ಪವರ್ ಸ್ಟಾರ್ ಅಲ್ಲ, ನಾನು ಬರೀ ಪುನೀತ್: ಅಪ್ಪು ಸರಳತೆಗೆ ಮತ್ತೊಂದು ನಿದರ್ಶನ

`ಟೈಟಲ್‌ ಕಾರ್ಡ್‌ನಲ್ಲಿ ನನ್ನ ಹೆಸರಿನ ಪಕ್ಕ ಇರುವ 'ಪವರ್‌ ಸ್ಟಾರ್' ಅನ್ನು ತೆಗೆದು ಬಿಡಿ ಎಂದು ಕೇಳಿದರು. 'ಗಂಧದ ಗುಡಿ'ಯಲ್ಲಿ ನಾನು ನಾನಾಗಿ ಅಷ್ಟೆ ಇದ್ದೇನೆ. ಇಲ್ಲಿ ನಾನು ಹೀರೋ ಅಲ್ಲ. ಹಾಗಾಗಿ ಪವರ್‌ ಸ್ಟಾರ್ ಬೇಡ ಎಂದು ಮನವಿ ಮಾಡಿದರು‘

ಅಮೋಘ ವರ್ಷ, ಪುನೀತ್​ ರಾಜ್​ಕುಮಾರ್​

ಅಮೋಘ ವರ್ಷ, ಪುನೀತ್​ ರಾಜ್​ಕುಮಾರ್​

  • Share this:
ಪುನೀತ್ ರಾಜ್‌ಕುಮಾರ್ ಅವರ ಕನಸಿನ ಪ್ರಾಜೆಕ್ಟ್ 'ಗಂಧದ ಗುಡಿ' ಟ್ರಾವೆಲ್ ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿದೆ. ಟ್ರೇಲರ್ ಬಹುವಾಗಿ ಗಮನ ಸೆಳಯುತ್ತಿದೆ. ಪುನೀತ್ ಹಾಗೂ ಅಮೋಘ ವರ್ಷನ ಶ್ರಮ ಟ್ರೇಲರ್‌ನಲ್ಲಿ ಕಾಣುತ್ತಿದೆ.ಗಂಧದ ಗುಡಿ(Gandhada Gudi) ಸಿನಿಮಾದ ಟೀಸರ್​​ ಬಿಡುಗಡೆಯಾಗುದೆ. ಅಭಿಮಾನಿಗಳು ಪುನೀತ್ ರಾಜ್​ಕುಮಾರ್​(Puneeth Rajumar) ಈ ಸಮಯದಲ್ಲಿ ನಮ್ಮೊಂದಿಗೆ ಇಲ್ಲ ಎಂದು ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಈ ಹಿಂದೆ ಎಂದೂ ಕಾಣಿಸಿರದ ರೀತಿಯಲ್ಲಿ ಅಪ್ಪು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಡಾಕ್ಯುಮೆಂಟ್(Document)​ ಚಿತ್ರವಾಗಿದ್ದರೂ, ಎಲ್ಲಿಯೂ ಹಾಗೇ ಅನ್ನಿಸುವುದಿಲ್ಲ. ಆ ಮಟ್ಟಕ್ಕೆ ಈ ಚಿತ್ರವನ್ನು ರೆಡಿ ಮಾಡಲಾಗಿದೆ. ಗಂಧದ ಗುಡಿ ಟೀಸರ್​ ಬಿಡುಗಡೆಯಾದಗಿನಿಂದಲೂ ಇಂಟರ್​ನೆಟ್​ನಲ್ಲಿ ಟ್ರೆಂಡಿಗ್​(Trending) ನಂ 1ನಲ್ಲಿದೆ. ಇನ್ನೂ ಈ ಡಾಕ್ಯುಮೆಂಟ್​ ಚಿತ್ರವನ್ನು ಖ್ಯಾತ ವೈಲ್ಡ್ ಲೈಫ್ ಛಾಯಾಗ್ರಾಹಕ ಅಮೋಘ ವರ್ಷ(Amogha Varsha) ನಿರ್ದೇಶನ ಮಾಡಿದ್ದಾರೆ. ಈ ಡಾಕ್ಯುಮೆಂಟ್​ ಚಿತ್ರದಲ್ಲಿ ಪುನೀತ್​ ರಾಜ್​ಕುಮಾರ್​ ಮೊದಲ ಬಾರಿಗೆ ಈ ರೀತಿಯ ಚಿತ್ರದಲ್ಲಿ ಕಾಣಿಸಿಕೊಂಡಿರುವುದು ಬಹಳ ವಿಶೇಷ. ಟ್ರೇಲರ್ ಬಿಡುಗಡೆ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಅಮೋಘ ವರ್ಷ 'ಗಂಧದ ಗುಡಿ' ಪ್ರಾಜೆಕ್ಟ್‌ ಬಗ್ಗೆ, ಅದರ ಚಿತ್ರೀಕರಣದ ಬಗ್ಗೆ ಹಾಗೂ ಪುನೀತ್ ರಾಜ್‌ಕುಮಾರ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಪವರ್​ ಸ್ಟಾರ್​ ಬೇಡ ಎಂದಿದ್ದರಂತೆ ಅಪ್ಪು!

ಗಂಧದ ಗುಡಿ ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಅಮೋಘ ವರ್ಷ ಮತ್ತೊಂದು ವಿಚಾರವನ್ನು ಬಹಿರಂಗ ಮಾಡಿದ್ದಾರೆ. ‘ಪುನೀತ್​ ರಾಜ್​ಕುಮಾರ್​​ ಒಂದು ಮನವಿಯನ್ನು ನನ್ನ ಬಳಿ ಮಾಡಿಕೊಂಡಿದ್ದರು. ನಾವು ಈ ಪ್ರಾಜೆಕ್ಟ್‌ನ ಟೈಟಲ್ ಕಾರ್ಡ ಅನ್ನು ಪುನೀತ್‌ಗೆ ಕಳಿಸಿಕೊಟ್ಟಾಗ. ಅವರು ಮರಳಿ ಕರೆ ಮಾಡಿ, ನನ್ನದೊಂದು ಸಣ್ಣ ಮನವಿ ಇದೆ. ಈ ಟೈಟಲ್‌ ಕಾರ್ಡ್‌ನಲ್ಲಿ ನನ್ನ ಹೆಸರಿನ ಪಕ್ಕ ಇರುವ 'ಪವರ್‌ ಸ್ಟಾರ್' ಅನ್ನು ತೆಗೆದು ಬಿಡಿ ಎಂದು ಕೇಳಿದರು. 'ಗಂಧದ ಗುಡಿ'ಯಲ್ಲಿ ನಾನು ನಾನಾಗಿ ಅಷ್ಟೆ ಇದ್ದೇನೆ. ಇಲ್ಲಿ ನಾನು ಹೀರೋ ಅಲ್ಲ. ಹಾಗಾಗಿ ಪವರ್‌ ಸ್ಟಾರ್ ಬೇಡ ಎಂದು ಮನವಿ ಮಾಡಿದರು. ಇದು ಪುನೀತ್​ ರಾಜ್​ಕುಮಾರ್​ ಅವರ ಸರಳತೆಗೆ ಸಾಕ್ಷಿಎಂದು ಅಮೋಘ ವರ್ಷ ಭಾವುಕರಾದರು.

ಇದನ್ನು ಓದಿ : `ಗಂಧದ ಗುಡಿ’ಯಲ್ಲಿ ಅಪ್ಪು ಜೀವಂತ: ಚಿತ್ರಮಂದಿರದಲ್ಲೇ ರಿಲೀಸ್ ಆಗುತ್ತೆ ಪುನೀತ್​ ಡ್ರೀಮ್​​ ಪ್ರಾಜೆಕ್ಟ್​!

ಒಂದು ವರ್ಷ ಕರ್ನಾಟಕದ ಅರಣ್ಯಗಳನ್ನೆಲ್ಲಾ ಸುತ್ತಿದ್ದ ಅಪ್ಪು‌

ವೈಲ್ಡ್​ ಲೈಫ್​ ಡಾಕ್ಯುಮೆಂಟ್​ ಶೂಟಿಂಗ್​ ಮಾಡುವುದು ಅಷ್ಟು ಸುಲಭದ ಮಾತಲ್ಲ. ಕಾಡು, ಮೇಡು ಅಲೆದು ಅನ್ನ, ನೀರು ಸರಿಯಾಗಿ ಸಿಗದೆ ಶ್ರಮ ಹಾಕಬೇಕು. ಇಂತಹ ಸಾಹಸಕ್ಕೆ ಪವರ್​ ಸ್ಟಾರ್​ ಅಪ್ಪು ಲಾಕ್​ಡೌನ್​ ಸಮಯದಲ್ಲಿ ಕೈ ಹಾಕಿದ್ದರು. ಕರ್ನಾಟಕದ ಪ್ರಸಿದ್ಧ ಅರಣ್ಯಗಳನ್ನೆಲ್ಲಾ ಅಪ್ಪು ಸುತ್ತಿದ್ರು. ರಾಜ್ಯದ ಬಹುತೇಕ ಎಲ್ಲ ಭಾಗಗಳಿಗೆ ಪುನೀತ್, ಅಮೋಘ ವರ್ಷ ಹಾಗೂ ಇಡೀಯ ಚಿತ್ರತಂಡ ಪ್ರವಾಸ ಮಾಡಿದೆ. ಸಮುದ್ರದ ಆಳದಲ್ಲಿಯೂ ಚಿತ್ರೀಕರಣ ಮಾಡಲಾಗಿದೆ. ಪುನೀತ್ ರಾಜ್‌ಕುಮಾರ್ ಇದೇ ಮೊದಲ ಬಾರಿಗೆ ಕ್ಯಾಮರಾ ಇಲ್ಲದೆ ಸಿನಿಮಾವೊಂದರಲ್ಲಿ ನಟಿಸಿದ್ದಾರೆ.

ಇದನ್ನು ಓದಿ: ಪುನೀತ್​ ಇಲ್ಲದೇ ‘ಜೇಮ್ಸ್​’ ಶೂಟಿಂಗ್​ ರಿಸ್ಟಾರ್ಟ್​: ಕಣ್ಣೀರಿಡುತ್ತಲೇ ಕೆಲ್ಸ ಮಾಡ್ತಿರೋ ಚಿತ್ರತಂಡ!

ಚಿತ್ರಮಂದಿರದಲ್ಲೇ ರಿಲೀಸ್​ ಆಗುತ್ತೆ `ಗಂಧದ ಗುಡಿ’

ಸಾಮನ್ಯವಾಗಿ ಡಾಕ್ಯುಮೆಂಟ್​ ಸಿನಿಮಾಗಳನ್ನು ಥಿಯೇಟರ್​​ನಲ್ಲಿ ರಿಲೀಸ್​ ಮಾಡುವುದು ಕಡಿಮೆ. ಆದರೆ ಅಪ್ಪು ಅವರ ಗಂಧದ ಗುಡಿ ಸಿನಿಮಾವನ್ನು ಚಿತ್ರಮಂದಿರದಲ್ಲೇ ರಿಲೀಸ್​ ಆಗಲಿದೆ. 2020ಕ್ಕೆ ಈ ಸಿನಿಮಾ ತೆರೆಕಾಣಲಿದೆ. ಅಪ್ಪು ಅವರನ್ನು ಮತ್ತೆ ತೆರೆ ಮೇಲೆ ನೋಡುವ ಭಾಗ್ಯ ಸಿಕ್ಕಿದೆ
Published by:Vasudeva M
First published: