James: ಒಂದೇ ಸಿನಿಮಾದಲ್ಲಿ ಅಣ್ಣಾವ್ರ ಮೂರು ಮುತ್ತುಗಳು: ಅಮ್ಮನ ಆಸೆ ನೆರವೇರಿತು, ಆದ್ರೆ ಅಪ್ಪುನೇ ಜೊತೆ ಇಲ್ಲ!

ಅಪ್ಪು ಬದುಕಿದ್ದಾಗ, ಸೋದರರನ್ನು ಒಂದೇ ಸಿನಿಮಾದಲ್ಲಿ ನೋಡುವ ಭಾಗ್ಯ ಅಭಿಮಾನಿಗಳಿಗೆ ಸಿಕ್ಕಿರಲಿಲ್ಲ. ಇದೀಗ ಅಪ್ಪು, ರಾಘಣ್ಣ, ಶಿವಣ್ಣ ಒಂದೇ ಸಿನಿಮಾದಲ್ಲಿ ನಟಿಸಿದ್ದಾರೆ. ಇದನ್ನು ನೋಡಲು ಅಪ್ಪುನೇ ಇಲ್ಲ.

ಅಪ್ಪು,ರಾಘಣ್ಣ, ಶಿವಣ್ಣ

ಅಪ್ಪು,ರಾಘಣ್ಣ, ಶಿವಣ್ಣ

  • Share this:
ಪವರ್‌ ಸ್ಟಾರ್‌ ಪುನೀತ್ ರಾಜ್‌ಕುಮಾರ್(Power Star Puneeth Rajkumar) ನಟಿಸಿದ್ದ ಕೊನೇ ಸಿನಿಮಾ 'ಜೇಮ್ಸ್‌'(James)ನ ಶೂಟಿಂಗ್ ಮುಕ್ತಾಯಗೊಂಡಿದೆ. ಈ ಸಿನಿಮಾದ ಮೇಲೆ ಅಭಿಮಾನಿಗಳು ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಜೊತೆಗೆ ಅಭಿಮಾನಿಗಳು ಇಷ್ಟು ವರ್ಷಗಳಿಂದ ಒಂದೇ ಸಿನಿಮಾದಲ್ಲಿ ಶಿವಣ್ಣ(Shivanna), ರಾಘಣ್ಣ(Raghanna), ಅಪ್ಪು(Appu) ಅವರನ್ನು ನೋಡುವ ಆಸೆ ಕೂಡ ಈಡೇರಿದೆ. ಹೌದು, 'ಜೇಮ್ಸ್‌'ನ ಬಹುಪಾಲು ಶೂಟಿಂಗ್ ಮುಗಿದಿತ್ತು. ಆದರೆ, ಸಿನಿಮಾ ತೆರೆಗೆ ಬರುವ ಮುನ್ನವೇ ಪುನೀತ್ ಎಲ್ಲರನ್ನು ಬಿಟ್ಟು ಹೋಗಿದ್ದು ದುರದೃಷ್ಟಕರ. ಇದೀಗ ನಿರ್ದೇಶಕ ಚೇತನ್‌ಕುಮಾರ್(Director Chethan Kumar) ಅವರು ಸಿನಿಮಾವನ್ನು ಕಂಪ್ಲೀಟ್ ಮಾಡಿದ್ದಾರೆ. ಜನವರಿ 21 ಚಿತ್ರದ ಕೊನೇ ಶೂಟಿಂಗ್ ಮುಗಿಸಿ, ಕುಂಬಳಕಾಯಿ ಒಡೆದಿತ್ತು ಚಿತ್ರತಂಡ. ಇದೀಗ ಜೇಮ್ಸ್(James)​ ಸಿನಿಮಾದಲ್ಲಿ ನಟಿಸಿರುವುದರ ಬಗ್ಗೆ ರಾಘವೇಂದ್ರ ರಾಜ್​ಕುಮಾರ್​ ಪ್ರತಿಕ್ರಿಯೆ ನೀಡಿದ್ದಾರೆ. ಅಪ್ಪು ನಮ್ಮನೆಲ್ಲ ಬಿಟ್ಟು ಹೋಗಿರುವುದು ಇಂದಿಗೂ ಯಾರಿಗೂ ನಂಬಲು ಆಗುತ್ತಿಲ್ಲ. ಅಪ್ಪು ಅವರನ್ನು ನೆನದು ಪ್ರತಿದಿನ ಕರುನಾಡು ಕಣ್ಣೀರಿಡುತ್ತಿದೆ. ಇನ್ನೂ ಕಣ್ಣ ಮುಂದೆಯೇ ಸೋದರ ಹೀಗೆ ಬಿಟ್ಟು ಹೋಗಿರುವುದು ಶಿವರಾಜ್​ ಕುಮಾರ್​ ಹಾಗೂ ರಾಘವೇಂದ್ರ ರಾಜ್​ಕುಮಾರ್ ಅವರ ಪರಿಸ್ಥಿತಿಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಅಪ್ಪು ಬದುಕಿದ್ದಾಗ, ಸೋದರರನ್ನು ಒಂದೇ ಸಿನಿಮಾದಲ್ಲಿ ನೋಡುವ ಭಾಗ್ಯ ಅಭಿಮಾನಿಗಳಿಗೆ ಸಿಕ್ಕಿರಲಿಲ್ಲ. ಇದೀಗ ಅಪ್ಪು, ರಾಘಣ್ಣ, ಶಿವಣ್ಣ ಒಂದೇ ಸಿನಿಮಾದಲ್ಲಿ ನಟಿಸಿದ್ದಾರೆ. ಇದನ್ನು ನೋಡಲು ಅಪ್ಪುನೇ ಇಲ್ಲ..

ಒಟ್ಟಿಗೆ ನಟಿಸಬೇಕು ಅನ್ನೋದು ಅಮ್ಮನ ಆಸೆಯಾಗಿತ್ತು ಎಂದ ರಾಘಣ್ಣ

ಜೇಮ್ಸ್ ಚಿತ್ರದಲ್ಲಿ ನಟನೆ ಬಗ್ಗೆ ರಾಘವೇಂದ್ರ ರಾಜ್ ಕುಮಾರ್  ಪ್ರತಿಕ್ರಿಯೆ ನೀಡಿದ್ದಾರೆ. ‘ಅಪ್ಪಾಜಿ, ನಾನು ಅಪ್ಪು ,ಶಿವಣ್ಣ ಒಟ್ಟಿಗೆ ನಟಿಸಬೇಕು ಅನ್ನೋದು ಅಮ್ಮನ ಆಸೆ ಆಗಿತ್ತು. ಒಂದು ದಿನ ಅಮ್ಮ, ಅಪ್ಪಾಜಿ ಜೊತೆ ಇದರ ಬಗ್ಗೆ ಚರ್ಚೆ ಕೂಡ ಮಾಡಿದ್ದರು. ಅಗ ಅಪ್ಪಾಜಿ ದೇವರು ಎಲ್ಲಾ ಕೊಡ್ತಾನೆ ಅಂತ ಹೇಳೊಕೆ ಆಗಲ್ಲ ಅಂದಿದ್ದರು. ಕೊನೆಗೂ ಅದೇ ರೀತಿ ಅಯ್ತು ಅಪ್ಪಾಜಿ ಜೊತೆ ನಾವೇಲ್ಲ ನಟಿಸೋಕೆ ಆಗಲಿಲ್ಲ. ಅಮ್ಮ ನೀವು ಮೂರು ಜನ ಒಟ್ಟಿಗೆ ನಟಿಸಿ ಅಂತ ಸಾಕಷ್ಟು ಸಲ ಹೇಳಿದ್ದರು. ಅದರಂತೆ ಜೇಮ್ಸ್​ ಚಿತ್ರದಲ್ಲಿ ನಾವು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದೇವೆ’ ಎಂದು ರಾಘವೇಂದ್ರ ರಾಜ್​ಕುಮಾರ್​ ಹೇಳಿದ್ದಾರೆ.


ಇದನ್ನು ಓದಿ: ‘ಆರ್‌ಆರ್‌ಆರ್’ಗೆ ಡಿಚ್ಚಿ ಕೊಡುತ್ತಾ ‘ಪವರ್‘ ಫುಲ್ ‘ಜೇಮ್ಸ್’? ಬಹುನಿರೀಕ್ಷಿತ ಸಿನಿಮಾಗಳ ರಿಲೀಸ್ ಡೇಟ್ ಕ್ಲಾಶ್

‘ಅಪ್ಪು ಇಲ್ಲದೇ ನೋವಿನಲ್ಲೇ ನಾನು, ಶಿವಣ್ಣ ನಟಿಸಿದ್ದೇವೆ’

‘ಜೇಮ್ಸ್ ಚಿತ್ರದಲ್ಲಿ ನಾನು ಶಿವಣ್ಣ ನಟಿಸದೇ ಹೋಗಿದ್ರೆ ಇನ್ಯಾವತ್ತು ಈ ಅವಕಾಶ ಸಿಗುತ್ತಿರಲಿಲ್ಲ.ಅದಕ್ಕೆ ಜೇಮ್ಸ್ ಚಿತ್ರದಲ್ಲಿ ತುಂಆ ನೋವಿನಲ್ಲೇ ನಟಿಸಿದ್ದೇವೆ. ಇನ್ನು ಜೇಮ್ಸ್ ಚಿತ್ರದಲ್ಲಿ ನಾವು ನಟಿಸಿರೋದು ಪ್ರಚಾರದ ಗಿಮಿಕ್​ ಅಲ್ಲ.  ಅಲ್ಲದೆ ಅಪ್ಪು ಚಿತ್ರಕ್ಕೆ ಪ್ರಚಾರ ಮಾಡುವವರು ಯಾರು ಇಲ್ಲ. ಜೇಮ್ಸ್ ಚಿತ್ರದಲ್ಲಿ ನಾವು ನಟಿಸಿದ ಈ ಪಾತ್ರಗಳು ಮೊದಲೇ ಫಿಕ್ಸ್ ಆಗತ್ತು. ಅದ್ರೆ ಯಾರು ಮಾಡಬೇಕು ಅಂತ ಫೈನಲ್ ಆಗಿರಲಿಲ್ಲ. ಹೀಗಾಗಿ ನಾನು, ಶಿವಣ್ಣ ಈ ಚಿತ್ರದಲ್ಲಿ ನಟಿಸಿದ್ದೇವೆ’ ಎಂದು ರಾಘಣ್ಣ ಹೇಳಿದ್ದಾರೆ.

ಇದನ್ನು ಓದಿ: ವಿಲನ್ ಪಾತ್ರದಲ್ಲಿ ನಟಿಸಿಯೂ ‘ಪವರ್’ ತೋರಿಸಬೇಕು ಎಂದಿದ್ದ ಅಪ್ಪು, ಯಾವುದು ಆ ಸಿನಿಮಾ?

‘ಅವನ ಜೊತೆ ಒಂದು ಸೀನ್​ ಇಲ್ವಲ್ಲಾ ಅನ್ನೋ ಕೊರಗಿದೆ’

ಇನ್ನೂ ಅಪ್ಪು ಜೊತೆಯಿಲ್ಲದೇ ನಟಿಸಿರುವುದರ ಬಗ್ಗೆ ನೆನೆಸಿಕೊಂಡು ರಾಘವೇಂದ್ರ ರಾಜ್​ಕುಮಾರ್ ಬೇಸರ ತೋಡಿಕೊಂಡಿದ್ದಾರೆ.‘ಅವನಿಲ್ಲದೆ ಆಚಿತ್ರದಲ್ಲಿ ನಟಿಸ ಬೇಕಾಯ್ತಲ್ಲ ಅನ್ನೋ ನೋವಿದೆ. ಅಲ್ಲದೆ ಅವನ ಜೊತೆ ನಮಗೆ ಒಂದು ಸೀನ್ ಇಲ್ಲವಲ್ಲ ಅನ್ನೋ ಕೊರಗಿದೆ. ಜೇಮ್ಸ್ ಚಿತ್ರದ ನಿರ್ದೇಶಕ ನಮಗೆ ಈ ಕಥೆ ಹೇಳುವಾಗ ಕಣ್ಣೀರು ಹಾಕುತ್ತಲೆ  ಹೇಳಿದ್ದರು. ಶೂಟಿಂಗ್ ಸೆಟ್ ನಲ್ಲಿ ಪ್ರತಿಯೋಬರಲ್ಲೂ ಅಪ್ಪು ಇಲ್ಲ ಅನ್ನೋ ನೋವಿತ್ತು. ಈ ಸಿನಿಮಾ ನೋಡಿದ ಮೇಲೆ ನಮ್ಮ ಪಾತ್ರಗಳು ಜನರಿಗೆ ಇಷ್ಟ ಆಗುತ್ತೆ‘ ಎಂದು ರಾಘಣ್ಣ ಹೇಳಿದ್ದಾರೆ.
Published by:Vasudeva M
First published: