ಪ್ರೈಮ್ ವಿಡಿಯೋದಲ್ಲಿ ರಿಲೀಸ್​ ಆಗಲಿದೆ. ಇನ್ನೂ ಈ ಚಿತ್ರದಲ್ಲಿ ತ್ರದಲ್ಲಿ ಪ್ರಕಾಶ್ ಬೆಳವಾಡಿ, ವಿನೀತ್ ಬೀಪ್ ಕುಮಾರ್, ಸಂಪತ್ ಮೈತ್ರೇಯ, ಸಹಿತಾನಂದ ಮೊದಲಾದವರು ಕೂಡ ನಟಿಸಿದ್ದಾರೆ.


ಇದನ್ನು ಓದಿ: ‘ಆರ್‌ಆರ್‌ಆರ್’ಗೆ ಡಿಚ್ಚಿ ಕೊಡುತ್ತಾ ‘ಪವರ್‘ ಫುಲ್ ‘ಜೇಮ್ಸ್’? ಬಹುನಿರೀಕ್ಷಿತ ಸಿನಿಮಾಗಳ ರಿಲೀಸ್ ಡೇಟ್ ಕ್ಲಾಶ್

‘ಮಿಷನ್ ಕೋಲಂಬಸ್’ನಲ್ಲಿ ಅಬ್ಬರಿಸಲು ಮನಸ್ಸು ಮಾಡಿದ್ದ ಅಪ್ಪು

ನಿರ್ದೇಶಕ ಮಂಸೋರೆ ಅದ್ಭುತ ಕಥೆಯೊಂದನ್ನು ಮಾಡಿದ್ದರು. ಬೆಲ್ ಬಾಟಂ ಸಿನಿಮಾದ ಕಥೆಗಾರ ಟಿ.ಕೆ.ದಯಾನಂದ ಜೊತೆ ಸೇರಿ ಕಥೆ ಸಿದ್ಧಪಡಿಸಿದ್ದರು. ಅದಕ್ಕೆ ‘ಮಿಷನ್ ಕೋಲಂಬಸ್’ ಅಂತಾನೂ ಹೆಸರಿಟ್ಟಿದ್ದರು. ಅದೇ ಕಥೆಯನ್ನು ಪುನೀತ್ ರಾಜ್ ಕುಮಾರ್ ಇಷ್ಟಪಟ್ಟಿದ್ದರು ಎನ್ನಲಾಗಿದೆ. ಇದರಲ್ಲಿ ಪುನೀತ್ ಎರಡು ಶೇಡ್ ಗಳಲ್ಲಿ ಅಭಿನಯಿಸಬೇಕಿತ್ತಂತೆ. ಇಲ್ಲಿ ಹೀರೋ ಅವರೇ ಆಗಬೇಕಿತ್ತು. ವಿಲನ್ ಕೂಡ ಅವರೇ ಆಗಬೇಕಿತ್ತು. ಈ ಸಿನಿಮಾದ ಕಥಾ ನಾಯಕ ಜೇಮ್ಸ್ ಬಾಂಡ್ ರೀತಿಯಲ್ಲಿ ಸಿಕ್ಕಾ ಪಟ್ಟೆ ಸ್ಟೈಲಿಶ್ ಕಾಣಿಸಿಕೊಳ್ಳಬೇಕಿತ್ತು.
Published by:Vasudeva M
First published: