Puneeth Rajkumar: ಮೊದಲ ದಿನವೇ 'ಕೆಜಿಎಫ್‌' ದಾಖಲೆ ಮುರಿದ 'ಜೇಮ್ಸ್'! 'ಪವರ್ ಸ್ಟಾರ್' ಅಬ್ಬರಕ್ಕೆ ಬಾಕ್ಸ್ ಆಫೀಸ್ ಶೇಕ್!

ಬರೀ ಕರ್ನಾಟಕ ಅಷ್ಟೇ ಅಲ್ಲದೇ, ವಿಶ್ವದಾದ್ಯಂತ ‘ಅಪ್ಪು’ ಅಭಿಮಾನಿಗಳು 'ಜೇಮ್ಸ್' ಸಿನಿಮಾವನ್ನು ಬಿಗಿದಪ್ಪಿದ್ದಾರೆ. ಸಿನಿಮಾ ರಿಲೀಸ್ ಆಗಿದೆ ಎಂಬ ಸಂತೋಷದಿಂದ, ತಮ್ಮ ನೆಚ್ಚಿನ ಹೀರೋ ಜೊತೆಗಿಲ್ಲ ಎಂಬ ದುಃಖದಿಂದಲೇ ಸಿನಿಮಾ ನೋಡಿದ್ದಾರೆ. ಇದೀಗ ಜೇಮ್ಸ್ ಸಿನಿಮಾ ದಾಖಲೆ ಮೇಲೆ ದಾಖಲೆ ಬರೆಯುತ್ತಾ ಇದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾದ ದಾಖಲೆಯನ್ನೇ ಜೇಮ್ಸ್ ಮುರಿದಿದೆ.

ಜೇಮ್ಸ್ ಮತ್ತು ಕೆಜಿಎಫ್‌ ಸಿನಿಮಾ

ಜೇಮ್ಸ್ ಮತ್ತು ಕೆಜಿಎಫ್‌ ಸಿನಿಮಾ

  • Share this:
ಬಹು ನಿರೀಕ್ಷಿತ ಸಿನಿಮಾ (Cinema), ಪವರ್ ಸ್ಟಾರ್ (Power Star) ಪುನೀತ್ ರಾಜ್‌ಕುಮಾರ್ (Puneeth Rajkumar) ಅಭಿನಯದ ಕೊನೆಯ ಚಿತ್ರ (Last Movie) ‘ಜೇಮ್ಸ್’ (James) ನಿನ್ನೆ ರಿಲೀಸ್ ಆಗಿದೆ. ಬರೀ ಕರ್ನಾಟಕ ಅಷ್ಟೇ ಅಲ್ಲದೇ, ವಿಶ್ವದಾದ್ಯಂತ ‘ಅಪ್ಪು’ (Appu) ಅಭಿಮಾನಿಗಳು (Fans) ಜೇಮ್ಸ್ ಸಿನಿಮಾವನ್ನು ಬಿಗಿದಪ್ಪಿದ್ದಾರೆ. ಸಿನಿಮಾ ರಿಲೀಸ್ ಆಗಿದೆ ಎಂಬ ಸಂತೋಷದಿಂದ, ತಮ್ಮ ನೆಚ್ಚಿನ ಹೀರೋ (Hero) ಜೊತೆಗಿಲ್ಲ ಎಂಬ ದುಃಖದಿಂದಲೇ ಸಿನಿಮಾ ನೋಡಿದ್ದಾರೆ. ಇದೀಗ ಜೇಮ್ಸ್ ಸಿನಿಮಾ ದಾಖಲೆ  (Record) ಮೇಲೆ ದಾಖಲೆ ಬರೆಯುತ್ತಾ ಇದೆ. ರಾಕಿಂಗ್ ಸ್ಟಾರ್ (Rocking Star) ಯಶ್ (Yash) ಅಭಿನಯದ ಕೆಜಿಎಫ್ (KGF) ಸಿನಿಮಾದ ದಾಖಲೆಯನ್ನೇ ಜೇಮ್ಸ್ ಮುರಿದಿದೆ. ಒಂದು ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ (Box Office Collection) ವಿಚಾರದಲ್ಲಿ ಕೆಜಿಎಫ್‌ ದಾಖಲೆಯನ್ನು ಜೇಮ್ಸ್ ಮುರಿದಿದೆ ಎನ್ನಲಾಗಿದೆ. ಇದು ಹೀಗೆ ಮುಂದುವರೆದರೆ ಪವರ್ ಸ್ಟಾರ್ ಪವರ್‌ಗೆ ಬಾಕ್ಸ್ ಆಫೀಸ್‌ ಶೇಕ್ ಆಗೋದ್ರಲ್ಲಿ ದೌಟೇ ಇಲ್ಲ ಅಂತ ಸಿನಿ ಪಂಡಿತರು ಭವಿಷ್ಯ ನುಡಿದಿದ್ದಾರೆ.  

ಕಲೆಕ್ಷನ್‌ನಲ್ಲಿ ದಾಖಲೆ ಬರೆದ ಜೇಮ್ಸ್

ನಿನ್ನೆ ರಿಲೀಸ್ ಆದ ಜೇಮ್ಸ್ ಸಿನಿಮಾ ಬಾಕ್ಸ್ ಆಫೀಸ್‌ ಶೇಕ್ ಮಾಡುತ್ತಿದೆ ಎಂಬ ಸುದ್ದಿ ಬರುತ್ತಿದೆ. ಇದು ಪುನೀತ್ ರಾಜ್‌ಕುಮಾರ್ ಸಿನಿ  ಕರಿಯರ್ ನಲ್ಲಿಯೇ ಮೊದಲ ದಿನ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಆಗಿದೆ ಎನ್ನಲಾಗುತ್ತಿದೆ. ಜೇಮ್ಸ್ ಮೊದಲ ದಿನದ ಗಳಿಕೆ ಬರೋಬ್ಬರಿ 15 ಕೋಟಿ ಎನ್ನಲಾಗಿದೆ. ಈ ವಾರದ ಟಿಕೆಟ್‌ಗಳೆಲ್ಲ ಬುಕ್ ಆಗಿದ್ದು, ಅವುಗಳ ಲೆಕ್ಕಾಚಾರ ಸದ್ಯಕ್ಕೆ ಸಿಕ್ಕಿಲ್ಲ.

ಬೆಂಗಳೂರಿನಲ್ಲೇ 8 ಕೋಟಿಗೂ ಅಧಿಕ ಗಳಿಕೆ

ಜೇಮ್ಸ್ ಸಿನಿಮಾ ನಿನ್ನೆ ಕರ್ನಾಟಕದಲ್ಲಿ 400 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಇನ್ನು ಬೆಂಗಳೂರಿನ ಥಿಯೇಟರ್, ಮಲ್ಟಿಫ್ಲೆಕ್ಸ್ ಸೇರಿದಂತೆ ಎಲ್ಲೆಡೆ ರಿಲೀಸ್ ಆಗಿತ್ತು. ಬಾಕ್ಸ್ ಆಫೀಸ್ ಪಂಡಿತರ ಪ್ರಕಾರ ಜೇಮ್ಸ್ ಸಿನಿಮಾ ಬೆಂಗಳೂರು ಒಂದರಲ್ಲೇ ನಿನ್ನೆ ಒಂದೇ ದಿನ 8 ಕೋಟಿಗೂ ಅಧಿಕ ಮೊತ್ತ ಗಳಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: Puneeth Rajkumar: `ರಾಜರತ್ನ’ನ ನೆನೆದು ಭಾವುಕರಾದ ಯಶ್​-ಉಪೇಂದ್ರ, ಬಿಕ್ಕಿ ಬಿಕ್ಕಿ ಅತ್ತ ನಟಿ ಪ್ರಿಯಾ ಆನಂದ್​!

ಹೊರ ರಾಜ್ಯ, ಹೊರ ದೇಶಗಳಲ್ಲೂ ಉತ್ತಮ ಪ್ರತಿಕ್ರಿಯೆ

ಇನ್ನು ಜೇಮ್ಸ್ ಸಿನಿಮಾ ಚೆನ್ನೈ, ಹೈದ್ರಾಬಾದ್, ತೆಲಂಗಾಣದಲ್ಲೂ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇನ್ನು ಹೊರ ದೇಶಗಳಲ್ಲೂ ಜೇಮ್ಸ್ ಅಬ್ಬರ ಜೋರಾಗಿದೆ. ಇನ್ನು ಆಸ್ಟ್ರೇಲಿಯಾ, ಯುಎಸ್ ನಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿರೋ ಜೇಮ್ಸ್, ಆಸ್ಟ್ರೇಲಿಯಾ ದಲ್ಲಿ 150 ಸ್ಕ್ರೀನ್ ಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಮತ್ತೊಂದೆಡೆ ಅಮೆರಿಕಾದ 100ಕ್ಕೂ ಹೆಚ್ಚು ಸ್ಕ್ರೀನ್ ನಲ್ಲಿ ತೆರೆ ಕಂಡಿರೋ ಜೇಮ್ಸ್, ಅಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಕೆಜಿಎಫ್‌ ದಾಖಲೆ ಮುರಿದ ಜೇಮ್ಸ್

ಮೊದಲ ದಿನದ ಬಾಕ್ಸ್ ಆಫೀಸ್ ಗಳಿಕೆ ವಿಚಾರದಲ್ಲಿ ಜೇಮ್ಸ್ ಸಿನಿಮಾ ಕೆಜಿಎಫ್ ಸಿನಿಮಾದ ದಾಖಲೆಯನ್ನೂ ಮುರಿದಿದೆ. ಕೆಜಿಎಫ್ ಸಿನಿಮಾ ಕನ್ನಡದಲ್ಲಿ ಮೊದಲ ದಿನ 12.5 ಕೋಟಿ ಗಳಿಸಿತ್ತು. ಆದರೆ ಜೇಮ್ಸ್ ಸಿನಿಮಾ ಮೊದಲ ದಿನವೇ 15 ಕೋಟಿ ಗಳಿಸಿದೆ. ಈ ಮೂಲಕ ಕೆಜಿಎಫ್‌ನ ದಾಖಲೆ ಮುರಿದಿದೆ.

ಸ್ಯಾಟಲೈಟ್‌ ಹಕ್ಕುಗಳ ಮಾರಾಟದಲ್ಲೂ ದಾಖಲೆ

ಜೇಮ್ಸ್ ಸ್ಯಾಟಲೈಟ್ ರೈಟ್ಸ್ ಕನ್ನಡದಲ್ಲಿ ಬರೋಬ್ಬರಿ 13.80 ಕೋಟಿಗೆ ಮಾರಾಟವಾಗಿದೆ.  ಈ ಹಿಂದೆ ರಾಕಿಂಗ್ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಸ್ಯಾಟಲೈಟ್ ರೈಟ್ಸ್ ಬರೋಬ್ಬರಿ 6 ಕೋಟಿಗೆ ಮಾರಾಟವಾಗಿ ದಾಖಲೆ ಮಾಡಿತ್ತು, ಆದರೆ ಜೇಮ್ಸ್ ಬಿಡುಗಡೆಗೂ ಮುನ್ನವೇ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದ್ದು, ಕೆಜಿಎಫ್ ಗಿಂತ ಎರಡು ಪಟ್ಟು ಹೆಚ್ಚಿನ ಬೆಲೆಗೆ ಜೇಮ್ಸ್ ರೈಟ್ಸ್ ಸೇಲ್​ ಆಗಿದ್ದು, ಮೂಲಗಳ ಪ್ರಕಾರ ವಿವಿಧ ಭಾಷೆಗಳು ಸೇರಿ 80 ಕೋಟಿಗೆ ಟಿವಿ ರೈಟ್ಸ್ ಗೆ ಸೇಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: James Movie: ಮೊದಲ ದಿನವೇ ದಾಖಲೆ ಬೆಲೆಗೆ ಮಾರಾಟವಾದ ಅಪ್ಪು ಚಿತ್ರ, ಭರ್ಜರಿ ರೇಟಿಗೆ ಸ್ಯಾಟಲೈಟ್ ರೈಟ್ಸ್ ಸೇಲ್!

 ಡಿಜಿಟಲ್ ಹಕ್ಕುಗಳು 40 ಕೋಟಿಗೆ ಮಾರಾಟ

ಸದ್ಯದ ಮಾಹಿತಿ ಪ್ರಕಾರ ಸೋನಿ ಡಿಜಿಟಲ್​ಗೆ 40 ಕೋಟಿ, ಕನ್ನಡ ಸುವರ್ಣಕ್ಕೆ13.80 ಕೋಟಿ ಹಾಗೂ ತೆಲುಗು ಮಾ ಟಿವಿಗೆ ಸುಮಾರು 5.70 ಕೋಟಿಗೆ ಮಾರಾಟವಾಗಿದೆ, ಇನ್ನು ತಮಿಳಿನಲ್ಲಿ ಸನ್ ನೆಟ್ ವರ್ಕ್​ಗೆ 5.17 ಕೋಟಿ, ಮಲೆಯಾಳಂ 1.2 ಕೋಟಿ, ಭೋಜಪುರಿ  5.50 ಕೋಟಿ, ಹಿಂದಿ ಸೋನಿಗೆ 2.70 ಕೋಟಿಗೆ ಮಾರಾಟವಾಗಿದ್ದು, ನಿಜಕ್ಕೂ ಇದು ಅಭಿಮಾನಿಗಳಿಗೆ ಸಂತಸದ ವಿಚಾರವಾಗಿದೆ.
Published by:Annappa Achari
First published: