ಕೊರೋನಾ ಕಾರಣದಿಂದಾಗಿ ಮುಚ್ಚಿದ್ದ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್ಗಳು ತೆರೆದಿವೆ. ಆದರೂ ಜನರು ಚಿತ್ರಮಂದಿರಗಳಿಗೆ ಬರುತ್ತಿಲ್ಲ. ಇನ್ನು ಹಳೇ ಸಿನಿಮಾಗಳನ್ನೇ ರಿರಿಲೀಸ್ ಮಾಡುತ್ತಿರುವುದು ಇದಕ್ಕೆ ಒಂದು ಕಾರಣ ಇರಬಹುದು ಎನ್ನಲಾಗುತ್ತಿದೆ. ಹೀಗಿರುವಾಗಲೇ ಕೆಲವು ಕನ್ನಡ ಸಿನಿಮಾ ತಂಡಗಳು ತಮ್ಮ ಹೊಸ ಚಿತ್ರಗಳನ್ನು ರಿಸ್ಕ್ ತೆಗೆದುಕೊಂಡು ರಿಲೀಸ್ ಮಾಡಲು ಮುಂದಾಗಿದ್ದಾರೆ. ಅವುಗಳಲ್ಲಿ ಒಂದು ಮಂಸೋರೆ ಅವರ ಈ ಆ್ಯಕ್ಟ್ 1978 ಸಿನಿಮಾ. ಒಟ್ಟಾರೆ ಹಳೆಯ ಸಿನಿಮಾಗಳು ರೀ-ರಿಲೀಸ್ ಆಗುತ್ತಿರುವ ಕಾರಣ ನಿರೀಕ್ಷಿಸಿದಷ್ಟು ಜನರಿಂದ ರೆಸ್ಪಾನ್ಸ್ ಸಿಗದಿದ್ದರೂ, ಹೊಸ ಸಿನಿಮಾಗಳು ತೆರೆಗೆ ಅಪ್ಪಳಿಸಿದಾಗ ನಿರೀಕ್ಷೆಯನ್ನು ಸಿನಿಪ್ರಿಯರು ಹುಸಿ ಮಾಡುವುದಿಲ್ಲ ಎಂಬ ನಂಬಿಕೆ ಚಿತ್ರತಂಡದ್ದು.ಈ ಚಿತ್ರದ ಪೋಸ್ಟರ್ ರಿಲೀಸ್ ಆದಾಗಲೇ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿತ್ತು. ಈಗ ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಪ್ರೇಕ್ಷಕರಿಮದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಪೋಸ್ಟರ್ ಮತ್ತು ಟೈಟಲ್ ಚಿತ್ರದ ಕಥಾವಸ್ತುವಿನ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಅವುಗಳ ಜೊತೆಗೆ ಈಗ ಆ್ಯಕ್ಟ್ 1978 ಸಿನಿಮಾದ ಟ್ರೇಲರ್ ಸಹ ಸೇರಿಕೊಂಡಿದೆ.
ಆ್ಯಕ್ಟ್ 1978 ಸಿನಿಮಾ ಟ್ರೇಲರ್ ಅನ್ನು ಪುನೀತ್ ರಾಜ್ಕುಮಾರ್ ಅವರು ರಿಲೀಸ್ ಮಾಡಿದ್ದಾರೆ. ಇದರಲ್ಲಿ ಇಬ್ಬರು ಸಾಮಾನ್ಯರು ಸರ್ಕಾರದಿಂದ ತಮಗೆ ಸಿಗಬೇಕಾಗಿರುವ ಸವಲತ್ತುಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಚಪ್ಪಲಿ ಸೆವೆಸುತ್ತಾರೆ. ಸ್ಪಂದಿಸದ ವ್ಯವಸ್ಥೆ ಹಾಗೂ ಸರ್ಕಾರಿ ಅಧಿಕಾರಿಗಳ ವಿರುದ್ಧ ತಿರುಗಿ ಬೀಳುತ್ತಾರೆ. ಗರ್ಭಿಣಿಯಾಗಿ ಕಾಣಿಸಿಕೊಂಡಿರುವ ಯಜ್ಞ ಶೆಟ್ಟಿ ಹೊಟ್ಟೆಗೆ ಬಾಂಬ್ ಕಟ್ಟಿಕೊಂಡು ಸರ್ಕಾರಿ ಕಚೇರಿಯನ್ನೇ ಹೈಜಾಕ್ ಮಾಡುತ್ತಾರೆ. ಅದೇ ಈ ಸಿನಿಮಾದ ಕತೆ.
![theater reopen, sandalwood Act 1978, Kannda Movie Act 1978, Shruthi, ಆಕ್ಟ್ 1978, ಕನ್ನಡ ಸಿನಿಮಾ, ಪುರ್ಸೋತ್ ರಾಮ, ಆಕ್ಟ್ 1978 ಸಿನಿಮಾ ನವೆಂಬರ್ನಲ್ಲಿ ರಿಲೀಸ್, New Kannada Movie Act 1978 will be releasing in November]()
ಆಕ್ಟ್ 1978 ಸಿನಿಮಾದಲ್ಲಿ ಶ್ರುತಿ
ಮಂಸೋರೆ ನಿರ್ದೇಶನದ, ದೇವರಾಜ್ ಆರ್ ನಿರ್ಮಾಣದ ಆ್ಯಕ್ಟ್ 1978 ಚಿತ್ರದಲ್ಲಿ ಯಙ್ಞ ಶೆಟ್ಟಿ, ಬಿ ಸುರೇಶ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಶ್ರುತಿ, ದತ್ತಣ್ಣ, ಸಂಚಾರಿ ವಿಜಯ್, ಶೋಭರಾಜ್, ಅವಿನಾಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇನ್ನು ಈ ಚಿತ್ರದ ಪೋಸ್ಟರ್ ರಿಲೀಸ್ ಆದಾಗ ಪ್ರೇಕ್ಷಕರು, ಆ್ಯಕ್ಟ್ 1978 ಅಂದರೇನು? ಕಾಯ್ದೆಯನ್ನೇ ಸಿನಿಮಾ ಟೈಟಲ್ ಮಾಡಲು ಕಾರಣವೇನು? ಎಂಬ ಪ್ರಶ್ನೆಗಳೂ ಚಿತ್ರರಸಿಕರನ್ನು ಕಾಡಲಾರಂಭಿಸಿದ್ದವು. ಆದರೆ ಆ ಎಲ್ಲ ಪ್ರಶ್ನೆಗಳಿಗೂ ಈ ಟ್ರೇಲರ್ನಲ್ಲಿ ಉತ್ತರ ಸಿಗದಿದ್ದರೂ, ಅವರ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಇನ್ನೇನು ಇದೇ ತಿಂಗಳು ಈ ಸಿನಿಮಾವನ್ನು ಪ್ರೇಕ್ಷಕರು ಚಿತ್ರ ಮಂದಿರಗಳಲ್ಲೇ ನೋಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ