Puneeth Rajkumar: ಸಚಿವರ ಕಚೇರಿಯಲ್ಲಿ ಅಪ್ಪು ಜಾಕೆಟ್​! ಇದಕ್ಕೆ ಹೇಳೋದು ರಾಜರತ್ನ ಎಂದಿಗೂ ಅಜರಾಮರ

ರಾಜ್ಯದ ಮೂಲೆ ಮೂಲೆಯಲ್ಲೂ ಅಪ್ಪು ಬ್ಯಾನರ್​​ ರಾರಾಜಿಸುತ್ತಿವೆ. ಬೈಕ್​, ಕಾರು, ಎಲ್ಲೆ ನೋಡಿದರೂ ಕಾಣಿಸುತ್ತಿರುವುದು  ಅಪ್ಪು ಒಬ್ಬರೆ. ಇದೀಗ ಸಚಿವರೊಬ್ಬರು ಅಪ್ಪು ಅವರ ಜಾಕೆಟ್​ ಅನ್ನು ತಮ್ಮ ಕಚೇರಿಯಲ್ಲಿಟ್ಟುಕೊಂಡಿದ್ದಾರೆ.

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​

  • Share this:
ಅಭಿಮಾನಿಗಳ ಆರಾಧ್ಯ ದೇವ.. ಚಂದನವನದ ಬೆಳಕು.. ಪವರ್​ ಸ್ಟಾರ್​.. ರಾಜರತ್ಮ.. ಯುವರತ್ನ.. ನಟ ಸಾರ್ವಭೌಮ.. ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರನ್ನು ವರ್ಣಿಸಲು ಇರುವ ಪದ ಒಂದೇ.. ಎರಡೇ.. ಎಷ್ಟು ಹೇಳಿದರು ಸಾಲದು. ಕನ್ನಡದ ಕಣ್ಮಣಿ ನಟ ಪವರ್‌ ಸ್ಟಾರ್‌ ಪುನೀತ್‌ರಾಜ್‌ಕುಮಾರ್‌ (Power Star Puneeth Rajkumar) ನಮ್ಮನ್ನಗಲಿ 7 ತಿಂಗಳಾಗಿದೆ. ಅವರ ನೆನಪು ಕನ್ನಡಿಗರಲ್ಲಿ ಅಚ್ಚಳಿಯದೆ ಉಳಿದಿದೆ. ಪುನೀತ್​ ರಾಜ್​ಕುಮಾರ್​ ಅವರನ್ನು ಮರೆಯುವುದು ಅಸಾಧ್ಯ. ಜನಮಾನಸದಲ್ಲಿ ಅಪ್ಪು (Appu) ಎಂದಿಗೂ ಅಮರ ಎಂದರೆ ತಪ್ಪಲ್ಲ. ಅವರು ಇಲ್ಲ ಎನ್ನುವ ಸುದ್ದಿ ಬಂದಾಗಿನಿಂದಲೂ ಅವರ ಬಗ್ಗೆ ಒಂದೆಲ್ಲ ಒಂದು ವಿಚಾರಗಳು ಹೊರಬರುತ್ತಿವೆ. ಅವರ ಸಾಮಾಜಿಕ ಕೆಲಸಗಳು, ಅವರು ಅಭಿಮಾನಿಗಳ ಜೊತೆ ಇರುತ್ತಿದ್ದ ರೀತಿ ಎಲ್ಲವೂ ಮಾದರಿ. ಅಪ್ಪು ಅವರನ್ನು ನೆನಸಿಕೊಳ್ಳದೇ ಇರುವ ದಿನವಿಲ್ಲ.

ಸಚಿವರ ಕಚೇರಿಯಲ್ಲಿಅಪ್ಪು 'ಜಾಕೆಟ್​'!

ಅಪ್ಪು ಅವರ ಭಾವಚಿತ್ರವನ್ನು ನೋಡಿದಾಗೆಲ್ಲ ಹೊಟ್ಟೆ ಕಿವುಚುದಂತಾಗುತ್ತೆ. ದೇವರಿಗೆ ಶಾಪ ಹಾಕೋಣ ಅನ್ನಿಸುತ್ತೆ. ರಾಜ್ಯದ ಮೂಲೆ ಮೂಲೆಯಲ್ಲೂ ಅಪ್ಪು ಬ್ಯಾನರ್​​ ರಾರಾಜಿಸುತ್ತಿವೆ. ಬೈಕ್​, ಕಾರು, ಎಲ್ಲೆ ನೋಡಿದರೂ ಕಾಣಿಸುತ್ತಿರುವುದು  ಅಪ್ಪು ಒಬ್ಬರೆ. ಇದೀಗ ಸಚಿವರೊಬ್ಬರು ಅಪ್ಪು ಅವರ ಜಾಕೆಟ್​ ಅನ್ನು ತಮ್ಮ ಕಚೇರಿಯಲ್ಲಿಟ್ಟುಕೊಂಡಿದ್ದಾರೆ. ಆ ಜಾಕೆಟ್​ಗೆ ಫ್ರೇಮ್​ ಹಾಕಿಸಿ ಇಡಲಾಗಿದೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಹೌದು, ಇತ್ತೀಚೆಗೆ ವಿಜಯನಗರದ ಹೊಸಪೇಟೆಯಲ್ಲಿ ಅಪ್ಪು ಅವರ ಪ್ರತಿಮೆಯನ್ನು ಅದ್ಧೂರಿಯಾಗಿ ಅನಾವರಣ ಮಾಡಲಾಗಿತ್ತು.

ಸಚಿವ ಆನಂದ್​ ಸಿಂಗ್​ ಕಚೇರಿಯಲ್ಲಿ ಅರಸು ಜಾಕೆಟ್​!

ಅರಸು ಸಿನಿಮಾದಲ್ಲಿ ಅಪ್ಪು ಧರಿಸಿದ್ದ ಜಾಕೆಟ್​ ಅನ್ನು ಸಚಿವ ಆನಂದ್ ಸಿಂಗ್​ ಅವರು ಕಚೇರಿಯಲ್ಲಿ ಫೋಟೋ  ಫ್ರೆಮ್​ ಮಾಡಿಸಿ ಇಟ್ಟಿದ್ದಾರೆ. ಅರಸು ಸಿನಿಮಾದಲ್ಲಿ ಧರಿಸಿದ್ ಜಾಕೆಟ್​ ಅನ್ನು ಅಪ್ಪು ಅವರ ಅಭಿಮಾನಿಯಾದ ಹೊಸಪೇಟೆಯ ಕಿಚಡಿ ವಿಶ್ವ ಎಂಬುವವರಿಗೆ ನೀಡಿದ್ದರು. ಅಂದಿನಿಂದ ಇಂದಿನವರೆಗೂ ಆ ಜಾಕೆಟ್​ ಅನ್ನು ವಿಶ್ವ ಅವರು ತುಂಬಾ ಜೋಪಾನ ಮಾಡಿಕೊಂಡು ಬಂದಿದ್ದರು. ಅಪ್ಪು ಕೊಟ್ಟಿದ್ದ ಜಾಕೆಟ್​ ಅನ್ನು ಕಿಚಡಿ ವಿಶ್ವ ಅವರು ಆನಂದ್​ ಸಿಂಗ್​ ಅವರ ಪುತ್ರ ಸಿದ್ದಾರ್ಥ್​ ಸಿಂಗ್​​ಗೆ ನೀಡಿದ್ದರು.

ಆನಂದ್​ ಸಿಂಗ್​ ಕಚೇರಿಯಲ್ಲಿ ಅಪ್ಪು ಜಾಕೆಟ್


ಇದನ್ನೂ ಓದಿ: ಸೂರ್ಯನೊಬ್ಬ-ಚಂದ್ರನೊಬ್ಬ ರಾಜನೂ ಒಬ್ಬ! ಹೊಸಪೇಟೆಯಲ್ಲಿ ಪುನೀತ್ ಪ್ರತಿಮೆ ಅನಾವರಣ

ಸೋಷಿಯಲ್​ ಮೀಡಿಯಾದಲ್ಲಿ ಫೋಟೋ ವೈರಲ್​!

ಸಿದ್ದಾರ್ಥ್ ಸಿಂಗ್​ ಅವರು ತಮಗೆ ನೀಡಿದ ಜಾಕೆಟ್​ ಅನ್ನು ತಮ್ಮ ತಂದೆಯ ಕಚೇರಿಯಲ್ಲಿ ಫ್ರೇಮ್​ ಹಾಕಿಸಿ ಇಟ್ಟಿದ್ದಾರೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆನಂದ್​ ಸಿಂಗ್​ ಅವರ ಈ ಅಭಿಮಾನ ಕಂಡು ಅಪ್ಪು ಫ್ಯಾನ್ಸ್​ ಫುಲ್​ ಖುಷ್​ ಆಗಿದ್ದಾರೆ. ಜೊತೆಗೆ ವಿಜಯ ನಗರದ ಹೊಸಪೇಟೆಯಲ್ಲಿ ಪುನೀತ್ ರಾಜ್​ಕುಮಾರ್ ಅವರ ಪ್ರತಿಮೆ ಅನಾವರಣವಾಗಿದ್ದು,  ನೆಚ್ಚಿನ ನಾಯಕನ ಮೂರ್ತಿ ನೋಡಿ ಅಭಿಮಾನಿಗಳ ಸಂತೋಷ ಪಟ್ಟಿದ್ದಾರೆ.

ಇದನ್ನೂ ಓದಿ: ಕೇದಾರನಾಥನ ಸನ್ನಿಧಿಯಲ್ಲಿ ಅಪ್ಪು ಕಂಪು, ದೇವಸ್ಥಾನದಲ್ಲಿ ಪುನೀತ್ ಭಾವಚಿತ್ರಕ್ಕೆ ಪೂಜೆ

ಕೇದಾರನಾಥನ ಸನ್ನಿಧಿಯಲ್ಲಿ ಅಪ್ಪು ಕಂಪು

ಕೇದಾರನಾಥ್ನ ಸನ್ನಿಧಿಯಲ್ಲಿ ಸಹ ಅಪ್ಪು ಕಂಪು ಹರಡಿದ್ದು, ಕೇದಾರನಾಥ ದೇವಸ್ಥಾನದಲ್ಲೂ ಅಭಿಮಾನಿಗಳು ಪುನೀತ್ ರಾಜಕುಮಾರನನ್ನು ನೆನಪು ಮಾಡಿಕೊಂಡಿದ್ದಾರೆ. ದಾರನಾಥನ ದರ್ಶನಕ್ಕೆ ಪುನೀತ್ ಭಾವಚಿತ್ರದೊಂದಿಗೆ ವಿಜಯಪುರದ ಯುವಕರು ತೆರಳಿದ್ದು, ಕೇದಾರನಾಥ ದೇವಸ್ಥಾನದಲ್ಲಿ ಪುನೀತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಕೆ ಮಾಡಿದ್ದಾರೆ. ವಿಜಯಪುರದ ಪ್ರಶಾಂತ, ಜಗದೀಶ, ಅಬ್ದುಲ್ ರೆಹಮಾನ್ ಹಾಗೂ ನಿಂಗಪ್ಪ ಎಂಬುವವರು ಅಪ್ಪುಗೆ ವಿಶೇಷ ಗೌರವ ನೀಡಿದ್ದಾರೆ.
Published by:Vasudeva M
First published: