ಪುನೀತ್ ರಾಜ್ಕುಮಾರ್ (Puneeth Rajkumar) ಅಭಿಮಾನಿಗಳಿಗೆ (Fans) ಇಂದು ಹಬ್ಬ. ಒಂದೆಡೆ ಪವರ್ ಸ್ಟಾರ್ (Power Star) ಹುಟ್ಟುಹಬ್ಬ (Birthday), ಮತ್ತೊಂದೆಡೆ ಅವರು ಕೊನೆಯ ಬಾರಿಗೆ ಅಭಿನಯಿಸಿರುವ ‘ಜೇಮ್ಸ್’ (James) ಸಿನಿಮಾ (Cinema) ರಿಲೀಸ್ (Release) ಆಗಿದೆ. ಇವೆರಡು ಡಬಲ್ (Double) ಸಂಭ್ರಮದ ಜೊತೆಗೆ ಅವರು ನಮ್ಮೊಂದಿಗಿಲ್ಲ ಎಂಬ ನೋವು, ದುಃಖ ಎಲ್ಲರನ್ನೂ ಕಾಡುತ್ತಿದೆ. ಈ ನೋವಿನ ನಡುವೆಯೇ ಪುನೀತ್ ಬರ್ತ್ ಡೇಗೆ ವಿಶ್ (Wish) ಮಾಡುತ್ತಿರೋ ಅಭಿಮಾನಿಗಳು, ಅವರ ಸಿನಿಮಾವನ್ನು ನೋಡಿ ಎಂಜಾಯ್ ಮಾಡ್ತಿದ್ದಾರೆ. ಮುಂಜಾನೆ 5 ಗಂಟೆಯಿಂದಲೇ ರಾಜ್ಯಾದ್ಯಂತ ಜೇಮ್ಸ್ ಜಾತ್ರೆ ಶುರುವಾಗಿದೆ. ಎಂದಿನಂತೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಬ್ಬರಿಸಿದ್ದಾರೆ. ಅವರ ಸಿನಿಮಾ ನೋಡಿದ ಅಭಿಮಾನಿಗಳು “ಜೊತೆಗಿರದ ಜೀವ ಎಂದಿಗೂ ಜೀವಂತ” ಎನ್ನುತ್ತಿದ್ದಾರೆ. “ವೀ ಮಿಸ್ ಯೂ ಅಪ್ಪು” ಅಂತ ಭಾವುಕರಾಗುತ್ತಿದ್ದಾರೆ.
ಮುಂಜಾನೆಯಿಂದಲೇ ಶುರುವಾಗಿದೆ ಜೇಮ್ಸ್ ಜಾತ್ರೆ
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮುಂಜಾನೆ 5 ಗಂಟೆಯಿಂದಲೇ ಜೇಮ್ಸ್ ಜಾತ್ರೆ ಶುರುವಾಗಿದೆ. ಅಪ್ಪು ನೋಡಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ನಿದ್ದೆಗೆಟ್ಟು, ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಿದ್ದಾರೆ. ಮುಂಜಾನೆಯೇ ಫ್ಯಾಮಿಲಿ ಜೊತೆಗೆ ಬಂದು ಸಿನಿಮಾ ನೋಡಿದ್ದಾರೆ.
ವಿಶ್ವದಾದ್ಯಂತ 4 ಸಾವಿರ ಸ್ಕ್ರೀನ್ಗಳಲ್ಲಿ ಜೇಮ್ಸ್ ಅಬ್ಬರ
ಪುನೀತ್ ಅಭಿನಯದ ಜೇಮ್ಸ್ ಸಿನಿಮಾ ಬರೀ ಬೆಂಗಳೂರು ಅಥವಾ ರಾಜ್ಯದಲ್ಲಷ್ಟೇ ಅಲ್ಲ, ಇಡೀ ವಿಶ್ವದಾದ್ಯಂತ ರಿಲೀಸ್ ಆಗಿದೆ. ವಿಶ್ವದಾದ್ಯಂತ ಇಂದು ಸುಮಾರು 4000 ಸ್ಕ್ರೀನ್ ಗಳಲ್ಲಿ ಜೇಮ್ಸ್ ರಿಲೀಸ್ ಆಗಿದೆ.
ಇದನ್ನೂ ಓದಿ: Puneeth Rajkumar: `ರಾಜರತ್ನ’ನಿಲ್ಲದೇ ಮೊದಲ ಹುಟ್ಟುಹಬ್ಬ.. ನಮ್ಮಿಂದ ದೂರಾದರೂ 'ಜೇಮ್ಸ್' ಅವತಾರದಲ್ಲಿ ರಂಜಿಸಿದ ಅಪ್ಪು!
ಬೆಂಗಳೂರಿನಲ್ಲಿ ಅಭಿಮಾನಿಗಳ ಸಾಗರ
ಬೆಂಗಳೂರಿನ ಮಾಗಡಿ ರಸ್ತೆಯ ವೀರೇಶ್ ಚಿತ್ರಮಂದಿರಲ್ಲಿ ಮುಂಜಾನೆ 5 ಗಂಟೆಗೆ ಶೋ ಆರಂಭವಾಗಿದೆ. ಬೆಳ್ಳಂ ಬೆಳಗ್ಗೆಯೆ ಜೇಮ್ಸ್ ಕಣ್ತುಂಬಿ ಕೊಳ್ಳಲು ವೀರೇಶ್ ಚಿತ್ರಮಂದಿರದ ಬಳಿ ಅಭಿಮಾನಿ ಸಾಗರವೇ ಸೇರಿದೆ. ವೀರೇಶ ಚಿತ್ರಮಂದಿರದಲ್ಲಿ ಎರಡು ಸ್ಕ್ರೀನ್ ಗಳಿದ್ದು ಇಂದು 12 ಶೋ ಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆ. ವೀರೇಶ್ ಥಿಯೇಟರ್ ಬಳಿ ಅಪ್ಪು ಕಟೌಟ್ಗೆ 40 ಅಡಿ ಕ್ರೇನ್ ತರಿಸಿ ಹಾರ ಹಾಕಲಾಗಿದೆ. ವೀರೇಶ್ ಚಿತ್ರಮಂದಿರದ ಬಳಿ ಥರ್ಮಕೋಲ್ ನಿಂದ ದೇವಸ್ಥಾನ ನಿರ್ಮಿಸಿ ಅಪ್ಪು ಪೋಟೋ ಇಟ್ಟು ವಿವಿಧ ಹೂ ಗಳಿಂದ ಅಲಂಕಾರ ಮಾಡಲಾಗಿದೆ
.
ನಿಂತು ಕೊಂಡೇ ಸಿನಿಮಾ ವೀಕ್ಷಿಸಿದ ಫ್ಯಾನ್ಸ್!
ಬೆಂಗಳೂರಿನ ವೀರಭದ್ರೇಶ್ವರ ಥಿಯೇಟರ್ ಫಸ್ಟ್ ಶೋ ಹೌಸ್ ಫುಲ್ ಆಗಿದೆ. ಥಿಯೇಟರ್ ಕಿಕ್ಕಿರಿದು ತುಂಬಿತ್ತು. ಕೂರೋದಕ್ಕೆ ಜಾಗ ಇಲ್ಲದೇ ಥಿಯೇಟರ್ ನಲ್ಲಿ ನಿಂತುಕೊಂಡೇ ಅಭಿಮಾನಿಗಳು ಸಿನಿಮಾ ನೋಡಿದ್ರು. ಪರದೆಯ ಮುಂಭಾದದಲ್ಲಿಯೂ ಅಭಿಮಾನಿಗಳು ನಿಂತುಕೊಂಡಿದ್ದು ಕಂಡು ಬಂತು. ಚಿತ್ರದುದ್ದಕ್ಕೂ ಅಪ್ಪು ಅಪ್ಪು ಅಂತ ಕೂಗಿ ಅಭಿಮಾನಿಗಳು, ಪವರ್ ಸ್ಟಾರ್ ಅವರನ್ನು ನೆನೆಸಿಕೊಂಡರು.
ನೆಲದ ಮೇಲೆ ಕುಳಿತು ಸಿನಿಮಾ ನೋಡಿದ ಅಭಿಮಾನಿಗಳು
ರಾಯಚೂರಿನ ನೀಲಕಂಠೇಶ್ವರ ಥಿಯೇಟರ್ ನಲ್ಲಿ ಮುಂಜಾನೆಯೇ ಶೋ ಆರಂಭವಾಗಿದೆ. ಅವಧಿಗೂ ಮುನ್ನ ಶೋ ಆರಂಭವಾಗಿದ್ರೂ ಥಿಯೇಟರ್ ಹೌಸ್ ಫುಲ್ ಆಗಿದೆ. ನೆಲದ ಮೇಲೆಯೂ ಕುಳಿತು ಅಭಿಮಾನಿಗಳು ಶೋ ನೋಡಿದ್ರು. ಸ್ಕ್ರೀನ್ ಮುಂದೆ ನಿಂತು ಕುಣಿದು ಕುಪ್ಪಳಿಸಿದ್ರು.
ಇದನ್ನೂ ಓದಿ: Pics: ಶಿರಸಿ ಮಾರಿಕಾಂಬಾ ಜಾತ್ರೆಯಲ್ಲಿ ಪುನೀತ್ ರಾಜ್ಕುಮಾರ್! ನೀವೇ ಫೋಟೋ ನೋಡಿ
ಚಿಕ್ಕ ಬಳ್ಳಾಪುರದಲ್ಲಿ ಅಪ್ಪು ಅಭಿಮಾನಿಗಳ ಸಂಭ್ರಮ
ಚಿಕ್ಕಬಳ್ಳಾಪುರ ದಲ್ಲಿ ಪುನೀತ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಸಿನಿಮಾ ಟಾಕೀಸ್ ಮುಂದೆ ಲೈಟಿಂಗ್, ಬ್ಯಾನರ್ ಹಾಕಿ, ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರ ನಗರದ ವಾಣಿ ಟಾಕೀಸ್ ಹಾಗೂ ಬಾಲಾಜಿ ಟ್ಯಾಕೀಸ್ ಮುಂದೆ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ಜೇಮ್ಸ್ ಸಿನೆಮಾ ನೋಡಲು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದು, ಸಿನಿಮಾ ಆರಂಭಕ್ಕೂ ಮುನ್ನಾ ಅಭಿಮಾನಿಗಳ ನೂಕು ನುಗ್ಗಲು ಉಂಟಾಯ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ