• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Puneeth Rajkumar Road: ಪುನೀತ್‌ ರಾಜ್‌ಕುಮಾರ್ ರಸ್ತೆ ಉದ್ಘಾಟನೆ, ಅಪ್ಪು ಸ್ಮಾರಕ ಮಾಡೋದಾಗಿ ಸಿಎಂ ಘೋಷಣೆ

Puneeth Rajkumar Road: ಪುನೀತ್‌ ರಾಜ್‌ಕುಮಾರ್ ರಸ್ತೆ ಉದ್ಘಾಟನೆ, ಅಪ್ಪು ಸ್ಮಾರಕ ಮಾಡೋದಾಗಿ ಸಿಎಂ ಘೋಷಣೆ

ಪುನೀತ್​ ರಾಜ್​ ಕುಮಾರ್, ಸಿಎಂ ಬಸವರಾಜ್ ಬೊಮ್ಮಾಯಿ

ಪುನೀತ್​ ರಾಜ್​ ಕುಮಾರ್, ಸಿಎಂ ಬಸವರಾಜ್ ಬೊಮ್ಮಾಯಿ

ಆಸ್ತಿ, ಹಣಕ್ಕೆ ಬೆಲೆ ಕಟ್ಟ ಬಹುದು ಆದ್ರೆ ಅಭಿಮಾನಕ್ಕೆ ಆಗಲ್ಲ. ಆ ಅಭಿಮಾನವನ್ನು ನಾನು ಅಪ್ಪು ಅಗಲಿದಾಗ ನೋಡಿದೆ.  ನಮ್ಮ ಅಪ್ಪು ಒಬ್ಬ ಸಾಧಕ ಸಾವಿನ ನಂತರವು ಅವನು ನಮ್ಮ‌ನಡುವೆ ಬದುಕಿದ್ದಾನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

  • News18 Kannada
  • 5-MIN READ
  • Last Updated :
  • Karnataka, India
  • Share this:

ಪುನೀತ್‌ ರಾಜ್‌ಕುಮಾರ್ ರಸ್ತೆ ಉದ್ಘಾಟನೆ, ಅಪ್ಪು ಸ್ಮಾರಕ ಮಾಡೋದಾಗಿ ಸಿಎಂ ಘೋಷಣೆನಟ ಪುನೀತ್ ರಾಜ್​ಕುಮಾರ್ (Puneeth Rajkumar) ನಿಧನರಾಗಿ ವರ್ಷಗಳೇ  ಕಳೆದು ಹೋಗಿದೆ. ಅಪ್ಪುವನ್ನು ಅಭಿಮಾನಿಗಳು (Appu Fasns) ಮನದಲ್ಲಿಟ್ಟು ಪೂಜೆ ಮಾಡ್ತಿದ್ದಾರೆ. ಪುನೀತ್ ರಾಜ್​ಕುಮಾರ್​ ಅವರನ್ನು ಹಲವು ರೀತಿಗಳನ್ನು ನೆನಪು ಮಾಡಿಕೊಳ್ತಿದ್ದಾರೆ.  ರಸ್ತೆ, ಸರ್ಕಲ್​ ಹಾಗೂ ಪಾರ್ಕ್​ಗಳಿಗೂ ಪುನೀತ್ ರಾಜ್​ಕುಮಾರ್ ಅವರ ಹೆಸರನ್ನು ಇಡಲಾಗುತ್ತಿದೆ. ಇದೀಗ ಮೈಸೂರು ರಸ್ತೆಯಿಂದ (Mysuru Road) ಬನ್ನೇರುಘಟ್ಟವರೆಗಿನ ರಸ್ತೆಗೆ ಪುನೀತ್ ಹೆಸರು ಇಡಲಾಗಿದ್ದು, ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai)  ಪುನೀತ್ ಸ್ಮಾರಕ ಮಾಡೋದಾಗಿ ಘೋಷಣೆ ಮಾಡಿದ್ದಾರೆ. 


ಕಾರ್ಯಕ್ರಮದಲ್ಲಿ ಗಣ್ಯರು ಭಾಗಿ


ಇನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ನಟ ರಾಘವೇಂದ್ರ ರಾಜ್​ಕುಮಾರ್, ಪುನೀತ್ ​ಪತ್ನಿ ಅಶ್ವಿನಿ, ಅಂಬರೀಷ್​ ಪುತ್ರ ಅಭಿಷೇಕ ಅಂಬರೀಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೂಡ ಭಾಗಿಯಾಗಿದ್ದರು.


ಪುನೀತ್​ ರಾಜ್​ಕುಮಾರ್​ ರಸ್ತೆ ಉದ್ಘಾಟನೆ


ಅಪ್ಪುವನ್ನು ಕೊಂಡಾಡಿದ ಸಿಎಂ ಬೊಮ್ಮಾಯಿ


ನಾಮಕರಣದ ಫಲಕ ಉದ್ಘಾಟಿಸಿ ಮಾತಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಅಪ್ಪು ಸಣ್ಣ ವಯಸ್ಸಿನಲ್ಲೇ ದೊಡ್ಡ ಹೆಸರು ಮಾಡಿದ್ದಾರೆ. ಸಣ್ಣ ವಯಸ್ಸಿನಲ್ಲಿ ದೊಡ್ಡ ಹೆಸರು ಮಾಡಿದವರು ಬೇಗ ನಮ್ಮನ್ನ ಬಿಟ್ಟು ಹೋಗ್ತಾರೆ ಎಂದು ನನಗನಿಸುತ್ತೆ ಎಂದ್ರು. ಅಪ್ಪು ನಮ್ಮನ್ನ ಬಿಟ್ಟು ಹೋದಾಗ ಲಕ್ಷಾಂತರ ಮಂದಿ ಬಂದಿದ್ರು.


ನಮ್ಮ ಅಪ್ಪು ಒಬ್ಬ ಸಾಧಕ


ಆಸ್ತಿ , ಹಣಕ್ಕೆ ಬೆಲೆ ಕಟ್ಟ ಬಹುದು ಆದ್ರೆ ಅಭಿಮಾನಕ್ಕೆ ಆಗಲ್ಲ. ಆ ಅಭಿಮಾನವನ್ನು ನಾನು ಅಪ್ಪು ಅಗಲಿದಾಗ ನೋಡಿದೆ.  ನಮ್ಮ ಅಪ್ಪು ಒಬ್ಬ ಸಾಧಕ ಸಾವಿನ ನಂತರವು ಅವನು ನಮ್ಮ‌ನಡುವೆ ಬದುಕಿದ್ದಾನೆ. ಅಂತ ಅಪ್ಪುವಿನ ನಮನ‌ ಇಂದು ಆಗ್ತಿದೆ. ಬಲೂನ್ ಹಾರಿಸುವಾಗ ಅದು ಮೇಲೆ ಹೋಗಬೇಕಿತ್ತು. ಆದ್ರೆ ಅದು ಹೋಗಲಿಲ್ಲ ಇದರಲ್ಲೇ ಗೊತ್ತಾಗುತ್ತೆ ಅಪ್ಪು ನಮ್ಮ ನಡುವೆ ಇದ್ದಾರೆ ಎಂದು ಬೊಮ್ಮಾಯಿ ಹೇಳಿದ್ದಾರೆ.


ಸರ್ಕಾರದ ವತಿಯಿಂದ ಪುನೀತ್​ ಸ್ಮಾರಕ


ನಮ್ಮ ಸರ್ಕಾರದ ವತಿಯಿಂದ ಅಪ್ಪು ಮತ್ತು ರಾಜ್ ಕುಮಾರ್ ಸ್ಮಾರಕ ಮಾಡ್ತಿನಿ. ಸ್ಮಾರಕ ಕಟ್ಟಿಸುವ ಹಾಗೂ ಕರ್ನಾಟಕ ರತ್ನ ಕೊಡುವ ಭಾಗ್ಯ ನನಗೆ ಸಿಕ್ಕಿದೆ. ನನ್ನ ಆತ್ಮೀಯ ಸ್ನೇಹಿತ ಅಂಬರೀಶ್, ಅವನು ಸಾಕಷ್ಟು ಹಣ ಮಾಡಬಹುದಿತ್ತು ಅದ್ರೆ ಮಾಡಲಿಲ್ಲ. ನನ್ನ‌ಸ್ನೇಹಿತನ ಸ್ಮಾರಕ ಮಾಡುವ ಸೌಭಾಗ್ಯ ಕೂಡ ಸಿಕ್ಕಿತ್ತು. ಅದಕ್ಕೆ ಹಣ ಬಿಡುಗಡೆ ಮಾಡಿದ್ದೆ ಈಗ ಕಂಪ್ಲೀಟ್​ ಆಗಿದೆ ಎಂದು. ಅಪ್ಪು ಅನಾವರಣಗೊಳಿಸಿ ವೇದಿಕೆ ಮೇಲೆ ಸಿಎಂ ಬಸವರಾಜ ಬೊಮ್ಮಾಯಿ ಬೊಂಬೆ ಹೇಳುತೈತೆ ಹಾಡು ಹಾಡಿದ್ರು.


ರೇಸ್​ ಕೋರ್ಸ್​ ರಸ್ತೆಗೆ ಅಂಬರೀಶ್​ ಹೆಸರು


ನಮ್ಮ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರಿಡುವಂತೆ ಮನವಿ ಮಾಡಿದ್ದಾರೆ. ಆ ರಸ್ತೆಗೂ ಅಂಬರೀಶ್ ಅವರಿಗೂ ನಂಟಿದೆ. ಅ ರಸ್ತೆಯನ್ನ ರೇಸ್ ಕೋರ್ಸ್ ಅಂತ ಕರೋದಕ್ಕಿಂತ ಅಂಬರೀಶ್ ರಸ್ತೆ ಅಂತ ಕರೆಯೋದು ಒಳ್ಳೆಯದು. ಅದಕ್ಕೆ ಆ ರಸ್ತೆಗೆ ಅಂಬರೀಶ್ ಹೆಸರನ್ನ ಇಡೋಕೆ ನಿರ್ಧಾರ ಮಾಡಿದ್ದೀವಿ. ಆ ರಸ್ತೆಗೆ ಅಂಬಿ ಹೆಸರಿಟ್ರೆ ಅವನು ಖುಷಿ ಪಡ್ತಾನೆ. ಅಂಬಿ ಸ್ಟೈಲ್ ನಲ್ಲೇ ಹೇಳೋದಾದ್ರೆ ನನ್ ಮಗನೇ ಒಳ್ಳೆ ಹೆಸರನ್ನೇ ಇಟ್ಟಿದ್ಯ ಕಣೋ ಅಂತಾನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ರು.


ಇದನ್ನೂ ಓದಿ: Shah Rukh Khan-Pathaan: ಶಾರುಖ್ ಅಭಿಮಾನಿಗಳಿಗೆ ಬಂಪರ್ ಆಫರ್; ಪಠಾಣ್ ಸಿನಿಮಾ ಟಿಕೆಟ್ ರೇಟ್ ಇಳಿಕೆ!




 ಅಪ್ಪು ಅಭಿಮಾನಿಗಳನ್ನು ಬೆಳೆಸಿ ಹೋದ


ಇದೇ ವೇಳೆ ಮಾತಾಡಿದ ನಟ ರಾಘವೇಂದ್ರ ರಾಜ್ ಕುಮಾರ್, ಅಪ್ಪಾಜಿ ಅಭಿಮಾನಿಗಳನ್ನು ಕಟ್ಟಿದ್ರು, ಅಪ್ಪು ಅಭಿಮಾನಿಗಳನ್ನು ಬೆಳೆಸಿ ಹೋದ ಎಂದು ಹೇಳಿದ್ರು. ಅಪ್ಪಾಜಿಗೂ ಅಪ್ಪುಗೆ ಸಾಕಷ್ಟು ಹೊಂದಾಣಿಕೆ ಇದೆ. ಅಪ್ಪಾಜಿಗೆ ಡಾಕ್ಟರೇಟ್ ಬಂದಾಗ ಅಪ್ಪು 10 ತಿಂಗಳ ಕಂದ. ಅದೇ 46 ವಯಸ್ಸಿಗೆ ಅಪ್ಪುಗೆ ಡಾಕ್ಟರೇಟ್ ಬಂತು. ಇದೇ ರಸ್ತೆ ಅಪ್ಪಾಜಿ ಸ್ಮಾರಕದ ರಸ್ತೆಗೆ ಹೋಗುತ್ತೆ. ರಾಜ್​ಕುಮಾರ್​ ರಸ್ತೆ ಉದ್ಘಾಟನೆ ವೇಳೆ ಅಪ್ಪು ಬಂದಿದ್ದ.ಈಗ ಈ ರಸ್ತೆಗೆ ಅವನ ಹೆಸರನ್ನು ಪಡೆದುಕೊಂಡಿದ್ದಾನೆ. ಅಪ್ಪು ಪವರ್ ಅನ್ನು ಇಲ್ಲಿ ಬಿಟ್ಟು ಸ್ಟಾರ್ ಆಗಿ ಮೇಲೆ ಹೋಗಿದ್ದಾನೆ ಎಂದು ರಾಘವೇಂದ್ರ ರಾಜ್​ ಕುಮಾರ್ ಹೇಳಿದ್ರು.

Published by:ಪಾವನ ಎಚ್ ಎಸ್
First published: